An unconventional News Portal.

    ...
    farmer-india-1
    ದೇಶ

    ನಮ್ಮ ಬ್ಯಾಂಕುಗಳೇಕೆ ರೈತರ ಅಕೌಂಟ್‌ನಿಂದ ಹೇಳದೆ ಕೇಳದೆ ಹಣ ಕಡಿತ ಮಾಡುತ್ತಿವೆ?

    ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ಬನ್ಸಿ ಲಾಲ್‌ ಎಂಬ ರೈತರೊಬ್ಬರ ‘ಕಿಸನ್ ಕ್ರೆಡಿಟ್ ಕಾರ್ಡ್‌’ನ ಬ್ಯಾಂಕ್‌ ಅಕೌಂಟಿನಿಂದ ಇತ್ತೀಚೆಗೆ 2, 480ರೂಪಾಯಿಗಳನ್ನು ಹೇಳದೆ ಕೇಳದೆ ಕಡಿತಗೊಳಿಸಲಾಯಿತು. ವಿಚಾರಿಸಿದಾಗ ‘ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ (ಪಿಎಂಎಫ್‌ಬಿವೈ) ಅಡಿಯಲ್ಲಿ, ಬೆಳೆ ವಿಮೆಯ ಪ್ರೀಮಿಯಂ ಹಣದ ರೂಪದಲ್ಲಿ ಅದನ್ನು ಬ್ಯಾಂಕು ನೇರವಾಗಿ ಇನ್ಸ್‌ಶೂರೆನ್ಸ್‌ ಕಂಪನಿ ಅಕೌಂಟಿಗೆ ವರ್ಗಾವಣೆ ಮಾಡಿದ್ದಾಗಿ ತಿಳಿದು ಬಂತು. ತಮ್ಮ ಅನುಮತಿ ಇಲ್ಲದೆ ವಿಮೆ ತುಂಬಿದ ಬಗ್ಗೆ ಇನ್ನಷ್ಟು ವಿಚಾರಿಸಿದರೆ ಬ್ಯಾಂಕಿನ ಕಡೆಯಿಂದ ಈವರೆಗೂ ಸಮಾಧಾನಕರ ಪ್ರತ್ಯುತ್ತರ ಬಂದಿಲ್ಲ. ಸದ್ಯ ಬನ್ಸಿ..

    March 31, 2017
    ...
    adhar-security-failed-1
    ದೇಶ

    ಗಮನಿಸಿ; ಆಧಾರ್ ಮಾಹಿತಿ ಸೋರಿಕೆ ಆಗಿದೆ: ಕೊನೆಗೂ ಒಪ್ಪಿಕೊಂಡ ಮೋದಿ ಸರಕಾರ

    ನಿಮ್ಮ ಆಧಾರ್‌ ಕಾರ್ಡ್‌ ಜತೆಗೆ ಬ್ಯಾಂಕ್‌ ಅಕೌಂಟ್ ಮತ್ತಿತರ ವೈಯಕ್ತಿಕ, ಸೂಕ್ಷ್ಮ ಮಾಹಿತಿಗಳನ್ನು ಜೋಡಿಸಿಟ್ಟುಕೊಂಡಿದ್ದೀರಾ? ಹಾಗಾದರೆ ಎಚ್ಚರಾಗಿ, ನಿಮ್ಮ ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಎಲ್ಲಾ ಸಾಧ್ಯತೆಗಳೂ ಇವೆ. ಇದೇ ಮೊದಲ ಬಾರಿಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕೃತವಾಗಿ ಯುಐಡಿ ಅಥವಾ ಆಧಾರ್‌ ಕಾರ್ಡ್ ಮಾಹಿತಿ ಸಾರ್ವಜನಿಕಗೊಳ್ಳುವ ಸಾಧ್ಯತೆಯನ್ನು ಒಪ್ಪಿಕೊಂಡಿದೆ. ಈವರೆಗೂ ಸರಕಾರ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ನಾಗರಿಕರು ನೀಡಿರುವ ಮಾಹಿತಿ ಸೋರಿಕೆಯಾಗಬಹುದು ಎಂಬ ಎಚ್ಚರಿಕೆಗಳನ್ನು ಕಡೆಗಣಿಸುತ್ತಲೇ ಬಂದಿತ್ತು. ಜತೆಗೆ, ಆದಾಯ ತೆರಿಗೆ ಪಾವತಿ ಸೇರಿದಂತೆ ಸಿಮ್‌..

