An unconventional News Portal.

    ...
    ckm-police-betting-final
    ರಾಜ್ಯ

    ‘ಕಲ್ಲಪ್ಪ ಸಾವಿಗೆ ಪೊಲೀಸ್ ಪ್ರತೀಕಾರ’: ಬೆಟ್ಟಿಂಗ್ ದಂಧೆ ತರಲಿದೆಯಾ ಸಿ. ಟಿ. ರವಿಗೆ ಸಂಚಕಾರ?

    ಆತ್ಮಹತ್ಯಗೆ ಶರಣಾದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ‘ಆತ್ಮ’ಕ್ಕೆ ಶಾಂತಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ; ಆದರೆ ಚಿಕ್ಕಮಗಳೂರು ಪೊಲೀಸರು ಮಲೆನಾಡಿನ ಸಂಘಪರಿವಾರದ ಸಂಘಟನೆಗಳಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ; ಅವರ ಶಾಂತಿಗೆ ಭಂಗ ತಂದಿದ್ದಾರೆ!  ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಹೆಸರಿನಲ್ಲಿ ನಡೆಯುತ್ತಿರುವ ಬಂಧನಗಳು ಹಾಗೂ ಸದ್ಯ ಪೊಲೀಸರು ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಲುಪಿಸುತ್ತಿರುವ ಮಾಹಿತಿ ಗಮನಿಸಿದರೆ, ಜಿಲ್ಲೆಯ ಅಂತರಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸುವ..

    February 7, 2017
    ...
    food-not-bombs-1
    ಫೋಕಸ್

    ‘ವಿಚಿತ್ರ ಕಾನೂನು’: ಇಲ್ಲಿ ಬಡವರಿಗೆ ಆಹಾರ ನೀಡಿದರೆ ಪೊಲೀಸರು ಬಂಧಿಸುತ್ತಾರೆ!

    ವಸತಿ ರಹಿತರಿಗೆ ಅನ್ನ, ಆಹಾರ ನೀಡಲು ಹೋದವರಿಗೆ ಕೈಕೋಳ ತೊಡಿಸುವ ಕಾನೂನುಗಳು ಅಮೆರಿಕಾದಲ್ಲಿವೆ ಎಂದರೆ ನೀವು ನಂಬಬೇಕು. ಇಲ್ಲಿನ ಫ್ಲೋರಿಡಾದ ಟ್ಯಾಂಪ ನಗರದಲ್ಲಿ ಇರುವ ಇಂತದೊಂದು ವಿಚಿತ್ರ ಕಾನೂನು ಆಗಾಗ್ಗೆ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಲ ದಿನಗಳ ಹಿಂದೆ ಟ್ಯಾಂಪಾ ಪಾರ್ಕೊಂದರಲ್ಲಿ ಬಡವರಿಗೆ ಊಟ ಮತ್ತು ಬಟ್ಟೆಗಳನ್ನು ವಿತರಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ಲೈಕ್ಸ್ ಗ್ಯಾಸ್ಲೈಟ್ ಪಾರ್ಕ್ನಲ್ಲಿ ‘ಫುಡ್ ನಾಟ್ ಬಾಂಬ್ಸ್’ ಎನ್ನುವ ಸಂಘಟನೆಯ ಕಾರ್ಯಕರ್ತರು ಮನೆಯಿಲ್ಲದ ಜನರಿಗೆ ಊಟವನ್ನ ವಿತರಿಸುತ್ತಿದ್ದರು…

    February 7, 2017
    ...
    media-demonetisation-1
    ಪತ್ರಿಕೆ

    ಅನಾಣ್ಯೀಕರಣಕ್ಕೆ 3 ತಿಂಗಳು: ಮಾಧ್ಯಮ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮಗಳು

