An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ವಿದೇಶ

  ‘ಬೆಟ್ಟದ ನೆಲ್ಲಿ- ಸಮುದ್ರದ ಉಪ್ಪು’: ಭಾರತ- ಕ್ಯೂಬಾ ನಡುವೆ ಎತ್ತಣದಿಂದೆತ್ತ ಸಂಬಂಧವಯ್ಯಾ?

  ಎಲ್ಲಿಯ ಕ್ಯೂಬಾ ಎಲ್ಲಿಯ ಭಾರತ; ಇಬ್ಬರ ನಡುವೆ ಚಾಚಿಕೊಂಡ 14,000 ಕಿಲೋಮೀಟರುಗಳ ಮಹಾ ಸಾಗರ. ಆದರೆ ‘ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ’ ನಡುವೆ ಸಂಬಂಧ ಬೆಸೆಯುವಂತೆ ಕ್ಯೂಬಾ ಭಾರತದ ಸಂಬಂಧ ಮೊಳಕೆಯೊಡೆದಿತ್ತು. ಅದಕ್ಕೆ ಕಾರಣ ಜಗತ್ತು ಕಂಡ ದಂತಕಥೆ- ಫಿಡೆಲ್ ಕ್ಯಾಸ್ಟ್ರೋ. ಕ್ಯೂಬಾ ಪಾಲಿಗೆ ಭಾರತ ಯಾವತ್ತಿಗೂ ಆಪತ್ಭಾಂಧವ; ತಿನ್ನಲು ಅನ್ನವಿಲ್ಲದ ಹೊತ್ತಲ್ಲಿ ಗೋಧಿ, ಅಕ್ಕಿ ರಫ್ತು ಮಾಡಿದ ದೇಶ; ಫಿಡೆಲ್ ರನ್ನು ಕೇಳುವವರಿಲ್ಲದ ಹೊತ್ತಲ್ಲಿ ಗುರುತಿಸಿ ಧೈರ್ಯ ತುಂಬಿದವರು ಜವಹರ್ಲಾಲ್ ನೆಹರೂ. ಭಾರತ ಮಾಡಿದ ಮಹದುಪಕಾರಗಳನ್ನು..

  November 27, 2016
  ...
  ವಿದೇಶ

  ಕ್ಯೂಬಾ ಕ್ರಾಂತಿಯ ದೃವತಾರೆ- ಫಿಡಲ್ ಕ್ಯಾಸ್ಟ್ರೋ ಇನ್ನಿಲ್ಲ…

  ಕ್ಯೂಬಾ ಗಡಿಯಾರದ ಮುಳ್ಳು ಸ್ಥಬ್ಧವಾಗಿದೆ. ಕಮ್ಯೂನಿಸ್ಟ್ ಚಿಂತನೆಗಳ ತಳಪಾಯದ ಮೇಲೆ ಸ್ವಾಭಿಮಾನದ ಕ್ಯೂಬಾವನ್ನು ಕಟ್ಟಿ ನಿಲ್ಲಿಸಿದ್ದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಸ್ತಂಗತರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾರತೀಯ ಕಾಲಮಾನ ಶನಿವಾರ ಇಹಲೋಕ ತ್ಯಜಿಸಿದ್ದು, ಜಗತ್ತಿನಾದ್ಯಂತ ಹರಡಿಕೊಂಡಿರುವ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇದೇ ವರ್ಷದ ಏಪ್ರಿಲ್ 20 ರಂದು ತಮ್ಮ ಕೊನೆಯ ವಿದಾಯ ಭಾಷಣ ಮಾಡಿದ್ದ ಫಿಡೆಲ್ ಕ್ಯಾಸ್ಟ್ರೋ, ‘ಕೊನೆಗಾಲ ಸಮೀಪಿಸುತ್ತಿದೆ’ ಎಂದಿದ್ದರು. ಅದು ಶನಿವಾರ ನಿಜವಾಗಿದೆ. ಅವರು ಸ್ಥಳೀಯ ಶುಕ್ರವಾರ ಸಂಜೆ 6. 49ಕ್ಕೆ..

