An unconventional News Portal.

ಕಸಾಯಿಖಾನೆಗಳಲ್ಲಿ ‘ಢಣ ಢಣ’: ಯುಪಿಯಿಂದ ರಫ್ತಾಗುತ್ತಿದ್ದ ಮಾಂಸದ ಕತೆ ಏನು?

ಕಸಾಯಿಖಾನೆಗಳಲ್ಲಿ ‘ಢಣ ಢಣ’: ಯುಪಿಯಿಂದ ರಫ್ತಾಗುತ್ತಿದ್ದ ಮಾಂಸದ ಕತೆ ಏನು?

ದೇಶದ ಮಾಂಸ ಉತ್ಪಾದನಾ ಕ್ಷೇತ್ರದಲ್ಲಿ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಾ ಬಂದ ರಾಜ್ಯ ಉತ್ತರ ಪ್ರದೇಶ. ಇಂಥದೊಂದು ರಾಜ್ಯಕ್ಕೆ ಮಾಂಸಾಹಾರ ವಿರೋಧಿ ಆಲೋಚನೆಗಳನ್ನು ಬೆಳೆಸಿಕೊಂಡವರು ಮುಖ್ಯಮಂತ್ರಿಯಾದರೆ ಏನಾಗಬಹುದು? ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಂದೇನಾಗಬಹುದು ಎಂಬುದನ್ನು ಈಗ ಸಾರಿ ಹೇಳುತ್ತಿವೆ.  

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಕಾನೂನು ಬಾಹಿರ ಕಸಾಯಿಖಾನೆಗಳಿಗೆ ಬೀಗ ಜಡಿಯುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಚುನಾವಣೆಯ ಫಲಿತಾಂಶದ ಮರುದಿನ ಅಂದರೆ ಮಾರ್ಚ್ 12ರಂದು ರಾಜ್ಯಕ್ಕೆ ಅಮಿತ್ ಶಾ ಬರುವ ದಿನ ಇಡೀ ರಾಜ್ಯದ ಕಸಾಯಿಖಾನೆಗಳನ್ನು ಬಂದ್ ಕೂಡಾ ಮಾಡಲಾಗಿತ್ತು. ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಎರಡು ಕಸಾಯಿಖಾನೆಗಳನ್ನು ಬಂದ್ ಮಾಡಿ ಆದಿತ್ಯನಾಥ್ ಆದೇಶ ಹೊರಡಿಸಿದರು. ಕಸಾಯಿಖಾನೆಗಳನ್ನು ಮುಚ್ಚಿದರೆ ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮಗಳು ಬೀರುವುದಷ್ಟೇ ಅಲ್ಲ ಅಲ್ಲಿನ ಸಾವಿರಾರು ಜನರ ದ್ಯೋಗಕ್ಕೂ ಕುತ್ತು ಬರುತ್ತದೆ ಎಂಬುದು ರಾಜ್ಯದ ಮಾಂಸ ಮಾರುಕಟ್ಟೆಯ ಅಂಕಿ ಅಂಶಗಳು ಹೇಳುತ್ತಿವೆ. 

ಮಾಂಸ ಮಾರುಕಟ್ಟೆ:

ರಾಜ್ಯದ ಪಶು ಸಂಗೋಪನಾ ಇಲಾಖೆಯ ದಾಖಲೆಗಳನ್ನೇ ತೆರೆದರೆ ಉತ್ತರ ಪ್ರದೇಶ 2014-15ನೇ ಆರ್ಥಿಕ ವರ್ಷದಲ್ಲಿ7,515.14 ಲಕ್ಷ ಕೆಜಿ ಬಫೆಲೋ (ಕೋಣ ಮತ್ತು ಎಮ್ಮೆ) ಮಾಂಸ ಉತ್ಪಾದನೆ ಮಾಡಿದೆ. ಇದೇ ವೇಳೆ 1171.65 ಲಕ್ಷ ಕೆಜಿ ಮೇಕೆ ಮಾಂಸ, 230.99 ಲಕ್ಷ ಕೆಜಿ ಕುರಿ ಮಾಂಸ ಹಾಗೂ 1410.32 ಹಂದಿ ಮಾಂಸ ಉತ್ಪಾದನೆ ಮಾಡಿದೆ.

