An unconventional News Portal.

ಊಟದ ಸಮಯ, ಹಣ ಉಳಿಸಲು ಮುಂದಾದ ಉದ್ಯಮಿ 30 ದಿನ ಆಹಾರ ಇಲ್ಲದೆ ಕಳೆದ!

ಊಟದ ಸಮಯ, ಹಣ ಉಳಿಸಲು ಮುಂದಾದ ಉದ್ಯಮಿ 30 ದಿನ ಆಹಾರ ಇಲ್ಲದೆ ಕಳೆದ!

ಒಂದು ದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ತಿಂಡಿ ತಿಂದಿಲ್ಲ ಅಂದರೆ, ತಲೆ ಸುತ್ತು ಬಂದು ಪ್ರಜ್ಞೆತಪ್ಪಿ ಬಿದ್ದುಬಿಡೋ ಸ್ಥಿತಿ ನಿರ್ಮಾಣವಾಗುತ್ತೆ. ಸರಿಯಾಗಿ ಆಹಾರ ಸಿಗದೆ ಜಗತ್ತಿನಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೊಬ್ಬರಿ 30 ದಿನಗಳ ಕಾಲ ಆಹಾರ ಸೇವಿಸದೆ ಬದುಕಬಲ್ಲ. ಎಲ್ಲರಂತೆ ಚಟುವಟಿಕೆಯಿಂದ ಇರಬಲ್ಲ ಅಂದರೆ ನಂಬಲು ಸಾಧ್ಯವಾ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಈ ಉದ್ಯಮಿ.

ಅಮೆರಿಕದ ಅಟ್ಲಾಂಟಾದ ಉದ್ಯಮಿ ರಾಬ್ ರೈನ್ಹಾರ್ಟ್ಗೆ ಪ್ರತಿದಿನ ಅಡುಗೆ ಮಾಡಿಕೊಳ್ಳುವುದು, ಊಟಕ್ಕಾಗಿ ಸಾಕಷ್ಟು ಸಮಯ ವ್ಯಯಿಸುವುದು ತುಂಬಾ ಕಿರಿಕಿರಿ ಉಂಟುಮಾಡಿತ್ತು. ಹೀಗಾಗಿ, ಆಹಾರ ಸೇವನೆ, ನನ್ನ ಎಷ್ಟೊಂದು ಸಮಯ ಹಾಗೂ ಹಣ ವ್ಯರ್ಥ ಮಾಡುತ್ತಿದೆಯಲ್ಲ ಅಂತಾ ತಲೆಕೆಡಿಸಿಕೊಂಡ ರೈನ್ಹಾರ್ಟ್, ಆಹಾರ ಸೇವಿಸದೆ ಬದುಕುವ ಮಾರ್ಗ ಹುಡುಕ ತೊಡಗಿದರು. ಈ ಬಗ್ಗೆ ತಮ್ಮ ಬ್ಲಾಗ್ನಲ್ಲಿ ನಾನು ಹೇಗೆ ಆಹಾರ ಸೇವನೆ ನಿಲ್ಲಿಸಿದೆ ಅನ್ನೋ ಬರಹದಲ್ಲಿ ಅವರು ವಿವರಿಸಿದ್ದಾರೆ. ದೇಹಕ್ಕೆ ಆಹಾರವೇ ಅನಿವಾರ್ಯವಲ್ಲ. ದೇಹಕ್ಕೆ ಕೆಲವು ರಾಸಾಯನಿಕಗಳು, ಶಕ್ತಿ ನೀಡುವ ಪದಾರ್ಥಗಳು ಸಿಕ್ಕರೆ ಸಾಕು ಅಂತಾ ರೈನ್ಹಾರ್ಟ್ ಆಹಾರ ಸೇವನೆಗೆ ಗುಡ್ ಬೈ ಹೇಳಿದ್ದರು.

