An unconventional News Portal.

    ...
    EVMs-Security-1
    ರಾಜ್ಯ

    ಎಲೆಕ್ಟ್ರಾನಿಕ್ ಓಟಿಂಗ್‌ ಮಷೀನ್‌ಗಳ ‘ಸಾಚಾತನ’ಕ್ಕೆ ಕನ್ನಡಿ ಹಿಡಿಯುವವರು ಎಲ್ಲಿದ್ದಾರೆ?

      ಉತ್ತರ ಪ್ರದೇಶ ಚುನಾವಣೆ ನಂತರ ಈಗ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್‌ (ಇವಿಎಂ)ಗಳ ಕುರಿತು ರಾಜಕೀಯ ಚರ್ಚೆ ಗರಿಗೆದರಿದೆ. ದೇಶದ ಅತೀ ದೊಡ್ಡ ರಾಜ್ಯದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭರ್ಜರಿ ವಿಜಯ ಸಾಧಿಸುತ್ತಿದ್ದಂತೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಯ ನಾಯಕಿ ಮಾಯಾವತಿ, ‘ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್’ (ಇವಿಎಂ)ಗಳ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದರು. ಇದನ್ನು ‘ಸಮಾಜವಾದಿ ಪಕ್ಷ’ (ಎಸ್‌ಪಿ)ಯ ಅಖಿಲೇಶ್ ಯಾದವ್‌ ಕೂಡ ಅನುಮೋದಿಸಿದರು. ಇದೀಗ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇವಿಎಂಗಳ ಕುರಿತು ಅನುಮಾನ ಹೊರಹಾಕಿದ್ದಾರೆ…

    March 14, 2017
    ...
    mysore-university-fraud-final
    ರಾಜ್ಯ

    ‘ಜನರ ದುಡ್ಡಲ್ಲಿ ವಿಶ್ರಾಂತಿ ರಜೆ’: ಮೈಸೂರು ವಿವಿ ಒಳಗೆ ‘ಪುಸ್ತಕ’ದ ಹೆಸರಿನಲ್ಲಿ ಬಾನಗಡಿ!

    ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಬಿ. ಆರ್. ಅನಂತನ್ ವಿರುದ್ದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅದೇಶಿಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಬಾನಗಡಿಗಳಿಗೆ ತಾಜಾ ಉದಾಹರಣೆಯೊಂದು ಸಿಕ್ಕಂತಾಗಿದೆ. ಪ್ರೊಫೆಸರ್ ಅನಂತನ್ ಮೈಸೂರು ವಿಶ್ವವಿದ್ಯಾನಿಲಯದ ಬಿ. ಎನ್. ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ವೇತನ ಸಹಿತ ವಿಶ್ರಾಂತಿ ರಜೆ (ಸಬಾಟಿಕಲ್ ಲೀವ್)ಯನ್ನು ತೆಗೆದುಕೊಂಡಿದ್ದರು. ನಂತರ ಅವರು ಅದನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ..

    March 13, 2017
    ...
    wire-rajeev-controversy-final
    ಮೀಡಿಯಾ 2.0

    ಉದ್ಯಮಿಯ ‘ಘನತೆಗೆ ಧಕ್ಕೆ’: ‘ದಿ ವೈರ್’ ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

    ದೇಶದ ಟಿಜಿಟಲ್ ಪತ್ರಿಕೋದ್ಯಮದಲ್ಲಿ ‘ಸ್ವತಂತ್ರ’ ಮಾಧ್ಯಮವಾಗಿ ದಾಪುಗಾಲಿಡುತ್ತಿರುವ ‘ದಿ ವೈರ್ ಡಾಟ್ ಇನ್‌’ ಪ್ರಕಟಿಸಿದ ಎರಡು ವರದಿಗಳಿಗೆ ಬೆಂಗಳೂರಿನ ನ್ಯಾಯಾಲಯವೊಂದು ಅನೀಕ್ಷಿತ ನಡೆಯಲ್ಲಿ ತಡೆಯಾಜ್ಷೆ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಸಂಸದ, ಉದ್ಯಮಿ ರಾಜೀವ್‌ ಚಂದ್ರಶೇಖರ್ ಬೆಂಗಳೂರಿನ 40ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾ. 2 ರಂದು ‘ಘನತೆಗೆ ಧಕ್ಕೆ ಮಾಡುವ’ ವರದಿಗಳ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಲ್ಕರ್ ಭೀಮರಾವ್ ಲಗಮಪ್ಪ..

