An unconventional News Portal.

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

  ...
  ದೇಶ

  ಟಾಟಾ V/S ಮಿಸ್ತ್ರಿ: 148 ವರ್ಷಗಳ ಕಂಪನಿಯಲ್ಲೀಗ ಅಧ್ಯಕ್ಷ ಸ್ಥಾನದ ವಿವಾದ; ಯಾಕೆ, ಏನು?

  ಟಾಟಾ ಕಂಪೆನಿಯಲ್ಲಿ ಮಾಜಿ ಮತ್ತು ಹಾಲಿ ಅಧ್ಯಕ್ಷರ ನಡುವಿನ ಕಲಹ ತಾರಕಕ್ಕೇರಿದೆ. ನಿರ್ಗಮಿತ ಅಧ್ಯಕ್ಷ ಸೈರಸ್ ಮಿಸ್ತ್ರಿ, ರತನ್ ಟಾಟಾ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದಾರೆ. ಈ ಮೂಲಕ ದೇಶದ ದೊಡ್ಡ ಕಂಪೆನಿಯೊಂದರ ಮುಖ್ಯಸ್ಥರ ಸ್ಥಾನದ ಸುತ್ತ ಬಹಿರಂಗ ‘ಯುದ್ಧ’ ಆರಂಭವಾಗಿದೆ. ‘ಟಾಟಾ ಗ್ರೂಪ್’ನಲ್ಲಿ ಬಂಡವಾಳ ಹೂಡಿರುವ ಪ್ರಮುಖ ಕಂಪೆನಿ ‘ಟಾಟಾ ಸನ್ಸ್’ನಲ್ಲಿ ಇಂಥಹದ್ದೊಂದು ಅಚ್ಚರಿಯ ಬೆಳವಣಿಗೆ ನಡೆದಿದ್ದು, ಗಮನ ಸೆಳೆಯುತ್ತಿದೆ. ಸೋಮವಾರದ ‘ಟಾಟಾ ಸನ್ಸ್’ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ಕೆಳಗಿಳಿಸಿ, ಅವರ ಸ್ಥಾನಕ್ಕೆ..

  October 26, 2016
  ...
  ವಿದೇಶ

  ಮತ್ತೆ ಉಗ್ರರ ದಾಳಿಗೆ ನಲುಗಿದ ಪಾಕ್: ಕ್ವೆಟ್ಟಾದಲ್ಲಿ 60 ಪೊಲೀಸರ ಮಾರಣ ಹೋಮ!

  ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಬಾಂಬ್ ದಾಳಿಗೆ 60 ಜನ ಸಾವನ್ನಪ್ಪಿದ್ದಾರೆ. ‘ಜಮಾತ್-ಇ-ಝಂಗ್ವಿ’ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದ್ದು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಸೇರಿದ ಕ್ವೆಟ್ಟಾ ನಗರದಲ್ಲಿ ಪೊಲೀಸರ ತರಬೇತಿ ಶಿಬಿರ ನಡೆಯುತ್ತಿತ್ತು. ಇದರಲ್ಲಿ ಸುಮಾರು 200 ಟ್ರೇನೀ ಪೊಲೀಸರು ಭಾಗವಹಿಸಿದ್ದರು. ಇದೇ ಶಿಬಿರದ ಮೇಲೆ ‘ಜಮಾತ್ ಇ ಝಂಗ್ವಿ’ ಉಗ್ರವಾದಿ ಸಂಘಟನೆಯ ಬಂಡುಕೋರರು ದಾಳಿ ನಡೆಸಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ ಈ ದಾಳಿ ನಡೆಸಿದ್ದು ಕೆಲವರನ್ನು ಕೊಂದ ಉಗ್ರರು ಇನ್ನು..

  October 25, 2016
  ...
  ರಾಜ್ಯ

  AOB ಗಡಿಯಲ್ಲಿ ಗುಂಡಿನ ಮೊರೆತ: ಕಮಾಂಡೋಗಳ ಗುಂಡಿಗೆ 24 ನಕ್ಸಲರ ಬಲಿ!

  ಆಂಧ್ರ ಪ್ರದೇಶ-ಒಡಿಶಾ ಗಡಿಭಾಗದಲ್ಲಿ 24 ನಕ್ಸಲರನ್ನು ಸೋಮವಾರ ಹತ್ಯೆ ಮಾಡಲಾಗಿದೆ. ದಟ್ಟ ಕಾಡಿನಲ್ಲಿ ಈ ಎನ್ಕೌಂಟರ್ ನಡೆದಿದ್ದು ಘಟನೆಯಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಕ್ಸಲರ ಮೇಲೆ ಪೊಲೀಸರು ನಡೆಸಿದ ಪ್ರಮುಖ ದಾಳಿ ಇದಾಗಿದೆ. ಸೋಮವಾರ ನಸುಕಿನ ವೇಳೆಯಲ್ಲಿ ಈ ಘಟನೆ ನಡೆದಿದೆ. ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಜಂತ್ರಿ ಎಂಬ ಗ್ರಾಮೀಣ ಪ್ರದೇಶದಲ್ಲಿ ನಕ್ಸಲರ ತರಬೇತಿ ಶಿಬಿರ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಬಂದಿತ್ತು. ಆಂಧ್ರ ಗಡಿ ಇಲ್ಲಿಂದ ಕೆಲವೇ ಕಿಲೋ ಮೀಟರ್..