ಸದ್ಯ ದೇಶದಾದ್ಯಂತ ಸರಕಾರದ ಅನುಮತಿ ಇರುವ 72 ಕಸಾಯಿಖಾನೆ ಕಮ್ ಸಂಸ್ಕರಣಾ ಘಟಕಗಳಿವೆ. ಇದರಲ್ಲಿ 38 ಉತ್ತರ ಪ್ರದೇಶದಲ್ಲೇ ಇವೆ ಎಂಬುದು ಗಮನಾರ್ಹ. 7 ಅಲಿಘರ್‌ನಲ್ಲಿ, 5 ಗಾಜಿಯಾಬಾದ್‌ನಲ್ಲಿವೆ. ಒಟ್ಟು 38ರಲ್ಲಿ 37 ಘಟಕಗಳು ಬಫೆಲೋ ಮಾಂಸಗಳನ್ನು ಉತ್ಪಾದನೆ ಮಾಡಿ ರಫ್ತು ಮಾಡುವ ಉದ್ಯಮದಲ್ಲಿವೆ. ವಿಶೇಷ ಎಂದರೆ ಕೆಲವು ಘಟಕಗಳ ಮಾಲೀಕರಲ್ಲಿ ಬಿಜೆಪಿಯ ಶಾಸಕರು, ನಾಯಕರೂ ಇದ್ದಾರೆ.

2016ರಲ್ಲಿ 13,14,158.05 ಮೆಟ್ರಿಕ್ ಟನ್ ಬಫಲೋ ಮಾಂಸವನ್ನು ಭಾರತ ರಫ್ತು ಮಾಡಿದೆ. ಇದರ ಅಂದಾಜು ಮೌಲ್ಯ 26,681.56 ಕೋಟಿ ರೂಪಾಯಿಗಳಾಗಿವೆ. ಮುಸ್ಲಿಂ ಬಾಹುಳ್ಯದ ದೇಶಗಳಾದ ಮಲೇಶ್ಯಾ, ಈಜಿಪ್ಟ್ಸೌದಿ ಅರೇಬಿಯಾ ಮತ್ತು ಇರಾಕಿಗೆ ದೊಡ್ಡ ಪ್ರಮಾಣದ ಮಾಂಸವನ್ನು ರಫ್ತು ಮಾಡಲಾಗಿದೆ.

ಕಾನೂನು ಕಟ್ಟಳೆ:

ತ್ತರ ಪ್ರದೇಶದಲ್ಲಿ ಕಾನೂನು ಪ್ರಕಾರ ಕೋಣ ಮತ್ತು ಎಮ್ಮೆಗಳನ್ನು ಹಾಗೂ 15 ವರ್ಷ ದಾಟಿದ ತ್ತುಗಳನ್ನು ಕೊಲ್ಲಲು ಅವಕಾಶವಿದೆ.

ರದಿಗಳ ಪ್ರಕಾರ ನೂತನ ಬಿಜೆಪಿ ಸರಕಾರ ರಾಜ್ಯದಲ್ಲಿ ಕಸಾಯಿಖಾನೆಗಳನ್ನು ಮುಚ್ಚಲು ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಹೊರಟಿದೆ. ಆದರೆ ಕೇವಲ ಫೆಲೋ ಮಾಂಸ ತ್ಪಾದನೆ ಮಾಡುವ ಕಸಾಯಿಖಾನೆಗಳನ್ನು ಮಾತ್ರ ಮುಚ್ಚುತ್ತದೋ ಅಥವಾ ಎಲ್ಲಾ ರೀತಿಯ ಮಾಂ ತ್ಪಾದನೆಯ ಕಸಾಯಿಖಾನೆಗಳನ್ನು ಮುಚ್ಚುತ್ತದೋ ಗೊತ್ತಿಲ್ಲ. ಆದರೆ ಇದನ್ನೇ ನಂಬಿದ ಸಾವಿರಾರು ಜನ ಉತ್ತರ ಪ್ರದೇಶದಲ್ಲೀಗ ಆತಂಕದಲ್ಲಿರುವುದು ಸಹಜ ಕೂಡ. 

