An unconventional News Portal.

    ...
    justice-soujanya-1
    ರಾಜ್ಯ

    ಸೌಜನ್ಯ ಕೊಲೆ ಪ್ರಕರಣ: ಸಿಬಿಐ ತನಿಖಾಧಿಕಾರಿಗಳು ಎಸಗಿದ ಹದಿಮೂರು ತಪ್ಪುಗಳು

    ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ತಟ್ಟುವ ಮೂಲಕ ಭಾರಿ ಪ್ರತಿಭಟನೆಗಳಿಗೆ ಕಾರಣವಾದ ಧರ್ಮಸ್ಥಳ ಮೂಲದ ‘ಸೌಜನ್ಯ ಕೊಲೆ ಪ್ರಕರಣ’ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಈವರೆಗೂ ನಡೆಸಿರುವ ತನಿಖೆಯಲ್ಲಿ ಲೋಪಗಳಿರುವುದರಿಂದ ‘ಹೆಚ್ಚಿನ ತನಿಖೆ’ ನಡೆಸುವಂತೆ ಸಿಬಿಐಗೆ ವಿಶೇಷ ನ್ಯಾಯಾಲಯ ಫೆ. 7ರಂದು ಆದೇಶ ನೀಡಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಾಗಲೇ ನ್ಯಾಯಾಲಯ ನೀಡಿರುವ ಈ ಆದೇಶದಿಂದಾಗಿ ಹೊಸ ತಿರುವು ಸಿಕ್ಕಿದೆ. ಜತೆಗೆ, ಪ್ರತಿಷ್ಠಿತ ತನಿಖಾ ಸಂಸ್ಥೆ- ಸಿಬಿಐ- ಬಗ್ಗೆಯೇ ಅನುಮಾನಗಳು ಮೂಡುವಂತೆ ಮಾಡಿವೆ. ಪ್ರಕರಣ ಸಂಬಂಧಪಟ್ಟಂತೆ ಈವರೆಗೆ ನ್ಯಾಯಾಲಯದಲ್ಲಿ  14 ಸಾಕ್ಷಿಗಳು ನೀಡಿರುವ ಹೇಳಿಕೆಗಳು, ಸೌಜನ್ಯ..

    February 11, 2017
    ...
    mayawati
    ಸುದ್ದಿ ಸಾರ

    ಯುಪಿಯಲ್ಲಿ ಆರಂಭಗೊಂಡ ಮತದಾನ; ನಿರೀಕ್ಷಿಸಬಹುದಾ ‘ಬೆಹೆನ್‌ಜೀ’ ಆಗಮನ?

    ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಮತದಾನ ಆರಂಭವಾಗಿದೆ. ಮುಂದಿನ ಒಂದು ತಿಂಗಳ ಕಾಲ ಒಟ್ಟು 7 ಹಂತಗಳಲ್ಲಿ ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಜನ ಮತ ಚಲಾಯಿಸಲಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಕೇಂದ್ರದ ಗದ್ದುಗೆ ಏರಿದ ಬಿಜೆಪಿ ಪಕ್ಷದ ಈವರೆಗಿನ ಆಡಳಿತ ಮತ್ತು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ಜನರ ನೀಡುವ ‘ಮಧ್ಯಾಂತರ ತೀರ್ಪು’ ಇದು ಎಂದು ರಾಯ್‌ಟರ್ ಸುದ್ದಿ ಸಂಸ್ಥೆ ವಿಶ್ಲೇಷಿಸಿದೆ. ಸದ್ಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ..

    February 11, 2017

Top