An unconventional News Portal.

  ...

  ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹ: ಮಹಿಳೆಯರ ಭಾರಿ ಪ್ರತಿಭಟನೆ

  ‘ಗಾಂಧಿ ಜಯಂತಿ’ ಹಿನ್ನೆಲೆಯಲ್ಲಿ ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಗೆ ಭಾನುವಾರ ರಾಯಚೂರು ಜಿಲ್ಲಾ ಕೇಂದ್ರ ಸಾಕ್ಷಿಯಾಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ, ಜಿಲ್ಲೆಯ ನಾನಾ ಹಳ್ಳಿಗಳಿಂದ ಆಗಮಿಸಿದ ಮಹಿಳೆಯರು, ರಾಜ್ಯದಲ್ಲಿ ಮದ್ಯ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. ‘ಮದ್ಯಪಾನ ನಿಷೇಧ ಆಂದೋಲನ- ಕರ್ನಾಟಕ’ ನೇತೃತ್ವದಲ್ಲಿ ಸುಮಾರು 27 ಸಹಭಾಗಿ ಸಂಘಟನೆಗಳು ಈ ಪ್ರತಿಬಟನೆಯನ್ನು ಆಯೋಜಿಸಿದ್ದವು. ಮುಂಜಾನೆಯಿಂದಲೇ ರಾಯಚೂರಿನ ಎಪಿಎಂಸಿ ಮಾರುಕಟ್ಟೆಗೆ ಆಗಮಿಸತೊಡಗಿದ ಮಹಿಳೆಯರು, ‘ನಮಗೆ ಭೂಮಿ […]

  October 2, 2016
  ...

  ನನಗೇಕೆ ಗಾಂಧಿ ಪದೇ ಪದೇ ನೆನಪಾಗುತ್ತಾರೆ?: ಎಸ್. ಆರ್. ಹಿರೇಮಠ್

  ಕರ್ನಾಟಕದ ಸಾಮಾಜಿಕ ಚಳವಳಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಎಸ್. ಆರ್. ಹಿರೇಮಠ್. ಕಳೆದ ಮೂರೂವರೆ ದಶಕಗಳಲ್ಲಿ ಅವರು ತೊಡಗಿಸಿಕೊಂಡ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಹೋರಾಟಗಳು ಇವತ್ತಿಗೂ ಉತ್ತರ ಕರ್ನಾಟಕದ ತಳಮಟ್ಟದ ಹಳ್ಳಿಗಳಲ್ಲಿ ಕಾಣಸಿಗುತ್ತವೆ. ಗಣಿಗಾರಿಕೆ ವಿರುದ್ಧ ಜನಾಂದೋಲದ ಜತೆಗೆ ಕಾನೂನು ಹೋರಾಟದ ಮೂಲಕ ಹಿರೇಮಠ್ ಹೆಸರು ಚಿರಪರಿಚಿತ. ಅಮೆರಿಕಾರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಅವರು ಅದನ್ನು ಬಿಟ್ಟು ಭಾರತಕ್ಕೆ ಬಂದಿದ್ದು 70ರ ದಶಕದ ಅಂತ್ಯದಲ್ಲಿ. ಅವತ್ತಿಗೂ, ಇವತ್ತಿಗೂ ಗಾಂಧಿ ಮತ್ತುವರ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿದ ಮತ್ತು ಕೃತಿಯಲ್ಲೂ ಅನುಸರಿಸಿಕೊಂಡು […]

  October 2, 2016
  ...

  ‘ಸುಪ್ರಿಂ ಕೋರ್ಟ್ v/s ಕರ್ನಾಟಕ’: ಸಾಂವಿಧಾನಿಕ ಬಿಕ್ಕಟ್ಟಿನತ್ತ ಕಾವೇರಿ ನೀರು ಹಂಚಿಕೆ ವಿವಾದ!

  ಪಕ್ಷಭೇದವನ್ನು ಮರೆತ ರಾಜಕೀಯ ಪಕ್ಷಗಳು, ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸದಿರಲು ಒಗ್ಗಟ್ಟಿನ ಮಂತ್ರ, ನಿರ್ವಹಣಾ ಮಂಡಳಿಗೆ ಸಹಜ ವಿರೋಧ, ನಾರಿಮನ್ ಕುರಿತು ಚರ್ಚೆ… ಇವು ಶನಿವಾರ ಮಧ್ಯಾಹ್ನದ ನಂತರ ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯ ಕೊನೆಯಲ್ಲಿ ಹೊರಬಿದ್ದ ತೀರ್ಮಾನಗಳು. ಈ ಬೆಳವಣಿಗೆಗಳು ದೇಶದಲ್ಲಿ ಈ ಕಾಲಘಟ್ಟದ ಸಾಂವಿಧಾನಿಕ ಬಿಕ್ಕಟ್ಟೊಂದು ಸೃಷ್ಟಿಸುವ ಸಾಧ್ಯತೆಗಳನ್ನು ಮುಂದಿಟ್ಟಿವೆ. ಶುಕ್ರವಾರ ಕೊಂಚ ‘ಗರಂ’ ಆಗಿಯೇ ತೀರ್ಪು ನೀಡಿದ ಸುಪ್ರಿಂ ಕೋರ್ಟ್ “ಕರ್ನಾಟಕ ಕೂಡ ದೇಶದ ಒಂದು ರಾಜ್ಯ. ಸುಪ್ರಿಂ ಕೋರ್ಟ್ ನೀಡಿದ […]

