An unconventional News Portal.

    ...
    new-1000-rs-note-drama
    ದೇಶ

    ಹೊಸ ಸಾವಿರ ರೂಪಾಯಿ ‘ನೋಟಿನ ಮರ್ಮ’; ಬೀರುತ್ತಿರುವ ಅನಾಣ್ಯೀಕರಣದ ಪರಿಣಾಮ

    ಮಳೆ ನಿಂತು ಹೋದ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ಅನಾಣ್ಯೀಕರಣದ ಪರಿಣಾಮಗಳ ‘ಕಲೆ’ ಅಷ್ಟು ಸುಲಭಕ್ಕೆ ಮಾಸುವಂತೆಯೂ ಕಾಣಿಸುತ್ತಿಲ್ಲ. ಕಳೆದ ನ. 8ರಂದು ರಾತ್ರಿ ಪ್ರಧಾನಿ ಮೋದಿ 500 ಹಾಗೂ 1000 ರೂಪಾಯಿ ಮುಖಬೆಲೆ ನೋಟುಗಳಿಗೆ ಮೌಲ್ಯವಿಲ್ಲ ಎಂದು ಘೋಷಿಸಿದರು. ಆ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 86ರಷ್ಟು ನಗದು ಹಣ ಬೆಲೆ ಕಳೆದುಕೊಂಡಿತು. ಆರಂಭದಲ್ಲಿ ಕಪ್ಪು ಹಣದ ವಿರುದ್ಧದ ಸಮರ ಇದು, ಜತೆಗೆ, ಕಳ್ಳನೋಟು ದಂಧೆಗೆ ಕಡಿವಾಣ, ಭಯೋತ್ಪಾದನೆ ವಿರುದ್ಧ ಸಮರ ಎಂದು ಈ ಕ್ರಮವನ್ನು ಬಣ್ಣಿಸಲಾಯಿತು. ನಂತರ..

    February 22, 2017
    ...
    left-right-mangaluru
    ರಾಜ್ಯ

    ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ‘ಸೈದ್ಧಾಂತಿಕ ಸಂಘರ್ಷ’

    ರಾಜ್ಯದಲ್ಲಿ ನಡೆಯುತ್ತಿರುವ ಎಡ ಮತ್ತು ಬಲದ ‘ಸೈದ್ಧಾಂತಿಕ ಸಂಘರ್ಷ’ಕ್ಕೆ ಇದೇ ತಿಂಗಳ 25ರಂದು ಮಂಗಳೂರಿನ ಬೀದಿಗಳು ಸಾಕ್ಷಿಯಾಗಲಿವೆ. ಸಿಪಿಎಂ ಕರ್ನಾಟಕ ಪಕ್ಷವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ‘ಕೋಮುವಾದಕ್ಕೆ ಸೋಲಾಗಲಿ; ಸೌಹಾರ್ದತೆ ಗಟ್ಟಿಯಾಗಲಿ’ ಎಂಬುದು ಕಾರ್ಯಕ್ರಮದ ಘೋಷವಾಕ್ಯ. ಕಾರ್ಯಕ್ರಮದ ಮಾಹಿತಿ ಹೊರ ಬೀಳುತ್ತಿದ್ದಂತೆ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮತ್ತು ಬಿಜೆಪಿ, ಪಿಣರಾಯಿ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿವೆ. ಕಾರ್ಯಕ್ರಮದ ವಿರುದ್ಧ ಫೆ. 24ರಂದು ಮೆರವಣಿಗೆ ಮತ್ತು ಫೆ. 25ರಂದು ಬಂದ್ ನಡೆಸುವುದಾಗಿ ಪ್ರಕಟಿಸಿವೆ…

    February 22, 2017

Top