An unconventional News Portal.

    ...
    snow-AVALANCHE-1
    ಸುದ್ದಿ ಸಾರ

    ದೇಶದೆಲ್ಲೆಡೆ ಸಂಭ್ರಮದ ಗಣರಾಜ್ಯೋತ್ಸವ: ಕಾಶ್ಮೀರದಲ್ಲಿ ಹಿಮಪಾತಕ್ಕೆ 10 ಸೈನಿಕರ ಸಾವು

    ಇಡೀ ದೇಶ ಇತ್ತ ಗಣರಾಜ್ಯೋತ್ಸವದ ಸಂಭ್ರದಲ್ಲಿರುವಾಗಲೇ, ಅತ್ತ ಶ್ರೀನಗರದಿಂದ 200 ಕಿ. ಮೀ ದೂರದ ಬಂಡಿಪೋರ ಗುರೆಝ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ ಮತ್ತಿಬ್ಬರು ಸೈನಿಕರ ದೇಹಗಳನ್ನು ಹೊರತೆಗೆಯಲಾಗಿದೆ. ಬುಧವಾರ ಮತ್ತು ಗುರುವಾರದಂದು ಎರಡು ಪ್ರತ್ಯೇಕ ಹಿಮಪಾತ ಪ್ರಕರಣಗಳಿಗೆ ಕಾಶ್ಮೀರ ಸಾಕ್ಷಿಯಾಗಿದ್ದು, ಈವರೆಗೆ 10 ಸೈನಿಕರು ಸಾವನ್ನಿಪ್ಪಿದ್ದರೆ, ಹಲವರು ನಾಪತ್ತೆಯಾಗಿದ್ದಾರೆ. ಈವರೆಗೆ ರಕ್ಷಿಸಿದ ಸೈನಿಕರ ಸಂಖ್ಯೆ 7ಕ್ಕೇರಿದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. “ಸೇನಾ ನೆಲೆ ಮತ್ತು ಪ್ಯಾಟ್ರೋಲ್ ನಡೆಸುತ್ತಿದ್ದ ತುಕಡಿ ಪ್ರತ್ಯೇಕ ಸ್ಥಳಗಳಲ್ಲಿ ಹಿಮಪಾತಕ್ಕೆ ಸಿಲುಕಿದೆ. ಸದ್ಯ ವಾತಾವರಣ..

    January 26, 2017
    ...
    president-pranab-mukherjee
    ಸುದ್ದಿ ಸಾರ

    68ನೇ ಗಣರಾಜ್ಯೋತ್ಸವ ಭಾಷಣ: ಅನಾಣ್ಯೀಕರಣದ ಬಗ್ಗೆ ಉಲ್ಟಾ ಹೊಡೆದ ರಾಷ್ಟ್ರಪತಿ

    ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅನಾಣ್ಯೀಕರಣ, ಮಹಿಳೆಯರ ಸುರಕ್ಷತೆ ಮತ್ತು ಒಳಗೊಳ್ಳುವಿಕೆಯ ರಾಜಕೀಯದ ವಿಚಾರಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಸಿದರು. ಸಂಪ್ರದಾಯದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ, ಈ ಹಿಂದೆ ಅನಾಣ್ಯೀಕರಣದ ಬಗ್ಗೆ ತಾವು ತೆಗೆದುಕೊಂಡು ನಿಲುವುಗಳಿಗೆ ವ್ಯತಿರಿಕ್ತ ಮಾತುಗಳನ್ನು ಆಡಿದರು. “ಅನಾಣ್ಯೀಕರಣದಿಂದ ಕಪ್ಪು ಹಣವನ್ನು ತಡೆಯಲು ಹೊರಟ ಪ್ರಕ್ರಿಯೆ ತಾತ್ಕಾಲಿಕವಾಗಿ ಆರ್ಥಿಕ ವ್ಯವಹಾರಗಳನ್ನು ನಿಧಾನಗತಿಗೆ ತಳ್ಳಲಿದೆ. ಆದರೆ ಹೆಚ್ಚು ಹೆಚ್ಚು ನಗದು ವ್ಯವಹಾರ ಬೆಳೆದಂತೆ ದೇಶದ ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು..

