An unconventional News Portal.

    ...
    hdd-jp-hdk-prifile-paints
    ರಾಜ್ಯ

    ‘ಜೆಡಿಎಸ್ ಹೆಣಗಾಟಗಳು’: ಜೆಪಿ ಜಪ; ಸಾಲ ಮನ್ನಾ ಆಶ್ವಾಸನೆ; ಪಾದಯಾತ್ರೆಯ ಹುಮ್ಮಸ್ಸು!

    ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವೊಂದರ ಹೆಣಗಾಟ ಹೇಗುತ್ತದೆ ಎಂಬುದನ್ನು ಜಾತ್ಯಾತೀತ ಜನತಾದಳ (ಜೆಡಿಎಸ್‌) ಪಾಳೆಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾರಿ ಹೇಳುತ್ತಿವೆ. ಪಕ್ಷದ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಜಯಪ್ರಕಾಶ್ ನಾರಾಯಣ್ ಜಪ ಆರಂಭಿಸಿದ್ದಾರೆ. ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವ ಆಶ್ವಾಸನೆಯನ್ನು ತೂರಿಬಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಬೃಹತ್ ಸಮಾವೇಶ ನಡೆಸಿರುವ ಪಕ್ಷ, ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿಯ ಭಾಗವಾಗಿ ‘ಪಾದಯಾತ್ರೆ’ ಮಾಡುವುದಾಗಿ ಹೇಳಿದೆ. ಈ ಬೆಳವಣಿಗಳಲ್ಲಿ..

    March 24, 2017
    ...
    westminister-attack-injuried-1
    ಸುದ್ದಿ ಸಾರ

    ಥೇಮ್ಸ್ ನದಿ ದಂಡೆ ಮೇಲೆ ನಡೆದ ‘ಏಕಾಂಗಿ ದಾಳಿ’: ಭಾರತ ಕಲಿಬೇಕಿರುವುದು ಏನು?

    ಲಂಡನ್ ನಗರದ ಹೃದಯ ಭಾಗದಲ್ಲಿ ನಡೆದ ‘ಏಕಾಂಗಿ ಭಯೋತ್ಪಾದನ’ ದಾಳಿಯಿಂದ ಜನ ನಿಧಾನವಾಗಿ ಚೇರಿಸಿಕೊಳ್ಳುತ್ತಿದ್ದಾರೆ. ಬುಧವಾರ ಇಲ್ಲಿನ ಸಂಸತ್‌ ಕೇಂದ್ರದ ಪಕ್ಕದ ಥೇಮ್ಸ್ ನದಿ ದಂಡೆಯ ಮೇಲೆ ದಾಳಿಕೋರನೊಬ್ಬ ಜನರ ಮೇಲೆ ಕಾರ್‌ ನುಗ್ಗಿಸಿದ್ದ. ನಂತರ ಸಂಸದರು ‘ಹೌಸ್ ಆಫ್ ಕಾಮನ್ಸ್‌’ಗೆ ಪ್ರವೇಶಿಸುವ ಗೇಟಿನ ಬಳಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿ ವರದಿಗಳು ಹೇಳುತ್ತಿವೆ. ದಾಳಿಕೋರನೂ ಸೇರಿದಂತೆ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಲಂಡನ್ ನಗರದ ಕೇಂದ್ರ..

    March 23, 2017
    ...
    varalaxmi-final
    ರಾಜ್ಯ

    ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೆ ಇವರು ಬಂಗಾರಪೇಟೆಯ ‘ವರಲಕ್ಷ್ಮಿ’!

    ಬೆಂಗಳೂರಿನ ಹೃದಯ ಭಾಗ ಕಳೆದ ಎರಡು ದಿನಗಳಿಂದ ಮಾನವೀಯ ಹಕ್ಕಿನ ಬೇಡಿಕೆಯನ್ನು ಮುಂದಿಟ್ಟುಕೊಂಡು ಕುಳಿತಿರುವ ಸಾವಿರಾರು ಮಹಿಳೆಯರ ಘೋಷಣೆಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ‘ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್’ (ಸಿಐಟಿಯು) ನೇತೃತ್ವದಲ್ಲಿ ‘ಹಗಲು- ರಾತ್ರಿ’ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಬಜೆಟ್ ಮೇಲಿನ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಹೀಗೊಂದು ಪರಿಸ್ಥಿತಿ ಎದುರಾಗಿದೆ. ಸರಕಾರ ಲಿಖಿತ ರೂಪದಲ್ಲಿ ತನ್ನ ಇಚ್ಚಾಶಕ್ತಿಯ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆಗೆ ಬಿದ್ದಿದೆ. ರಾಜ್ಯದ ಹಳ್ಳಿಗಳಲ್ಲಿ ಗರ್ಭಿಣಿ ಮಹಿಳೆಯರನ್ನು..

