An unconventional News Portal.

    ...
    donald-trump_4
    ವಿದೇಶ

    ‘ಟ್ರಂಪಣ್ಣ ಹುಚ್ಚಾಟ’: ಆದೇಶ ತಿರಸ್ಕರಿಸಿದ ಅಟಾರ್ನಿ ಜನರಲ್ ಸಲ್ಲಿಗೆ ಗೇಟ್ ಪಾಸ್

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತದಲ್ಲಿ ಕ್ಷಣಕ್ಕೊಂದು ಬದಲಾವಣೆಗಳಾಗುತ್ತಿದ್ದು, ಕೆಲವು ಗಂಟೆಗಳ ಮುಂಚೆಯಷ್ಟೆ ದೇಶದ ಅಟಾರ್ನಿ ಜನರಲ್ ಸಲ್ಲಿ ಯೇಟ್ಸ್ ಅವರನ್ನು ಸ್ಥಾನದಿಂದ ಕಿತ್ತು ಹಾಕಲಾಗಿದೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಆಯ್ದ ಮುಸ್ಲಿಂ ದೇಶಗಳ ವಲಸಿಗರ ಮೇಲಿನ ನಿರ್ಬಂಧ ಆದೇಶವನ್ನು ಯೇಟ್ಸ್ ತಳ್ಳಿಹಾಕಿದ್ದರು. ಸೋಮವಾರ ಸಂಜೆ ವೇಳೆಗೆ (ಅಮೆರಿಕಾ ಕಾಲಮಾನ) ಕಾನೂನು ಇಲಾಖೆಯ ವಕೀಲರಿಗೆ ಅಧ್ಯಕ್ಷ ಟ್ರಂಪ್ ಆದೇಶವನ್ನು ಪುರಸ್ಕರಿಸದಂತೆ ಅವರು ಆದೇಶ ಹೊರಡಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸಲ್ಲಿ ಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಸ್ಥಾನದಿಂದ ಕಿತ್ತು ಹಾಕಿ..

    January 31, 2017
    ...
    jsw-thoranagallu-1
    ರಾಜ್ಯ

    ‘ಜಿಂದಾಲ್ ರಿಪಬ್ಲಿಕ್’ಗೆ ಸ್ವಾಗತ: ಕುಡತನಿ ಡಾಂಬರ್ ಘಟಕ ಮತ್ತು 4 ನತದೃಷ್ಟ ಕಾರ್ಮಿಕರು

    ಅಕ್ರಮ ಗಣಿಗಾರಿಕೆಯಿಂದ ನಲುಗಿದ್ದ ಬಳ್ಳಾರಿಯ ಜನ ಅಂದು ನಡೆದ ಪರಸರ ಮಾಲಿನ್ಯ ಮತ್ತು ಬದುಕಿನ ಮೇಲಾದ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಉತ್ತರ ಕರ್ನಾಟಕದ ಈ ಜಿಲ್ಲೆಯ ತೋರಣಗಲ್ಲಿನಲ್ಲಿ ಜಿಂದಾಲ್ ಉಕ್ಕು ಕಂಪನಿ (ಜಿಂದಾಲ್ ಸೌತ್ ವೆಸ್ಟ್ ಸ್ಟೀಲ್ ಲಿ.) ಅದೇ ಹಳೆಯ ಮಾದರಿಯ ಪರಿಸರ ಹಾನಿಗಳ ಜತೆಗೆ ಹಣ ಬಲ, ತೋಳ್ಬಲ ಮತ್ತು ಕಾನೂನಿನ ಬಲವನ್ನು ಜನರಿಗೆ ನೆನಪು ಮಾಡಿಕೊಡಲಾರಂಭಿಸಿದೆ. ತೋರಣಗಲ್ಲಿನಲ್ಲಿರುವ ಜಿಂದಾಲ್ ಕಂಪನಿಯ ಆವರಣಗೊಳಗಡೆಯೇ ಇತ್ತೀಚೆಗೆ ಆರಂಭಿಸಿರುವ ಡಾಂಬರ್ ತಯಾರಿಕಾ ಘಟಕದ ವಿರುದ್ಧ ಜನ..

    January 30, 2017
    ...
    pratham-2
    ಫೋಕಸ್

    ಸೆಲ್ಫಿಗಾಗಿ ಪರದಾಡಿದ್ದ ಯುವಕ; ಅರ್ಧ ಕೋಟಿ ರೂಪಾಯಿ ಮತ್ತು ಸೈಕೋ ಅನಾಲಿಸಿಸ್!