    January 25, 2017
    ...
    bill-gates-1
    ಫೋಕಸ್

    ದಾನದ ಆಚೆಗೂ ಬಿಲ್ ಗೇಟ್ಸ್ ‘ಮೊದಲ ಟ್ರಿಲೇನಿಯರ್’: ಸಾಧ್ಯತೆಯನ್ನು ಮುಂದಿಟ್ಟ ಅಧ್ಯಯನ

    ಜಗತ್ತಿನ ಮೊದಲ ಟ್ರಿಲೇನಿಯರ್ ಮೈಲಿಗಲ್ಲನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮುಂದಿನ 25 ವರ್ಷಗಳಲ್ಲಿ ಮುಟ್ಟಲಿದ್ದಾರೆ ಎಂದು ಹೊಸ ಅಧ್ಯಯನ ಹೇಳಿದೆ. ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ. ಆಕ್ಸ್ಫಾಮ್ ಇಂಟರ್ನ್ಯಾಷನಲ್ ಅಧ್ಯಯನದ ಪ್ರಕಾರ, ಸದ್ಯ ವರ್ಷಕ್ಕೆ ಶೇ. 11ರಷ್ಟು ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ಬಿಲ್ ಗೇಟ್ಸ್ ಮೊದಲ ಲಕ್ಷ ಕೋಟ್ಯಾಧಿಪತಿಯಾಗಲಿದ್ದಾರೆ ಎಂದು ಅಂದಾಜಿಸಿದೆ. 2006ರಲ್ಲಿ ಬಿಲ್ ಗೇಟ್ಸ್ ಸ್ಥಾಪಿಸಿದ್ದ ಮೈಕ್ರೋಸಾಫ್ಟ್ ಸಂಸ್ಥೆ 5 ಸಾವಿರ ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು. ನಂತರ ದಿನಗಳಲ್ಲಿ ಅದು..

    January 25, 2017
    ...
    Denzel Washington Visits "Late Show With David Letterman"
    ವಿದೇಶ

    ಈ ಬಾರಿ ‘ಆಸ್ಕರ್ ನಾಟ್ ಸೋ ವೈಟ್’: ಪ್ರಶಸ್ತಿ ರೇಸಿನಲ್ಲಿ ಡೆನ್ಸಿಲ್ ವಾಷಿಂಗ್ಟನ್, ದೇವ್ ಪಟೇಲ್

    ಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಗಾಲೋಟ ಆರಂಭವಾಗಿದೆ. ಗುರುವಾರ ಬಿಡುಗಡೆಗೊಂಡಿರುವ ಪಟ್ಟಿ, ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲಾ ಜನಾಂಗಗಳಿಗೂ, ಭಿನ್ನ ಹಿನ್ನೆಲೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ನೀಡಿದೆ. ಕಳೆದ ವರ್ಷ ಕೇಳಿಬಂದ ಟೀಕೆಗಳಿಗೆ ಅಕಾಡೆಮಿ ತಲೆಬಾಗಿದಂತೆ ಕಾಣಿಸುತ್ತಿದೆ. 89ನೇ ಅಕಾಡೆಮಿ ಪ್ರಶಸ್ತಿಗಾಗಿ ಸಿದ್ಧಗೊಂಡಿರುವ ಪಟ್ಟಿಯಲ್ಲಿ ಬಿಳಿಯ ಜನಾಂಗದ ನಟರು ಹಾಗೂ ನಿರ್ದೇಶಕರನ್ನು ಹೊರತು ಪಡಿಸಿ, ಈ ಬಾರಿ ಹಲವರು ಸ್ಥಾನ ಪಡೆದುಕೊಂಡಿದ್ದಾರೆ. ಅಭಿನಯದ ವಿಭಾಗದಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 20 ಜನರಲ್ಲಿ 9 ಬಿಳಿಯ ವರ್ಣದವರಲ್ಲ..

    January 25, 2017
    ...
    kambala-rishab-shetty-pic-1
    ರಾಜ್ಯ

    ‘ಇನ್ ಡೀಟೆಲ್’: ಕಂಬಳ ಎಂದರೆ ಬರೀ ಕೋಣಗಳ ಓಟದ ಸ್ಪರ್ಧೆ ಮಾತ್ರ ಅಲ್ಲವೋ ಅಣ್ಣಾ!