    March 22, 2017
    ...
    ajmeer-blast-case-cover
    ದೇಶ

    ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣ: ಶಿಕ್ಷೆಯ ಹೊರೆಯನ್ನು ಹೊತ್ತವರು ‘ಕಾರ್ಯಕರ್ತರು’!

    ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ತೀರ್ಪು ನೀಡಿರುವ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ಮೂವರಿಗೆ ಜೀವಾವಧಿ ಶಿಕ್ಷಾ ಅವಧಿಯನ್ನು ಘೋಷಿಸಿದೆ. ಮೂವರಲ್ಲಿ ಸುನೀಲ್ ಜೋಷಿ ಎಂಬ ಆರೋಪಿ ಬಾಂಬ್ ಸ್ಫೋಟ ಪ್ರಕರಣದ ನಂತರದ ದಿನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರಲ್ಲಿ ದೇವೇಂದ್ರ ಗುಪ್ತಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಮಾಜಿ ಕಾರ್ಯಕರ್ತ. ಭವೇಶ್ ಪಟೇಲ್ ಜೀವಾವಧಿ ಶಿಕ್ಷೆಗೆ ಗುರಿಯಾದ ಇನ್ನೊಬ್ಬ ಅಪರಾಧಿ. ಪ್ರಕರಣದಲ್ಲಿ ಇನ್ನೂ ತಲೆ ಮರೆಸಿಕೊಂಡಿರುವ ಇನ್ನೂ ಮೂವರ ಕುರಿತು ಅಂತಿಮ ವರದಿಯನ್ನು ಮಾ. 28ರೊಳಗೆ ಸಲ್ಲಿಸುವಂತೆ..

    March 22, 2017
    ...
    anganavadi-protest-1
    ರಾಜ್ಯ

    ಆಶ್ವಾಸನೆ ಮೀರಿದ ಬದುಕಿಗಾಗಿ ಕೇಳುತ್ತಿರುವುದು ತಿಂಗಳಿಗೆ 10 ಸಾವಿರ ರೂ.ಗಳು ಮಾತ್ರ!

    “ಹೋರಾಟ ಹೀಗೆಯೇ ಮುಂದುವರಿದರೆ ನಾವು ಬೆಂಗಳೂರಿಗೆ ಮತ್ತೆ ಬರಬೇಕಾಗುತ್ತದೆ. ನಮಗಾಗಿ ಅವರು ಅಲ್ಲಿ ಹೋರಾಟ ಮಾಡಿಕೊಂಡು ಕುಳಿತಿರುವಾಗ ನಾವು ಹೇಗೆ ಮನೆಯಲ್ಲಿ ಅರಾಮಾಗಿ ಇರಲು ಸಾಧ್ಯ. ನೋಡುವ ರಾತ್ರಿ ಹೊತ್ತಿಗೆ ಏನಾಗುತ್ತೆ ಅಂತ…?” ಹೀಗಂದವರು ಮಡಿಕೇರಿ ಮೂಲ ಅಂಗನವಾಡಿ ಕಾರ್ಯಕರ್ತೆಯೊಬ್ಬರು.  ಮಾ18ಕ್ಕೆ ವೈಯಕ್ತಿಕ ಕಾರಣಕ್ಕೆ ಬೆಂಗಳೂರಿಗೆ ಬಂದವರು, ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡ ಹೋರಾಟದಲ್ಲಿ ಪಾಲ್ಗೊಂಡು ಇವತ್ತು ಮುಂಜಾನೆ ಮನೆಗೆ ಮರಳಿದ್ದಾರೆ. ಇದೀಗ, ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ವಿಚಾರ ಮಾಧ್ಯುಮಗಳ ಮೂಲಕ ಪ್ರಸಾರವಾಗುತ್ತಿರುವುದನ್ನು ನೋಡುತ್ತಿರುವ ಅವರಿಗೆ ಮತ್ತೆ ಹೋರಾಟಕ್ಕೆ..

