An unconventional News Portal.

    ...
    Bhatia-1
    ಫೋಕಸ್

    ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

    ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ. ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ..

    February 28, 2017
    ...
    DU-Protest-1
    ದೇಶ

    ದೇಶ ಕಂಡ ವಿದ್ಯಾರ್ಥಿ ಚಳವಳಿಗಳು: ‘ನವ ನಿರ್ಮಾಣ’ದಿಂದ ಸೈದ್ಧಾಂತಿಕ ಸಂಘರ್ಷದವರೆಗೆ

    ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಗುರುವಾರ ಭಾರಿ ಸಂಖ್ಯೆಯಲ್ಲಿ ಬೀದಿಗೆ ಇಳಿಯುವ ಮೂಲಕ ದೇಶದ ರಾಜಧಾನಿಯ ‘ಕ್ಯಾಂಪಸ್ ಹೋರಾಟ’ದ ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ. ಕಳೆದ ವಾರ ಇದೇ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಶ್ರೀ ರಾಮ್‌ ಕಾಲೇಜಿನ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ‘ರಣರಂಗ’ವನ್ನು ನಿರ್ಮಿಸಿದ್ದರು. ಜವಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ನಾಯಕರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದನ್ನು ಇವರು ವಿರೋಧಿಸಲು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಪಕರ ಮೇಲೆ ಹಲ್ಲೆ..

    February 28, 2017
    ...
    gurmehar-kaur-1
    ದೇಶ

    ‘ನನ್ನ ತಂದೆಯನ್ನು ಕೊಂದಿದ್ದು ಪಾಕ್ ಅಲ್ಲ’: ಗುರ್‌ಮೆಹರ್‌ ವಿಡಿಯೋದಲ್ಲಿ ನಿಜಕ್ಕೂ ಏನಿದೆ?

    “ಹಾಯ್, ನನ್ನ ಹೆಸರು ಗುರ್‌ಮೆಹರ್ ಕೌರ್. ನಾನು ಭಾರತದ ಜಲಂಧರ್‌ನವಳು. ಇದು ನನ್ನ ತಂದೆ ಕ್ಯಾಪ್ಟನ್ ಮಂದೀಪ್ ಸಿಂಗ್. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಅವರು ಸಾವನ್ನಪ್ಪಿದಾಗ ನಾನು 2 ವರ್ಷದ ಬಾಲಕಿ. ನನಗೆ ಅವರ ಕೆಲವೇ ನೆನಪುಗಳಿವೆ. ಅದಕ್ಕಿಂತ ಹೆಚ್ಚಾಗಿ ತಂದೆ ಇಲ್ಲದೆ ಇರುವ ಭಾವ ಕಾಡುತ್ತಿದೆ. ಜತೆಗೆ, ನನ್ನ ತಂದೆಯನ್ನು ಕೊಂದಿದ್ದಕ್ಕಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನಿಯರನ್ನು ಎಷ್ಟು ದ್ವೇಷಿಸುತ್ತಿದೆ ಎಂಬುದು ನೆನಪಿದೆ. ನಾನು ಮುಸ್ಲಿಂರನ್ನು ದ್ವೇಷಿಸುತ್ತಿದೆ, ಯಾಕೆಂದರೆ ನಾನು ಎಲ್ಲಾ ಮುಸಲ್ಮಾನರೂ ಪಾಕಿಸ್ತಾನಿಯರೇ ಎಂದು..