    “Reality TV is set up to make people entertaining. A good person with values and principles is not good television” -Ronda Rousey ಅಂದುಕೊಂಡಿದ್ದಕ್ಕಿಂತ 14 ದಿನಗಳ ಕಾಲ ಮುಂದಕ್ಕೆ ಹೋದ ‘ಬಿಗ್ ಬಾಸ್ ಕನ್ನಡ’ ಟಿವಿ ರಿಯಾಲಿಟಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಚರ್ಚೆಯನ್ನು ಹುಟ್ಟುಹಾಕಿದೆ. ಅಂತಿಮ ಗೆಲುವು ನಿರೀಕ್ಷಿತವೇ ಆದರೂ, ಅದರ ಕ್ಲೈಮ್ಯಾಕ್ಸ್ ತೆಗೆದುಕೊಂಡ ತಿರುವು ಇದಕ್ಕೆ ಕಾರಣ. ಆರಂಭದಿಂದಲೂ ‘ಬಿಗ್ ಬಾಸ್ ಕನ್ನಡ’ ಎಂಬ ರಿಯಾಲಿಟಿ ಶೋ ಸಮ ಪ್ರಮಾಣದಲ್ಲಿ ಗಣನೆಗೂ, ಅವಜ್ಞೆಗೂ ಪಾತ್ರವಾದ..

    January 30, 2017
    ...
    arun-kumar-1
    ದೇಶ

    ‘ಬಜೆಟ್ ದಿಕ್ಸೂಚಿ’: ಜನಪ್ರಿಯತೆಗೆ ಮೊರೆ; ಯೋಜನೆಗಳ ಅನುಷ್ಠಾನಕ್ಕೆ ಸಿಗೋಲ್ಲ ಬೆಲೆ

    2017-18ರ ಆಯವ್ಯಯ ಕೇಂದ್ರ ಹಣಕಾಸು ಸಚಿವರ ಪಾಲಿಗೆ ದುಃಸ್ವಪ್ನವಾಗಲಿದೆ… ಹೀಗಂತ ಹೇಳಿದವರು ಜೆಎನ್ಯು ನಿವೃತ್ತ ಪ್ರಾಧ್ಯಾಪಕ, ಆರ್ಥಿಕ ತಜ್ಞ ಪ್ರೊ. ಅರುಣ್ ಕುಮಾರ್. ಬಜೆಟ್ ಪೂರ್ವಭಾವಿಯಾಗಿ ಇತ್ತೀಚಿಗೆ ‘ದಿ ವೈರ್’ ಜತೆಗೆ ಮಾತನಾಡಿದ ಅವರು ಫೆ. 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಆಯವ್ಯಯ, ದೇಶದ ಆರ್ಥಿಕತೆ, ಅನಾಣ್ಯೀಕರಣ, ಸಂಘಟಿತ ವಲಯದ ಉತ್ಪಾದನೆ ಕುಸಿತ, ಜಿಡಿಪಿ, ವಿತ್ತೀಯ ಕೊರತೆ, ರಾಜಕೀಯ ಸೇರಿದಂತೆ ನಾನಾ ವಿಚಾರಗಳ ಕುರಿತು ಒಳನೋಟಗಳನ್ನು ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳ ಕನ್ನಡಾನುವಾದವನ್ನು ‘ಸಮಾಚಾರ’ ಇಲ್ಲಿ..

    January 30, 2017
    ...
    s-m-krishna-2
    ರಾಜ್ಯ

    ‘ಪಕ್ಷಕ್ಕಷ್ಟೆ ರಾಜೀನಾಮೆ; ರಾಜಕೀಯದಿಂದ ನಿವೃತ್ತಿ ಇಲ್ಲ’: ಕುತೂಹಲ ಮೂಡಿಸಿದ ಎಸ್ಎಂಕೆ ನಡೆ

    ಹಿರಿತನಕ್ಕೆ ಸಿಗದ ಬೆಲೆ, ಇರುವಿಕೆಗೆ ಸಿಗದ ಮನ್ನಣೆ, ನೋವು- ಸಂಕಟಗಳ ತಾಕಲಾಟ, ಹಳೇ ದಿನಗಳ ಮೆಲುಕಾಟ, ಪಕ್ಷದಿಂದಷ್ಟೆ ಹೊರಕ್ಕೆ; ರಾಜಕೀಯದಲ್ಲಿ ಮಂದುವರಿಕೆ, ‘ನಿವೃತ್ತಿ ಘೋಷಣೆ’ಯ ಊಹಾಪೋಹದ ವರದಿಗಳಿಗೆ ತೆರೆ… ಇವು ಭಾನುವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಕರೆಯಲಾದ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಎಸ್. ಎಂ. ಕೃಷ್ಣ ಅವರ ತುರ್ತು ಪತ್ರಿಕಾಗೋಷ್ಠಿಯ ಹೈಲೈಟ್ಸ್. ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಅವರ ರಾಜೀನಾಮೆ ವಿಚಾರ ಹೊರಬೀಳುತ್ತಿದ್ದಂತೆ ‘ಸಮಾಚಾರ’ ಅವರ ‘ನಿವೃತ್ತಿ ಘೋಷಣೆ’ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿತ್ತು. ಜತೆಗೆ, ಒಂದಷ್ಟು..