    March 13, 2017
    ...
    anti-incumbency-1
    ದೇಶ

    ಯುಪಿ ಎಂದರೆ ದೇಶವಲ್ಲ; ಆಡಳಿತ ವಿರೋಧಿ ಅಲೆಯ ಕಡೆ ಗಮನ ಯಾಕಿಲ್ಲ?

    ಸದ್ಯ ಹೊರಬಿದ್ದಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾ? ಈ ವಿಶ್ಲೇಷಣೆಯನ್ನು ಒಪ್ಪಿಕೊಳ್ಳುವುದೇ ಆದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಭ್ರಮಾಚರಣೆ ಪಕ್ಕಕ್ಕಿಟ್ಟು ಆತ್ಮಾವಲೋಕ ಮಾಡಿಕೊಳ್ಳಬೇಕಿರುವ ಹೊತ್ತಿದು. ಉತ್ತರ ಪ್ರದೇಶ, ಉತ್ತರಾಖಾಂಡ್, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನ ನೀಡಿರುವ ‘ಮ್ಯಾನ್‌ಡೇಟ್’ ಆಡಳಿತದ ವಿರುದ್ಧವಾಗಿದೆ ಎಂಬುದು ಗಮನಾರ್ಹ. ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಖಾಂಡ್‌ ರಾಜ್ಯಗಳಲ್ಲಿ ಜನ ಸ್ಪಷ್ಟವಾಗಿ ತಮ್ಮನ್ನು ಆಳುತ್ತಿದ್ದವರನ್ನು ತಿರಸ್ಕರಿಸುವ ಮೂಲಕ ಹೊಸಬರನ್ನು..

    March 11, 2017
    ...
    election-live-4
    LIVE

    LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

    ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ‘ನೇರ ಪ್ರಸಾರ’ ಇದು. ಇಲ್ಲಿಂದ ಮುಂದೆ ನಾಲ್ಕಾರು ಗಂಟೆಗಳ ಕಾಲ ‘ಸಮಾಚಾರ’ ಐದೂ ರಾಜ್ಯಗಳಲ್ಲಿ ನಡೆಯುವ ಮತ ಎಣಿಕೆಯ ಅಪ್ಡೇಟ್ ಜತೆಗೆ, ಒಂದಷ್ಟು ಒಳನೋಟಗಳ ಮಾಹಿತಿಯನ್ನು ನೀಡಲಿದೆ. ಇದು ಡಿಜಿಟಲ್ ಮಾಧ್ಯಮದ ಟಿಪಿಕಲ್ ‘ಲೈವ್’ ಅನ್ನುವುದಕ್ಕಿಂತ, ಚುನಾವಣಾ ಫಲಿತಾಂಶದ ಸುತ್ತ ‘ಟೀಕೆ- ಟಿಪ್ಪಣಿ’ಗಳು. ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಿ…

    March 11, 2017
    ...
    grave-diggers-1
    ರಾಜ್ಯ

    #ಚಲೋ_ಸ್ಮಶಾನ: ಸಿಲಿಕಾನ್ ಸಿಟಿಯ ಅನಾಮಿಕ ಹೆಣಗಳ ವಾರಸುದಾರರು & ಬಜೆಟ್ ನಿರೀಕ್ಷೆಗಳು!

