An unconventional News Portal.

ಮಾರಣಾಂತಿಕ ರೋಗ ಭಾರತಕ್ಕೆ ಕಾಲಿಡುವ ಮುನ್ನ: ‘ಝೀಕಾ’ ವೈರಸ್ ರಹಸ್ಯ ಭೇದಿಸಿದ ವಿಜ್ಞಾನಿಗಳು!

ಮಾರಣಾಂತಿಕ ರೋಗ ಭಾರತಕ್ಕೆ ಕಾಲಿಡುವ ಮುನ್ನ: ‘ಝೀಕಾ’ ವೈರಸ್ ರಹಸ್ಯ ಭೇದಿಸಿದ ವಿಜ್ಞಾನಿಗಳು!

ಮನುಷ್ಯನ ಮಾರಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಝೀಕಾ ವೈರಸ್ ಭಾರತಕ್ಕೂ ಕಾಲಿಡುವ ದಿನಗಳು ದೂರದಲ್ಲಿಲ್ಲ. ಹೀಗಿರುವಾಗಲೇ, ಆರೋಗ್ಯ ವಿಜ್ಞಾನಿಗಳು ಮಹತ್ವದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಮನುಷ್ಯನ ಜೀವಕೋಶಗಳಲ್ಲಿ ಹೇಗೆ ಝೀಕಾ ವೈರಸ್ ಹರಡಿಕೊಳ್ಳುತ್ತೆ ಮತ್ತು ಮನುಷ್ಯನ ಜೀವ ನಿರೋಧಕ ಶಕ್ತಿಯನ್ನು ತಟಸ್ಥಗೊಳಿಸುವುದು ಹೇಗೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಮಾರಣಾಂತಿಕ ಝೀಕಾ ವೈರಸ್ಸಗೆ ಔಷಧಿ ಕಂಡು ಹಿಡಿಯುವಲ್ಲಿ ಈ ಸಂಶೋಧನೆ ಸಹಾಯ ಮಾಡಲಿದೆ.

ಝೀಕಾ ವೈರಸ್ ಪೀಡಿತ ಮಗು

ಝೀಕಾ ವೈರಸ್ ಪೀಡಿತ ಮಗು

‘ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ’ ವ್ಯಾಪ್ತಿಗೆ ಬರುವ ‘ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್’ನ ತಜ್ಞರು ಈ ಸಂಶೋಧನೆ ಮಾಡಿದ್ದಾರೆ. ಈ ಮೂಲಕ ‘ಝೀಕಾ ವೈರಸ್ ಮನುಷ್ಯನ ದೇಹದೊಳಕ್ಕೆ ಹೋದ ನಂತರ ಹೇಗೆ ಕೆಲಸ ಮಾಡುತ್ತದೆ?’ ಎಂಬ ಜೀವ ವಿಜ್ಞಾನಿಗಳ ಮೂಲ ಪ್ರಶ್ನೆಯೊಂದಕ್ಕೆ ಉತ್ತರ ಕಂಡು ಹಿಡಿದಿದ್ದಾರೆ.

ದೇಹದೊಳಕ್ಕೆ ಪ್ರವೇಶಿಸುವ ಝೀಕಾ ವೈರಸ್ ಮೊದಲಿಗೆ ಅನುವಂಶೀಯತೆಯ ಸಾಕ್ಷಿಗಳನ್ನು ಬದಲಾಯಿಸುತ್ತದೆ. ಮಾತ್ರವಲ್ಲ ದೇಹದಲ್ಲಿರುವ ರಕ್ಷಣಾ ವ್ಯವಸ್ಥೆ (ರೋಗ ನಿರೋಧಕ ಶಕ್ತಿ) ಯ ಮೇಲೆಯೂ ದಾಳಿ ನಡೆಸುತ್ತದೆ. ದೇಹದಲ್ಲೆಲ್ಲಾ ವೈರಸ್ಸುಗಳು ಹರಡಿಕೊಂಡು ದೇಹದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ‘ಸೆಲ್ ಹೋಸ್ಟ್ ಆ್ಯಂಡ್ ಮೈಕ್ರೋಬ್’ ಎಂಬ ಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟಿಸಲಾದ ಸಂಶೋಧನಾ ಲೇಖನದಲ್ಲಿ ಹೇಳಲಾಗಿದೆ.

