An unconventional News Portal.

    ...
    isil-tunnel-3
    ವಿದೇಶ

    ಐಸಿಲ್ ವಿರುದ್ಧ ನಿರ್ಣಾಯಕ ಯುದ್ಧ: ಬಯಲಾಯ್ತು ಇಸ್ಲಾಮಿಕ್ ಉಗ್ರರ ‘ಸುರಂಗ’ ರಹಸ್ಯ!

    ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್’ (ಐಸಿಲ್- ಹಿಂದಿನ ಐಸಿಸ್)ನ ರಹಸ್ಯವೊಂದು ಬಯಲಾಗಿದೆ. ಇರಾಕಿನ ಮೊಸುಲ್ ಪಟ್ಟಣವನ್ನು ಐಸಿಲ್ ಕೈಯಿಂದ ಇರಾಕ್ ಸೇನೆ ಮತ್ತು ‘ಕುರ್ದಿಸ್ತಾನ ಪೆಶ್ಮಾರ್ಗ ಪಡೆ’ಗಳು ವಶಕ್ಕೆ ಪಡೆಯುತ್ತಿದ್ದಂತೆ, ಉಗ್ರ ಸಂಘಟನೆಯ ಕಾರ್ಯಾಚರಣೆಯ ಹಿನ್ನೆಲೆಯಲ್ಲಿದ್ದ ಅಚ್ಚರಿದಾಯಕ ಸಂಗತಿಗಳು ಹೊರಬರುತ್ತಿವೆ. ಅವುಗಳಲ್ಲಿ ಇಸ್ಲಾಮಿಕ್ ಉಗ್ರರ ಸುರಂಗ ಜಾಲವೂ ಒಂದು. ಐಸಿಲ್ ಕಮಾಂಡರ್ ಗಳ ಮನೆ ಅಡಿಯಲ್ಲಿ ಸುರಂಗಗಳಿರುವುದು ಸೇನೆಯ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಈ ಸುರಂಗಗಳ ಜಾಡು ಹಿಡಿದು ಹೊರಟ ಸೇನಾ ಪಡೆ ಅಧಿಕಾರಿಗಳು..

    October 20, 2016
    ...
    udupi-kanaka-nade
    ರಾಜ್ಯ

    ಕನಕ ನಡೆಗೆ ದಲಿತ- ದಮನಿತರ ‘ಪರ್ಯಾಯ’: ಮತ್ತೊಂದು ಸಂಘರ್ಷಕ್ಕೆ ಸಾಕ್ಷಿಯಾಗಲಿದೆಯಾ ಉಡುಪಿ?

    ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸೈದ್ಧಾಂತಿಕ ಸಂಘರ್ಷಕ್ಕೆ ಉಡುಪಿ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಪ್ರತಿಕ್ರಿಯೆ ರೂಪದಲ್ಲಿ ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಂಡ ನೀಡಿದ್ದ ‘ಕನಕ ನಡೆ’ಗೆ ವಿರುದ್ಧವಾಗಿ ‘ದಲಿತ ಧಮನಿತರ ಹೋರಾಟ ಸಮಿತಿ’ ‘ಸ್ವಾಭಿಮಾನಿ ನಡೆ’ ಮಾಡುವುದಾಗಿ ಬುಧವಾರ ಘೋಷಿಸಿದೆ. ಹೀಗಾಗಿ ಇದೇ 23ನೇ ತಾರೀಖು, ಉಡುಪಿಯಲ್ಲಿ ಸೈದ್ಧಾಂತಿಕ ವಿಚಾರಗಳಲ್ಲಿ ವಿರುದ್ಧ ದ್ರುವಗಳಾಗಿರುವ ಎರಡು ತಂಡಗಳು ಒಟ್ಟಿಗೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ. ಸಹಜವಾಗಿಯೇ, ಇದು ಸಾಮಾಜಿಕ ಜಾಲತಾಣಗಳ ಆಚೆಗೆ, ವಾಸ್ತವದಲ್ಲಿ ಪರ ಮತ್ತು ವಿರೋಧದ..

    October 20, 2016

Top