An unconventional News Portal.

ಥೇಮ್ಸ್ ನದಿ ದಂಡೆ ಮೇಲೆ ನಡೆದ ‘ಏಕಾಂಗಿ ದಾಳಿ’: ಭಾರತ ಕಲಿಬೇಕಿರುವುದು ಏನು?

ಥೇಮ್ಸ್ ನದಿ ದಂಡೆ ಮೇಲೆ ನಡೆದ ‘ಏಕಾಂಗಿ ದಾಳಿ’: ಭಾರತ ಕಲಿಬೇಕಿರುವುದು ಏನು?

ಲಂಡನ್ ನಗರದ ಹೃದಯ ಭಾಗದಲ್ಲಿ ನಡೆದ ‘ಏಕಾಂಗಿ ಭಯೋತ್ಪಾದನ’ ದಾಳಿಯಿಂದ ಜನ ನಿಧಾನವಾಗಿ ಚೇರಿಸಿಕೊಳ್ಳುತ್ತಿದ್ದಾರೆ.

ಬುಧವಾರ ಇಲ್ಲಿನ ಸಂಸತ್‌ ಕೇಂದ್ರದ ಪಕ್ಕದ ಥೇಮ್ಸ್ ನದಿ ದಂಡೆಯ ಮೇಲೆ ದಾಳಿಕೋರನೊಬ್ಬ ಜನರ ಮೇಲೆ ಕಾರ್‌ ನುಗ್ಗಿಸಿದ್ದ. ನಂತರ ಸಂಸದರು ‘ಹೌಸ್ ಆಫ್ ಕಾಮನ್ಸ್‌’ಗೆ ಪ್ರವೇಶಿಸುವ ಗೇಟಿನ ಬಳಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿ ವರದಿಗಳು ಹೇಳುತ್ತಿವೆ.

ದಾಳಿ ನಡೆದಿದ್ದು ಹೀಗೆ...(ಕೃಪೆ: ಬಿಬಿಸಿ).

ದಾಳಿ ನಡೆದಿದ್ದು ಹೀಗೆ…(ಕೃಪೆ: ಬಿಬಿಸಿ).

ದಾಳಿಕೋರನೂ ಸೇರಿದಂತೆ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಲಂಡನ್ ನಗರದ ಕೇಂದ್ರ ಸ್ಥಾನ ನಲುಗಿ ಹೋಗಿದೆ.

ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಕಮಿಷನರ್ ಮಾರ್ಸ್ ರೌಲಿ, “ಇದು ಅಂತರಾಷ್ಟ್ರೀಯ ಭಯೋತ್ಪಾದನೆಯ ಪ್ರೇರಣೆಯಿಂದ ನಡೆದ ಘಟನೆ,” ಎಂದು ಮಾಹಿತಿ ನೀಡಿದ್ದರೆ. “ನಮ್ಮ ಪ್ರಕಾರ ಇದು ಇಸ್ಲಾಂ ಭಯೋತ್ಪಾದಕರ ಕೃತ್ಯ,” ಎಂದು ಅವರ ತಿಳಿಸಿದ್ದಾರೆ. ದಾಳಿಕೋರನ ಮಾಹಿತಿ ಲಭ್ಯವಾಗಿದೆ ಎಂದಿರುವ ಅವರ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

 

ಸದ್ಯ ವೆಸ್ಟ್‌ಮಿನಿಸ್ಟರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರ ದಾಳಿ ಮುಂದುವರಿದಿದೆ. ಈವರೆಗೆ ಸುಮಾರು 6 ಜಾಗಗಳ ಮೇಲೆ ದಾಳಿ ನಡೆಸಲಾಗಿದೆ. 7 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಯುಕೆ ಪ್ರಧಾನ ಮಂತ್ರಿ ಥೆರೆಸಾ ಮೆ ಘಟನೆಯ ಹಿಂದೆ ‘ರೋಗಗ್ರಸ್ಥ ಮನಸ್ಥಿತಿ’ ಕೆಲಸ ಮಾಡಿದೆ ಎಂದಿದ್ದಾರೆ. ನಾನಾ ದೇಶಗಳ ಪ್ರಮುಖ ನಾಯಕರು ಸಾಂತ್ವಾನ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೂವರು ಫ್ರಾನ್ಸ್ ದೇಶದ ಶಾಲ ಮಕ್ಕಳೂ ಗಾಯಗೊಂಡ ಹಿನ್ನೆಲೆಯಲ್ಲಿ ಪ್ಯಾರೀಸ್‌ನ ಐಫಲ್‌ ಟವರ್‌ ದೀಪಗಳನ್ನು ಆರಿಸಲಾಗಿದೆ.

ಲಂಡನ್ ನಗರದಲ್ಲಿ ನೆನಪಿನಲ್ಲಿ ಉಳಿಯುವಂತಹ ಭಯೋತ್ಪಾದನಾ ದಾಳಿ ನಡೆದಿದ್ದು ಜುಲೈ, 2005ರಲ್ಲಿ. ಇಲ್ಲಿನ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ‘ಲಂಡನ್ ಬಸ್ ಬಾಂಬ್’ ಎಂದೇ ಚಾಲ್ತಿಗೆ ಬಂದ ಪ್ರಕರಣದಲ್ಲಿ ಸುಮಾರು 52 ಜನ ಸಾವನ್ನಪ್ಪಿದ್ದರು. 700 ಜನ ಗಾಯಗೊಂಡಿದ್ದರು.