ಝೀಕಾ ವೈರಸ್ ಮುಖ್ಯವಾಗಿ ಹುಟ್ಟುವಿನ ಮಗುವಿನ ಮೇಲೆ ದೊಡ್ಡ ಮಟ್ಟದ ಪರಿಣಾಮಗಳನ್ನು ಬೀರುತ್ತದೆ. ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಸಣ್ಣ ಮೆದುಳಿನ ಸಣ್ಣ ತಲೆಯ ಮಕ್ಕಳು ಹುಟ್ಟುತ್ತಾರೆ. ಮನುಷ್ಯರಿಂದ ಸೊಳ್ಳೆಗಳಿಗೆ ಈ ವೈರಸ್ ಹರಡಿ ಅಲ್ಲಿಂದ ಸೊಳ್ಳೆಗಳ ಕಡಿತದ ಮೂಲಕ ಮತ್ತೊಬ್ಬ ಮನುಷ್ಯನಿಗೆ ಹರಡುತ್ತದೆ. ಇಷ್ಟಲ್ಲದೇ ಲೈಂಗಿಕ ಸಂಪರ್ಕದ ಮೂಲಕವೂ ಈ ಝೀಕಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

ಝೀಕಾ ವೈರಸ್ ಪೀಡಿತ ಮಗುವಿನ ಮೆದುಳಿನ ಬೆಳವಣಿಗೆಯಲ್ಲಾಗುವ ಕುಂಠಿತ

ಝೀಕಾ ವೈರಸ್ ಪೀಡಿತ ಮಗುವಿನ ಮೆದುಳಿನ ಬೆಳವಣಿ ಕುಂಠಿತವಾಗುತ್ತದೆ.

‘ಝೀಕಾ’ ರಹಸ್ಯ

ಮನುಷ್ಯರ ಅನುವಂಶೀಯತೆ ಡಿಎನ್ಎ (DNA) ಮತ್ತು ಆರ್’ಎನ್ಎ (RNA) ಮೇಲೆ ಅವಲಂಬಿತವಾಗಿದೆ. ಹೊಸ ಜೀವಕೋಶ ಉತ್ಪತ್ತಿಯಾದಾಗ ಆರ್’ಎನ್ಎ ಡಿಎನ್ಎಯಿಂದ ಅನುವಂಶೀಯತೆಯ ಮಾಹಿತಿಗಳನ್ನು ಸಾಗಿಸುತ್ತದೆ.  ಹೋಗಿರುವಾಗ ಒಂದೊಮ್ಮೆ ಝೀಕಾ ವೈರಸ್ ಮನುಷ್ಯನ ದೇಹದೊಳಕ್ಕೆ ಕಾಲಿಟ್ಟಿದ್ದೇ ಆದಲ್ಲಿ, ಝೀಕಾ ವೈರಸ್ಸಿನಿಂದ ಜೀವಕೋಶದಲ್ಲಿರುವ ಆರ್’ಎನ್ಎಗೆ ಬದಲಾಗುತ್ತದೆ. ಇದರಿಂದ ಮನುಷ್ಯ ದೇಹದ ಕಿಣ್ವಗಳಿಗೆ ಹಾನಿಯಾಗುತ್ತದೆ. ಇದು ಜೀವ ನಿರೋಧಕ ಶಕ್ತಿಗೆ ನೇರವಾಗಿ ಸಮಸ್ಯೆ ತಂದೊಡ್ಡುತ್ತದೆ.