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ನಾಳೆಗೆ ಮೂರು ತಿಂಗಳು ತುಂಬುತ್ತಿದೆ. ಆರಂಭದ ಮೂರು ತಿಂಗಳು ದೇಶವಾಸಿಗಳು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ, ಚಿಲ್ಲರೆಗಾಗಿ ಪರದಾಡಿದ್ದ ದೃಶ್ಯಗಳು ದೇಶಾದ್ಯಂತ ವರದಿಯಾಗಿದ್ದವು. ಜತೆಗೆ, ಐಟಿ ದಾಳಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದೀಗ, ಅಂತಹ ಮುಖ್ಯವಾಹಿನಿಯ ಬೆಳವಣಿಗೆಗಳು ತೆರೆಮರೆಗೆ ಸರಿದಿವೆ. ಆದರೆ, ಹಿನ್ನೆಲೆಯಲ್ಲಿ ಅನಾಣ್ಯೀಕರಣದ ಪರಿಣಾಮಗಳು ನಿಧಾನವಾಗಿ ಬೀರಲಾರಂಭಿಸಿವೆ; ಇದಕ್ಕೆ ಮಾಧ್ಯಮ ಕ್ಷೇತ್ರ ಕೂಡ ಹೊರತಾಗಿಲ್ಲ. ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ನೇಮಕಾತಿ ನಿಂತು..

    February 7, 2017
    ...
    trishneet-arora
    ಫೋಕಸ್

    ‘ಮನಸ್ಸಿದ್ದರೆ ಮಾರ್ಗ’: 8ನೇ ಕ್ಲಾಸ್ ಫೇಲಾಗಿದ್ದ ಈ ಹ್ಯಾಕಿಂಗ್ ಪೋರ!

    ‘ಮನಸ್ಸಿದ್ದರೆ ಮಾರ್ಗ’ ಅಂತ ಕನ್ನಡದಲ್ಲಿ ಮಾತಿದೆ. ಇದಕ್ಕೆ ಸರಿ ಹೊಂದುವಂತಿದೆ 21 ವರ್ಷದ ತ್ರಿಶ್‌ನೀತ್ ಅರೋರ ಜೀವನದ ಕತೆ. ಲೂಧಿಯಾನದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ತ್ರಿಶ್‌ನೀತ್ ಇವತ್ತು ಫಾರ್ಚೂನ್ 500 ಎಂದು ಕರೆಸಿಕೊಳ್ಳುವ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಪೈಕಿ ಕನಿಷ್ಟ 50 ಕಂಪನಿಗಳಿಗೆ ಬೇಕಾಗಿರುವ ಯುವಕ. ಜತೆಗೆ, ಸಿಬಿಐ, ಪಂಜಾಬ್ ಮತ್ತು ಗುಜರಾತ್ ಪೊಲೀಸ್‌ನಂತಹ ತನಿಖಾ ಸಂಸ್ಥೆಗಳಿಗೂ ತ್ರಿಶ್‌ನೀತ್ ‘ಬ್ಯೂ ಐಯ್ಡ್ ಬಾಯ್’. ಸದ್ಯ, ದುಬೈ ಸೇರಿದಂತೆ ವಿದೇಶಗಳಲ್ಲಿಯೂ ಕಚೇರಿಗಳನ್ನು ತೆರೆದಿರುವ ‘ಟ್ಯಾಕ್ ಸೆಕ್ಯುರಿಟಿ’ ಕಂಪನಿಯ ಒಡೆಯನೀತ…

    February 6, 2017
    ...
    Sasikala-Natarajan-1
    ದೇಶ

    ಈಕೆ ಮುನ್ನಾರ್‌ಗುಡಿಯ ‘ಚಿನ್ನಮ್ಮ’: ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು ‘ಅಮ್ಮ’

    ನೆರೆಯ ರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ ಭಾನುವಾರ ನಡೆದ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿತ ದಿಕ್ಕಿಗೆ ಹೊರಳಿಕೊಂಡಿದೆ. ಡಿಸೆಂಬರ್ 5ರಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವನ್ನಪ್ಪಿದ ದಿನ ಹೊರಬಿದ್ದ ದೃಶ್ಯಾವಳಿಗಳು, ಶವಯಾತ್ರೆ ಮತ್ತು ಅಂತಿಮ ಸಂಸ್ಕಾರದ ನಡಾವಳಿಗಳು ಶಶಿಕಲಾ ನಟರಾಜನ್ ಎಂಬ ಪಾತ್ರವೊಂದು ರಾಜಕೀಯ ಕೇಂದ್ರಕ್ಕೆ ಬರಲಿವೆ ಎಂಬ ಮುನ್ಸೂಚನೆ ನೀಡಿದ್ದವು. ಅದೀಗ ನಿಜವಾಗಿದ್ದು, ಆಲ್ ಇಂಡಿಯಾ ಅನ್ನಾ ಡ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಶಾಸಕಾಂಗ ಪಕ್ಷದ ನಾಯಕಿಯಾಗಿ ವಿ. ಕೆ. ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಮಿಳುನಾಡಿನ ಅಧಿಕಾರ..

