An unconventional News Portal.

ಕೃಷ್ಣಾ ನ್ಯಾಯಾಧಿಕರಣ ಆದೇಶ: ಆಂಧ್ರ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಾಣಕ್ಕೆ ಸೂಚನೆ

ಕೃಷ್ಣಾ ನ್ಯಾಯಾಧಿಕರಣ ಆದೇಶ: ಆಂಧ್ರ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಾಣಕ್ಕೆ ಸೂಚನೆ

ಕೃಷ್ಣಾನದಿ ನೀರಿನ ಮರು ಹಂಚಿಕೆಯನ್ನು ‘ಕೃಷ್ಣಾ ನದಿ ನ್ಯಾಯಾಧಿಕರಣ’ ತಳ್ಳಿ ಹಾಕಿದೆ. ಈ ಮೂಲಕ ಕಾವೇರಿ ವಿವಾದದಿಂದ ಜರ್ಝರಿತವಾಗಿದ್ದ ಕರ್ನಾಟಕಕ್ಕೆ ಕೃಷ್ಣಾ ತೀರ್ಪು ನೆಮ್ಮದಿ ತಂದಿದೆ

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡಬೇಕು, ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಇದರ ವಿಚಾರಣೆ ಸೋಮವಾರ ಮಗಿದಿದ್ದು ನೀರಿನ ಮರು ಹಂಚಿಕೆ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ತೀರ್ಪು ನೀಡಿದೆ.

ತೆಲಂಗಾಣ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಬೃಜೇಶ್‌ ಕುಮಾರ್‌ ನೇತೃತ್ವದ ನ್ಯಾಯಾಧಿಕರಣ ‘ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ರಾಜ್ಯವೂ ಹಂಚಿಕೊಳ್ಳಬೇಕು,’ ಎಂದು ತೀರ್ಪು ನೀಡಿದೆ. ಈ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ. ಇದರಿಂದಾಗ ತೆಲಂಗಾಣದ ಕೋರಿಕೆನ್ನು ವಿರೋಧಿಸಿದ್ದ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ನೆಮ್ಮದಿ ಸಿಕ್ಕಂತಾಗಿದೆ.

ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ತನ್ನ ಅಂತಿಮ ‘ಐ ತೀರ್ಪು’ ನೀಡಿತ್ತು. ಮತ್ತು 2013ರ ಸ್ಪಷ್ಟತಾ ಆದೇಶ ನೀಡಿತ್ತು. ಇವುಗಳಲ್ಲಿ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಗೆ ನೀರಿನ ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರು ನಿಗದಿಯಾಗಿದೆ.

Leave a comment

FOOT PRINT

Top