    February 27, 2017
    ...
    shrinu-family-usa-1
    ವಿದೇಶ

    ಅಮೆರಿಕಾ ಶೂಟೌಟ್: ‘ಜನಾಂಗೀಯ ದ್ವೇಷ’ದ ಕುಲುಮೆಯಲ್ಲೂ ಮೆರೆದ ಮಾನವೀಯತೆ

      ಅಮೆರಿಕಾದಲ್ಲಿ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಳ್ವಿಕೆ ಆರಂಭಗುತ್ತಿದ್ದಂತೆ ಜನಾಂಗೀಯ ದ್ವೇಷ ಹೆಚ್ಚುತ್ತಿದೆ ಎಂಬ ವರದಿಗಳು ಬರುತ್ತಿರುವ ಬೆನ್ನಲ್ಲೇ, ಅಲ್ಲಿನ್ನೂ ಮಾನವೀಯತೆ ಸತ್ತಿಲ್ಲ ಎಂಬುದಕ್ಕೆ ನಿದರ್ಶನವೊಂದು ಲಭ್ಯವಾಗಿದೆ. ಕನ್ಸಾಸ್ ನಗರದ ಆಸ್ಟಿನ್‌ ಬಾರ್‌ನಲ್ಲಿ ಅಮೆರಿಕಾ ಪ್ರಜೆಯ ಗುಂಡೇಟಿಗೆ ಅಸುನೀಗಿದ ಹೈದ್ರಾಬಾದ್ ಮೂಲಕ ಐಟಿ ಎಂಜಿನಿಯರ್ ಕುಟುಂಬಕ್ಕೆ ಆರ್ಥಿಕ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ‘ಗೋ ಫಂಡ್ ಮಿ’ ಎಂಬ ಅಂತರ್ಜಾಲ ತಾಣವನ್ನು ಉಪಯೋಗಿಸಿಕೊಂಡು ಕವಿಪ್ರಿಯ ಮಾತುರ್‌ಲಿಂಗಂ ಎಂಬುವವರು ಆರಂಭಿಸಿರುವ ನಿಧಿ ಸಂಗ್ರಹ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಕೊಲೆಯಾದ..

    February 25, 2017
    ...
    vijayan-pinarayi-final
    ದೇಶ

    ಕಣ್ಣೂರಿನಿಂದ ‘ನಿಯಮ ಸಭಾ’ವರೆಗೆ: ಯಾರು ಈ ಮುಖ್ಯಮಂತ್ರಿ ಪಿಣರಾಯಿ ವಿಜಯನ್?

    ರಕ್ತಸಿಕ್ತ ಅಧ್ಯಾಯಗಳನ್ನು ಒಳಗೊಂಡ ಜಿಲ್ಲೆ; ಕೇರಳ ರಾಜ್ಯದ ಕಣ್ಣೂರು. ಅಂತಹ ಜಿಲ್ಲೆಯ ಪಿಣರಾಯಿ ಎಂಬ ಹಳ್ಳಿಯ ಕೆಳಜಾತಿಯೊಂದರಲ್ಲಿ ಹುಟ್ಟಿದ ಆ ಹುಡುಗ ಓದಲು ಕಲಿತಿದ್ದ. ಅದೇ ಆತನನ್ನು ಮುಂದಿನ ಭವಿಷ್ಯ ರಾಜಕೀಯ ನೆಲೆಯತ್ತ ಕೊಂಡೊಯ್ದು ಇವತ್ತು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ನಿಯಮ ಸಭಾ ಎಂದು ಜನಪ್ರಿಯವಾಗಿರುವ ಕೇರಳ ವಿಧಾನಸಭೆಯ ಚುಕ್ಕಾಣಿ ಹಿಡಿಯುವಂತೆ ಮಾಡಿದೆ. ಸುದೀರ್ಘ 72ವರ್ಷಗಳ ತುಂಬು ಜೀವನದಲ್ಲಿ ‘ಪಿಣರಾಯಿ ವಿಜಯನ್’ ಎಂಬ ಹೆಸರಿನ ಜತೆಗೆ; ರಾಜಕೀಯ ಸಂಘರ್ಷಗಳು, ಪಕ್ಷದೊಳಗಿನ ಗುದ್ದಾಟಗಳು, ಅಧಿಕಾರವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ಎದುರಿಸಿದ..

