An unconventional News Portal.

    ...
    ndtv-india-logo
    ಟಿವಿ

    NDTV ಇಂಡಿಯಾ ಸ್ಥಗಿತಕ್ಕೆ ಶಿಫಾರಸು: ಅಸೂಕ್ಷ್ಮ ವರದಿ ಭಿತ್ತರ ಆರೋಪ

    ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ವೇಳೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಸುದ್ದಿಯನ್ನು ಭಿತ್ತರಿಸಿದ ಆರೋಪದ ಮೇಲೆ ಎನ್ ಡಿಟಿವಿ ಸಮೂಹದ ಹಿಂದಿ ಸುದ್ದಿ ವಾಹಿನಿ, ಎನ್ಡಿಟಿವಿ ಇಂಡಿಯಾ ವಿರುದ್ಧ ಕೇಂದ್ರ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಹೀಗಂತ, ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನ. 9ನೇ ತಾರೀಖು ಎನ್ಡಿಟಿವಿ ಇಂಡಿಯಾ ಒಂದು ದಿನ ಮಟ್ಟಿಗೆ ‘ಆನ್..

    November 3, 2016
    ...
    biggest-bust-in-bollywood1-1478171311
    ಸುದ್ದಿ ಸಾರ

    3,000 ಕೋಟಿಯ ಭಾರಿ ಡ್ರಗ್ಸ್ ಜಾಲ ಪತ್ತೆ

    ಭಾರತದ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ವಶ ಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಉದಯಪುರದ ‘ಫಿಝ್ಝಿ ಡ್ರಿಂಕ್ಸ್ ಫ್ಯಾಕ್ಟರ್’ಯಲ್ಲಿ 3,000 ಕೋಟಿ ರೂಪಾಯಿ ಬೆಲೆಯ ನಿಷೇಧಿತ ಮ್ಯಾಂಡ್ರಾಗ್ಸ್ ಡ್ರಗ್ಸ್ ಪತ್ತೆಯಾಗಿರುವುದಾಗಿ ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಕಂಪೆನಿಯ ಫ್ಯಾಕ್ಟರಿಯಲ್ಲಿ 2 ಕೋಟಿ ಮಾತ್ರೆಗಳನ್ನು ಸಿಕ್ಕಿವೆ ಹೇಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಮೂರು ಸಾವಿರ ಕೋಟಿ ರೂಪಾಯಿ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ಸಿನಿಮಾ ನಿರ್ಮಾಪಕ ಸುಭಾಷ್ ದುಧಾನಿಯನ್ನೂ ಬಂಧಿಸಲಾಗಿದೆ. ಇವೆಲ್ಲಾ ದಕ್ಷಿಣ ಆಫ್ರಿಕಾ ಮತ್ತು ಮೊಝಾಂಬಿಕ್’ಗೆ..

    November 3, 2016
    ...
    Rahul arrest
    ದೇಶ

    ‘OROP ಹೈಡ್ರಾಮ’: ಮಾಜಿ ಸೈನಿಕನ ಸಾವಿಗೆ ಕಾರಣ ಯಾರು?

    ದೆಹಲಿಯ ಜನಪಥ್ ನಲ್ಲಿ ಮಾಜಿ ಸೈನಿಕರೊಬ್ಬರು ‘ಏಕ ಶ್ರೇಣಿ ಏಕ ಪಿಂಚಣಿ’ಗಾಗಿ ಆಗ್ರಹಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಂಗಳವಾರ ನಡೆದಿತ್ತು. ಈ ಘಟನೆಯೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೇ ವಿಚಾರವಾಗಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದ ಮೋದಿ ವಿರುದ್ಧ ವಿರೋಧ ಪಕ್ಷಗಳು ಹರಿಹಾಯುತ್ತಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ದೀರ್ಘ ಕಾಲದಿಂದ ‘ಏಕ ಶ್ರೇಣಿ ಏಕ ಪಿಂಚಣಿ’ಗಾಗಿ ಆಗ್ರಹಿಸಿ ಮಾಜಿ ಸೈನಿಕರು ಧರಣಿ ನಡೆಸುತ್ತಿದ್ದರು. ಕೆಲವು ದಿನಗಳ..

