An unconventional News Portal.

    ...
    uttar-pradesh-election-1
    ವಿಚಾರ

    ‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?

    ಉತ್ತರಪ್ರದೇಶದ ಶಾಸನ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂತಹ..

    February 20, 2017
    ...
    kim-jong-nam, kim-jong-North korea
    ವಿದೇಶ

    ಉತ್ತರ ಕೊರಿಯಾ ‘ಸರ್ವಾಧಿಕಾರಿ’ಯ ಸೋದರನ ‘ನಿಗೂಢ ಕೊಲೆ’ ಎಬ್ಬಿಸಿದ ತಲ್ಲಣಗಳು

    ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಜನನಿಬಿಡ ವಿಮಾನ ನಿಲ್ದಾಣದಲ್ಲೇ ಕೊಲೆಯಾಗಿ ಹೋಗಿದ್ದಾರೆ. ಫೆಬ್ರವರಿ 13ರಂದು ನಡೆದ ಈ ಕೊಲೆ ವಿಶ್ವದಾದ್ಯಂತ ತಲ್ಲಣದ ಅಲೆ ಎಬ್ಬಿಸಿದೆ. ಅದಕ್ಕೆ ಕಾರಣ ಕೊಲೆಯ ಹಿಂದಿರುವ ರಾಜಕೀಯ, ಗೌಪ್ಯತೆ ಮತ್ತು ಸ್ವತಃ ಸರ್ವಾಧಿಕಾರಿ ತಮ್ಮನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನಗಳು. ಕೊಲೆಗೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಯುವತಿಯರಾದರೆ, ಓರ್ವ ಉತ್ತರ ಕೊರಿಯಾ ಪ್ರಜೆಯಾಗಿದ್ದಾನೆ…

    February 18, 2017
    ...
    rob-rhinehart-with-out-food-2
    ಫೋಕಸ್

    ಊಟದ ಸಮಯ, ಹಣ ಉಳಿಸಲು ಮುಂದಾದ ಉದ್ಯಮಿ 30 ದಿನ ಆಹಾರ ಇಲ್ಲದೆ ಕಳೆದ!

    ಒಂದು ದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ತಿಂಡಿ ತಿಂದಿಲ್ಲ ಅಂದರೆ, ತಲೆ ಸುತ್ತು ಬಂದು ಪ್ರಜ್ಞೆತಪ್ಪಿ ಬಿದ್ದುಬಿಡೋ ಸ್ಥಿತಿ ನಿರ್ಮಾಣವಾಗುತ್ತೆ. ಸರಿಯಾಗಿ ಆಹಾರ ಸಿಗದೆ ಜಗತ್ತಿನಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೊಬ್ಬರಿ 30 ದಿನಗಳ ಕಾಲ ಆಹಾರ ಸೇವಿಸದೆ ಬದುಕಬಲ್ಲ. ಎಲ್ಲರಂತೆ ಚಟುವಟಿಕೆಯಿಂದ ಇರಬಲ್ಲ ಅಂದರೆ ನಂಬಲು ಸಾಧ್ಯವಾ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಈ ಉದ್ಯಮಿ. ಅಮೆರಿಕದ ಅಟ್ಲಾಂಟಾದ ಉದ್ಯಮಿ ರಾಬ್ ರೈನ್ಹಾರ್ಟ್ಗೆ ಪ್ರತಿದಿನ ಅಡುಗೆ ಮಾಡಿಕೊಳ್ಳುವುದು, ಊಟಕ್ಕಾಗಿ ಸಾಕಷ್ಟು..

    February 18, 2017
    ...
    donald_trump_pollution
    ವಿಚಾರ

    ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್‌ ಹೌಸ್ ತೀರ್ಮಾನಗಳು

    ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬಿಯಾ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು 90/120 ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ 27 ರ “ಮುಸ್ಲಿಂ ಪ್ರತಿಬಂಧ” ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧಿ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು ಜನರ ಗಮನವನ್ನು ತಪ್ಪಿಸಿಕೊಂಡುಬಿಟ್ಟವು. ಯಾವ ರೀತಿ ವೀಸಾ ಬ್ಯಾನ್ ಎಂಬುದು ಪ್ರಪಂಚಾದ್ಯಂತ ತನ್ನ ಪರಿಣಾಮವನ್ನು..