    ಬೆಂಗಳೂರಿನ ಸ್ಮಶಾನಗಳಿಗೆ ಬರುವ ಹೆಣಗಳ ಪೈಕಿ ಎರಡರಲ್ಲಿ ಒಂದಕ್ಕೆ ವಾರಸುದಾರರೇ ಇರುವುದಿಲ್ಲ. ಅಂದರೆ, ಶೇ. 50ರಷ್ಟು ಜನರಿಗೆ ಅಂತಿಮ ವಿಧಿ ವಿಧಾನಗಳನ್ನು ಏರ್ಪಡಿಸಲು ಗೊತ್ತಿರುವ ಯಾರೂ ಸಿಲಿಕಾನ್ ಸಿಟಿಯಲ್ಲಿ ಸಿಗುತ್ತಿಲ್ಲ. ಒಂದು ಕ್ಷಣ ಬೆಚ್ಚಿ ಬೀಳಿಸುವಂತಹ ಈ ವಿಚಾರ ವಿಲ್ಸನ್ ಗಾರ್ಡನ್ ಸ್ಮಶಾನಕ್ಕೆ ಭೇಟಿ ನೀಡಿದ ‘ಸಮಾಚಾರ’ಕ್ಕೆ ಲಭ್ಯವಾಯಿತು. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಡೆಯಿಂದ ನೇಮಕಗೊಂಡಿರುವ ಸ್ಮಶಾನ ವರದಿಗಾರರು ನೀಡಿರುವ ಈ ಅಂಕಿ ಅಂಶಗಳು ಸಿಲಿಕಾನ್‌ ಸಿಟಿಯ ಸ್ಮಶಾನಗಳ ಕುರಿತು ಹೊಸ ಆಯಾಮದ ಬೆಳಕು ಚೆಲ್ಲುತ್ತಿದೆ. “ಒಂದು ತಿಂಗಳಿಗೆ..

    March 9, 2017
    ...
    best-top-10-reality-show-in-india1
    STORiES iN ENGLiSH

    Leap in technology and Neo-Inequality in Reality Shows

    A murmur in the sets of Big Boss Kannada season 4 sparks extremely relevant and simmering questions over reality shows. “Are these verbal spats, squabbles and emotional drams played out in the so called cozy Big Boss house manufactured?” A junior artist who is paid only Rs 500 to pretend as audience whispered this in..

    March 9, 2017
    ...
    ent-politics-1
    ರಾಜ್ಯ

    ‘ರಿಯಾಲಿಟಿ ರಾಜಕೀಯ’: ಟೀಕೆ- ಟಿಪ್ಪಣಿಗಳ ಆಚೆಗೆ ಸೃಷ್ಟಿಯಾದ ‘ಮಾಯಾಲೋಕ’!

    ಸಾಮಾಜಿಕ ವಾತಾವರಣದಲ್ಲಿ ಬದುಕಿನ ಚೌಕಟ್ಟುಗಳ ಕುರಿತು ನಡೆಯುವ ಚರ್ಚೆಗಳೂ ಕೂಡ ‘ರಾಜಕೀಯ’ಗೊಳ್ಳಬಹುದು ಎಂಬುದಕ್ಕೆ ಸದ್ಯ ಕರ್ನಾಟಕದ ಒಂದು ವರ್ಗ, ಒಂದು ವಿಚಾರದ ಮೇಲೆ ನಡೆಸುತ್ತಿರುವ ‘ಟೀಕೆ- ಟಿಪ್ಪಣಿ’ಗಳು ಸಾಕ್ಷಿ ಒದಗಿಸುತ್ತಿವೆ. ಮಾ.5ರ ಭಾನುವಾರ ರಾತ್ರಿ ‘ಝೀ ಕನ್ನಡ’ ಮನೋರಂಜನಾ ವಾಹಿನಿಯಲ್ಲಿ ಪ್ರಸಾರವಾದ ‘ರಿಯಾಲಿಟಿ ಶೋ’ ಒಂದರ ಎಪಿಸೋಡಿನ ಒಂದು ಭಾಗ ಮತ್ತು ಅದರ ಪಾತ್ರಧಾರಿಗಳು ಇದಕ್ಕೆ ಕಾರಣ. ಸಾಮಾನ್ಯವಾಗಿ ಮನೋಂಜನಾ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳು ಹೀಗೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಕನ್ನಡದ ಪಾಲಿಗೆ ಅಪರೂಪ. ಅದೂ ಒಂದು ಸಂಗೀತ ಸ್ಪರ್ಧಾ ಕಾರ್ಯಕ್ರಮ. ‘ಸರಿಗಮಪ’..