  November 26, 2016
  ...
  ರಾಜ್ಯ

  ‘ಹೆಣ್ಣು- ಹೊನ್ನು- ಮಣ್ಣು’: DK ರವಿ ಸಾವಿನ ಕುರಿತು CBI ನೀಡಿದ ವರದಿಯ ಕಂಪ್ಲೀಟ್ ಡೀಟೆಲ್ಸ್

  ಇದು ಯಾವ ಸಿನೆಮಾಗೂ ಕಡಿಮೆ ಇಲ್ಲದ ಕತೆ. ಇದರಲ್ಲಿ ಒಬ್ಬ ನಾಯಕನಿದ್ದಾನೆ. ಆತ ತುಮಕೂರು ಜಿಲ್ಲೆಯ ದೊಡ್ಡಕೊಪ್ಪಲು ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬವೊಂದರಲ್ಲಿ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಾಗುತ್ತಾನೆ. ಆತನಿಗೆ  ಸ್ವಜಾತಿಯ ಸ್ಥಿತಿವಂತ ಕುಟುಂಬವೊಂದು ಹುಡುಕಿಕೊಂಡು ಹೋಗಿ ಹೆಣ್ಣು ಕೊಡುತ್ತದೆ; ಸಂಸಾರವೂ ಶುರುವಾಗುತ್ತದೆ. ಆದರೆ ಅದರಲ್ಲಿ ಸತ್ವ ಇರುವುದಿಲ್ಲ. ಆತನಿಗೊಬ್ಬಳು ಪ್ರೇಯಸಿ ಇರುತ್ತಾಳೆ. ಮಧ್ಯದಲ್ಲಿ ಮಸಾಜ್ ಪಾರ್ಲರ್ ಹೆಣ್ಣೊಬ್ಬಳ ಪ್ರವೇಶವಾಗುತ್ತದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಆತ 500 ಕೋಟಿಯ ಕಂಪನಿಯೊಂದನ್ನು ಕಟ್ಟುವ ಕನಸು ಕಾಣುತ್ತಾನೆ. ಅದಕ್ಕಾಗಿ ರಿಯಲ್..

  November 26, 2016
  ...
  ದೇಶ

  ಅತ್ತೆ ಕಾಲವನ್ನು ಬಣ್ಣಿಸಿದ ಸೊಸೆ: ಭಾರತದ ‘ಉಕ್ಕಿನ ಮಹಿಳೆ’ ಬಗ್ಗೆ ಸೋನಿಯಾ ಏನಂದರು?

  ದೇಶದ ಕಂಡ ಖಡಕ್ ರಾಜಕಾರಣಿ, ಉಕ್ಕಿನ ಮಹಿಳೆ, ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ವ್ಯಾಪಕ ಟೀಕೆಗೆ ಗುರಿಯಾದ ರಾಜಕಾರಣಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಅವರನ್ನು ಹತ್ತಿರದಿಂದ ಬಲ್ಲ ಕಾಂಗ್ರೆಸ್ ಅಧ್ಯಕ್ಷೆ, ಸೊಸೆ ಸೋನಿಯಾ ಗಾಂಧಿ ಅವರ ಸಂದರ್ಶನವನ್ನು ‘ಇಂಡಿಯಾ ಟುಡೆ’ ಭಿತ್ತರಿಸಿದೆ. ಪತ್ರಕರ್ತ ರಾಜ್ದೀಪ್ ಸರ್ ದೇಸಾಯಿ ನಡೆಸಿದ ಸಂದರ್ಶನ ಆಯ್ದ ಭಾಗಗಳನ್ನು ‘ಸಮಾಚಾರ’ ಇಲ್ಲಿ ಕನ್ನಡಕ್ಕೆ ತಂದಿದೆ.  ಇಂದಿರಾ ಗಾಂಧಿ ವ್ಯಕ್ತಿತ್ವ, ಅವರ ಸಾವಿನ ಕ್ಷಣ, 1971ರ..