    January 29, 2017
    ...
    smk-1
    ರಾಜ್ಯ

    ಎಸ್ಎಂಕೆ ದಿಢೀರ್ ರಾಜೀನಾಮೆ: ‘ನಿವೃತ್ತಿ ಘೋಷಣೆ’ ಆಚೆಗೆ ಮೂಡುವ ಒಂದಷ್ಟು ಪ್ರಶ್ನೆಗಳು

    ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಕಾಂಗ್ರೆಸ್ ಮುಖಂಡ ಎಸ್. ಎಂ. ಕೃಷ್ಣ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಶನಿವಾರ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ, ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. 84ರ ಇಳೀ ವಯಸ್ಸಿನಲ್ಲಿರುವ ಅನುಭವಿ ರಾಜಕಾರಣಿಯೊಬ್ಬರ ‘ನಿವೃತ್ತಿ ಘೋಷಣೆ’ ಇದು ಎಂದು ವರದಿಗಳು ಹೇಳುತ್ತಿವೆ. ಆದರೆ, ರಾಜ್ಯ ರಾಜಕಾರಣದಲ್ಲಿ ನಡೆದ ಈ ದಿಢೀರ್ ಬೆಳವಣಿಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲಿ ಪ್ರಮುಖವಾದುದು, ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುವುದೇ ಆಗಿದ್ದರೆ, ಎಸ್. ಎಂ. ಕೃಷ್ಣ ಅವರೇಕೆ..

    January 28, 2017
    ...
    v-shanmuganathan-gov
    COVER STORY

    ರಾಜ್ಯಪಾಲರ ಬೆಡ್ ರೂಮಿಗೆ ಮುಕ್ತ ಪ್ರವೇಶ: ಈ ‘ಬಿಳಿಯಾನೆ’ಗಳ ಖರ್ಚಿಗೆ ಬೇಕಿದೆ ಅಂಕುಶ!

    ಈಶಾನ್ಯ ಭಾರತದ ಪುಟ್ಟ ರಾಜ್ಯ ಮೇಘಾಲಯದ ರಾಜಭವನದೊಳಗೆ ನಡೆದ ಕರ್ಮಕಾಂಡದ ವರದಿ ಹೊರಬಿದ್ದಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಿಗೆ ತಮಿಳುನಾಡು ಮೂಲದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯ ವಿ. ಷಣ್ಮಗನಾಥನ್ ಗುರಿಯಾಗಿದ್ದಾರೆ. ಅವರ ವಿರುದ್ಧ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 90 ನೌಕರರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ಮಹಿಳೆಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದದ್ದು, ಕೆಲವು ಮಹಿಳೆಯರಿಗೆ ಅವರ ಬೆಡ್ ರೂಮಿಗೆ ಮುಕ್ತ ಪ್ರವೇಶವಿದ್ದದ್ದು ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪಗಳ ಪಟ್ಟಿಯು ಪತ್ರದಲ್ಲಿವೆ…

    January 28, 2017
    ...
    hemalatha-1
    ಸಮಾಚಾರ +

    ಕಳಚಿಟ್ಟಿದ್ದೇನೆ ಇದೋ ನಿರ್ವಾಣ: ‘ಬೇಕು’ಗಳ ಹುಡುಕಾಟದಲ್ಲಿ ಸಿಕ್ಕ ಅಕ್ಷರದ ಫಲ!

    ಗೃಹಿಣಿಯಾಗಿದ್ದುಕೊಂಡೇ ಕಾವ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿ ಕಾವ್ಯಕೃಷಿಯಲ್ಲಿ ತೊಡಗಿಕೊಂಡಿರುವ ಹೇಮಲತಾಮೂರ್ತಿ ಹುಟ್ಟಿದ್ದು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಮದುವೆಯ ನಂತರ ಕೆಲವರ್ಷಗಳ ಕಾಲ ಭದ್ರಾವತಿಯಲ್ಲಿ ನೆಲೆಸಿದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರ ಹಲವು ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈಗಾಗಲೇ ಒಂದು ಕವನ ಸಂಕಲನ ಹೊರತಂದಿದ್ದಾರೆ. ‘ಕಳಚಿಟ್ಟಿದ್ದೇನೆ, ಇದೋ ನಿರ್ವಾಣ’ ಇವರ ಎರಡನೇ ಕವನ ಸಂಕಲನ. ಭಾನುವಾರ (ಡಿ. 29) ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಅವರ ಪುಸ್ತಕದಲ್ಲಿರುವ ಈ ಬರವಣಿಗೆ, ಗೃಹಿಣಿಯೊಬ್ಬರ ಒಳಗೆ ಕವಯತ್ರಿಯ ಹುಟ್ಟಿನ ಕುರಿತು..