    ದಕ್ಷಿಣ ಕನ್ನಡದ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ನಡೆಯುವ ಕಂಬಳ ಆಚರಣೆಗೆ ಇರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಜನ ಬೀದಿಗೆ ಬಂದಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಭಾರಿ ಪ್ರತಿಭಟನೆ ಮತ್ತು ಅದು ಪಡೆದುಕೊಂಡು ಪ್ರಚಾರ ಕಂಬಳದ ಸುತ್ತ ಆರಂಭಗೊಂಡಿರುವ ಪ್ರತಿಭಟನೆಗಳ ಮೇಲೆ ಪರಿಣಾಮ ಬೀರಿದೆ. ಈಗಾಗಲೇ, ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಕಂಬಳವನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸಿ ಹೋರಾಟಗಳು ನಡೆದಿವೆ. ಮುಂದಿನ ಒಂದು ವಾರದಲ್ಲಿ ಇವು ಇನ್ನಷ್ಟು ಜೋರಾಗುವ ಮುನ್ಸೂಚನೆ ಸಿಕ್ಕಿದೆ. “ಕಂಬಳ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ…

    January 24, 2017
    ...
    dg-final-list
    ರಾಜ್ಯ

    ಮಾಸಾಂತ್ಯದ ‘ಪಟ್ಟಾಭಿಷೇಕ’: ದತ್ತಾ ನೇಮಕಾತಿಗೆ ಇಲಾಖೆಯೊಳಗೇ ಅಸಮಾಧಾನ

    ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ- ಐಜಿ) ಹುದ್ದೆಗೆ ಅಧಿಕಾರಿಗಳ ಹೆಸರು ಶಿಫಾರಸು ಆಗುತ್ತಿದ್ದಂತೆ ಕೊನೆಯ ಹಂತದ ಕಸರತ್ತುಗಳಿಗೆ ಇಲಾಖೆಯೊಳಗೆ ಚಾಲನೆ ಸಿಕ್ಕಿದೆ. ಗಣಿ ಹಗರಣದ ತನಿಖೆ ತನಿಖೆ ಸಮಯದಲ್ಲಿ ಲೋಕಾಯುಕ್ತದಲ್ಲಿ ಎಡಿಜಿಪಿ ಆಗಿದ್ದ, ಹಾಲಿ ಕೇಂದ್ರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಆಗಿರುವ ರೂಪಕ್ ಕುಮಾರ್ ದತ್ತಾ ರಾಜ್ಯ ಸೇವೆಗೆ ವಾಪಾಸಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆಯೊಳಗಿನ ಒಂದು ಬಣ ಕಸರತ್ತು ನಡೆಸುತ್ತಿದೆ. ಅದಕ್ಕೆ ಇರುವ ಪ್ರಮುಖ ಕಾರಣಗಳು, ಹಿಂದೆ ಲೋಕಾಯುಕ್ತದಲ್ಲಿದ್ದ ಸಮಯದಲ್ಲಿ ದತ್ತಾ, ಪೊಲೀಸ್..

    January 24, 2017
    ...
    tanvir-seth-protest
    ಸುದ್ದಿ ಸಾರ

    ಶಿಕ್ಷಣ ಸಚಿವರ ನಿವಾಸಕ್ಕೇ ಲಗ್ಗೆ ಇಟ್ಟ ಪ್ರತಿಭಟನಾಕಾರರು

    ರಾಜ್ಯದ ಸರಕಾರಿ ಶಾಲೆಗಳ ಬಲವರ್ಧನೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ಶಿಕ್ಷಣ ಸಚಿವ ತನ್ವೇರ್ ಸೇಠ್ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ರಸ್ತೆಯಲ್ಲಿರುವ ಶಿಕ್ಷಣ ಸಚಿವರ ಅಧಿಕೃತ ನಿವಾಸಕ್ಕೆ ನಾನಾ ಕಡೆಗಳಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿಭಟನೆ ಜಾಥ ಬಂದವರು ಮನೆಯ ಒಳಗೇ ಪ್ರವೇಶಿಸಿದರು. ನಂತರ ಪೊಲೀಸರು ಬಂದರಾದರೂ ಪ್ರತಿಭಟನಾಕಾರರು ಸ್ಥಳದಿಂದ ಕದಲಿಲ್ಲ. ಹೊರಗೆ ಟ್ರಾಫಿಕ್ ಸಮಸ್ಯೆಯೂ ತಲೆದೋರಬಹುದು..