    February 24, 2017
    ...
    american-shoot-out-victims
    ವಿದೇಶ

    ಅಮೆರಿಕಾದಲ್ಲಿ ಶೂಟೌಟ್: ಜನಾಂಗೀಯ ದ್ವೇಷಕ್ಕೆ ಭಾರತೀಯ ಎಂಜಿನಿಯರ್ ಬಲಿ

    46ನೇ ಅಧ್ಯಕ್ಷೀಯ ಚುನಾವಣೆ ಪ್ರಚಾರ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದ ಅಮೆರಿಕಾದ ಜನಾಂಗೀಯ ದ್ವೇಷ ರಾಜಕಾರಣಕ್ಕೆ ಭಾರತೀಯ ಎಂಜಿನಿಯರ್‌ ಒಬ್ಬರು ಬಲಿಯಾಗಿದ್ದಾರೆ. ನಿನ್ನೆ ರಾತ್ರಿ ಕನ್‌ಸಾಸ್ ನಗರದ ಒಲಾತೆಯ ಬಾರ್‌ ಒಂದರಲ್ಲಿ ಕುಳಿತಿದ್ದ ಹೈದ್ರಾಬಾದ್‌ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಭೋತ್ಲಾ ಮೇಲೆ ಅಮೆರಿಕಾ ಪ್ರಜೆಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಶ್ರೀನಿವಾಸ್ ಸಾವನ್ನಪ್ಪಿದ್ದಾರೆ. ದಾಳಿ ವೇಳೆ ಶ್ರೀನಿವಾಸ್ ಜತೆಗಿದ್ದ ಇನ್ನೊಬ್ಬ ಭಾರತೀಯ ಪ್ರಜೆ ಅಲೋಕ್ ಮದಸಾನಿ ಗಾಯಗೊಂಡಿದ್ದಾರೆ. ದಾಳಿಯನ್ನು ತಪ್ಪಿಸಲು ಬಂದ ಓರವ್‌ಲ್ಯಾಂಡ್ ಪಾರ್ಕ್ ಎಂಬ ಅಮೆರಿಕಾ ಪ್ರಜೆ ಕೂಡ ಗಾಯಗೊಂಡಿದ್ದಾರೆ. ಗುಂಡಿನ..

    February 24, 2017
    ...
    cong-dairy-final
    ರಾಜ್ಯ

    ಡೈರಿ EXPOSE: ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ‘ಹೈಕಮಾಂಡ್ ವ್ಯವಹಾರ’ ಬಹಿರಂಗ

    ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಗೋವಿಂದರಾಜು ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಸಿಕ್ಕ ‘ಡೈರಿ ಹಾಳೆ’ಗಳು ಕೊನೆಗೂ ದಿಲ್ಲಿಯಲ್ಲಿ ಬಿಡುಗಡೆಗೊಂಡಿವೆ. ಗುರುವಾರ ಸಂಜೆ ವೇಳೆಗೆ ರಾಷ್ಟ್ರೀಯ ಮಾಧ್ಯಮಗಳು ಬಹುನಿರೀಕ್ಷೆ ಮೂಡಿಸಿದ್ದ ಡೈರಿಯ ಹಾಳೆಗಳಲ್ಲಿದ್ದ ರಾಜ್ಯ ಕಾಂಗ್ರೆಸ್‌ನ ‘ಹೈಕಮಾಂಡ್ ವ್ಯವಹಾರ’ಗಳ ವಿವರಗಳನ್ನು ಬಹಿರಂಗಗೊಳಿವೆ. ಉತ್ತರ ಪ್ರದೇಶ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಇನ್ನೇನು 10 ಗಂಟೆಗಳ ಅವಧಿ ಇದೆ ಎನ್ನುವಾಗಲೇ ಬಹಿರಂಗಗೊಂಡಿರುವ ಈ ಮಾಹಿತಿ ಸಹಜವಾಗಿಯೇ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆ. ರಾಜ್ಯದಲ್ಲಿ ಇದರ ಪರಿಣಾಮ ಇನ್ನೊಂದೆರಡು ದಿನ..

    February 23, 2017
    ...
    new-1000-rs-note-drama
    ದೇಶ

    ಹೊಸ ಸಾವಿರ ರೂಪಾಯಿ ‘ನೋಟಿನ ಮರ್ಮ’; ಬೀರುತ್ತಿರುವ ಅನಾಣ್ಯೀಕರಣದ ಪರಿಣಾಮ

    ಮಳೆ ನಿಂತು ಹೋದ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ಅನಾಣ್ಯೀಕರಣದ ಪರಿಣಾಮಗಳ ‘ಕಲೆ’ ಅಷ್ಟು ಸುಲಭಕ್ಕೆ ಮಾಸುವಂತೆಯೂ ಕಾಣಿಸುತ್ತಿಲ್ಲ. ಕಳೆದ ನ. 8ರಂದು ರಾತ್ರಿ ಪ್ರಧಾನಿ ಮೋದಿ 500 ಹಾಗೂ 1000 ರೂಪಾಯಿ ಮುಖಬೆಲೆ ನೋಟುಗಳಿಗೆ ಮೌಲ್ಯವಿಲ್ಲ ಎಂದು ಘೋಷಿಸಿದರು. ಆ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 86ರಷ್ಟು ನಗದು ಹಣ ಬೆಲೆ ಕಳೆದುಕೊಂಡಿತು. ಆರಂಭದಲ್ಲಿ ಕಪ್ಪು ಹಣದ ವಿರುದ್ಧದ ಸಮರ ಇದು, ಜತೆಗೆ, ಕಳ್ಳನೋಟು ದಂಧೆಗೆ ಕಡಿವಾಣ, ಭಯೋತ್ಪಾದನೆ ವಿರುದ್ಧ ಸಮರ ಎಂದು ಈ ಕ್ರಮವನ್ನು ಬಣ್ಣಿಸಲಾಯಿತು. ನಂತರ..