“ಒಂದೊಮ್ಮೆ ಬಿಜೆಪಿ ಸರಕಾರ ಅದರಲ್ಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಲೆಕೆಟ್ಟು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇ ಆದಲ್ಲಿ ಕಸಾಯಿಖಾನೆ, ಮಾಂಸ ದ್ಯಮದ ಮೇಲೆ ಕೋಟಿಗಟ್ಟಲೆ ಹಣ ಹೂಡಿದವರು ತಮ್ಮ ಹಣ ಕಳೆದುಕೊಳ್ಳಲಿದ್ದಾರೆ. ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ‘ಆಹಾರದ ಆಯ್ಕೆ’ ಎಂಬ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಬರಲಿದೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.  

ವಿಪರೀತ ಜಾನುವಾರು:

2014ರ ಪಶು ಸಂಗೋಪನೆ, ಹಾಲುತ್ಪನ್ನ ಮತ್ತು ಮೀನುಗಾರಿಕೆ ಇಲಾಖೆಯ ವರದಿಯ ಪ್ರಕಾರ ದೇಶದ ಮಾಂಸ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು ಶೇಕಡಾ 19.1 ರಷ್ಟು ಉತ್ಪಾದನೆ ಮಾಡುತ್ತದೆ. ಇನ್ನು ಎರಡನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶ ಶೇ.15.2, ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಲ ಶೇ. 10.9 ರಷ್ಟು ಮಾಂಸ ಉತ್ಪಾದನೆ ಮಾಡುತ್ತವೆ. 2008 ರಿಂದ 2013ರ ವರೆಗೆ 5 ವರ್ಷಗಳ ಅವಧಿಗೆ ದೇಶದ ಮಾಂಸ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದಿದೆ.

2007ರ ಜಾನುವಾರು ಗಣತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ದನದ ಜಾತಿಗೆ ಸೇರಿದ (ದನಎತ್ತು, ಎಮ್ಮೆಕೋಣ) ಪ್ರಾಣಿಗಳ ಸಂಖ್ಯೆ ಹೆಚ್ಚಿದೆ. 2012ರಲ್ಲೂ ಇದೇ ಪುನರಾವರ್ತನೆಯಾಗಿದೆ. ಕಳೆದ 5 ವರ್ಷಗಳಲ್ಲಿ ದನದ ಜಾತಿಗೆ ಸೇರಿದ ಪ್ರಾಣಿಗಳ ಸಂಖ್ಯೆ ಉತ್ತರ ಪ್ರದೇಶದಲ್ಲಿ 2,38,12,000 ದಿಂದ 3,06,25,000 ಕ್ಕೆ ಏರಿಕೆಯಾಗಿದೆ. ಆದರೆ ವಿಶೇಷ ಎಂದರೆ ಎರಡನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ ಈ ಸಂಖ್ಯೆ 1,32,71,000 ದಿಂದ 1,06,22,000 ಕ್ಕೆ ಇಳಿಕೆಯಾಗಿದೆ.

2015-16ರಲ್ಲಿ 5,65,958 ಮೆಟ್ರಿಕ್ ಟನ್ ಬಫೆಲೋ ಮಾಂಸ ರಫ್ತು ಮಾಡಿದ ತ್ತರ ಪ್ರದೇಶ ಬರೋಬ್ಬರಿ 11,350 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸಿದೆ. ಒಂದೊಮ್ಮೆ ರಾಜ್ಯದಲ್ಲಿ ಕಸಾಯಿಖಾನೆಗಳು ಬಂದ್ ಆದರೆ ಉತ್ತರ ಪ್ರದೇಶದ ಮಾಂಸತ್ಪಾದನೆಯ ಕೊರತೆಯನ್ನು ತುಂಬುವ ರಾಜ್ಯ ಡೀ ದೇಶದಲ್ಲೇ ಇಲ್ಲ.