  October 2, 2016
  ...

  ‘ಕಾವೇರಿ ಕವರೇಜ್’: ಸರ್ವ ಪಕ್ಷ ಸಭೆ ಆರಂಭ; ದೇವೇಗೌಡ ಉಪವಾಸ; ಬಿಜೆಪಿ ವಿರುದ್ಧ ಉಗ್ರಪ್ಪ ಆಕ್ರೋಶ

  ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರಿಂ ಕೋರ್ಟ್ ನೀಡಿದ ‘ಗರಂ’ ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆ ಆರಂಭವಾಗಿದೆ. ಸುಪ್ರಿಂ ಕೋರ್ಟ್ ಶುಕ್ರವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದಿದೆ. ತಮಿಳುನಾಡಿಗೆ ನೀರು ಹರಿಸುವ ಹಾಗೂ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚೆ ನಡೆಸಲಿದೆ. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಖಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಸದಾನಂದ […]

  October 1, 2016
  ...

  ‘ಬಂಧನದ ವಾರೆಂಟ್’: ಗೌರಿ ಲಂಕೇಶ್ ನ್ಯಾಯಾಲಯಕ್ಕೆ ಹಾಜರು

  ನ್ಯಾಯಾಲಯ ಬಂಧನ ವಾರೆಂಟ್ ಹೊರಟಿದ್ದ ಹಿನ್ನೆಲೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ರನ್ನು ಹುಬ್ಬಳ್ಳಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಂಟು ವರ್ಷಗಳ ಹಿಂದೆ ‘ದರೋಡೆಗೆ ಇಳಿದ ಬಿಜೆಪಿಗಳು’ ಎಂಬ ತಲೆ ಬರಹದಲ್ಲಿ ವರದಿಯನ್ನು ತಮ್ಮ ವಾರ ಪತ್ರಿಕೆಯಲ್ಲಿ ಗೌರಿ ಪ್ರಕಟಿಸಿದ್ದರು. ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಇದರ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಇದರ ವಿಚಾರಣೆಗೆ ಸತತ ಮೂರು ಬಾರಿ ಹಾಜರಾಗದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ […]

  October 1, 2016
  ...

  ‘LOVE in ಮಂಡ್ಯ’: ಕೈಕೊಟ್ಟ ಹುಡುಗಿಯ ಮೇಲೆ ಕೇಸು ದಾಖಲಿಸಿ ಕಾಯುತ್ತಿರುವ ಪ್ರೇಮಿ!

  ಇದೊಂದು ಅಪರೂಪದಲ್ಲಿ ಅಪರೂಪದ ಪ್ರೇಮ ಪ್ರಕರಣದ ಕತೆ. ಐದು ವರ್ಷಗಳ ಕಾಲ ಪ್ರೇಮಿಸಿ, ಇನ್ನೇನು ಮದುವೆಯಾಗಬೇಕು ಎಂಬ ಸಮಯದಲ್ಲಿ ಹುಡುಗಿ ಉಲ್ಟಾ ಹೊಡೆದಳು. ಸದ್ಯ ಆಕೆಯ ಮೇಲೆ ವಂಚನೆ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿರುವ ಪ್ರೇಮಿ, ಆಕೆಯ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾನೆ. ಪ್ರಕರಣ ನಡೆದಿರುವುದು ಮಂಡ್ಯದಲ್ಲಿ. ಕಾವೇರಿ ವಿವಾದ ಕಾವು ಪಡೆದುಕೊಳ್ಳುವುದಕ್ಕೆ ಕೆಲವು ದಿನಗಳ ಹಿಂದಷ್ಟೆ ಮಂಡ್ಯ ಜಿಲ್ಲಾ ಪೊಲೀಸರಿಗೆ ಹೀಗೊಂದು ವಿಚಿತ್ರ ದೂರು ಬಂದಿತ್ತು. “ಆಕೆ ಐದು ವರ್ಷಗಳ […]

  October 1, 2016

Top