    February 6, 2017
    ...
    panjab-voting-1
    ಸುದ್ದಿ ಸಾರ

    ಪಂಜಾಬ್; ಗೋವಾ ಗದ್ದುಗೆಗಳಿಗೆ ಮತದಾನ: ಈ ಸಮಯದಲ್ಲಿ ಗಮನಿಸಬೇಕಿರುವ ಪ್ರಮುಖ 10 ಅಂಶಗಳು

    ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಆರಂಭವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅನಾಣ್ಯೀಕರಣ ಪ್ರಕ್ರಿಯೆ ಘೋಷಿಸಿದ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಮತದಾನ ಇದು. ಇದರ ಜತೆಗೆ, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಮುಂದಿನ ವಾರ ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ಪಾಲಿಗೆ ನಾನಾ ಕಾರಣಗಳಿಗಾಗಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಮುಖವಾಗಿದೆ. ಅದಕ್ಕಾಗಿ ಮಾರ್ಚ್ 11ರವರೆಗೆ ಕಾಯಬೇಕಿದೆ. ಗೋವಾದಲ್ಲಿ ಬೆಳಗ್ಗೆ 7 ಗಂಟೆಗೆ, ಪಂಜಾಬ್‍ನಲ್ಲಿ..

    February 4, 2017
    ...
    budget-1
    ವಿಚಾರ

    ‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’

    (ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಕುರಿತು ಏಕತಾನತೆಯ ವರದಿಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಜನಪ್ರಿಯತೆಗೆ ಒತ್ತು ನೀಡದೆ ದೂರದೃಷ್ಟಿಯನ್ನು ಪ್ರದರ್ಶಿಸಿದ ‘ಪ್ರಗತಿಪರ’ ಬಜೆಟ್ ಇದು ಎಂದು ಅವು ಹಾಡಿ ಹೊಗಳಿದೆ. ಜೇಟ್ಲಿ ಮಂಡಿಸಿದ ಮುಂಗಡ ಪತ್ರದ ಕುರಿತು ಆರ್ಥಿಕ ವಿಶ್ಲೇಷಣೆಗಳಿಗೆ ಹೆಸರಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (EPW) ನಿಖರ ಒಳನೋಟಗಳನ್ನು ಒಳಗೊಂಡ ಸಂಪಾದಕೀಯವನ್ನು ಬರೆದಿದೆ. ಅದು ನಾಳೆ-ಶನಿವಾರ- ಪ್ರಕಟವಾಗಲಿದೆ. ಅದರ ಕನ್ನಡಾನುವಾದ ಇಲ್ಲಿದೆ) ಕನ್ನಡಕ್ಕೆ: ಶಿವಸುಂದರ್    ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್ಟನ್ನು ನಿರೀಕ್ಷಿಯಂತೆಯೇ ಬಹಳಷ್ಟು ಮಾಧ್ಯಮಗಳು..

    February 3, 2017
    ...
    sachin-disha-final
    ರಾಜ್ಯ

    ‘ಡ್ರೀಮ್ಸ್ ಜಿಕೆ’ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ‘ಕೊಲೆ ಮಾಡ್ತೀನಿ ಅಂದ್ರಂತೆ’ ಸಚಿನ್ ನಾಯಕ್!