    March 31, 2017
    ...
    corporate-loan-1
    ದೇಶ

    ನಮ್ಮ ‘ಬ್ಯಾಂಕಿಂಗ್ ವ್ಯವಸ್ಥೆ’ ನಿಜಕ್ಕೂ ಯಾರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ?

    ದೇವೆಂದರ್ ಶರ್ಮಾ ಅಹ್ಮದಾಬಾದ್‌ನಲ್ಲಿ ನ್ಯಾನೋ ಕಾರ್‌ ತಯಾರಿಕಾ ಘಟಕ ಸ್ಥಾಪನೆಗೆ ಗುಜರಾತ್ ಸರಕಾರ 456. 79 ಕೋಟಿ ಮೊತ್ತದ ಸಾಲವನ್ನು ಟಾಟಾ ಕಂಪನಿಗೆ ನೀಡಿತು. ಅದೂ 0.1% ಬಡ್ಡಿ ದರದಲ್ಲಿ; 20 ವರ್ಷಗಳ ಕಾಲವಧಿಗೆ. ಇನ್ನೊಂದು ಅರ್ಥದಲ್ಲಿ ಬಡ್ಡಿರಹಿತ, ದೀರ್ಘಕಾಲಿಕ ಸಾಲವನ್ನು ನೀಡಲಾಯಿತು. ಪಂಜಾಬ್ ಸರಕಾರ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಒಡೆತನದ ಬಟಿಂಡಾ ರಿಪೈನರಿಯಲ್ಲಿ 1, 200 ಕೋಟಿ ರೂಪಾಯಿ ಹೂಡಿಕೆ ಮಾಡಿತು. ಅದೇ ವೇಳೆಯಲ್ಲಿ ಹಳ್ಳಿಯ ಬಡ ಮಹಿಳೆಯೊಬ್ಬರು ಕುರಿಗಳನ್ನು ಕೊಳ್ಳಬೇಕು ಎಂದು 5 ಸಾವಿರ ಸಾಲಕ್ಕಾಗಿ..

    March 30, 2017
    ...
    gaddar-cover-final
    ದೇಶ

    Bullet to Ballot: ಗದ್ದರ್ ಎಂಬ ಕ್ರಾಂತಿಕವಿಯೂ; ‘ಆಧ್ಯಾತ್ಮಿಕ ಪ್ರಜಾಪ್ರಭುತ್ವ’ದ ತುಡಿತವೂ…

    “ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದರೆ ಮಾತ್ರವೇ ಮಾರ್ಕ್ಸ್‌ಸಿಸಂ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಬಲ್ಲದು…” ಹೀಗೊಂದು ಹೇಳಿಕೆ ನೀಡುವ ನೀಡುವ ಅಚ್ಚರಿಗೆ ಕಾರಣರಾಗಿರುವವರ ಹೆಸರು ಗದ್ದರ್ ಅಲಿಯಾಸ್ ಗುಮ್ಮಡಿ ವಿಠಲ್ ರಾವ್. ಅದು 90ರ ದಶಕ. ಕರ್ನಾಟಕದ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನಕ್ಸಲ್ ಚಳವಳಿ ಅಬ್ಬರದಲ್ಲಿದ್ದ ದಿನಗಳು. ದೊಡ್ಡ ಮಟ್ಟದಲ್ಲಿ ಸರಕಾರವನ್ನು ನಡುಗಿಸುತ್ತಿದ್ದ ಶಶಸ್ತ್ರ ಹೋರಾಟಕ್ಕೆ ಸಾಂಸ್ಕೃತಿಕ ಪ್ರಚಾರದ ರಾಯಭಾರಿಯಾಗಿದ್ದವರು ಗದ್ದರ್. ‘ಜನನಾಟ್ಯ ಮಂಡಳಿ’ ಎಂಬ ಸಂಘಟನೆ ಅಡಿಯಲ್ಲಿ ಗದ್ದರ್, ಒಂದಷ್ಟು ಕಾಲ ಭೂಗತವಾಗಿದ್ದುಕೊಂಡು, ನಂತರ ಮುಖ್ಯವಾಹಿನಿಯಲ್ಲಿ ಬಂದೂಕಿನ ನಳಿಕೆಯಿಂದ ಸಿಡಿಯುವ ಗುಂಡುಗಳು ಸಮಾಜದಲ್ಲಿ ಸಮಾನತೆಯನ್ನು..