    March 21, 2017
    ...
    yogi-adithyanath-with-cow
    ದೇಶ

    ಕಸಾಯಿಖಾನೆಗಳಲ್ಲಿ ‘ಢಣ ಢಣ’: ಯುಪಿಯಿಂದ ರಫ್ತಾಗುತ್ತಿದ್ದ ಮಾಂಸದ ಕತೆ ಏನು?

    ದೇಶದ ಮಾಂಸ ಉತ್ಪಾದನಾ ಕ್ಷೇತ್ರದಲ್ಲಿ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಾ ಬಂದ ರಾಜ್ಯ ಉತ್ತರ ಪ್ರದೇಶ. ಇಂಥದೊಂದು ರಾಜ್ಯಕ್ಕೆ ಮಾಂಸಾಹಾರ ವಿರೋಧಿ ಆಲೋಚನೆಗಳನ್ನು ಬೆಳೆಸಿಕೊಂಡವರು ಮುಖ್ಯಮಂತ್ರಿಯಾದರೆ ಏನಾಗಬಹುದು? ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಂದೇನಾಗಬಹುದು ಎಂಬುದನ್ನು ಈಗ ಸಾರಿ ಹೇಳುತ್ತಿವೆ.   ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಕಾನೂನು ಬಾಹಿರ ಕಸಾಯಿಖಾನೆಗಳಿಗೆ ಬೀಗ ಜಡಿಯುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಚುನಾವಣೆಯ ಫಲಿತಾಂಶದ ಮರುದಿನ ಅಂದರೆ ಮಾರ್ಚ್ 12ರಂದು ರಾಜ್ಯಕ್ಕೆ ಅಮಿತ್ ಶಾ ಬರುವ ದಿನ..

    March 21, 2017
    ...
    yogi-adithyanath-1
    ದೇಶ

    Mockery Of Democracy: ಇದ್ದಲ್ಲೇ ಎದ್ದು ನಿಂತ ‘ದೇವಸ್ಥಾನದ ಅರ್ಚಕ’ ಯೋಗಿ!

    ‘ಯೋಗ’ ಎಂಬುದು ನಾಮಪದ. ಹೊಂದಿಕೆ, ಕೂಡುವುದು, ಇಂದ್ರಿಯ ನಿಗ್ರಹ, ಪ್ರಾಪ್ತಿ, ಧ್ಯಾನ, ಅದೃಷ್ಟ ಹೀಗೆ ಹಲವು ಅರ್ಥಗಳು ಈ ಪದಕ್ಕೆ ಕನ್ನಡದಲ್ಲಿವೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಆದಿತ್ಯನಾಥ್ ಅವರಿಗೆ ‘ಯೋಗ’ ಒಲಿದಿದೆ ಎಂಬ ವ್ಯಾಖ್ಯಾನಗಳು ಕಳೆದ ಎರಡು ದಿನಗಳ ಅಂತರದಲ್ಲಿ ಕರ್ನಾಟಕದ ಮಾಧ್ಯಮಗಳ ಮೂಲಕ ಸಾರಿ ಸಾರಿ ಹೇಳಲಾಗುತ್ತಿದೆ. ಅವುಗಳ ಪ್ರಕಾರ, ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯ ಸಂಸದರಾಗಿರುವ ಆದಿತ್ಯನಾಥರಿಗೆ ಒಲಿದಿರುವುದು ‘ಯೋಗ’! ವಾಸ್ತವದಲ್ಲಿ ಆ ರಾಜ್ಯದ ಯಾವುದೇ..

    March 20, 2017
    ...
    Missile Israel Syria
    ವಿದೇಶ

    ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಮೊದಲ ಸವಾಲ್; ಸಿರಿಯಾ ಮಿಸೈಲ್ ಹೊಡೆದುರುಳಿಸಿದ ಇಸ್ರೇಲ್

    ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವೊಂದು ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಿಸಿ ಉತ್ತೀರ್ಣವಾದ ನಿದರ್ಶನವಿದು. ಇಸ್ರೇಲ್ ತನ್ನ ಅತ್ಯಾಧುನಿಕ ‘ಕ್ಷಿಪಣಿ ನಿರೋಧಕ ವ್ಯವಸ್ಥೆ’ಯ ಮೂಲಕ ಸಿರಿಯಾ ಮಿಸೈಲನ್ನು ಹೊಡೆದುರುಳಿಸಿ ಸದ್ದು ಮಾಡಿದೆ. ಹಾಗೆ ನೋಡಿದರೆ ರಷ್ಯಾ, ಚೀನಾ, ಅಮೆರಿಕಾ, ಇಸ್ರೇಲ್, ಫ್ರಾನ್ಸ್ ಮೊದಲಾದ ಮುಂದುವರಿದ ಮಿಲಿಟರಿ ದೇಶಗಳ ಬಳಿ ಈ ತಂತ್ರಜ್ಞಾನವಿದೆ. ಇತ್ತೀಚೆಗೆ ಭಾರತವೂ ಪಾಕಿಸ್ತಾನದ ಸಾಂಭಾವ್ಯ ಮಿಸೈಲ್ ದಾಳಿಯನ್ನು ಎದುರಿಸಲು ಇಸ್ರೇಲಿನಿಂದ ಇದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಲು ಮುಂದಾಗಿದೆ.  ಉತ್ತರ ಕೊರಿಯಾದ ದಾಳಿಯಿಂದ..