    February 22, 2017
    ...
    left-right-mangaluru
    ರಾಜ್ಯ

    ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ‘ಸೈದ್ಧಾಂತಿಕ ಸಂಘರ್ಷ’

    ರಾಜ್ಯದಲ್ಲಿ ನಡೆಯುತ್ತಿರುವ ಎಡ ಮತ್ತು ಬಲದ ‘ಸೈದ್ಧಾಂತಿಕ ಸಂಘರ್ಷ’ಕ್ಕೆ ಇದೇ ತಿಂಗಳ 25ರಂದು ಮಂಗಳೂರಿನ ಬೀದಿಗಳು ಸಾಕ್ಷಿಯಾಗಲಿವೆ. ಸಿಪಿಎಂ ಕರ್ನಾಟಕ ಪಕ್ಷವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ‘ಕೋಮುವಾದಕ್ಕೆ ಸೋಲಾಗಲಿ; ಸೌಹಾರ್ದತೆ ಗಟ್ಟಿಯಾಗಲಿ’ ಎಂಬುದು ಕಾರ್ಯಕ್ರಮದ ಘೋಷವಾಕ್ಯ. ಕಾರ್ಯಕ್ರಮದ ಮಾಹಿತಿ ಹೊರ ಬೀಳುತ್ತಿದ್ದಂತೆ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮತ್ತು ಬಿಜೆಪಿ, ಪಿಣರಾಯಿ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿವೆ. ಕಾರ್ಯಕ್ರಮದ ವಿರುದ್ಧ ಫೆ. 24ರಂದು ಮೆರವಣಿಗೆ ಮತ್ತು ಫೆ. 25ರಂದು ಬಂದ್ ನಡೆಸುವುದಾಗಿ ಪ್ರಕಟಿಸಿವೆ…

    February 22, 2017
    ...
    mukhesh-ambani-jio-prime
    ದೇಶ

    ದಿನಕ್ಕೆ 10 ರೂ.; ತಿಂಗಳಿಗೆ 303: ರಿಲಯನ್ಸ್ ಜಿಯೋ ‘ಉಚಿತ ಸೇವೆ’ಯ ಅಸಲಿ ಲೆಕ್ಕಾಚಾರ

    ಕಳೆದ 170 ದಿನಗಳ ಅಂತರದಲ್ಲಿ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ‘ಉಚಿತ ಭಾಗ್ಯ’ಗಳ ಮೂಲಕ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಅಸಲಿ ಲೆಕ್ಕಾಚಾರ ಈಗ ಶುರುವಾಗಿದೆ. ಗುರುವಾರ ‘ಜಿಯೋ ಪ್ರೈಮ್’ ಹೆಸರಿನಲ್ಲಿ ಸದ್ಯ ಉಚಿತ ಅಂತರ್ಜಾಲ ಮತ್ತು ಕರೆ ಸೇವೆಗಳನ್ನು ಬಳಸುತ್ತಿರುವವರ ಮುಂದೆ ಹೊಸ ‘ಆಫರ್‌’ ಇಡಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೊಸ ಸೇವೆಗಳ ಮಾಹಿತಿ ಪ್ರಕಟಿಸಿದ್ದಾರೆ. ಕಳೆದ ಸೆ. 5ರಂದು ರಿಲಯನ್ಸ್ ಜಿಯೋ ತನ್ನ ಸೇವೆಯನ್ನು ಶುರುಮಾಡಿತ್ತು. ಆರಂಭದಲ್ಲಿ ಸಿಮ್‌ ಕಾರ್ಡಿಗೆ 99 ರೂಪಾಯಿ..

    February 21, 2017

Top