  October 24, 2016
  ...
  ಟಿವಿ

  ಪೊರ್ನೋಗ್ರಫಿ, ಪ್ರೇಮಶೇಖರ್, ಫಿಲಾಸಫಿ, ಪೋಲಿ ಮತ್ತು ಪಬ್ಲಿಕ್ ಟಿವಿ!

  ಚಿಂತಕ, ಅಂಕಣಕಾರ, ಹಿರಿಯ ಜೀವ ಪ್ರೇಮಶೇಖರ್ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆಯಲ್ಲಿ ಮಾಡಿದ ಭಾಷಣದ ಅಂಶಗಳೀಗ ವಿವಾದಕ್ಕೆ ಕಾರಣವಾಗಿದೆ. ಭಾಷಣದಲ್ಲಿ ಲೋಕಾಭಿರಾಮ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದ ಪ್ರೇಮಶೇಖರ್, ಪೊರ್ನೋಗ್ರಫಿಯ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು. ಇದನ್ನು ಸುದ್ದಿಯನ್ನಾಗಿ ಮಾಡಿದ ‘ಪಬ್ಲಿಕ್ ಟಿವಿ’, ‘ಪೋಲಿ ಪ್ರೊಫೆಸರ್’ ಎಂಬ ಎಂಬ ತಲೆ ಬರಹ (ಸ್ಲಗ್) ನೀಡಿ ಪ್ರಸಾರ ಮಾಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ವಿಡಿಯೋ ರೂಪದ ಪ್ರತಿಕ್ರಿಯೆ ನೀಡಿರುವ ಪ್ರೇಮಶೇಖರ್, ಮನುಷ್ಯನ ಮನಸ್ಸುಗಳ ಬೆಳವಣಿಗೆಯಲ್ಲಿ ‘ಅಶ್ಲೀಲ ಸಾಹಿತ್ಯ’ದ ವಾಸ್ತವತೆಯ..

  October 24, 2016
  ...
  ರಾಜ್ಯ

  ಪರ ವಿರೋಧಗಳ ನಡುವೆಯೇ ‘ಉಕ್ಕಿನ ಮೇಲ್ಸೇತುವೆ’ಗೆ ಗುದ್ದಲಿ ಪೂಜೆ: ಮನಸ್ಸು ಮಾಡಿದರೆ ಕೋಟಿ ಉಳಿಸಬಹುದು!

  ಒಂದು ಕಾಲದಲ್ಲಿ ಬೆಂಗಳೂರಿನ ಅಭಿವೃದ್ಧಿಯ ಮುನ್ನೋಟವನ್ನು ಮುಂದಿಟ್ಟಿದ್ದ ಜನರಿಂದಲೇ ವಿರೋಧಕ್ಕೆ ಒಳಗಾಗಿರುವ ‘ಉಕ್ಕಿನ ಮೇಲ್ಸೇತುವೆ’ ಕಾಮಗಾರಿಯ ಗುದ್ದಲಿ ಪೂಜೆಗೆ ದಿನಗಣನೆ ಶುರುವಾಗಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ರಾಜಧಾನಿ ಬೆಂಗಳೂರಿನ ಬಸವೇಶ್ವರ/ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಸಂಪರ್ಕಿಸುವ ಉಕ್ಕಿನ ಮೇಲ್ಸೇತುವೆ ಯೋಜನೆ ಸುದ್ದಿಕೇಂದ್ರದಲ್ಲಿದೆ. ಮಾಧ್ಯಮಗಳು, ಐಟಿ- ಬಿಟಿ ಉದ್ಯಮಗಳ ಪ್ರಮುಖರು, ಪರಿಸರವಾದಿಗಳು ಹಾಗೂ ಸರಕಾರೇತರ ಸಂಸ್ಥೆಗಳು ಯೋಜನೆಗೆ ವಿರೋಧವನ್ನು ದಾಖಲಿಸಿವೆ. ಅದೇ ವೇಳೆ, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸುವ ಸಲುವಾಗಿ ಹೀಗೊಂದು ಯೋಜನೆ ಅಗತ್ಯವಿದೆ ಎಂದು ಕೆಲವರ ಪ್ರತಿಭಟನೆಗಳು..