    November 3, 2016
    ...
    reddy-helicopter-story-final
    ರಾಜ್ಯ

    ಬಳ್ಳಾರಿ ಬಯಲಲ್ಲಿ ನಿಂತಿದ್ದ ‘ಕಾಕದೃಷ್ಟಿ’ ಹೆಲಿಕಾಪ್ಟರ್ ಮತ್ತು ರೆಡ್ಡಿ ‘ಪುರಪ್ರವೇಶ’ ಪ್ರಸಂಗ!

    2011-12; ರಾಜ್ಯದಲ್ಲಿ ಗಣಿ ಹಗರಣ ಭಾರಿ ಸದ್ದು ಮಾಡುತ್ತಿದ್ದ ಕಾಲ. ಮಾಜಿ ಸಚಿವ, ವಿಜಯನಗರ ಸಾಮ್ರಾಜ್ಯದ ಪುನರುತ್ಥಾನಕ್ಕೆ ಹುಟ್ಟಿ ಬಂದಿರುವುದಾಗಿ ನಂಬಿಕೊಂಡಿದ್ದ ಗಾಲಿ ಜನಾರ್ಧನ ರೆಡ್ಡಿ ಆಂಧ್ರದ ಚಂಚಲಗುಡ ಜೈಲಿನಲ್ಲಿದ್ದರು. ಅವರ ಮೇಲೆ ಭೂಮಿಯಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ತೆಗೆದ, ಸಾಗಣೆ ಮಾಡಿದ ಗುರುತರವಾದ ಆರೋಪಗಳನ್ನು ತನಿಖಾ ಸಂಸ್ಥೆ- ಸಿಬಿಐ ಹೊರಿಸಿತ್ತು. ರೆಡ್ಡಿ ವಿರುದ್ಧ ದಾಖಲಾದ ಪ್ರಕರಣಗಳ ಆರೋಪಿಗಳ ಪಟ್ಟಿಯಲ್ಲಿ ಜನಾರ್ಧನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಹೆಸರಿತ್ತು. ಪತಿಯ ವ್ಯವಹಾರಗಳು ಪತ್ನಿಯ ಹೆಸರಿನಲ್ಲಿ ನಡೆದಿದ್ದು ಇದಕ್ಕೆ..

    November 3, 2016
    ...
    refugees
    ವಿದೇಶ

    ವರ್ಷ 1; ಬಲಿ 3800 ಮನುಷ್ಯರು: ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ‘ಸಾವಿನ ಪರ್ವ’!

    ಮೆಡಿಟೆರೇನಿಯನ್ ಸಮುದ್ರದಲ್ಲಿ ಮನುಷ್ಯರ ಬಲಿಯ ಪರ್ವ ಮುಂದುವರಿದಿದೆ. ಲಿಬಿಯಾ ದೇಶದ ಕರಾವಳಿಯಲ್ಲಿ ಇತ್ತೀಚೆಗೆ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 29 ಜನ ಸಾವನ್ನಪ್ಪಿದ್ದರು. ಈ ಮೂಲಕ, 2016ರ ಆರಂಭದಿಂದ ಈವರೆಗೆ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಸಮಯದಲ್ಲಿ ಜೀವತೆತ್ತ ನಿರಾಶ್ರಿತರ ಸಂಖ್ಯೆ 3800ರ ಗಡಿ ಮುಟ್ಟಿದೆ. ಬುಧವಾರ ಫ್ರೆಂಜ್ ಪರಿಹಾರ ತಂಡ ‘ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್’ (ಎಂಎಸ್ಎಫ್) ನವರು ಲಿಬಿಯಾ ಕರಾವಳಿಯಲ್ಲಿ ಮುಳುಗುತ್ತಿರುವ ನೌಕೆಯಿಂದ 107 ಜನರನ್ನು ರಕ್ಷಿಸಿದ್ದಾರೆ ಇದೇ ಘಟನೆಯಲ್ಲಿ 29 ಜನ ಸಾವಿಗೀಡಾಗಿದ್ದಾರೆ. ಎಂಎಸ್ಎಫ್ ಪ್ರಕಾರ ಲಿಬಿಯಾದಿಂದ 26..