    January 23, 2017
    ...
    Youngstres and Students protest to lift ban on Jallikattu
    ದೇಶ

    ಹಿಂಸೆಗೆ ತಿರುಗಿದ ಜಲ್ಲಿಕಟ್ಟು ಪ್ರತಿಭಟನೆ: ಮಾಧ್ಯಮಗಳು ತೋರಿಸದ ತಮಿಳುನಾಡಿನ ಇನ್ನೊಂದು ಮುಖ

    ಕಳೆದ ಒಂದು ವಾರದಿಂದ ಚೆನ್ನೈನ ಮರೀನಾ ಬೀಚ್ ಸೇರಿದಂತೆ ತಮಿಳುನಾಡಿನ ಇತರೆ ಕಡೆಗಳಲ್ಲಿ ಜಲ್ಲುಕಟ್ಟು ನಿಷೇಧ ಮೇಲಿನ ತೆರವಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸೆಗೆ ತಿರುಗಿದೆ. ವಿದ್ಯಾರ್ಥಿಗಳು ಮತ್ತು ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ವರದಿಗಳ ಪ್ರಕಾರ ಮರೀನಾ ಬೀಚ್ ಪ್ರದೇಶದಲ್ಲಿ ಸುಮಾರು 15 ಸಾವಿರ ಪ್ರತಿಭಟನಾಕಾರರು ಸೇರಿದ್ದಾರೆ. ಸುಘ್ರೀವಾಜ್ಞೆ ನಂತರ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಪ್ರತಿಭಟನೆಯನ್ನು ಕೈ ಬಿಡುವಂತೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಲಿಲ್ಲ. ಈ ಸಮಯದಲ್ಲಿ..

    January 23, 2017
    ...
    abhishek-tumkur-final
    ರಾಜ್ಯ

    ‘ಹೋರಾಟಕ್ಕೆ ನಾಂದಿ’: ಹಲ್ಲೆಗೊಳಗಾದ ತುಮಕೂರು ದಲಿತ ಯುವಕನ ಮೇಲೆ ಪೋಕ್ಸೊ ಕಾಯ್ದೆ

      ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ‘ಪ್ರೀತಿಸುವಂತೆ ಒತ್ತಾಯಿಸಿದ ಆರೋಪ’ದ ಮೇಲೆ ಅಮಾನವೀಯವಾಗಿ ಹಲ್ಲೆಗೆ ಒಳಗಾದ ತುಮಕೂರಿನ ಗುಬ್ಬಿಯ ದಲಿತ ಯುವಕನ ಮೇಲೆಯೇ ಪೋಸ್ಕೋ ಕಾಯ್ದೆ ಅಡಿಯಲ್ಲಿ ದೂರು ದಾಖಲಿಕೊಳ್ಳಲಾಗಿದೆ. ಸೋಮವಾರ ‘ಸಮಾಚಾರ’ಕ್ಕೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, “ಯುವತಿಯ ತಾಯಿ ಕಡೆಯಿಂದ ದೂರು ಬಂದಿತ್ತು. ಹಲ್ಲೆಗೊಳಗಾಗುವ ಮುನ್ನ ಯುವತಿಯನ್ನು ಕೈ ಹಿಡಿದು ಅಭಿಷೇಕ್ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿದ್ದರು. ಈ ಕುರಿತು ತನಿಖೆ ನಡೆಸಿದ ನಂತರ ಐಪಿಸಿ 165 ಅಡಿಯಲ್ಲಿ..

    January 23, 2017
    ...
    silicon_valley_corporation
    ವಿದೇಶ

    ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?

    ಕಳೆದ ಶುಕ್ರವಾರ ಅಮೆರಿಕಾದ ವಾಷಿಂಗ್ಟನ್ ಶ್ವೇತಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, “ಅಮೆರಿಕ ಉತ್ಪನ್ನಗಳನ್ನು ಕೊಳ್ಳಿರಿ; ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಮುಂದಿನ ಕೆಲವು ದಿನಗಳಲ್ಲಿ ಅಮೆರಿಕಾದ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ವಿದೇಶಿ ಕಂಪನಿಗಳಿಗೆ ಹಾಗೂ ವಲಸಿಗರಾಗಿ ಕೆಲಸ ಮಾಡುತ್ತಿರುವ ವಿದೇಶಿಗರಿಗೆ ಇನ್ನು ಮುಂದೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲು ದಕ್ಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಚೈನಾ ‘ತನ್ನ ದೇಶದ ಕಂಪನಿಗಳ ಹಾಗೂ ಕಾರ್ಮಿಕರ..

    January 23, 2017

Top