    February 18, 2017
    ...
    Pakistan
    ವಿದೇಶ

    ‘ಸೂಫಿಸಂ’ ಮೇಲೆ ಐಸಿಎಲ್ ಭೀಕರ ದಾಳಿ: ಇಸ್ಲಾಂ ಒಳಗಿನ ವೈರುಧ್ಯಕ್ಕೆ ಸಾಕ್ಷಿಯಾದ ಪಾಕಿಸ್ತಾನ

    ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಗುರುವಾರ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 29 ಭಯೋತ್ಪಾದಕರನ್ನು ಪಾಕ್‌ ಸೇನೆ ಹೊಡೆದು ಹಾಕಿದೆ. ಕಾರ್ಯಾಚರಣೆ ಮುಂದುವರಿದಿದೆ. ಗುರುವಾರ ಸೂಫಿ ಸಂಸ್ಕೃತಿಯನ್ನು ಪ್ರತಿನಿಧಿಸುವ ದೇಶದ ಶೆಹ್ವಾನ್ ಪ್ರದೇಶದಲ್ಲಿದ್ದ ಲಾಲ್ ಶಹ್ಬಾಝ್ ಖಲಂದರ್ ದರ್ಗಾದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಘಟನೆಯಲ್ಲಿ ಸುಮಾರು 79 ಜನ ಸಾವನ್ನಪ್ಪಿದ್ದರೆ 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ..

    February 17, 2017
    ...
    tn-cm-final-list
    ದೇಶ

    ವೈವಿಧ್ಯಮಯ ಸಿಎಂಗಳನ್ನು ಕಂಡಿದ್ದ ‘ದ್ರಾವಿಡ ಗದ್ದುಗೆ’ & ಪಳನಿಸ್ವಾಮಿ ಎಂಬ ‘ಪ್ರಾಕ್ಸಿ’!

    ನಾಯಕತ್ವಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಒಪ್ಪಿಸಿಕೊಂಡರೆ ಮಾತ್ರ ಅಧಿಕಾರ ಎಂಬುದು ತಮಿಳುನಾಡಿನ ರಾಜಕಾರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರ ಪಕ್ಷವನ್ನು ಹತೋಟಿಗೆ ತೆಗೆದುಕೊಂಡ ಆಪ್ತೆ ಶಶಿಕಲಾ ಜೈಲು ಪಾಲಾಗಿದ್ದಾರೆ. ಆದರೆ, ತಮ್ಮ ನೆರಳನ್ನು ತಮಿಳುನಾಡಿನ ಮುಖ್ಯಮಂತ್ರಿ ಗಾಧಿಯ ಮೇಲೆ ಕೂರಿಸುವಲ್ಲಿ ಅವರ ಯಶಸ್ವಿಯಾಗಿದ್ದಾರೆ. ಗುರುವಾರ ನೂತನ ಮುಖ್ಯಮಂತ್ರಿಯಾಗಿ ಎಡಿಪಡ್ಡಿ ಕೆ. ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಇನ್ನೂ 30 ಜನ ಎಐಎಡಿಎಂಕೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ..

    February 16, 2017
    ...
    it-com-stock-buy-final
    ದೇಶ

    ‘ಸ್ಟಾಕ್ ಬೈ ಬ್ಯಾಕ್’: ಶೇರು ಮಾರುಕಟ್ಟೆಯಲ್ಲಿ ಭಾರತದ ಐಟಿ ಕಂಪನಿಗಳ ಹೊಸ ಟ್ರೆಂಡ್

    ಕಳೆದ ಕೆಲವು ದಿನಗಳಿಂದ ದೇಶದ ಐಟಿ ಕಂಪನಿಗಳ ಅಂತರಂಗದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಇನ್ಫೋಸಿಸ್ ಒಳಗಿನ ಇತ್ತೀಚಿನ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಸಿಗುವ ಮುನ್ನವೇ ಕಾಗ್ನಿಝೆಂಟ್ ಆಡಳಿತ ಮಂಡಳಿ, ತಮ್ಮ ಕಂಪನಿಯ ಶೇರುಗಳನ್ನು ಕೊಂಡುಕೊಳ್ಳುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಭಾರತ ಮೂಲದ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌) ಕೂಡ ತನ್ನ ಶೇರುಗಳನ್ನು ‘ಬೈ ಬ್ಯಾಕ್’ ಮಾಡಲು ಹೊರಟಿದೆ. ಇದೇ ಫೆ. 20ರಂದು ನಡೆಯಲಿರುವ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಮಹತ್ವ ತೀರ್ಮಾನ..