    November 2, 2016
    ...
    modi and T S Thakur
    ದೇಶ

    ‘ನ್ಯಾಯಾಂಗ ನೇಮಕಾತಿಯಲ್ಲಿ RSS ಹಸ್ತಕ್ಷೇಪ’: ನ್ಯಾ. ಠಾಕೂರ್ ನಿವೃತ್ತಿಯ ನಿರೀಕ್ಷೆಯಲ್ಲಿ ‘ಮೋದಿ ಸರಕಾರ’!

    “ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ತೀರಥ್ ಸಿಂಗ್ ಠಾಕೂರ್ ನಿವೃತ್ತಿಗಾಗಿ ಕೇಂದ್ರ ಸರಕಾರ ಕಾಯುತ್ತಿದೆ.” – ಹೀಗಂತ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂಬ ಸಿಜೆ ಆರೋಪಕ್ಕೆ ಸಂಬಂಧಪಟ್ಟಂತೆ ‘ಸಮಾಚಾರ’ದ ಜತೆ ಮಾತನಾಡಿದ ಅವರು ಕೇಂದ್ರ ಸರಕಾರದ ಮೇಲೆ ಈ ಆರೋಪ ಹೊರಿಸಿದ್ದಾರೆ. ಬಿ. ಟಿ. ವೆಂಕಟೇಶ್ ಕರ್ನಾಟಕದ ಹೈ ಕೋರ್ಟ್ನ ಹಿರಿಯ ವಕೀಲರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಸುಪ್ರಿಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಿಗೆ..

    November 2, 2016
    ...
    skdrdp-feature-photo
    ರಾಜ್ಯ

    ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ!

    ಭಾಗ: 1 ಆಕೆಯ ಹೆಸರು ಲತಾ; ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಅಳಗುಂಡಿಯಲ್ಲಿ ಇವರದ್ದೊಂದು ಸಣ್ಣ ಮಣ್ಣಿನ ಇಟ್ಟಿಗೆಯ ಮನೆ. ದಲಿತರಾದ ಇವರಿಗೆ ಕೂಲಿ ಕೆಲಸ ಬಿಟ್ಟು ಬೇರೆ ಜೀವನಾಧಾರವಿಲ್ಲ. ದೈನಂದಿನ ಬದುಕಿನ ಅಗತ್ಯಗಳಿಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಆಕೆ ಎಸ್.ಕೆ.ಡಿ.ಆರ್.ಡಿ.ಪಿ (ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಸರಕಾರೇತರ ಸಂಸ್ಥೆ) ನಡೆಸುವ ಸ್ವಸಹಾಯ ಸಂಘ ಸೇರಿದರು. ಯಾವುದೋ ಸಂದರ್ಭ, ಹಣ ತುರ್ತಾಗಿ ಬೇಕಾಗಿತ್ತು. ಲತಾ ನೇರವಾಗಿ ಸ್ವಸಹಾಯ ಸಂಘದಿಂದ 25 ಸಾವಿರ ರೂಪಾಯಿ..

    November 2, 2016
    ...
    Prison
    PRISON STORIES

    ಕಂಬಿ ಹಿಂದಿನ ಕತೆ- 3: ಗುಂಡಿಸಿದ್ದನ ಮೇಲೆ ಸಮಾಜ ಹೊರಿಸಿದ ಆರೋಪಕ್ಕೆ ಜೈಲಿನ ಗೋಡೆಗಳ ನಡುವೆ ನ್ಯಾಯ ಸಿಕ್ತು!

