An unconventional News Portal.

    ...

    ದುತಾರ್ತೆ ನಾಡಿನಲ್ಲಿ ನಡುಬೀದಿಯಲ್ಲೇ ಮಹಾಪೌರನಿಗೆ ಗುಂಡಿಕ್ಕಿದ ಪೊಲೀಸರು!

    ಮಾದಕ ವಸ್ತುಗಳ ವಿರುದ್ಧ ಭಾರಿ ಸಮರ ಸಾರಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ಯಾರನ್ನೂ ಬಿಡುವಂತೆ ಕಾಣಿಸುತ್ತಿಲ್ಲ. ಇದೀಗ ಅಧ್ಯಕ್ಷರ ಪೊಲೀಸರು ಫಿಲಿಪ್ಪೀನ್ಸ್ ಮೇಯರ್ ರನ್ನೇ ನಡುಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೇಯರ್ ಮತ್ತು ಆತನ 9 ಜನ ಸಂಗಡಿಗರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದುತಾರ್ತೆಯ ಮಾದಕ ವಸ್ತುಗಳ ಮೇಲಿನ ಯುದ್ಧದಲ್ಲಿ ನಡೆದ ಭೀಕರ ಕದನಗಳಲ್ಲಿ ಈ ಘಟನೆ ಪ್ರಮುಖವಾಗಿದೆ. ಸೌದಿ ಅ್ಯಂಪೆಟನ್ ನಗರದ ಮೇಯರ್ ಸಂಶುದ್ದೀನ್ ದಿಮಾಕೋಮ್ ಪೊಲೀಸರ […]

    October 28, 2016
    ...

    ‘ಸೋ ಕಾಲ್ಡ್ ಅಭಿವೃದ್ಧಿ’ ಮತ್ತು ಇವತ್ತಿಗೂ ಕನಸಾಗಿಯೇ ಉಳಿದಿರುವ ನಿಕಾರಗುವಾದ ಕಾಲುವೆ ಯೋಜನೆ!

    ’16ನೇ ಶತಮಾನದಲ್ಲಿ ಸ್ಪಾನಿಶ್ ಸಂಶೋಧಕನೊಬ್ಬ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಜೋಡಿಸಲು ಇರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಂಡ. ಫ್ರಾನ್ಸ್ ದೊರೆ ನೆಪೋಲಿಯನ್ 3, ಎರಡು ಸಮುದ್ರಗಳನ್ನು ಜೋಡಿಸಲು ಕಾಲುವೆಯೊಂದನ್ನು ಕಟ್ಟುವ ಕನಸು ಕಂಡಿದ್ದ. ಬೃಹತ್ ಪ್ರಮಾಣದಲ್ಲಿ ರೈಲು ಹಳಿ ಕಂಪನಿಯೊಂದನ್ನು ಬೆಳೆಸಿದ್ದ ಉದ್ಯಮಿ ಕಾರ್ನಿಯಸ್ ವೆಂಡರ್ಬಿಲ್ಟ್ ಒಂದು ಹಂತದಲ್ಲಿ ಕಾಲುವೆ ಕಟ್ಟಲು ಹಕ್ಕುಗಳನ್ನು ಪಡೆದುಕೊಂಡಿದ್ದ. ನಿಕಾರಗುವಾ (ಲ್ಯಾಟಿನ್ ಅಮೆರಿಕಾ ದೇಶ) ಇತಿಹಾಸ ಇಂತಹ 12ಕ್ಕೂ ಹೆಚ್ಚು ಕಾಲುವೆ ನಿರ್ಮಾಣ ಯೋಜನೆಗಳ ವಿಫಲತೆಗೆ ಸಾಕ್ಷಿಯಾಗಿದೆ…’ ಹೀಗಂತ ‘ನ್ಯೂ ಯಾರ್ಕ್ […]

    October 28, 2016
    ...

    ಮೋದಿ ಸಂಘ; ‘ಫೋರ್ಡ್ ಫೌಂಡೇಷನ್’ ವ್ಯವಹಾರಕ್ಕಿಲ್ಲ ಕಾನೂನಿನ ಭಂಗ: ಹಿಂಗ್ಯಾಕೆ?

    ದೇಶದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಸರಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸುವುದು ದುಸ್ತರವಾಗಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ. ಆದರೆ ಇಲ್ಲೊಂದು ಸಂಸ್ಥೆ ಸರಕಾರದ ಜತೆ ‘ಮ್ಯಾನೇಜ್’ ಮಾಡಿಕೊಂಡು ಆರಾಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಂದ ಹಾಗೆ, ಈ ಸಂಸ್ಥೆಯ ಹೆಸರು ‘ಫೋರ್ಡ್ ಫೌಂಡೇಷನ್’. ಜಗತ್ತಿನ ಶ್ರೀಮಂತ ‘ಸರಕಾರೇತರ ಸಂಸ್ಥೆ’ಗಳಲ್ಲಿ ಒಂದಾದ ಫೋರ್ಡ್ ಫೌಂಡೇಷನ್ ಮೋದಿ ಸರಕಾರದ ಜತೆ ಅಲಿಖಿತ ‘ಹೊಂದಾಣಿಕೆ’ ಮಾಡಿಕೊಂಡಿದೆ. ಈ ಕಾರಣಕ್ಕೆ ಸರಕಾರದ ನಿಯಂತ್ರಣದ ನಂತರವೂ ಫೌಂಡೇಷನ್ನಿನ ಭಾರತೀಯ ವಿಭಾಗದ ಕಾರ್ಯನಿರ್ವಹಣೆಗೆ ಎಲ್ಲೂ ಧಕ್ಕೆ ಬಂದಿಲ್ಲ […]

    October 28, 2016

Top