    March 30, 2017
    ...
    noor-final-1
    ರಾಜ್ಯ

    ನೂರ್ ಶ್ರೀಧರ್ ಸಂದರ್ಶನ: ‘ಪೊಲೀಸ್ ಪಿತೂರಿಯಿಂದ ಜೈಲಿಗೆ ಹೋದರೂ ಹೋರಾಟಕ್ಕೆ ಬದ್ಧ’

    “ಕಳೆದು ಹೋದ 30 ವರ್ಷಗಳ ಬಗ್ಗೆ ವಿಷಾಧವಿದೆ. ನಮ್ಮೆಲ್ಲಾ ಪ್ರಯತ್ನ ಅಂದುಕೊಂಡ ಮಟ್ಟಕ್ಕೆ ಫಲ ನೀಡಲಿಲ್ಲ ಎಂಬ ಕೊರಗಿದೆ. ಹೀಗಾಗಿಯೇ ಭೂಗತ ಜೀವನಕ್ಕೆ ವಿದಾಯ ಹೇಳಿ ಸಂವಿಧಾನ ಬದ್ಧವಾಗಿ ಹೋರಾಟ ಮಾಡಲು ಮುಖ್ಯವಾಹಿನಿಗೆ ಬಂದಿದ್ದೇವೆ. ಪೊಲೀಸರೀಗ ನಮ್ಮ ಹೋರಾಟಗಳನ್ನು ಮಣಿಸಲು ಜಾಮೀನು ನಿರಾಕರಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಕಾನೂನಾತ್ಮಕವಾಗಿಯೇ ಹೋರಾಟ ಮಾಡುವುದಾಗಿಯೇ ಹೇಳಿ ಬಂದಿದ್ದೇವೆ. ಜೈಲಿನಲ್ಲಿ ಇದ್ದಾದರೂ ಸರಿ ಹೋರಾಟವನ್ನು ಮುಂದುವರಿಸುತ್ತೇವೆ…” ಇದು ಒಂದು ಕಾಲದ ನಕ್ಸಲ್ ನಾಯಕ, ಇವತ್ತಿಗೆ ಮುಖ್ಯವಾಹಿನಿಯಲ್ಲಿರುವ ಸಾಮಾಜಿಕ ಹೋರಾಟಗಾರ, ಚಿತ್ರದುರ್ಗ ಮೂಲದ ನೂರ್‌..

    March 29, 2017
    ...
    ahmed-katrada-1
    ವಿದೇಶ

    ಕಪ್ಪು ಜನರ ಕಣ್ಮಣಿ, ಮಂಡೇಲಾ ಒಡನಾಡಿ, ಭಾರತ ಮೂಲದ ‘ಅಂಕಲ್ ಕ್ಯಾತಿ’ ಇನ್ನಿಲ್ಲ

    ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡಿದ, ನೆಲ್ಸನ್‌ ಮಂಡೇಲಾ ಜತೆ ಸುಮಾರು 26 ವರ್ಷಗಳ ಕಾಲ ಜೈಲಿನಲ್ಲಿದ್ದ, ಅಲ್ಪಸಂಖ್ಯಾತ ಬಿಳಿಯರ ಸರಕಾರದ ವಿರುದ್ಧ ಹೋರಾಡಿದ್ದ ‘ಕಪ್ಪು ಜನರ ಕಣ್ಮಣಿ’ ಅಹಮದ್ ಕತ್ರಾಡ ಇನ್ನಿಲ್ಲ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕತ್ರಾಡ ಅವರನ್ನು ಜೋಹಾನ್ಸ್‌ಬರ್ಗ್ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಜೀವನ್ಮರಣದ ಹೋರಾಟ ನಡೆಸಿದ ಅವರು ಸ್ಥಳೀಯ ಕಾಲಮಾನ ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ. 1929ರ ಆಗಸ್ಟ್ 21ರಂದು ಭಾರತೀಯ ಮೂಲದ ದಂಪತಿಗಳ ಪುತ್ರನಾಗಿ ದಕ್ಷಿಣ ಆಫ್ರಿಕಾದಲ್ಲಿ..