    ಪತಿ ಸಚಿನ್ ನಾಯಕ್ ವಿರುದ್ಧ ಪತ್ನಿ ದಿಶಾ ಚೌಧರಿ ದೂರು ದಾಖಲಿಸುವ ಮೂಲಕ ‘ಡ್ರೀಮ್ಸ್ ಜಿಕೆ’ ವಂಚನೆ ಪ್ರಕರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ.  ಡ್ರೀಮ್ಸ್ ಜಿಕೆ, ಟಿಜಿಎಸ್ ಕನ್ಸ್’ಸ್ಟ್ರಕ್ಷನ್ಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ‘ರಿಯಲ್ ಎಸ್ಟೇಟ್’ ಕಂಪನಿ ನಡೆಸಿ ಜನರಿಗೆ ವಂಚಿಸಿದ ಆರೋಪದ ಮೇಲೆ ಉದ್ಯಮಿ ಸಚಿನ್ ನಾಯಕ್ ಅಲಿಯಾಸ್ ಸುಮನ್ ಕುಮಾರ್ ದಾಸ್ ಅಲಿಯಾಸ್ ಯೋಗೇಶ್ ಚೌಧರಿ ಬಂದನಕ್ಕೆ ಒಳಗಾಗಿದ್ದರು. ಈತನ ವಿರುದ್ಧ ಬೆಂಗಳೂರಿನ ನಾನಾ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಇದೀಗ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ..

    February 3, 2017
    ...
    online-click-1
    ದೇಶ

    ‘ONLINE ವಂಚನೆ’: 3600 ಕೋಟಿ ದೋಚಿದ ‘ದೇಶ ಪ್ರೇಮಿ’ ಗುಜರಾತಿ ಉದ್ಯಮಿ ಬಂಧನ

    ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಆನ್’ಲೈನ್ ವಂಚನೆ ಎಂದು ಹೇಳಲಾಗುತ್ತಿರುವ ಪ್ರಕರಣವೊಂದನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ದಳ ಪತ್ತೆ ಹಚ್ಚಿದೆ. ಪ್ರತಿ ‘ಕ್ಲಿಕ್’ಗೆ 5 ರೂಪಾಯಿ ನೀಡಲಾಗುವುದು ಎಂದು ಜನರಿಗೆ ಆಮಿಷವೊಡ್ಡುವ ಜಾಲವೊಂದು ಸುಮಾರು 3, 700 ಕೋಟಿ ರೂಪಾಯಿ ವಂಚನೆ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ‘ಆನ್’ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕಂಪನಿಯೊಂದನ್ನು ತೆರೆದ ಆರೋಪಿ ವಂಚಕರು ಈವರೆಗೆ ಸುಮಾರು 7 ಲಕ್ಷ ಜನರಿಗೆ ವಂಚಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ..

    February 3, 2017
    ...
    pol-party-funding-final
    ದೇಶ

    ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ: ‘ರಂಗೋಲಿ ಕೆಳಗೆ ತೂರುವವರಿಗೆ’ ಇಲ್ಲಿದೆ ಅವಕಾಶ!

    ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕುವ ಸಂಬಂಧ ಈ ಬಾರಿಯ ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರ ಕ್ರಮಗಳನ್ನು ಘೋಷಣೆ ಮಾಡಿದೆ. ಈ ಹಿಂದೆ 20 ಸಾವಿರದವರೆಗೆ ನಗದು ರೂಪದಲ್ಲಿ ಅನಾಮದೇಯ ವ್ಯಕ್ತಿಗಳಿಂದ ಪಕ್ಷಗಳು ‘ದೇಣಿಗೆ’ ಪಡೆಯುವ ಅವಕಾಶ ಇತ್ತು. ಇದಕ್ಕೆ ಚುನಾವಣಾ ಆಯೋಗ ಮತ್ತು ಸರಕಾರೇತರ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಕೇಂದ್ರ ಸರಕಾರ 2017-18ರ ಬಜೆಟ್ ಮಂಡನೆ ವೇಳೆ, ಅನಾಮದೇಯ ವ್ಯಕ್ತಿಗಳಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುವ ಮಿತಿಯನ್ನು 2 ಸಾವಿರ ರೂಪಾಯಿಗೆ ಇಳಿಸಿದೆ…

    February 2, 2017

Top