  November 25, 2016
  ...
  ಟಿವಿ

  ಬ್ಯಾಂಡ್ ಬಾಜಾ ಬಾರ್ಕ್ ರೇಟಿಂಗ್: ಟಿವಿ9, ವಿ6, ಇಂಡಿಯಾ ನ್ಯೂಸ್ ವಾಹಿನಿಗಳ ಮೇಲೆ ಗುರುತರ ಆರೋಪ

  ಪ್ರಾದೇಶಿಕ ಭಾಷೆಯ ಸುದ್ದಿ ವಾಹಿನಿಗಳ ಮೇಲೆ ವೀಕ್ಷಕರನ್ನು ಅಳೆಯುವ ಏಜೆನ್ಸಿ ಬಾರ್ಕ್ ತನಿಖೆ ಆರಂಭಿಸಿದೆ. ತೆಲುಗಿನ ಎರಡು ಜನಪ್ರಿಯ ವಾಹಿನಿಗಳಾದ ‘ಟಿವಿ9’ ಮತ್ತು ‘ವಿ6’ ಹಾಗೂ ಹಿಂದಿ ಭಾ‍ಷೆಯಲ್ಲಿ ಸುದ್ದಿಯನ್ನು ಭಿತ್ತರಿಸುತ್ತಿರುವ ‘ಇಂಡಿಯಾ ನ್ಯೂಸ್’ ಮೇಲೆ ಗುರುತರ ಆರೋಪ ಕೇಳಿಬಂದಿದೆ. ಟಿವಿಗಳ ರೇಟಿಂಗ್ ನೀಡುವ ‘ಬಾರ್ಕ್ ಇಂಡಿಯಾ’ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ – BARC) ರೇಟಿಂಗನ್ನು ತಿರುಚಲು ‘ದುರುದ್ದೇಶ ಪೂರಿತ ಚಟುವಟಿಕೆಯಲ್ಲಿ’ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ದೂರುಗಳು ಕೇಳಿಬಂದಿದ್ದವು. ಈಗಾಗಲೇ ತನಿಖೆ ಜಾರಿಯಲ್ಲಿದ್ದು ನಾಲ್ಕು ವಾರಗಳ ಕಾಲ ಮೂರೂ ಚಾನಲ್ಲುಗಳನ್ನು ಆಳತೆಯ..

  November 25, 2016
  ...
  ದೇಶ

  ಭಾರತದಲ್ಲಿ ಆಸ್ತಿ ಹಂಚಿಕೆಯ ‘ರಿಪೋರ್ಟ್ ಕಾರ್ಡ್’: ಶ್ರಿಮಂತರಿಗೇ ಎಲ್ಲಾ, ಬಡವರ ಕೈಯಲ್ಲಿ ಏನೂ ಇಲ್ಲ!

  ದೇಶದಲ್ಲಿರುವ ಶೇಕಡಾ 1ರಷ್ಟು ಶ್ರೀಮಂತರ ಕೈಯಲ್ಲಿ ದೇಶದ ಶೇಕಡಾ 58.4 ಆಸ್ತಿ ಇದೆ! ಬಡವರು ಮತ್ತು ಶ್ರೀಮಂತರ ನಡುವಿನ ಕಂದಕದ ಅಗಾಧತೆ ವಿವರಿಸಲು ಇಷ್ಟು ಸಾಕು. ಈ ಅಂತರ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಇದೆ. 2014ರಲ್ಲಿ ಇದೇ ಶೇಕಡಾ 1 ಶ್ರೀಮಂತರ ಕೈಯಲ್ಲಿ ಶೇ. 49 ಆಸ್ತಿ ಇತ್ತು; 2015ರ ಹೊತ್ತಿಗೆ ಶೇಕಡಾ 53 ತಲುಪಿದ ಈ ಆಸ್ತಿಗಳ ಬೆಳವಣಿಗೆ ಇದೀಗ 2016ರ ಹೊತ್ತಿಗೆ, ಶೇಕಡಾ 58.4ಕ್ಕೆ ವಿಸ್ತರಣೆಯಾಗಿದೆ. ಸ್ವಿಡ್ಜರ್ಲಾಂಡ್ನ ಜೂರಿಚ್ನಲ್ಲಿರುವ ‘ಕ್ರೆಡಿಟ್ ವೆಲ್ತ್ ಸುಸ್ಸೆ ಗ್ರೂಪ್ ಎಜಿ’..

  November 25, 2016
  ...
  ದೇಶ

  ‘ಅನಾಣ್ಯೀಕರಣದ ಚರ್ಚೆ’: ಇವತ್ತೂ ಮೌನ ಮುರಿಯದ ಮೋದಿ; ‘ಮೌನಿ ಮಾತಿಗೆ’ ಮರುಳಾದ ಸಂಸತ್!

  ನಿರೀಕ್ಷೆಯಂತೆಯೇ, ಗುರುವಾರವೂ ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶದಲ್ಲಿ ನೋಟು ಬದಲಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ನಡೆದಿದ್ದಾರೆ. ಕಳೆದ ಐದು ದಿನಗಳಿಂದ ದೇಶದಲ್ಲಿ ಎದ್ದಿರುವ ನೋಟು ಬದಲಾವಣೆ ಹಾಹಾಕಾರದ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಬಂದಿದ್ದವು. ಇದೊಂದು ಕಾರಣಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಧಿವೇಶನ ಸಾಂಗವಾಗಿ ನಡೆಯದೆ ಮುಂದೂಡಲ್ಪಡುತ್ತಲೇ ಬಂದಿತ್ತು. ಕೊನೆಗೆ, ಗುರುವಾರ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತ್ತು. ಗುರುವಾರ ಬೆಳಗ್ಗೆ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ..

