An unconventional News Portal.

ನಮ್ಮ ಬ್ಯಾಂಕುಗಳೇಕೆ ರೈತರ ಅಕೌಂಟ್‌ನಿಂದ ಹೇಳದೆ ಕೇಳದೆ ಹಣ ಕಡಿತ ಮಾಡುತ್ತಿವೆ?

ನಮ್ಮ ಬ್ಯಾಂಕುಗಳೇಕೆ ರೈತರ ಅಕೌಂಟ್‌ನಿಂದ ಹೇಳದೆ ಕೇಳದೆ ಹಣ ಕಡಿತ ಮಾಡುತ್ತಿವೆ?

ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ಬನ್ಸಿ ಲಾಲ್‌ ಎಂಬ ರೈತರೊಬ್ಬರ ‘ಕಿಸನ್ ಕ್ರೆಡಿಟ್ ಕಾರ್ಡ್‌’ನ ಬ್ಯಾಂಕ್‌ ಅಕೌಂಟಿನಿಂದ ಇತ್ತೀಚೆಗೆ 2, 480ರೂಪಾಯಿಗಳನ್ನು ಹೇಳದೆ ಕೇಳದೆ ಕಡಿತಗೊಳಿಸಲಾಯಿತು. ವಿಚಾರಿಸಿದಾಗ ‘ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ (ಪಿಎಂಎಫ್‌ಬಿವೈ) ಅಡಿಯಲ್ಲಿ, ಬೆಳೆ ವಿಮೆಯ ಪ್ರೀಮಿಯಂ ಹಣದ ರೂಪದಲ್ಲಿ ಅದನ್ನು ಬ್ಯಾಂಕು ನೇರವಾಗಿ ಇನ್ಸ್‌ಶೂರೆನ್ಸ್‌ ಕಂಪನಿ ಅಕೌಂಟಿಗೆ ವರ್ಗಾವಣೆ ಮಾಡಿದ್ದಾಗಿ ತಿಳಿದು ಬಂತು. ತಮ್ಮ ಅನುಮತಿ ಇಲ್ಲದೆ ವಿಮೆ ತುಂಬಿದ ಬಗ್ಗೆ ಇನ್ನಷ್ಟು ವಿಚಾರಿಸಿದರೆ ಬ್ಯಾಂಕಿನ ಕಡೆಯಿಂದ ಈವರೆಗೂ ಸಮಾಧಾನಕರ ಪ್ರತ್ಯುತ್ತರ ಬಂದಿಲ್ಲ. ಸದ್ಯ ಬನ್ಸಿ ಲಾಲ್‌ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಲೇ ಇದ್ದಾರೆ.

ಹೆಚ್ಚು ಕಡಿಮೆ ಇದೇ ಮಾದರಿಯ ಪ್ರಕರಣವೊಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಿಸನ್ ನಂದ ರಾಮ್ ಎಂಬ ರೈತರ ವಿಚಾರದಲ್ಲಿಯೂ ನಡೆದಿದೆ. “ಕಳೆದ ವರ್ಷ ಕೃಷಿ ಸಾಲವನ್ನು ತೆಗೆದುಕೊಂಡಿದ್ದೆ. ನನ್ನ ಅನುಮತಿ ಇಲ್ಲದೆ ಬ್ಯಾಂಕ್‌ 5 ಸಾವಿರ ರೂಪಾಯಿ ಹಣವನ್ನು ಕಡಿತಗೊಳಿಸಿತು. ಕೇಳಿದರೆ ಈವರೆಗೂ ಸಮಾಧಾನಕರ ಉತ್ತರ ಸಿಕ್ಕಿಲ್ಲ,” ಎಂದವರು ದೂರುತ್ತಾರೆ.

ಇಂತಹ ಹಲವು ಪ್ರಕರಣಗಳು ದೇಶಾದ್ಯಂತ ಕಾಣಸಿಗುತ್ತವೆ. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ ರೈತರ ಅಕೌಂಟಿನಿಂದ ಅವರ ಅನುಮತಿಯೂ ಇಲ್ಲದಂತೆ ಕಡಿತಗೊಳಿಸಿದ ಸಾಕಷ್ಟು ಉದಾಹರಣೆಗಳಿವೆ.