rob-rhinehart-with-out-food-1

ರಾಬ್ ರೈನ್‌ಹಾರ್ಟ್

ಪ್ರತಿದಿನ ತಮ್ಮ ದೇಹಕ್ಕೆ ಎಷ್ಟು ಪ್ರಮಾಣದ ಪೋಷಕಾಂಶಗಳು ಹಾಗೂ ವಿಟಮಿನ್ಗಳು ಬೇಕು ಅನ್ನೋದನ್ನ ಲೆಕ್ಕ ಹಾಕಿದ ರೈನ್ಹಾರ್ಟ್ ಪ್ರಯೋಗ ಆರಂಭಿಸಿದರು. ಆಹಾರದಲ್ಲಿ ದೊರೆಯುವ ಎಲ್ಲ ಪದಾರ್ಥಗಳ ಸರಿಯಾದ ವಿಶ್ರಣದ ಪೌಡರ್ ತಯಾರಿಸಿದ ಅವರು, ನೀರಿನಲ್ಲಿ ಹಾಕಿ ಕುಡಿಯಲು ಪ್ರಾರಂಭಿಸಿದರು. ಪೋಷಕಾಂಶಗಳನ್ನ ಒಳಗೊಂಡ ಸೊಲೆಂಟ್ ಎನ್ನುವ ಪೌಡರ್ ತಯಾರಿಸಿ ಪ್ರತಿನಿತ್ಯ ಅದನ್ನ ನೀರಿನಲ್ಲಿ ಬೆರೆಸಿ ಕುಡಿಯತೊಡಗಿದರು. ರೈನ್ಹಾರ್ಟ್ ಹೀಗೆ 30ದಿನಗಳ ಕಾಲ ಜೀವಿಸಿದ್ದು, ಎಲ್ಲರಂತೆ ಆರೋಗ್ಯವಾಗಿಯೇ ಇದ್ದಾರೆ. ರೈನ್ಹಾರ್ಟ್ ಅವರ ಈ ಸೊಲೆಂಟ್ಗೆ ಅಮೆರಿಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಇದನ್ನ ಮಾರಾಟಕ್ಕೆ ಇಟ್ಟ ಕೇವಲ ಎರಡು ಗಂಟೆಗಳಲ್ಲಿ ಸೊಲೆಂಟ್ನನ್ನ ಬರೊಬ್ಬರಿ 10ಸಾವಿರ ಜನ ಆರ್ಡರ್ ಮಾಡಿದ್ದಾರೆ. ಸೊಲೆಂಟ್ ಅಮೆರಿಕದ ಸಿಲಿಕಾನ್ ವ್ಯಾಲಿ ಹಾಗೂ ಪತ್ರಕರ್ತರನ್ನ ತನ್ನತ್ತ ಸೆಳೆದಿದೆ. ಪ್ಯಾನ್ಕೇಕ್ ಬ್ಯಾಟರ್ನಂತ ರುಚಿಯನ್ನ ಹೊಂದಿರೋ ಸೊಲೆಂಟ್ ಪೌಡರ್ಗೆ ಎಲ್ಲರೂ ಮಾರುಹೋಗಿದ್ದಾರೆ.

ಇನ್ನು, ಸೊಲೆಂಟ್ ಸೇವನೆ ಆರಾಮದಾಯಕ. ಪೌಡರ್ನ್ನ ನೀರಿನಲ್ಲಿ ಬೆರೆಸಿ ಕೇವಲ ಎರಡೇ ನಿಮಿಷಗಳಲ್ಲಿ ಕುಡಿದುಬಿಡಬಹುದು. ಇದರಿಂದ, ಗಂಟೆಗಟ್ಟಲೆ ಶ್ರಮಿವಹಿಸಿ ಅಡುಗೆ ಮಾಡುವ ಹಾಗೂ ಅದನ್ನ ಸೇವಿಸಲು ಸಾಕಷ್ಟು ಸಮಯ ವ್ಯಯಿಸುವ ಅಗತ್ಯವಿರುವುದಿಲ್ಲ. ಅಲ್ಲದೆ, ಆಹಾರಕ್ಕೆ ವೆಚ್ಚಮಾಡುವ ಹಣಕ್ಕಿಂತ ಅತಿ ಕಡಿಮೆ ದುಡ್ಡಿನಲ್ಲಿ ಇದನ್ನ ಪಡೆಯಬಹುದು. ದಿನಕ್ಕೆ ಕೇವಲ 5 ಡಾಲರ್ಗೆ ಆರೋಗ್ಯಕರ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನ ನೀಡುವ ಈ ಸೊಲೆಂಟ್ ಸಿಗುವಂತೆ ಮಾಡುವ ಗುರಿಯನ್ನ ರೈನ್ಹಾರ್ಟ್ ಹಾಕಿಕೊಂಡಿದ್ದಾರೆ.

ಸದ್ಯ ಈ ಸೊಲೆಂಟ್ ಫಾರ್ಮುಲಾ 2 ಸಾವಿರ ರೆಸಿಪಿಗಳಲ್ಲಿ ಲಭ್ಯವಿದೆ. ಜಗತ್ತಿನಲ್ಲಿ ಆಹಾರಕ್ಕೆ ಪರ್ಯಾಯವಾಗಿ ಹಣ ಹಾಗೂ ಸಮಯ ಉಳಿತಾಯ ಮಾಡೋ ಹೊಸ ಆಹಾರ ಪದ್ದತಿ ಶುರುವಾಗಿದೆ. ಈ ಹಾದಿಯಲ್ಲಿ 30 ದಿನಗಳ ಕಾಲ ಕೇವಲ ಸೊಲೆಂಟ್ ದ್ರಾವಣ ಸೇವಿಸಿ ಆರೋಗ್ಯವಾಗಿರೋ ರೈನ್ಹಾರ್ಟ್ ಯಶಕಂಡಿದ್ದಾರೆ.

ಆದರೆ, ದೀರ್ಘ ಕಾಲದವರೆಗೆ ಕೇವಲ ಸೊಲೆಂಟ್ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಸಹ ಆಹಾರ ಸೇವಿಸದೆ ಬದುಕುವ ಪ್ರಯೋಗ ನಡೆಯಬಹುದು. ಒಂದು ವೇಳೆ ಈ ಪ್ರಯೋಗ ಸಂಪೂರ್ಣ ಯಶಕಂಡಿದ್ದೆ ಆದರೆ, ಮನುಷ್ಯನ ಜೀವನ ಪದ್ದತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಘಟಿಸಬಹುದು ಎನ್ನಲಾಗುತ್ತಿದೆ.

Leave a comment

FOOT PRINT

Top