ಇದೀಗ, ಸುಮಾರು 17 ವರ್ಷಗಳ ನಂತರ ಮತ್ತೊಮ್ಮೆ ಭಯೋತ್ಪಾದನಾ ದಾಳಿ ಲಂಡನ್‌ ಹೃದಯ ಭಾಗದಲ್ಲಿಯೇ ನಡೆದಿದೆ. ಕೃತ್ಯದಲ್ಲಿ ಪಾಲ್ಗೊಂಡಿರುವುದು ಒಬ್ಬನೇ ವ್ಯಕ್ತಿಯಾದ್ದರಿಂದ ‘ಲೋನ್ ವೂಲ್ಫ್’ (ಒಂಟಿ ತೋಳ) ಎಂದು ಜಾಗತಿಕ ತನಿಖಾ ಸಂಸ್ಥೆಗಳಿಂದ ಗುರುತಿಸುವವರ ಕೆಲಸ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. “ಇದು ಒಂಟಿ ತೋಳಗಳು ನಡೆಸಿದ ಕೃತ್ಯ ಇರಲಿಕ್ಕಿಲ್ಲ. ದಾಳಿ ಒಬ್ಬನೇ ನಡೆದಿದ್ದರೂ, ಆತನಿಗೆ ಸಹಾಯ ಮಾಡಿದವರು ಇದ್ದಾರೆ,” ಎಂದು ಲಂಡನ್ ಪತ್ರಕರ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಿಂದ ಪ್ರೇರಣೆ ಪಡೆದ ಉದ್ರೇಕಿತ ವ್ಯಕ್ತಿಗಳು ಭಯೋತ್ಪಾದನಾ ದಾಳಿಗಳನ್ನು ಅವರ ಮಟ್ಟದಲ್ಲಿಯೇ ನಡೆಸುತ್ತಿರುವುದು ಹೊಸ ವಿದ್ಯಮಾನ. ಅವರಿಗೆ ಯಾವ ಹಿನ್ನೆಲೆಗಳು, ಸಂಪರ್ಕಗಳು ಇರುವುದಿಲ್ಲ. ಒಂದು ದಾಳಿ ನಂತರ ಮತ್ತೆ ಒಂದು ನಿರ್ವಾತ ಮೂಡುತ್ತಿದೆ. ಯುರೋಪಿನಲ್ಲಿ ಕಳೆದ ಕೆಲವು ವರ್ಷಗಳ ಅಂತರದಲ್ಲಿ ಇಂತಹ ಹಲವು ದಾಳಿಗಳು ನಡೆದಿವೆ. ಇದೀಗ ಲಂಡನ್ ವೆಸ್ಟ್‌ಮಿನಿಸ್ಟರ್ ದಾಳಿ ವೇಳೆಯಲ್ಲಿಯೂ ಅಂತಹದ್ದೇ ಕುರುಹು ಲಭ್ಯವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ದಾಳಿಯ ಸ್ವರೂಪ ನಿರ್ಧಾರವಾಗಬೇಕಿದೆ.

“2005ರ ಆತ್ಮಹತ್ಯಾ ಬಾಂಬ್ ದಾಳಿ ನಂತರ ಲಂಡನ್ ನಗರದ ಪೊಲೀಸರನ್ನು ಇಂತಹ ದಾಳಿ ನಡೆಯುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ಅದರಲ್ಲೂ 2008ರಲ್ಲಿ ಭಾರತದ ಮುಂಬೈ ಮೇಲಿನ ದಾಳಿ ನಂತರ, ಇತ್ತೀಚೆಗೆ ಪ್ಯಾರೀಸ್ ಮೇಲೆ ನಡೆದ ದಾಳಿ ನಂತರ ಸುರಕ್ಷತೆ ಕುರಿತು ಹೆಚ್ಚು ಗಮನ ನೀಡಲಾಗಿತ್ತು. ಇದು ಈ ದಾಳಿಯನ್ನು ತಡೆಯುವಲ್ಲಿ ಸಹಾಯ ಮಾಡಿದೆ,” ಎಂದು ಬಿಬಿಸಿ ಪತ್ರಕರ್ತ ಡೊಮಿನಿಕ್ ಕ್ಯಾಸಿಯಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೊಡ್ಡ ಮಟ್ಟದ ಭಯೋತ್ಪಾದನಾ ದಾಳಿಗಳ ಜತೆಗೆ ಸಣ್ಣ ಮಟ್ಟದಲ್ಲಿ ನಡೆಯುವ ದಾಳಿಗಳನ್ನು ಎದುರಿಸಲು ಭದ್ರತಾ ಪಡೆಗಳನ್ನು ಸಜ್ಜುಗೊಳಿಸಬೇಕಾದ ಅಗತ್ಯ ಎಲ್ಲಾ ದೇಶಗಳ ಮುಂದಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.

Leave a comment

FOOT PRINT

Top