    March 18, 2017
    ...
    Justice-C-S-Karnan
    ದೇಶ

    ಹೀಗೊಂದು ವಿಚಿತ್ರ ಪ್ರಕರಣ: ಸುಪ್ರಿಂ ಕೋರ್ಟ್‌ನಿಂದ 14 ಕೋಟಿ ಪರಿಹಾರ ಕೋರಿದ ನ್ಯಾಯಾಧೀಶ

    ದೇಶದ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿ ಸಂಬಂಧಪಟ್ಟ ಹಾಗೆ ‘ಕೊಲಿಜಿಯಂ’ ವ್ಯವಸ್ಥೆ ಕುರಿತು ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ‘ತಮ್ಮ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕಾಗಿ’ ಹೈಕೋರ್ಟ್ ನ್ಯಾಯಾಧೀಶರೊಬ್ಬರು 14 ಕೋಟಿ ಪರಿವಾರ ನೀಡಿವಂತೆ ಕೋರಿರುವ ಅಚ್ಚರಿಯ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೈಕೋರ್ಟ್ ನ್ಯಾಯಾಧೀಶ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ ಪರಿಹಾರ ಕೋರಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಾಂವಿಧಾನಿಕ ಪೀಠಕ್ಕೆ ಪತ್ರ ಬರೆದವರು. ಕಳೆದ ವಾರವಷ್ಟೆಸುಪ್ರಿಂ ಕೋರ್ಟ್,..

    March 17, 2017
    ...
    karnataka-assembly-1
    LIVE

    ‘ಬಜೆಟ್ ವಿಶ್ಲೇಷಣೆ’-1: 49 ಹೊಸ ತಾಲೂಕುಗಳ ಘೋಷಣೆ; ಕೊನೆಗೂ ಸಿಕ್ಕ ‘ಮೋಕ್ಷ’!

    ‘ಸಮಾಚಾರ’ ಓದುಗರಿಗೆ ಶುಭೋದಯ… ಇದು ಬೆಂಗಳೂರಿನಲ್ಲಿರುವ ‘ಸಮಾಚಾರ’ದ ಪುಟ್ಟ ಕಚೇರಿಯಿಂದ ಬರೆಯುತ್ತಿರುವ ‘ಬಜೆಟ್ ಪತ್ರ’. ನಮ್ಮ ತಂಡ ಇವತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ಆಯವ್ಯಯ ಪತ್ರದ ನೇರ ವಿವರಗಳನ್ನು ಇಲ್ಲಿ ನೀಡಲಿದೆ. ಇದು ಬಜೆಟ್‌ ದಿನದ ‘ನೇರ ಪ್ರಸಾರ’! ಟಿವಿಗಳೂ ‘ಫೇಸ್‌ಬುಕ್’ ಲೈವ್ ಮಟ್ಟಕ್ಕೆ ಇಳಿದ ಈ ದಿನಗಳಲ್ಲಿ, ಡಿಜಿಟಲ್ ಮಾಧ್ಯಮವೊಂದು ‘ಲೈವ್’ ನೀಡಲು ಇರುವ ಸಾಧ್ಯತೆಗಳನ್ನು ಅನ್ವೇಷಿಸಬೇಕಿದೆ. ಈ ಸಮಯದಲ್ಲಿ ಇದನ್ನು ‘ನೇರ ಪ್ರಸಾರ’ ಎಂದು ಕರೆಯಬಹುದಾದರೂ, ನಿಜಕ್ಕೂ ಇದು ತಂತ್ರಜ್ಞಾನ ಮತ್ತು ಸುದ್ದಿ ಬೆಳವಣಿಗೆಯೊಂದರ..

    March 15, 2017

Top