  November 24, 2016
  ...
  ದೇಶ

  ‘ಸ್ಮಾರ್ಟ್ ಫೋನ್’ ಸಮೀಕ್ಷೆಗೆ ವ್ಯಾಪಕ ಬೆಂಬಲ; ಪ್ರಶ್ನೆಗಳಿಗಿಲ್ಲ ‘ನೈತಿಕ’ ಬಲ

  ಸಂಸತ್ತಿನಲ್ಲಿ ನಾಪತ್ತೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಅನಾಣ್ಯೀಕರಣ ಘೋಷಣೆ ಮಾಡಿದ 15 ದಿನಗಳ ನಂತರ ಜನಾಭಿಪ್ರಾಯ ಪಡೆಯಲು ಆ್ಯಪ್ ಮೊರೆ ಹೋಗಿದ್ದರು. ಆ್ಯಪಿನಲ್ಲಿ ನಡೆಸಿದ ಅನಾಣ್ಯೀಕರಣ ಕುರಿತ ಸಮೀಕ್ಷೆಯಲ್ಲಿ ಪ್ರಧಾನಿ ನಡೆಯನ್ನು ಜನರು ವ್ಯಾಪಕವಾಗಿ ಬೆಂಬಲಿಸಿದ್ದಾರೆ. ಆದರೆ ‘ಸಮೀಕ್ಷೆಯ ವಿನ್ಯಾಸ’ದ ಕುರಿತು ಗಂಭೀರ ಪ್ರಶ್ನೆಗಳನ್ನು ವಿರೋಧ ಪಕ್ಷಗಳು ಮತ್ತು ತಜ್ಞರು ಎತ್ತಿದ್ದಾರೆ. ‘ಎನ್ಎಮ್ (ನಮೋ) ಆ್ಯಪ್’ ನಲ್ಲಿ ಜನರು ಪ್ರಧಾನ ಮಂತ್ರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಅನಾಣ್ಯೀಕರಣವನ್ನು ಮುಕ್ತ ಮನಸ್ಸಿನಿಂದ ಹೊಗಳಿದ್ದಾರೆ. ಮೋದಿ ಕೇಳಿದ 10 ಪ್ರಶ್ನೆಗಳಿಗೆ..

  November 24, 2016
  ...
  ದೇಶ

  ನಾಪತ್ತೆಯಾಗಿದ್ದ ಪ್ರಧಾನಿ ಲೋಕಸಭೆಯಲ್ಲಿ ಪ್ರತ್ಯಕ್ಷ: ಅನಾಣ್ಯೀಕರಣ ವಿರೋಧಿಸಿ 28ಕ್ಕೆ ‘ಭಾರತ್ ಬಂದ್’

  ಅನಾಣ್ಯೀಕರಣದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದರಿಂದ ಉಭಯ ಸದನಗಳ ಕಲಾಪ ಆರನೇ ದಿನವೂ ಚರ್ಚೆಯಿಲ್ಲದೆ ಮುಂದೂಡಲ್ಪಟ್ಟಿದೆ. ಆದರೆ ಸರಕಾರದ ಮುಖ್ಯಸ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಮಾತನಾಡುತ್ತಿಲ್ಲ. ಆ್ಯಪ್ ನಲ್ಲೇ ಜನರಿಗೆ ದರ್ಶನ ಕೊಡಲು ಮುಂದಾಗಿದ್ದ ಪ್ರಧಾನಿ ಬುಧವಾರ ಲೋಕ ಸಭೆಯಲ್ಲಿ ಪ್ರತ್ಯಕ್ಷರಾದರೂ ಬಾಯಿ ಬಿಡಲಿಲ್ಲ. ಇದೀಗ ಪ್ರಧಾನಿ ಪ್ರತಿಕ್ರಿಯೆಗೆ ಆಗ್ರಹಿಸಿ ವಿರೋಧ ಪಕ್ಷಗಳು 28ನೇ ತಾರೀಕು ‘ಭಾರತ್ ಬಂದ್’ಗೆ ಕರೆ ನೀಡಿವೆ. ನವೆಂಬರ್ 8ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಅನಾಣ್ಯೀಕರಣಕ್ಕೆ ವಿರೋಧ ಪಕ್ಷಗಳಿಂದ..

  November 24, 2016

FOOT PRINT

Top