An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ದೇಶ

  ‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

  ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂ ಪಕ್ಷದ ಕಾರ್ಯಕರ್ತರ ಪಾಲಿನ ಆರಾಧ್ಯ ದೈವ ಜೆ. ಜಯಲಲಿತಾ ಆರೋಗ್ಯದ ಗಂಭೀರತೆ ಮುಂದುವರಿದೆ. ಸೋಮವಾರ ಮಧ್ಯಾಹ್ನ ತಾನೆ ಚೆನ್ನೈ ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ‘ಪ್ರಕಟಣೆ’ಯಲ್ಲಿ, ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ (ಭಾನುವಾರ) ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇವತ್ತೂ ಆರೋಗ್ಯ ಸ್ಥಿತಿಯಲ್ಲಿ ಗಂಭೀರತೆ ಮುಂದುವರಿದೆ. ಪರಿಣಿತ ತಜ್ಞ ವೈದ್ಯರು ನಿಗಾವಹಿಸಿದ್ದು, ಇಸಿಎಂಓ ಸೇರಿದಂತೆ ತೀವ್ರ ನಿಗಾ ಕ್ರಮಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದೆ. ಜಯಲಲಿತಾ 74 ದಿನಗಳ ಹಿಂದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೋ ಆಸ್ಪತ್ರೆಗೆ ಅನಾರೋಗ್ಯದ..

  December 5, 2016
  ...
  ರಾಜ್ಯ

  ಮಟ್ಟು, ಪೂಜಾರಿ, ಜೈನ್ ಮತ್ತು ‘ಬಿಲ್ಲವ ರಾಜಕಾರಣ’: ಚುನಾವಣಾ ಕಣಕ್ಕೆ ದಿನೇಶ್ ಅಮೀನ್?

  ದಕ್ಷಿಣ ಕನ್ನಡದ ಕಾಂಗ್ರೆಸ್ ಪಡಸಾಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳು ಶುರುವಾಗಿವೆ. ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರ್ಯಾರು ಎಂಬ ಚರ್ಚೆಗಳು ಆರಂಭವಾಗಿದ್ದು, ಮೂಡುಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ ವಲಯದಿಂದ ಅಚ್ಚರಿಯ ರೀತಿಯಲ್ಲಿ ಪತ್ರಕರ್ತರೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರು ಮತ್ಯಾರೂ ಅಲ್ಲ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು. “ಮುಂದಿನ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಸಾಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಇದ್ದಾರೆ,” ಎನ್ನುತ್ತಾರೆ ಮಂಗಳೂರು ಕಾಂಗ್ರೆಸ್ಸಿನ ಹಿರಿಯರೂ ಆದ ಮಾಜಿ ಶಾಸಕರೊಬ್ಬರು. ದಿನೇಶ್ ಆಪ್ತವಲಯದವರೇ ಹೇಳುವ ಪ್ರಕಾರ,..

  December 5, 2016
  ...
  ಸುದ್ದಿ ಸಾರ

  ಅಪೊಲೋದಲ್ಲಿ 74ನೇ ದಿನ: ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಹೃದಯಾಘಾತ

  ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಸಂಜೆ ವೇಳೆಗೆ ಹೃದಯಾಘಾತವಾಗಿದೆ ಎಂದು ಚೆನ್ನೈ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ 73 ದಿನಗಳಿಂದ ಅನಾರೋಗ್ಯದ ಕಾರಣಕ್ಕೆ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ‘ಅಮ್ಮ’ಗೆ ಇದು ಮೂರನೇ ಬಾರಿಗೆ ಆಗುತ್ತಿರುವ ಹೃದಯಾಘಾತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತರು, ಅಮ್ಮ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಬೆಳಗ್ಗೆಯಷ್ಟೆ ಜಯಲಲಿತಾ ಆರೋಗ್ಯ ಸ್ಥಿತಿ ಸುಧಾರಿಸಿದೆ…

  December 5, 2016

FOOT PRINT

Top