ಪ್ರಧಾನಿ ಮೋದಿ 2016ರ ಜನವರಿ 13ರಂದು ಈ ಯೋಜನೆಯನ್ನು ಘೋಷಿಸಿದರು. ಇದರ ಭಾಗವಾಗಿ 2019ರ ಹೊತ್ತಿಗೆ ದೇಶದ ಶೇ. 50ರಷ್ಟು ರೈತರನ್ನು ವಿಮೆಯ ಕೆಳಗೆ ತರುವ ಗುರಿಯನ್ನು ಹೊಂದಲಾಗಿದೆ. ಇದಕ್ಕೂ ಮುಂಚೆಯೇ ಶೇ. 22. 23ರಷ್ಟು ರೈತರು ನಾನಾ ವಿಮಾ ಯೋಜನೆಗಳಿಗೆ ನೋಂದಣಿ ಮಾಡಿಕೊಂಡಿದ್ದರು. ಸದ್ಯ ಪ್ರಧಾನಿ ಮೋದಿ ಘೋಷಿಸಿದ ಯೋಜನೆಗೆ ಒಂದು ವರ್ಷ ತುಂಬುತ್ತಿದೆ. ಕಳೆದ ಒಂದು ವರ್ಷದ ಯೋಜನೆಯ ಅಂಕಿ ಅಂಶಗಳನ್ನು ನೋಡಿದರೆ, ಈವರೆಗೆ ದೇಶದ ಶೇ. 26. 5ರಷ್ಟು ರೈತರನ್ನು ವಿಮಾ ಯೋಜನೆಗಳ ಅಡಿಯಲ್ಲಿ ತರಲಾಗಿದೆ. ಅಂದರೆ ಫಲಲ್ ಭೀಮಾ ಯೋಜನೆ ಅಡಿಯಲ್ಲಿ ಅಂದುಕೊಂಡ ವಾರ್ಷಿಕ ಶೇ. 10ಕ್ಕಿಂತ ಕೇವಲ ಶೇ. 5.5 ರಷ್ಟು ರೈತರಿಗೆ ಮಾತ್ರ ವಿಮೆ ಮಾಡಿಸಲಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ ಎಸ್‌ಬಿಐನ ಆಕರ್ಷಕ ಜಾಹೀರಾತು.

ರಾಷ್ಟ್ರೀಕೃತ ಬ್ಯಾಂಕ್‌ ಎಸ್‌ಬಿಐನ ಆಕರ್ಷಕ ಜಾಹೀರಾತು.

ಯೋಜನೆಗಾಗಿ ಕೇಂದ್ರ ಸರಕಾರ ಆರಂಭದಲ್ಲಿ ಸುಮಾರು 5.5 ಸಾವಿರ ಕೋಟಿ ಹಣವನ್ನು ಎತ್ತಿಟ್ಟಿತ್ತು. ಒಂದು ವರ್ಷ ಕಳೆದ ನಂತರ ನೋಡಿದರೆ ಒಟ್ಟು 13, 240 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಹೆಚ್ಚುವರಿಯಾಗಿ 7, 740 ಕೋಟಿ ವಿನಿಯೋಗ ಮಾಡಿದರೂ ಸರಕಾರ ಅಂದುಕೊಂಡ ಗುರಿಯನ್ನು ಮುಟ್ಟಲಾಗಲಿಲ್ಲ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಹೋಗಲಿ ಇದರಿಂದ ರೈತರಿಗೆ ಆಗಿರುವ ಅನುಕೂಲ ಆದರೂ ಏನು?

ಅನುಕೂಲ ಪಕ್ಕಕ್ಕಿರಲಿ, ತಮ್ಮ ಅನುಮತಿ ಇಲ್ಲದೆ, ಗುರಿಯನ್ನು ಮುಟ್ಟುವ ಏಕೈಕ ಕಾರಣಕ್ಕೆ ತಮ್ಮನ್ನು ವಿಮಾ ಯೋಜನೆ ಅಡಿಯಲ್ಲಿ ತರಲಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ಅದರಲ್ಲಿ ಬನ್ಸಿ ಲಾಲ್‌ ಕೂಡ ಒಬ್ಬರು. ಮೇಲ್ನೋಟಕ್ಕೆ ಇದು ಸಣ್ಣ ಮೊತ್ತದಂತೆ ಕಾಣುತ್ತಿದೆಯಾದರೂ, 70ನೇ ಜನಗಣತಿಯ ಪ್ರಕಾರ ಈ ದೇಶದ ಸಣ್ಣ ಹಿಡುವಳಿದಾರರ ವಾರ್ಷಿಕ ಆದಾಯ 20 ಸಾವಿರ ಅಷ್ಟೆ. ಅಂದರೆ ಪ್ರತಿ ದಿನ 56 ರೂಪಾಯಿಗಳ ಆದಾಯದಲ್ಲಿ ಸಣ್ಣ ರೈತರು ಬದುಕುತ್ತಿದ್ದಾರೆ. ಹೀಗಿರುವಾಗ ಅವರ ಖಾತೆಯಿಂದ ಅನುಮತಿ ಪಡೆಯದೆ, ಮಾಹಿತಿಯನ್ನೂ ನೀಡದೆ, ಯೋಜನೆಯ ಗುರಿ ತಲುಪುವ ಏಕೈಕ ಕಾರಣಕ್ಕೆ 2,480 ರೂಪಾಯಿಗಳನ್ನು ‘ಕಿಸಾನ್ ಕ್ರೆಡಿಟ್‌ ಕಾರ್ಡ್‌’ ಖಾತೆಯಿಂದ ಕಡಿತಗೊಳಿಸುವುದು ಬನ್ಸಿಯಂತಹ ರೈತರಿಗೆ ಸಹಜ ಹೊರೆಯಾಗುತ್ತದೆ.

“ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರನ್ನು ಕರೆತರುವ ಹಿನ್ನೆಲೆಯಲ್ಲಿ ಅವರು ಸಾಲ ಪಡೆದು ಕಡ್ಡಾಯವಾಗಿ ವಿಮಾ ಯೋಜನೆಗೆ ಅನುಮತಿ ನೀಡಬೇಕಾಗುತ್ತದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅವರು ವಿಮೆಯ ಪ್ರೀಮಿಯಂ ಕಟ್ಟಲು ಶಕ್ತರಾಗಿ ಇರುವುದಿಲ್ಲ. ಹೀಗಾಗಿ ಸಾಲ ನೀಡುವ ಹೊತ್ತಿಗೇನೇ ವಿಮೆ ಪ್ರಿಮಿಯಂ ಅನ್ನು ಕಡಿತಗೊಳಸಲಾಗುತ್ತಿದೆ,” ಎನ್ನುತ್ತಾರೆ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಚಿವಾಲಯದ ಅಧಿಕಾರಿಯೊಬ್ಬರು.

2016ರ ಮಾರ್ಚ್‌ 31ರ ಹೊತ್ತಿಗೆ ದೇಶದಲ್ಲಿ ಸುಮಾರು 7,52,75,000 ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅಂದರೆ ಇಷ್ಟು ಪ್ರಮಾಣದ ರೈತರ ಖಾತೆಗಳಿಂದ ವಿಮೆಗಾಗಿ ಪ್ರೀಮಿಯಂ ಹಣವನ್ನು ಕಡಿತಗೊಳಿಸಲಾಗಿದೆ ಎಂದು ಅರ್ಥ ಅಲ್ವಾ?

“ರೈತರ ವಿಮಾ ಯೋಜನೆಯನ್ನು ಇನ್ಸ್‌ಶೂರೆನ್ಸ್ ಕಂಪನಿಗಳ ಸಹಭಾಗಿತ್ವದಲ್ಲಿ ರಚಿಸಲಾಗಿದೆ. ಇದರಲ್ಲಿ ಒಬ್ಬರು ರೈತರಿಗಿಂತ ರೈತರ ಗುಂಪುಗಳಿಗೆ ವಿಮೆ ವಿತರಿಸಲಾಗುತ್ತಿದೆ. ಇಡೀ ಗುಂಪಿನ ಶೇ. 70ರಷ್ಟು ರೈತರ ಬೆಳೆಗಳು ಹಾನಿಯಾದರೆ ಮಾತ್ರವೇ ವಿಮೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ ಒಬ್ಬಿಬ್ಬರು ರೈತರಿಗೆ ಪ್ರೀಮಿಯಂ ಹಣ ಕಡಿತಗೊಂಡರೂ ವಿಮೆ ಹಣ ಮರುಪಾವತಿ ಸಾಧ್ಯವಾಗುತ್ತಿಲ್ಲ,” ಎನ್ನುತ್ತಾರೆ ಕೇಂದ್ರ ಕೃಷಿ ಸಚಿವ ಸೋಮ್ಪಾಲ್ ಶಾಸ್ತ್ರಿ.

ರೈತರ ಬೆಳೆಗಳು ಬೆಂಕಿಯಿಂದ ನಾಶಗೊಂಡರೆ ವಿಮೆ ಹಣ ಸಿಗುವುದಿಲ್ಲ ಯೋಜನೆ ಹೇಳುತ್ತದೆ. ವಿದ್ಯುತ್ ಅವಘಡಗಳು ನಡೆದಾಗ ಎಷ್ಟೇ ಬೆಳೆ ಹಾನಿಯಾದರೂ ವಿಮೆ ಕೆಲಸ ಬಾರದೇ ಹೋಗುತ್ತದೆ.