ಬಿಜೆಪಿ ಗೋ ರಾಜಕೀಯ:

ಗೋವಿನ ರಾಜಕೀಯ ನಮ್ಮ ದೇಶದಲ್ಲಿ ಎರಡು ಮಾದರಿಯಲ್ಲಿ ನಡೆದುಕೊಂಡು ಬಂದಿದೆ. ಒಂದು ಹೇಳಿದಂತೆ ನಡೆದುಕೊಳ್ಳುವುದು. ಅಂದರೆ ಕಸಾಯಿಖಾನೆ ಬಂದ್ ಮಾಡುವುದೂ ಸೇರಿದಂತೆ ಪೂರ್ತಿ ಗೋ ಹತ್ಯೆ ನಿಷೇಧ ಮಾಡುವುದು.ಎರಡನೆಯದ್ದು ಹೇಳುವುದು ಒಂದು ಮಾಡುವುದು ಇನ್ನೊಂದು.

ಬಿಜೆಪಿಯ ಗೋ ಹತ್ಯೆ ನಿಷೇಧ ನಿಲುವಿಗೆ ಬಂದರೆ ಎರಡನೆಯದ್ದು ಸರಿಯಾಗಿ ಒಗ್ಗುತ್ತದೆ. ಹಲವು ಬಿಜೆಪಿ ರಾಜ್ಯಗಳು ಗೋ ಹತ್ಯೆ ನಿಷೇಧದ ಜಪದಿಂದ ಅಧಿಕಾರಕ್ಕೆ ಬಂದು ನಂತರ ಸುಮ್ಮನಾಗಿದ್ದಿದೆ. ಇನ್ನು ಕಾಗದದ ಹಾಳೆಯ ಮೇಲೆ ಗೋ ಹತ್ಯೆ ನಿಷೇಧ ಮಾಡಿ ಭರಪೂರ ರಫ್ತಿನಲ್ಲಿ ತೊಡಗಿಸಿಕೊಂಡ ರಾಜ್ಯಗಳಿವೆ. ಇದಕ್ಕೆ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ಕೂಡಾ ಹೊರತಲ್ಲ. ಇನ್ನು ಕೆಲವು ಕಡೆ ಹಸುವಿನ ಹತ್ಯೆಗೆ ಮಾತ್ರ ನಿಷೇಧ ಹೇರಿ ಉಳಿದವುಗಳ ವಧೆಗೆ ಅನುಮತಿ ನೀಡಿ ಸೋ ಕಾಲ್ಡ್ ಗೋ ಹತ್ಯೆ ನಿಷೇಧಿಸಿದ್ದೂ ಇದೆ.

ಇಂತಹ ಸಮಯದಲ್ಲಿಯೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹೊರತಾದ ಹಿಂದುತ್ವದ ಕುಲುಮೆಯಿಂದ ಎದ್ದು ಬಂದಿರುವ ಯೋಗಿ ಆದಿತ್ಯನಾಥ್ ಯಾವ ಮಾದರಿ ಅನುಸರಿಸುತ್ತಾರೆ ಎಂಬುದನ್ನು ಗಮನಿಸಬೇಕಿದೆ. 


More to Read: ಸಮಾಚಾರ SPECIAL SERIES:

Punyakoti-samachara-1

ಪುರಾಣದ ‘ಕಾಮಧೇನು’; ಕ್ಷೀರ ಕ್ರಾಂತಿಯ ‘ಜೆರ್ಸಿ’ ಮತ್ತು ಗೋ ರಾಜಕೀಯಕ್ಕೆ ಮುನ್ನುಡಿ

ಗೋ ಹತ್ಯೆ ನಿಷೇಧ ಮತ್ತು ಕಾನೂನು ಜಾರಿ ಹಿಂದೆ ಬಡಿದಿದ್ದ ‘ಅಜೆಂಡಾ’ಗಳ ವಾಸನೆ!

ಗೋ ರಕ್ಷಣೆಗೂ ಮುನ್ನ ಬೀಫ್ ರಫ್ತು ಉದ್ಯಮದ ಅಂತರಾಳಕ್ಕೆ ಕಾಲಿಟ್ಟು ನೋಡಿ!

‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡ್’!


 

Leave a comment

FOOT PRINT

Top