    ಸಮಾಜದ ಕುರುಡು ನಂಬಿಕೆಗಳು, ಸಣ್ಣತನಗಳು ವ್ಯಕ್ತಿಯೊಬ್ಬನನ್ನು ಅನ್ಯಾಯವಾಗಿ 5 ವರ್ಷ ಜೈಲಿಗೆ ತಳ್ಳಿದ ದುರಂತ ಕತೆ ಇದು. ಇಲ್ಲಿ ಸಮಾಜ, ಪೊಲೀಸ್, ನ್ಯಾಯಾಂಗ ನಾವು ನೀವು ಎಲ್ಲರೂ ಪಾಲುದಾರರೇ. ಸೋತಿದ್ದು ಮಾತ್ರ ಈ ಮುಗ್ದ ಮನುಷ್ಯ ಗುಂಡಿಸಿದ್ದ; ಇದು ಕಂಬಿನ ಹಿಂದಿನ ಕತೆಯ ಮೂರನೇ ಕಂತು. ಆತನ ಊರು ತುಮಕೂರು. ಆತನನ್ನು ಎಲ್ಲರೂ ಗುಂಡಿಸಿದ್ಧ (ಬದಲಾಯಿಸಲಾಗಿದೆ) ಎಂದು ಕರೆಯುತ್ತಿದ್ದರು. ಹೆಸರಿನ ಜೊತೆಗೆ ಗುಂಡಿ ಅಂಟಿಕೊಂಡಿದ್ದಕ್ಕೂ ಕಾರಣ ಉಂಟು. ಆತ ಮುಗ್ಧನಾಗಿದ್ದ; ಮುಗ್ಧ ಅಂದರೆ ಮುಗ್ಧ. ಬಡಕೃಷಿಕ; ಮದುವೆಯಾಗಿತ್ತು…

    November 2, 2016
    ...
    Arnab_G
    ಟಿವಿ

    Update: ಜೈನ್ ಮಾಲೀಕರ ‘ಚಿನ್ನದ ಮೊಟ್ಟೆ ಕೋಳಿ’; ಅರ್ನಾಬ್ ‘IS BACK’!

    ಭಾರತದ ವಿದ್ಯುನ್ಮಾನ ಮಾಧ್ಯಮದ ಚಹರೆಯನ್ನು ಕಳೆದ ಒಂದು ದಶಕಗಳ ಕಾಲ ತನಗೆ ಬೇಕಾದಂತೆ ಬದಲಿಸಿಕೊಂಡಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ‘ನ್ಯೂಸ್ ಅವರ್’ ಸ್ಟುಡಿಯೋದಿಂದ ಹೊರ ಬಂದಿದ್ದಾರೆ. ಕ್ಷಮಿಸಿ, ‘ಟೈಮ್ಸ್ ನೌ’ ವಾಹಿನಿಯ ಸಂಪಾದಕ ಸ್ಥಾನದಿಂದ ಮಾತ್ರ. ಬದಲಿಗೆ ಅವರು ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಅರ್ನಾಬ್ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂದರ್ಶನದ ಮೊದಲ ಅತಿಥಿ ಮರಳಿ ಸ್ವಾಗತ ಕೋರಿಯೇ ಮಾತನ್ನು ಶುರು ಮಾಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ‘ಜೈಲ್..

    November 1, 2016
    ...
    shivraj-singh-chaouhan-bhopal-encounter-copy
    ರಾಜ್ಯ

    ‘ಸಿಮಿ ಕಾರ್ಯಕರ್ತರ ಎನ್ಕೌಂಟರ್’: ಒಂದು ವೀಡಿಯೋ.. ಹಲವು ಪ್ರಶ್ನೆಗಳು!

    ಸೋಮವಾರ ಮಧ್ಯಪ್ರದೇಶದ ಭೋಪಾಲ್ ಜೈಲಿನ ಗೋಡೆ ಹಾರಿ ನಾಪತ್ತೆಯಾದ ಶಂಕಿತ ಸಿಮಿ (ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ) ಕಾರ್ಯಕರ್ತರನ್ನು ಕೇವಲ 9 ಗಂಟೆಗಳ ಅಂತರದಲ್ಲಿ ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿತ್ತು. ಇದೀಗ ಎನ್ಕೌಂಟರಿನ ವೀಡಿಯೋ ಒಂದು ಹರಿದಾಡುತ್ತಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಎನ್ಕೌಂಟರ್ ನಕಲಿಯೋ ಅಸಲಿಯೋ ಅಂತ ಹಲವು ಇಂಗ್ಲೀಷ್ ಮಾಧ್ಯಮಗಳು ವಿಶ್ಲೇಷಣೆಗೆ ಇಳಿದಿವೆ. ಒಂದಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಅವುಗಳ ಸಂಕ್ಷಿಪ್ತ ರೂಪ ಇಲ್ಲಿದೆ. ಘಟನೆ ಕುರಿತು ‘ದಿ ಕ್ವಿಂಟ್’ ಮೇಲಿಂದ ಮೇಲೆ..

    November 1, 2016

Top