    January 27, 2017
    ...
    big-boss-final-cover
    ರಾಜ್ಯ

    ‘ಬಿಗ್ ಬ್ರದರ್’ನಿಂದ ‘ಬಿಗ್ ಬಾಸ್’ವರೆಗೆ: ಖಾಸಗಿತನದ ಮಾರಾಟ; ಕುತೂಹಲ ಎಂಬ ಬಂಡವಾಳ!

    ದಕ್ಷಿಣ ಭಾರತದ ಮನೋರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಪೈಕಿ ಅತೀ ಹೆಚ್ಚು ಹೂಡಿಕೆ ಕಂಡ ‘ಬಿಗ್ ಬಾಸ್- ಕನ್ನಡ’ ಕಾರ್ಯಕ್ರಮದ ನಾಲ್ಕನೇ ಅವತರಿಣಿಕೆಗೆ ಶನಿವಾರ ತೆರೆ ಬೀಳಲಿದೆ. ಉಳಿದಿರುವ ಐವರ ಪೈಕಿ ಒಬ್ಬರು 50 ಲಕ್ಷದ ಬಹುಮಾನದ ಮೊತ್ತ (ಇದರಲ್ಲಿ ತೆರಿಗೆ ಕಳೆದು 30 ಲಕ್ಷ ಕೈಗೆ ಬರಬಹುದು)ವನ್ನು ಗೆದ್ದುಕೊಳ್ಳಲಿದ್ದಾರೆ. ವಿಜೇತರನ್ನು ವೀಕ್ಷಕರು ಕಳುಹಿಸುವ ಎಸ್ಎಂಎಸ್ಗಳು ನಿರ್ಧರಿಸಲಿವೆ. ಕಳೆದ ಮೂರು ತಿಂಗಳಿನಿಂದ ‘ಕಲರ್ಸ್ ಕನ್ನಡ’ ಮತ್ತು ‘ಕಲರ್ಸ್ ಸೂಪರ್’ ಚಾನಲ್ಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ‘ಬಿಗ್ ಬಾಸ್’ ಎಂಬ ಕಾರ್ಯಕ್ರಮ ಅದರ..

    January 27, 2017
    ...
    protest-cong-final
    ರಾಜ್ಯ

    ‘ಪ್ರಕಟಣೆ’: ಸಿದ್ದು ಸರಕಾರದಲ್ಲಿ ಸಾಹಿತಿ, ಬುದ್ದಿಜೀವಿ, ದಲಿತ ಹೋರಾಟಗಾರರನ್ನು ಹುಡುಕಿಕೊಡಿ!

    ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದಲಿತ ಯುವಕ ಅಭಿಷೇಕ್ ಮೇಲಿನ ಅಮಾನುಷ ಹಲ್ಲೆ ಪ್ರಕರಣ ಹೋರಾಟದ ತಿರುವು ಪಡೆದುಕೊಳ್ಳುತ್ತಿರುವ ವೇಳೆಯಲ್ಲಿಯೇ, ರಾಜ್ಯದ ನಾನಾ ಕಡೆಗಳಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮೇಲೆ ‘ಜಾತಿ ದೌರ್ಜನ್ಯ’ಗಳಾಗುತ್ತಿರುವ ವರದಿಗಳು ಬರುತ್ತಿವೆ. ಮಂಡ್ಯ ಜಿಲ್ಲೆಯ ಕರಗೋಡು ಹೋಬಳಿಯ ಕೆ ಗೌಡನಕೆರೆ ಗ್ರಾಮದಲ್ಲಿ ಡಿ. 21ರಂದು ಕ್ಷೌರಿಕ ಸಮಾಜ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಲಾಗಿದೆ. ಅವ್ಯಾವ್ಯ ಶಬ್ಧಗಳಿಂದ ನಿಂಧಿಸಿರುವ ಮೇಲ್ಜಾತಿಯವರು, ಕೊನೆಗೆ ಅವರ ಗುಡಿಸಲು ಮನೆಯನ್ನೇ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕರಗೋಡು ಪೊಲೀಸ್..

    January 27, 2017

Top