An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ವಿದೇಶ

  ವರ್ಷ 1; ಬಲಿ 3800 ಮನುಷ್ಯರು: ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ‘ಸಾವಿನ ಪರ್ವ’!

  ಮೆಡಿಟೆರೇನಿಯನ್ ಸಮುದ್ರದಲ್ಲಿ ಮನುಷ್ಯರ ಬಲಿಯ ಪರ್ವ ಮುಂದುವರಿದಿದೆ. ಲಿಬಿಯಾ ದೇಶದ ಕರಾವಳಿಯಲ್ಲಿ ಇತ್ತೀಚೆಗೆ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 29 ಜನ ಸಾವನ್ನಪ್ಪಿದ್ದರು. ಈ ಮೂಲಕ, 2016ರ ಆರಂಭದಿಂದ ಈವರೆಗೆ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಸಮಯದಲ್ಲಿ ಜೀವತೆತ್ತ ನಿರಾಶ್ರಿತರ ಸಂಖ್ಯೆ 3800ರ ಗಡಿ ಮುಟ್ಟಿದೆ. ಬುಧವಾರ ಫ್ರೆಂಜ್ ಪರಿಹಾರ ತಂಡ ‘ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್’ (ಎಂಎಸ್ಎಫ್) ನವರು ಲಿಬಿಯಾ ಕರಾವಳಿಯಲ್ಲಿ ಮುಳುಗುತ್ತಿರುವ ನೌಕೆಯಿಂದ 107 ಜನರನ್ನು ರಕ್ಷಿಸಿದ್ದಾರೆ ಇದೇ ಘಟನೆಯಲ್ಲಿ 29 ಜನ ಸಾವಿಗೀಡಾಗಿದ್ದಾರೆ. ಎಂಎಸ್ಎಫ್ ಪ್ರಕಾರ ಲಿಬಿಯಾದಿಂದ 26..

  November 2, 2016
  ...
  ದೇಶ

  ‘ನ್ಯಾಯಾಂಗ ನೇಮಕಾತಿಯಲ್ಲಿ RSS ಹಸ್ತಕ್ಷೇಪ’: ನ್ಯಾ. ಠಾಕೂರ್ ನಿವೃತ್ತಿಯ ನಿರೀಕ್ಷೆಯಲ್ಲಿ ‘ಮೋದಿ ಸರಕಾರ’!

  “ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ತೀರಥ್ ಸಿಂಗ್ ಠಾಕೂರ್ ನಿವೃತ್ತಿಗಾಗಿ ಕೇಂದ್ರ ಸರಕಾರ ಕಾಯುತ್ತಿದೆ.” – ಹೀಗಂತ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂಬ ಸಿಜೆ ಆರೋಪಕ್ಕೆ ಸಂಬಂಧಪಟ್ಟಂತೆ ‘ಸಮಾಚಾರ’ದ ಜತೆ ಮಾತನಾಡಿದ ಅವರು ಕೇಂದ್ರ ಸರಕಾರದ ಮೇಲೆ ಈ ಆರೋಪ ಹೊರಿಸಿದ್ದಾರೆ. ಬಿ. ಟಿ. ವೆಂಕಟೇಶ್ ಕರ್ನಾಟಕದ ಹೈ ಕೋರ್ಟ್ನ ಹಿರಿಯ ವಕೀಲರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಸುಪ್ರಿಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಿಗೆ..

  November 2, 2016
  ...
  ರಾಜ್ಯ

  ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ!

  ಭಾಗ: 1 ಆಕೆಯ ಹೆಸರು ಲತಾ; ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಅಳಗುಂಡಿಯಲ್ಲಿ ಇವರದ್ದೊಂದು ಸಣ್ಣ ಮಣ್ಣಿನ ಇಟ್ಟಿಗೆಯ ಮನೆ. ದಲಿತರಾದ ಇವರಿಗೆ ಕೂಲಿ ಕೆಲಸ ಬಿಟ್ಟು ಬೇರೆ ಜೀವನಾಧಾರವಿಲ್ಲ. ದೈನಂದಿನ ಬದುಕಿನ ಅಗತ್ಯಗಳಿಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಆಕೆ ಎಸ್.ಕೆ.ಡಿ.ಆರ್.ಡಿ.ಪಿ (ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಸರಕಾರೇತರ ಸಂಸ್ಥೆ) ನಡೆಸುವ ಸ್ವಸಹಾಯ ಸಂಘ ಸೇರಿದರು. ಯಾವುದೋ ಸಂದರ್ಭ, ಹಣ ತುರ್ತಾಗಿ ಬೇಕಾಗಿತ್ತು. ಲತಾ ನೇರವಾಗಿ ಸ್ವಸಹಾಯ ಸಂಘದಿಂದ 25 ಸಾವಿರ ರೂಪಾಯಿ..

  November 2, 2016
  ...
  PRISON STORIES

  ಕಂಬಿ ಹಿಂದಿನ ಕತೆ- 3: ಗುಂಡಿಸಿದ್ದನ ಮೇಲೆ ಸಮಾಜ ಹೊರಿಸಿದ ಆರೋಪಕ್ಕೆ ಜೈಲಿನ ಗೋಡೆಗಳ ನಡುವೆ ನ್ಯಾಯ ಸಿಕ್ತು!

  ಸಮಾಜದ ಕುರುಡು ನಂಬಿಕೆಗಳು, ಸಣ್ಣತನಗಳು ವ್ಯಕ್ತಿಯೊಬ್ಬನನ್ನು ಅನ್ಯಾಯವಾಗಿ 5 ವರ್ಷ ಜೈಲಿಗೆ ತಳ್ಳಿದ ದುರಂತ ಕತೆ ಇದು. ಇಲ್ಲಿ ಸಮಾಜ, ಪೊಲೀಸ್, ನ್ಯಾಯಾಂಗ ನಾವು ನೀವು ಎಲ್ಲರೂ ಪಾಲುದಾರರೇ. ಸೋತಿದ್ದು ಮಾತ್ರ ಈ ಮುಗ್ದ ಮನುಷ್ಯ ಗುಂಡಿಸಿದ್ದ; ಇದು ಕಂಬಿನ ಹಿಂದಿನ ಕತೆಯ ಮೂರನೇ ಕಂತು. ಆತನ ಊರು ತುಮಕೂರು. ಆತನನ್ನು ಎಲ್ಲರೂ ಗುಂಡಿಸಿದ್ಧ (ಬದಲಾಯಿಸಲಾಗಿದೆ) ಎಂದು ಕರೆಯುತ್ತಿದ್ದರು. ಹೆಸರಿನ ಜೊತೆಗೆ ಗುಂಡಿ ಅಂಟಿಕೊಂಡಿದ್ದಕ್ಕೂ ಕಾರಣ ಉಂಟು. ಆತ ಮುಗ್ಧನಾಗಿದ್ದ; ಮುಗ್ಧ ಅಂದರೆ ಮುಗ್ಧ. ಬಡಕೃಷಿಕ; ಮದುವೆಯಾಗಿತ್ತು…

  November 2, 2016

FOOT PRINT

Top