An unconventional News Portal.

  ...
  500-kg-lady
  ಫೋಕಸ್

  ಈಜಿಪ್ಟ್ ಧಡೂತಿ ಮಹಿಳೆಗೆ ಮುಂಬೈನಲ್ಲಿ ಶಸ್ತಚಿಕಿತ್ಸೆ: 500 ಕೇಜಿ ತೂಕ ಇಳಿಸಲು ವೈದ್ಯಕೀಯ ಕಸರತ್ತು

  ಎಮನ್ ಅಹ್ಮದ್ ಅಬ್ದ್ ಅಲ್ ಅಟಿ… ಈಜಿಪ್ಟಿನ 36 ವರ್ಷದ ಮಹಿಳೆಯೊಬ್ಬಳ ಹೆಸರಿದು. ಈಕೆಯ ತೂಕ ಇವತ್ತಿಗೆ ಬರೋಬ್ಬರಿ 500 ಕೇಜಿಗಳು. ಮತ್ತು ವಿಶ್ವದಲ್ಲಿಯೇ ಬದುಕಿರುವ ಅತ್ಯಂತ ಹೆಚ್ಚು ತೂಕದ ಮಹಿಳೆ ಈಕೆ. ಸದ್ಯ ಈಕೆ ದೇಹದ ತೂಕ ಕಡಿಮೆ ಮಾಡಕೊಳ್ಳಲು ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರಲಿದ್ದಾಳೆ. ಈಕೆಯನ್ನು ಮುಂಬೈ ವೈದ್ಯ ಡಾ. ಮುಫ್ಫಝಲ್ ಲಕ್ಡವಾಲಾ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಿದ್ದಾರೆ. ಆರಂಭದಲ್ಲಿ ಆಕೆಯನ್ನು ಕರೆತರುವುದು ಕಷ್ಟ ಎಂಬ ಕಾರಣಕ್ಕೆ ಕೈರೋದಲ್ಲಿರುವ ಭಾರತದ ರಾಯಭಾರ ಕಚೇರಿ ಆಕೆಗೆ ವೀಸಾ ನೀಡಲು..

  December 8, 2016
  ...
  demonetisation-1
  ದೇಶ

  ‘ಅನಾಣ್ಯೀಕರಣ’ಕ್ಕೆ ತಿಂಗಳು: ಬತ್ತದ ಭರವಸೆಯ ಸಾಗರ; ಸಮಸ್ಯೆಗಳು ಸಾವಿರ; ಜನಸಾಮಾನ್ಯ ಹರೋ ಹರ!

  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಹು ನಿರೀಕ್ಷಿತ ಅನಾಣ್ಯೀಕರಣ ಘೋಷಣೆಯಾಗಿ ಗುರುವಾರಕ್ಕೆ ತಿಂಗಳು ತುಂಬಿದೆ. ಈ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಕೆಲವರು ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ. ಎಲ್ಲಾ ನಿಯಂತ್ರಣ ಕ್ರಮಗಳ ಆಚೆಗೂ ಅದ್ಧೂರಿ ಮದುವೆಗಳಾಗಿವೆ. ಐಟಿ ರೈಡುಗಳು ಹೆಚ್ಚಾಗಿವೆ. ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಅಧಿಕಾರಿಗಳು ಹೊಸ ನೋಟುಗಳ ಕಪ್ಪುಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ. ದೇಶವಿರೋಧಿ ಕೃತ್ಯಗಳಿಗೆ ಬ್ರೇಕ್ ಬಿತ್ತು ಎನ್ನುತ್ತಿರುವಂತೆಯೇ ಭಯೋತ್ಪಾದಕ ದಾಳಿಗಳು ನಡೆದಿವೆ; ನಡೆಯುತ್ತಿವೆ. ಪೇಟಿಎಂನಂತಹ ಕಂಪನಿಗಳ..

  December 8, 2016
  ...
  junaid_jamshed-1
  ವಿದೇಶ

  ‘ಸಂಗೀತದಿಂದ ಧರ್ಮದೆಡೆಗೆ’: ಪಾಕ್ ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಪೈಕಿ ಬಹುಮುಖ ಪ್ರತಿಭೆ ಜುನೈದ್

  ಪಾಕಿಸ್ತಾನದ ಉತ್ತರ ಭಾಗದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಎಲ್ಲಾ 48 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ ಎಂದು ಪಾಕ್ ಏರ್ಲೈನ್ಸ್ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ)ಗೆ ಸೇರಿದ ಪಿಕೆ 661 ಸ್ಥಳೀಯ ನಾಗರಿಕ ವಿಮಾನ ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್ ಕಡೆಗೆ ಹೊರಟಿತ್ತು. ಖೈಬರ್ ಪ್ರಾಂಥ್ಯದ ಹವಾಲಿಯನ್ ನಗರದ ಸಮೀಪ ಬರುತ್ತಿದ್ದಂತೆ ವಿಮಾನ ಮಾರ್ಗಮಧ್ಯದಲ್ಲಿಯೇ ಪತನವಾಯಿತು. ಪಾಕಿಸ್ತಾನದಲ್ಲಿ ಪ್ರತಿ ವಿಮಾನವೂ 500 ಗಂಟೆಗಳ ಹಾರಾಟ ನಡೆಸಿದ ನಂತರ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮವಿದೆ. ದುರಂತ ಅಂತ್ಯ ಕಂಡ ವಿಮಾನ..

  December 8, 2016
  ...
  indenesia-earthquake-2016
  ಸುದ್ದಿ ಸಾರ

  ಇಂಡೋನೇಷ್ಯಾದ ಸುಮಾತ್ರದಲ್ಲಿ ಪ್ರಬಲ ಭೂಕಂಪ: 7 ಮಕ್ಕಳೂ ಸೇರಿ 97 ಸಾವು

  ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ 97 ಜನ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಕಂಪನಗಳು ಎದ್ದಿರುವುದು ದಾಖಲಾಗಿವೆ. ಸುಮಾತ್ರಾ ದ್ವೀಪದ ಆಚ್ಚೆ ಪ್ರಾಂತ್ಯದಲ್ಲಿ ಸ್ಥಳೀಯ ಕಾಲಮಾನ ಬುಧವಾರ ಮುಂಜಾನೆ 5 ಗಂಟೆಗೆ ಈ ಭೂಕಂಪ ಸಂಭವಿಸಿದೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ, ಬೆಳಗ್ಗಿನ ಪ್ರಾರ್ಥನೆಗೆ ಜನ ಸಿದ್ಧವಾಗುತ್ತಿದ್ದ ಹೊತ್ತಿಗೆ ಈ ದುರಂತ ಘಟಿಸಿದೆ. ಇಲ್ಲಿನ ಸೇನಾ ಮುಖ್ಯಸ್ಥರ ಪ್ರಕಾರ 97 ಜನ ಸಾವಿಗೀಡಾಗಿದ್ದು 78..

  December 8, 2016

Top