ಸದ್ಯಕ್ಕೆ ನಡೆದಿರುವ ಈ ಸಂಶೋಧನೆಯಿಂದ ಝೀಕಾ ವೈರಸ್ಸಿಗೆ ಪರಿಹಾರವನ್ನು, ಔಷಧಿಯನ್ನೇನೂ ತಂದುಕೊಡಲಾರದು. ಆದರೆ ಝೀಕಾ ವೈರಸ್ಸಿಗೆ ಪರಿಹಾರ ಮತ್ತು ಚಿಕಿತ್ಸೆ ರೂಪಿಸುವಲ್ಲಿ ಇದು ನೆರವಾಗಲಿದೆ. ಈ ಮೂಲಕ ಗರ್ಭಿಣಿಯರಿಗೆ ಝೀಕಾ ವೈರಸ್ ಬಂದು ಸಣ್ಣ ತಲೆಯ ಮಕ್ಕಳು ಹುಟ್ಟುವುದು ತಪ್ಪುತ್ತದೆ,” ಎನ್ನುತ್ತಾರೆ ‘ನ್ಯಾಷನಲ್ ಸ್ಕೂಲ್ ಆಫ್ ಟ್ರೋಫಿಕಲ್ ಮೆಡಿಸಿನ್’ನ ಡೀನ್ ಪೀಟರ್ ಹೊಟೆಜ್.

ಝೀಕಾ ವೈರಸ್ ಖಾಯಿಲೆಗೆ ಒಳಗಾದ ಮಕ್ಕಳೊಂದಿಗೆ ತಾಯಂದಿರು

ಝೀಕಾ ವೈರಸ್ ಖಾಯಿಲೆಗೆ ಒಳಗಾದ ಮಕ್ಕಳೊಂದಿಗೆ ತಾಯಂದಿರು

ಮುಂದಿನ ದಿನಗಳಲ್ಲಿ ‘ಝೀಕಾ’ ರೋಗಕ್ಕೆ ಚಿಕಿತ್ಸೆ ಪತ್ತೆ ಹಚ್ಚುವ ಸಮಯದಲ್ಲಿ ವೈರಸ್ ‘ಆರ್.ಎನ್.ಎ’ ಬದಲಾಯಿಸದಂತೆ ನಿರ್ಧಿಷ್ಟ ಗುರಿ ಹಾಕಿಕೊಂಡು ಸಂಶೋಧನೆ ಮಾಡಲು ಅನುಕೂಲವಾಗಿದೆ. ಗರ್ಭಿಣಿಯರ ಭ್ರೂಣಕ್ಕೆ ಯಾವಾಗ ಝೀಕಾ ದಾಳಿ ಮಾಡುತ್ತದೆ. ಹುಟ್ಟುವಿನ ಮಗುವಿನಲ್ಲಿ ಏನೇನು ಬದಲಾವಣೆ ಸೃಷ್ಟಿಸುತ್ತದೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಈ ಸಂಶೋಧನೆ ನೆರವಾಗಲಿದೆ,” ಎನ್ನುತ್ತಾರೆ ‘ಪಿಟ್ಸ್ಬರ್ಗ್ ವಿಶ್ವವಿದ್ಯಾಲಯ’ದ ಹಿರಿಯ ವೈಜ್ಞಾನಿಕ ತಜ್ಞರಾದ ಅಮೇಶ್ ಅದಲ್ಜಾ.

ಹೀಗೆ ಹಲವು ಸಮಯದಿಂದ ಝೀಕಾ ವೈರಸ್ ಮೇಲೆ ನಡೆಯುತ್ತಿದ್ದ ಸಂಶೋಧನೆಯಲ್ಲಿ ಒಂದು ಹಂತದ ಪ್ರಗತಿ ಕಂಡು ಬಂದಿದೆ. ಇದು ಮುಂದಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ಮಾರಣಾಂತಿಕ ರೋಗಕ್ಕೆ ಔಷಧಿ ಕಂಡುಹಿಡಿಯುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂಬ ಭರವಸೆ ಮೂಡಿದೆ.

Leave a comment

FOOT PRINT

Top