  October 24, 2016
  ...
  ಸುದ್ದಿ ಸಾರ

  ‘ಉಡುಪಿ ಗೊಂದಲಕ್ಕೆ ತೆರೆ’: ನಡೆಗಳಿಗೆ ತಡೆ; ಸ್ವಚ್ಚತೆ ಮಠದ ಒಳಗೂ ಇಲ್ಲ; ಹೊರಗೂ ಇಲ್ಲ!

  ಉಡುಪಿಯಲ್ಲಿ ನಡೆಯಬೇಕಾಗಿದ್ದ ‘ಕನಕ ನಡೆ’ ಸ್ವಚ್ಛತಾ ಪ್ರದರ್ಶನಕ್ಕೆ ಜಿಲ್ಲಾಡಳಿತ ತಡೆ ನೀಡಿದೆ. ಮಠದ ಒಳಗೆಯೂ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಅನುಮತಿ ನಿರಾಕರಣೆ ಪತ್ರದಲ್ಲಿ, ಜಿಲ್ಲಾಧಿಕಾರಿ ಬಳಸಿದ ‘ಎಡಪಂಥೀಯರು ಮಠಕ್ಕೆ ಮುತ್ತಿಗೆ ಹಾಕುವ ಮಾಹಿತಿ ಬಂದಿದೆ’ ಎಂಬ ಸಾಲುಗಳು ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನು ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ನಡೆಗೂ ಅನುಮತಿ ನಿರಾಕರಿಸಲಾಗಿದ್ದು, ‘ಸ್ವಾಭಿಮಾನಿ ನಡೆ’ಯನ್ನು ಆಯೋಜಕರು ಮುಂದೂಡಿದ್ದಾರೆ. ಅಂದುಕೊಂಡಂತೆ ನಡೆದಿದ್ದರೆ ನಾಳೆ ಬೆಳಿಗ್ಗೆ 9 ಗಂಟೆಗೆ..

  October 23, 2016
  ...
  ರಾಜ್ಯ

  ‘ಕನಕ ನಡೆ’ ಉಡುಪಿ ರಥಬೀದಿಗಷ್ಟೆ ಸೀಮಿತ: ಗೊಂದಲದ ಗೂಡಾದ ಭಾನುವಾರದ ‘ಕ್ಲೈಮ್ಯಾಕ್ಸ್’!

  ಸೈದ್ಧಾಂತಿಕ ಸಂಘರ್ಷಕ್ಕೆ ಸಿದ್ಧವಾಗಿದ್ದ ಉಡುಪಿಯಲ್ಲಿ ಭಾನುವಾರ ನಡೆಯುವ ಬೆಳವಣಿಗೆಗಳ ಬಗ್ಗೆ ಗೊಂದಲ ಆವರಿಸಿಕೊಂಡಿದೆ. ‘ಚಲೋ ಉಡುಪಿ’ ಹಿನ್ನೆಲೆಯಲ್ಲಿ ಉಡುಪಿಯನ್ನು ಸ್ವಚ್ಛ ಮಾಡುತ್ತೇವೆ ಎಂದು ಹೊರಟಿದ್ದ ‘ಕನಕ ನಡೆ’ ಆಯೋಜಕರು ಸಾಂಕೇತಿಕ ಸ್ವಚ್ಛತೆಗಷ್ಟೇ ಸೀಮಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಕಡೆ ‘ಕನಕ ನಡೆ’ ವಿರೋಧಿಸಿ ‘ಸ್ವಾಭಿಮಾನಿ ನಡೆ’ ಮಾಡಲು ಹೊರಟವರಿಗೆ ಶುಕ್ರವಾರದ ಅಂತ್ಯದವರೆಗೂ ಪೊಲೀಸ್ ಇಲಾಖೆಯ ಅನುಮತಿ ಸಿಕ್ಕಿಲ್ಲ. ಮೂಲಗಳ ಮಾಹಿತಿಗಳ ಪ್ರಕಾರ ಎರಡೂ ‘ನಡೆ’ಗಳ ಮೇಲೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆ ನಿಷೇಧ ಹೇರುವ ಸಾಧ್ಯತೆಗಳಿವೆ. ಆದರೆ, 23ರಂದು ಉಡುಪಿಯಲ್ಲಿ..

  October 22, 2016
  ...
  ರಾಜ್ಯ

  ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ಅಸಮಾಧಾನ: ಜಾತಿ ಪ್ರೇಮ, ಆಡಳಿತದ ವೈಫಲ್ಯಕ್ಕೆ ತೆತ್ತ ಬೆಲೆ!

  ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಮೊದಲಿಗೆ ಸಾರಿದ್ದ, ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ‘ಟ್ರ್ಯಾಕ್ ರೆಕಾರ್ಡ್’ ಹೊಂದಿರುವ ಸಿ. ಎಂ. ಇಬ್ರಾಹಿಂ ಶುಕ್ರವಾರ ಮೈಸೂರಿನಲ್ಲಿ ‘ಬಣ್ಣ’ ಬಿಟ್ಟಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷಗಳಿರುವ ಈ ಸಮಯದಲ್ಲಿ, ಭವಿಷ್ಯದ ರಾಜಕೀಯ ದೃವೀಕರಣದ ರಂಗಿನಾಟಗಳು ಹೇಗಿರಲಿವೆ ಎಂಬುದಕ್ಕೆ ಮುನ್ಸೂಚನೆಯೊಂದು ಈ ಮೂಲಕ ಸಿಕ್ಕಂತಾಗಿದೆ. ಇದರ ಜತೆಗೆ, ಉತ್ತರ ಕರ್ನಾಟಕ ಭಾಗದಲ್ಲಿ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ, ಸತೀಶ್ ಜಾರಕಿಹೋಳಿ ಅಂಡ್..

  October 22, 2016
  ...
  ಕ್ರೀಡೆ

  ಲೋಧಾ V/S ಬಿಸಿಸಿಐ: ಕ್ರಿಕೆಟ್ ನಿಯಂತ್ರಣ ಮಂಡಳಿ ಮೇಲೆ ಸುಪ್ರಿಂ ಗದಾ ಪ್ರಹಾರ!

  ಲೋಧಾ ಸಮಿತಿಯ ತೀರ್ಮಾನಗಳನ್ನು ತಳ್ಳಿ ಹಾಕಲು ಹೋದ ಬಿಸಿಸಿಐಗೆ ಸುಪ್ರಿಂ ಕೋರ್ಟ್ ಸರಿಯಾಗಿ ಚಾಟಿ ಬೀಸಿದೆ. ಶುಕ್ರವಾರ ಮಹತ್ವದ ತೀರ್ಪು ನೀಡಿರುವ ನಾಯ್ಯಾಲಯ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಹಣಕಾಸು ವ್ಯವಹಾರಗಳನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದೆ. ‘ಲೋಧಾ ಸಮಿತಿ’ ತೀರ್ಮಾನಗಳ ಅನ್ವಯ ಸುಧಾರಣೆಗಳನ್ನು ಮೊದಲು ಜಾರಿಗೆ ತನ್ನಿ. ಅಲ್ಲಿವರೆಗೆ ಬಿಸಿಸಿಐ ಪಂದ್ಯಗಳ ಹಣ ಪಾವತಿಯ ವಿಚಾರದಲ್ಲೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಂತೆ ಕಟುವಾಗಿ ಎಚ್ಚರಿಕೆ  ನೀಡಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ..

  October 21, 2016
  ...
  ಫೋಕಸ್

  ಮಾರಣಾಂತಿಕ ರೋಗ ಭಾರತಕ್ಕೆ ಕಾಲಿಡುವ ಮುನ್ನ: ‘ಝೀಕಾ’ ವೈರಸ್ ರಹಸ್ಯ ಭೇದಿಸಿದ ವಿಜ್ಞಾನಿಗಳು!

  ಮನುಷ್ಯನ ಮಾರಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಝೀಕಾ ವೈರಸ್ ಭಾರತಕ್ಕೂ ಕಾಲಿಡುವ ದಿನಗಳು ದೂರದಲ್ಲಿಲ್ಲ. ಹೀಗಿರುವಾಗಲೇ, ಆರೋಗ್ಯ ವಿಜ್ಞಾನಿಗಳು ಮಹತ್ವದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಮನುಷ್ಯನ ಜೀವಕೋಶಗಳಲ್ಲಿ ಹೇಗೆ ಝೀಕಾ ವೈರಸ್ ಹರಡಿಕೊಳ್ಳುತ್ತೆ ಮತ್ತು ಮನುಷ್ಯನ ಜೀವ ನಿರೋಧಕ ಶಕ್ತಿಯನ್ನು ತಟಸ್ಥಗೊಳಿಸುವುದು ಹೇಗೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಮಾರಣಾಂತಿಕ ಝೀಕಾ ವೈರಸ್ಸಗೆ ಔಷಧಿ ಕಂಡು ಹಿಡಿಯುವಲ್ಲಿ ಈ ಸಂಶೋಧನೆ ಸಹಾಯ ಮಾಡಲಿದೆ. ‘ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ’ ವ್ಯಾಪ್ತಿಗೆ ಬರುವ ‘ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್’ನ ತಜ್ಞರು ಈ ಸಂಶೋಧನೆ ಮಾಡಿದ್ದಾರೆ…

  October 21, 2016

FOOT PRINT

Top