“ಇದೊಂದು ರೈತರ ಮೇಲೆ ನಡೆಯುತ್ತಿರುವ ಅಮಾನವೀಯವಾದ ಪ್ರಕ್ರಿಯೆ. ಒಂದು ವೇಳೆ ವಿಮೆ ಯೋಜನೆಗಳು ಚೆನ್ನಾಗಿದ್ದರೆ ರೈತರೇ ಮುಂದಾಗಿ ಅವುಗಳ ಪ್ರೀಮಿಯಂ ತುಂಬುತ್ತಾರೆ. ಒತ್ತಾಯ ಮಾಡಿ ವಿಮೆ ಮಾಡಿಸುವ ಅಗತ್ಯವೇ ಇರುವುದಿಲ್ಲ. ಭಲತ್ಕಾರವಾಗಿ ವಿಮೆ ಕಡಿತಗೊಳಿಸುವುದು ಸರಿಯಲ್ಲ,” ಎನ್ನುತ್ತಾರೆ ದಿಲ್ಲಿ ಯೂನಿವರ್ಸಿಟಿಯ ಪ್ರೊ. ಆವ್ನೇಸ್ ಕುಮಾರ್.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಭತ್ತ, ಸೋಯಾದಂತೆ ‘ಖರೀಫ್’ ಬೆಳೆಗಳಿಗೆ ಶೇ. ರಷ್ಟು ಹಾಗೂ ಗೋದಿ ಮತ್ತಿತರ ಧಾನ್ಯಗಳಿಗೆ ಶೇ. 1.5ರಷ್ಟು ಪ್ರೀಮಿಯಂ ತುಂಬಬೇಕು. ಅಂದರೆ ಒಂದು ಎಕರೆಗೆ 25 ಸಾವಿರ ಮೊತ್ತದ ವಿಮೆ ಮಾಡಿಸಬೇಕು ಎಂದರೆ ರೈತರು 500 ರೂಪಾಯಿ ಪ್ರೀಮಿಯಂ ತುಂಬಬೇಕು. ಇಳಿದ ಶೇ. 10ರಷ್ಟನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ತುಂಬುತ್ತವೆ. ಒಟ್ಟು ಪ್ರೀಮಿಯಂ ಹಣ ಇನ್ಸ್‌ಶೂರೆನ್ಸ್ ಕಂಪನಿಗಳ ಖಾತೆಗೆ ವರ್ಗಾವಣೆಗೊಳ್ಳುತ್ತದೆ.

ಸದ್ಯ 10 ರೈತರಿಗೆ ವಿಮೆ ನೀಡುವ ಕಂಪನಿಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಐಸಿಐಸಿಐ ಲಾಂಬಾರ್ಡ್ ಮತ್ತು ರಿಲಯನ್ಸ್‌ ಜನರಲ್ ಇನ್ಸ್‌ಶೂರೆನ್ಸ್ ಕಂಪನಿಗಳು ಪ್ರಮುಖವಾದವು.

ಭಿವಾನಿ ಜಿಲ್ಲೆಯ ಇನ್ನೊಬ್ಬರ ರೈತ ರಾಜಾ, “ಈ ಬ್ಯಾಂಕುಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೇ ವಿಮೆ ಹಣವನ್ನು ಕಡಿತಗೊಳಿಸುತ್ತವೆ. ನಾವು ಕಬ್ಬು ಬೆಳೆದಿದ್ದರೆ ಭತ್ತ ಬೆಳೆದಿದ್ದಾರೆ ಎಂದು ಪ್ರೀಮಿಯಂ ತುಂಬಿಸಲಾಗುತ್ತದೆ,” ಎಂದು ಆರೋಪಿಸುತ್ತಾರೆ. ಕಳೆದ ವರ್ಷ ಅವರು ಬ್ಯಾಂಕಿನಿಂದ ಸುಮಾರು 20 ಲಕ್ಷ ಸಾಲ ಪಡೆದುಕೊಂಡಿದ್ದರು. ಅವರ ನಾಲ್ಕು ಎಕರೆ ಬೆಳೆ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಹಾನಿಯಾಗಿತ್ತು. ಯಾವುದೇ ವಿಮೆ ಹಣ ಅವರಿಗೆ ಬಂದಿಲ್ಲ.

 

ಮಾಹಿತಿ ಕೃಪೆ: ದಿ ವೈರ್.

Leave a comment

FOOT PRINT

Top