    March 9, 2017
    ...
    Wikileaks-Vault-7-CIA-leak-1
    ವಿದೇಶ

    ‘ವಿಕಿಲೀಕ್ಸ್’ ಸ್ಫೋಟಕ ಮಾಹಿತಿ: ಜನರ ಖಾಸಗಿ ಮಾಹಿತಿಗೆ ಅಮೆರಿಕಾ ಬೇಹುಗಾರಿಕಾ ಸಂಸ್ಥೆಯ ಕನ್ನ!

    ಜಾಗತಿಕ ತನಿಖಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕನ್ನು ತೋರಿಸಿದ್ದ ‘ವಿಕಿಲೀಕ್ಸ್’ ಹೊಸತೊಂದು ಸ್ಫೋಟಕ ಮಾಹಿತಿಯೊಂದಿಗೆ ಹೊರಬಂದಿದೆ. ಈ ಬಾರಿ ನಾವು ನಿತ್ಯ ಬಳಸುವ ಆಂಡ್ರೋಯ್ಡ್, ಆಪಲ್ ಫೋನ್‌ಗಳು ಮತ್ತು ಮನೆಯಲ್ಲಿರುವ ಟಿವಿ ಸೆಟ್‌ಗಳ ಮೂಲಕ ಅಮೆರಿಕಾದ ಬೇಹುಗಾರಿಕಾ ಸಂಸ್ಥೆ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ (ಸಿಐಎ) ಹೇಗೆ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದೆ ಎಂಬುದನ್ನು ಜಾಲತಾಣ ಬಯಲು ಮಾಡಿದೆ. ಸುಮಾರು 8 ಸಾವಿರ ಪುಟಗಳಷ್ಟಿರುವ ಮಾಹಿತಿಯನ್ನು, ‘ವಾಲ್ಟ್ 7’ ಎಂಬ ಹೆಸರಿನಲ್ಲಿ ಅದು ಸದ್ಯ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ..

    March 8, 2017
    ...
    corruption-india-2
    ಸುದ್ದಿ ಸಾರ

    ಏಷಿಯಾ ಖಂಡದ ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತವೇ ನಂ. 1!

    ಏಷಿಯಾ ಖಂಡದ ದೇಶಗಳ ಪೈಕಿ ‘ಭ್ರಷ್ಟಾಚಾರದ ದರ’ ಅತ್ಯಂತ ಹೆಚ್ಚಿರುವುದು ಭಾರತದಲ್ಲಿ ಎನ್ನುತ್ತಿದೆ ‘ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್’ ಮಂಗಳವಾರ ಬ್ಯಾಂಕಾಕ್‌ನಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ. ಕೆಲವು ಆತಂಕಕಾರಿ ಮಾಹಿತಿ ಒಳಗೊಂಡಿರುವ ಸಮೀಕ್ಷಾ ವರದಿಯಲ್ಲಿ, ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಅನಿವಾರ್ಯವಾಗಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬುದು ಬಯಲಾಗಿದೆ. ಭಾರತದಲ್ಲಿ ಶೇ. 69ರಷ್ಟು ಜನ ಲಂಚ ನೀಡುತ್ತಿದ್ದರೆ, ನಂತರ ಸ್ಥಾನದಲ್ಲಿ ವಿಯಟ್ನಾಂನಲ್ಲಿ ಶೇ. 65ರಷ್ಟು ಮಂದಿ ಕಳೆದ 12 ತಿಂಗಳ ಅಂತರದಲ್ಲಿ ಲಂಚ ನೀಡಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ..

    March 7, 2017

Top