An unconventional News Portal.

‘ಮಹೇಶ್ ಶಾ ಪ್ರಕರಣ’: ನಾಪತ್ತೆಯಾಗಿದ್ದ ಗುಜರಾತ್ ಉದ್ಯಮಿ ಟಿವಿ ಸ್ಟುಡಿಯೋದಲ್ಲಿ ಪ್ರತ್ಯಕ್ಷ

‘ಮಹೇಶ್ ಶಾ ಪ್ರಕರಣ’: ನಾಪತ್ತೆಯಾಗಿದ್ದ ಗುಜರಾತ್ ಉದ್ಯಮಿ ಟಿವಿ ಸ್ಟುಡಿಯೋದಲ್ಲಿ ಪ್ರತ್ಯಕ್ಷ

ಆದಾಯ ತೆರಿಗೆ ಘೋಷಣೆ ಯೋಜನೆ ಅಡಿಯಲ್ಲಿ ತೋರಿಸಿದ್ದ 13, 860 ಕೋಟಿ ರೂಪಾಯಿ ನಗದು ಹಣ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸೇರಿದ್ದು ಎಂದು ಗುಜರಾತ್ ಮೂಲದ ಉದ್ಯಮಿ ಮಹೇಶ್ ಶಾ ಬಹಿರಂಗಪಡಿಸಿದ್ದಾನೆ.

ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಹೇಶ್ ಶಾ, ಶನಿವಾರ ಸಂಜೆ ಗುಜರಾತ್ ಈ- ಟಿವಿ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲಿಯೇ ಪ್ರಕರಣದ ಕುರಿತು ಅಸ್ಪಷ್ಟ ಮಾಹಿತಿ ನೀಡಿದ ಆತ, “ಐಟಿ ಅಧಿಕಾರಿಗಳ ಮೇಲೆ ನಂಬಿಕೆ ಇದೆ. ಎಲ್ಲವನ್ನೂ ತಿಳಿಸುತ್ತೇನೆ. ಕಾದು ನೋಡಿ,” ಎಂದಿದ್ದಾನೆ. ನಂತರ ವಾಹಿನಿಯ ಒಳಗಡೆಯೇ ಐಟಿ ಅಧಿಕಾರಿಗಳು ಮತ್ತು ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಗುಜರಾತ್ ಉದ್ಯಮಿ:

ಗುಜರಾತಿನ ಅಹಮದಬಾದ್ ಮೂಲದ ಉದ್ಯಮಿ ಮಹೇಶ್ ಶಾ, ನೋಟು ಬದಲಾವಣೆ ಪ್ರಕ್ರಿಯೆ ಘೋ‍ಷಣೆಯಾಗುತ್ತಿದ್ದಂತೆ ಆದಾಯ ಘೋಷಣೆ ಯೋಜನೆ ಅಡಿಯಲ್ಲಿ, ತನ್ನ ಬಳಿ ಸುಮಾರು 13, 860 ನಗದು ಹಣ ಇರುವುದಾಗಿ ಘೋಷಣೆ ಮಾಡಿದ್ದ. ಸ್ವಯಂಪ್ರೇರಣೆಯಿಂದ ಆದಾಯ ಘೋಷಿಸಿದ ಹಿನ್ನೆಲೆಯಲ್ಲಿ ಆತನಿಗೆ ನ. 30ರೊಳಗೆ ಮೊದಲ ಹಂತದಲ್ಲಿ 975 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಕಟ್ಟುವಂತೆ ಐಟಿ ಇಲಾಖೆ ತಿಳಿಸಿತ್ತು. ಆದರೆ, ಗಡುವು ಮುಗಿದರೂ ಮಹೇಶ್ ಶಾ ಯಾವುದೇ ತೆರಿಗೆ ಕಟ್ಟಿರಲಿಲ್ಲ. ಬದಲಿಗೆ ಆತ ನಾಪತ್ತೆಯಾಗಿದ್ದ. ಐಟಿ ಅಧಿಕಾರಿಗಳು ಆತನ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಆತ ಘೋಷಿಸಿದ ನಗದು ನಗದ ಪ್ರಮಾಣದ ಹಿನ್ನೆಲೆಯಲ್ಲಿ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಟಿವಿ ಮುಂದೆ:

ಶನಿವಾರ ಸಂಜೆ ವೇಳೆಗೆ ಗುಜರಾತ್ ಈ -ಟಿವಿ ಸ್ಟುಡಿಯೋಗೆ ಬಂದ ಮಹೇಶ್ ಶಾ, “ತಾನು ಯಾರೋ ತೋಡಿದ ಗುಂಡಿಯಲ್ಲಿ ಬಿದ್ದಿರುವುದಾಗಿ,” ಅವಲತ್ತುಕೊಂಡ. “ನಾನು ಘೋಷಿಸಿದ ನಗದು ಹಣ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸೇರಿದ್ದು. ಎಲ್ಲರ ಹೆಸರನ್ನೂ ಬಹಿರಂಗ ಪಡಿಸುತ್ತೇನೆ. ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆಯ ಅಗತ್ಯವಿದೆ,” ಎಂದು ಕ್ಯಾಮೆರಾ ಮುಂದೆ ಹೇಳಿಕೊಂಡ. ನಂತರ ಆತನನ್ನು ಅಧಿಕಾರಿಗಳು ಬಂಧಿಸಲಾಯಿತು.

ಮಹೇಶ್ ಶಾ, ನೀಡಿದ ಗಡುವು ಸಮಯದಲ್ಲಿ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಆತ ಘೋಷಿಸಿಕೊಂಡ ಅಷ್ಟೂ ಮೊತ್ತವನ್ನು ‘ಕಪ್ಪು ಹಣ’ ಎಂದು ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿದೆ.

Leave a comment

FOOT PRINT

Top