    February 16, 2017
    ...
    t-chalo-final
    ರಾಜ್ಯ

    ‘ತುಮಕೂರು ಚಲೋ’ ಒಂದು ದಿನ ಬಾಕಿ: ‘ಇದು ಹೊಸ ತಲೆಮಾರಿನ ದಲಿತ- ದಮನಿತರ ಹೋರಾಟ’

    ‘ಉಡುಪಿ ಚಲೋ’ ಕಾರ್ಯಕ್ರಮದ ಮೂಲಕ ರಾಜ್ಯದ ಸುದ್ದಿ ಕೇಂದ್ರಕ್ಕೆ ಬಂದಿದ್ದ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ (ಡಿಡಿಎಸ್‌ಎಚ್‌ಎಸ್) ಗುರುವಾರ ‘ತುಮಕೂರು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇತ್ತಿಚೆಗೆ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ನಡೆದ ಬರ್ಬರ ಹಲ್ಲೆ ಮತ್ತು ರಾಜ್ಯ ಇತರೆ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ‘ಚಲೋ’ ಹಮ್ಮಿಕೊಳ್ಳಲು ಕಾರಣ. ಈಗಾಗಲೇ ತುಮಕೂರಿನ ತಾಲೂಕುಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿರುವ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ..

    February 15, 2017
    ...
    isro-pslv-launch-1
    ಸುದ್ದಿ ಸಾರ

    ವಿಶ್ವ ದಾಖಲೆ ಬರೆದ ಇಸ್ರೋ: 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಬಾಹ್ಯಾಕಾಶ ಸಂಸ್ಥೆ

    ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಂದೇ ಬಾರಿಗೆ 104 ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ಮೂಲಕ ಬುಧವಾರ ವಿಶ್ವದಾಖಲೆ ಬರೆದಿದೆ. ಈ ಹಿಂದೆ ರಷ್ಯಾ ಹೊಂದಿದ್ದ ದಾಖಲೆಯನ್ನು ಇದು ಅಳಿಸಿ ಹಾಕಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಪಿಎಸ್‌ಎಲ್‌ವಿ- ಸಿ 37 ಹೆಸರಿನ ಬಾಹ್ಯಕಾಶ ನೌಕೆಯು ಬೆಳಗ್ಗೆ 9. 28ಕ್ಕೆ ಸರಿಯಾಗಿ ಶ್ರೀಹರಿಕೋಟದ ಬಾಹ್ಯಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತೊಯ್ದಿತು. ಇದರಲ್ಲಿ 101 ಉಪಗ್ರಹಗಳ ವಿದೇಶಗಳಿಗೆ ಸೇರಿದ್ದಾಗಿವೆ. ಇದರಲ್ಲಿ 95 ಅಮೆರಿಕಕ್ಕೆ ಸೇರಿದವಾಗಿದ್ದು, ಇನ್ನುಳಿದವು ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ..

    February 15, 2017
    ...
    sasikala-3
    ದೇಶ

    ‘ಸೆರೆಮನೆಯತ್ತ ಶಶಿಕಲಾ’: ತಮಿಳುನಾಡು ರಾಜಕೀಯದ ದಿಕ್ಕು ಬದಲಿಸಿದ ಸುಪ್ರಿಂ ತೀರ್ಪು

    ದೇಶದ ಗಮನ ಸೆಳೆದಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಶಶಿಕಲಾ ಮತ್ತು ಉಳಿದ ಆರೋಪಿಗಳನ್ನು ದೋಷಿ ಎಂದು ಸುಪ್ರಿಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಪಿ. ಸಿ. ಘೋಶ್ ಹಾಗೂ ಅಮಿತಾವ್ ರಾಯ್ ಅವರಿದ್ದ ಪೀಠ ನೀಡಿದ ತೀರ್ಪು ತಮಿಳುನಾಡಿನ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಈ ಹಿಂದೆ ಕರ್ನಾಟಕ ಹೈ ಕೋರ್ಟ್ ಎರಡು ಸಾಲಿನ ಆದೇಶದಲ್ಲಿ ನೀಡಿದ ತೀರ್ಪನ್ನು ಬದಿಗಿಟ್ಟ ನ್ಯಾಯಪೀಠ, ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ. ಜತೆಗೆ, ತಕ್ಷಣವೇ ಬೆಂಗಳೂರಿನ..

    February 14, 2017

Top