    March 28, 2017
    ...
    banwari-devi-1
    ಪಾಸಿಟಿವ್

    ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಜಾರಿ ಹಿಂದಿರುವ ಭನ್ವಾರಿದೇವಿಯ ಭಯಾನಕ ಕತೆ

    ಇದು ಅತ್ಯಾಚಾರದ ಅವಮಾನವನ್ನ ಮೆಟ್ಟಿ ನಿಂತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಧೀರ ಮಹಿಳೆಯ ಯಶೋಗಾಥೆ. ಗುಜ್ಜರ್ ಸಮುದಾಯದ ದಬ್ಬಾಳಿಕೆ ಮಿತಿ ಮೀರಿರುವ ರಾಜಸ್ಥಾನದ ಹಳ್ಳಿಯೊಂದರಲ್ಲಿ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುತ್ತಿರುವ ಗಟ್ಟಿಗಿತ್ತಿಯ ಸ್ಫೂರ್ತಿಯ ಕತೆ. ಮಹಿಳೆಯೊಬ್ಬರು ತಮ್ಮ ಜೀವನವನ್ನೇ ಹೋರಾಟದ ಅಸ್ತ್ರವಾಗಿಸಿಕೊಂಡು, ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ಸಾಹಸ ಕತೆ ಕೂಡ. ಈ ನಿಜ ಜೀವನದ ಕತೆಯ ನಾಯಕಿ ರಾಜಸ್ಥಾನದ ಭನ್ವಾರಿದೇವಿ. ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ, ನಮ್ಮ ನಿಧಾನಗತಿಯ ಕಾನೂನು ವ್ಯವಸ್ಥೆಯಲ್ಲಿ..

    March 28, 2017
    ...
    Finance-Bill-1
    ದೇಶ

    ಆಧಾರ್‌ ಕಾರ್ಡ್‌ನಿಂದ ಪೀಠಗಳವರೆಗೆ: ‘ಹಣಕಾಸು ಮಸೂದೆ- 2017’ ಯಾಕೆ ವಿವಾದಾತ್ಮಕ?

    ರಾಜ್ಯಸಭೆಯಲ್ಲಿ ಇಂದು ಕೇಂದ್ರ ಸರಕಾರ ತರಾತುರಿಯಲ್ಲಿ ಮಂಡಿಸಿರುವ ಹಣಕಾಸು ಮಸೂದೆ ಕುರಿತು ಚರ್ಚೆ ನಡೆಯಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ. 1ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಆದಾಯ ತೆರಿಗೆ ಇಲಾಖೆಗೆ ರಾಜಕೀಯ ಪಕ್ಷಗಳ ದೇಣಿಗೆ ವಿಚಾರದಲ್ಲಿ ದಾಳಿ ಮತ್ತು ವಿಚಾರಣೆ ನಡೆಸಲು ಪರಮಾಧಿಕಾರ ನೀಡುವ ಅವಕಾಶವನ್ನು ಮಸೂದೆ ಒಳಗೊಂಡಿತ್ತು. ಜತೆಗೆ, ಕಳೆದ ವಾರ ತರಾತುರಿಯಲ್ಲಿ ಸುಮಾರು 40 ವಿಚಾರಗಳನ್ನು ಮಸೂದೆಯ ವ್ಯಾಪ್ತಿಗೆ ತರಲಾಯಿತು. ಇವುಗಳಲ್ಲಿ ನ್ಯಾಯ ಪೀಠಗಳನ್ನು ಮುಚ್ಚಿವ ಹಾಗೂ ಆಧಾರ್‌ ಕಾರ್ಡ್ ಕಡ್ಡಾಯದಂತಹ ಗಂಭಿರ ವಿಚಾರಗಳನ್ನು ಒಳಗೊಂಡಿವೆ…

    March 27, 2017
    ...
    winny-masthikatte-final-cover
    ಪಾಸಿಟಿವ್

    ‘ಮಾದರಿ ತಾಯಿ’: ಮೆಡಿಕಲ್ ಓದಿದ ಮಕ್ಕಳನ್ನು ‘ಹಳ್ಳಿ ಸೇವೆ’ಗೆ ಕರೆತಂದವರು ವಿನ್ನಿ ಸಿಸ್ಟರ್!

    ಮಕ್ಕಳು ಚೆನ್ನಾಗಿ ಓದಬೇಕು; ಡಿಗ್ರಿ ಸಂಪಾದಿಸಬೇಕು; ಫಾರಿನ್‌ಗೆ ಹೋಗಬೇಕು; ಕೈ ತುಂಬಾ ಹಣ ದುಡಿಯಬೇಕು…ಇವು ಎಲ್ಲಾ ಕಾಲಕ್ಕೂ ಬಹುತೇಕ ತಂದೆ ತಾಯಿಗಳು ಮಕ್ಕಳ ಎಡೆಗೆ ಕಟ್ಟಿಕೊಂಡಿರುವ ಕನಸುಗಳು. ಆದರೆ, ಕಷ್ಟದಲ್ಲಿಯೇ ಬದುಕು ಕಟ್ಟಿಕೊಂಡು, ಇಬ್ಬರು ಗಂಡು ಮಕ್ಕಳನ್ನು ಮೆಡಿಕಲ್ ಓದಿಸಿ, ಅವರ ಫಾರಿನ್‌ ಕನಸುಗಳನ್ನು ಬದಿಗಿರಿಸಿ, ಹುಟ್ಟಿದ ಊರಿನ ಜನರಿಗೆ ಸೇವೆ ಸಲ್ಲಿಸುವಂತೆ ಹೇಳುವ ತಾಯಂದಿರೂ ಇವತ್ತಿಗೂ ಇದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಬೇಕು. ಯಾಕೆಂದರೆ, ಬದುಕಿನ ಬಗ್ಗೆ ಪ್ರೀತಿಯನ್ನು ಹುಟ್ಟಿಸುವಂತಹ ನಿರ್ಧಾರವೊಂದನ್ನು ತೆಗೆದುಕೊಂಡ ತಾಯಿಯೊಬ್ಬರನ್ನು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ; ಮೀಟ್ ಮಿಸ್..

    March 25, 2017
    ...
    bbmp-1
    ರಾಜ್ಯ

    ‘ರಿಯಲಿಸ್ಟಿಕ್ ಬಿಬಿಎಂಪಿ ಬಜೆಟ್’: ಯೋಚನೆ, ಯೋಜನೆ ಮತ್ತು ‘ಆರ್ಥಿಕ ಶಿಸ್ತಿ’ನ ಮಂತ್ರ!

    ‘ರಿಯಲಿಸ್ಟಿಕ್ ಬಜೆಟ್’ ಎಂಬ ಟ್ಯಾಗ್‌ಲೈನ್ ಪಡೆದುಕೊಂಡಿದ್ದ 2017-18ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯವ್ಯಯ ಪತ್ರದ ಮಂಡನೆಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಸುಮಾರು 4249 ಕೋಟಿ ನೆರವಿನೊಂದಿಗೆ ಮುಂದಿನ ಒಂದು ವರ್ಷದ ಅವಧಿಗೆ 9, 241 ಕೋಟಿ ಬಜೆಟ್‌ನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ ಮುಂದಿಟ್ಟಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ದೊಡ್ಡ ಮಟ್ಟದ ಬದಲಾವಣೆಗಳು ಕಾಣದಿದ್ದರೂ ‘ಆರ್ಥಿಕ ಶಿಸ್ತಿನ’ ಕಡೆಗೆ ಬಿಬಿಎಂಪಿ ನಡಿಗೆ ಎದ್ದು ಕಾಣಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಆಡಳಿತ..

    March 25, 2017

Top