An unconventional News Portal.

  ...

  ಪ್ರತಿಭಟನಾಕಾರರ ಮೇಲೆ ಹರಿದ ವ್ಯಾನ್: ತಲೆ ಕೆಟ್ಟ ಫಿಲಿಪ್ಪೀನ್ಸ್ ಪೊಲೀಸರ ಹಿನ್ನೆಲೆ ಏನು?

  ಫಿಲಿಪ್ಪೀನ್ಸ್ ‘ಮಾದಕ ಲೋಕದಲ್ಲಿ ಮರಣ ಮೃದಂಗ’ವನ್ನು ನುಡಿಸಿದ್ದ ಪೊಲೀಸರು, ಇದೀಗ ಪ್ರತಿಭಟನಾಕಾರರ ಮೇಲೆ ವ್ಯಾನ್ ಹರಿಸಿದ್ದು ಜಾಗತಿಕ ಸುದ್ದಿಗೆ ಗ್ರಾಸವಾಗಿದೆ. ಈ ಮೂಲಕ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆಯ ಪೊಲೀಸರ ನಿರ್ದಯತೆ ಹೇಗಿರುತ್ತದೆ ಎಂಬುದಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಗಿದೆ. ಹಿಂದೆ, ಸ್ಥಳೀಯ ಮಾದಕ ಲೋಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ಸಾಲು ಸಾಲು ಎನ್ ಕೌಂಟರ್ಗಳನ್ನು ನಡೆಸಿದ್ದರು. ಈ ಕುರಿತು ‘ಸಮಾಚಾರ’ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಬುಧವಾರ ದೇಶದ ರಾಜಧಾನಿ ಮನಿಲಾದಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ಹೊರಗಡೆ ಜನರು […]

  October 19, 2016
  ...

  ಕೃಷ್ಣಾ ನ್ಯಾಯಾಧಿಕರಣ ಆದೇಶ: ಆಂಧ್ರ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಾಣಕ್ಕೆ ಸೂಚನೆ

  ಕೃಷ್ಣಾನದಿ ನೀರಿನ ಮರು ಹಂಚಿಕೆಯನ್ನು ‘ಕೃಷ್ಣಾ ನದಿ ನ್ಯಾಯಾಧಿಕರಣ’ ತಳ್ಳಿ ಹಾಕಿದೆ. ಈ ಮೂಲಕ ಕಾವೇರಿ ವಿವಾದದಿಂದ ಜರ್ಝರಿತವಾಗಿದ್ದ ಕರ್ನಾಟಕಕ್ಕೆ ಕೃಷ್ಣಾ ತೀರ್ಪು ನೆಮ್ಮದಿ ತಂದಿದೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡಬೇಕು, ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಇದರ ವಿಚಾರಣೆ ಸೋಮವಾರ ಮಗಿದಿದ್ದು ನೀರಿನ ಮರು ಹಂಚಿಕೆ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ […]

  October 19, 2016
  ...

  ‘ಕೆಎಟಿ’ಯಿಂದ ‘ಕೆಪಿಎಸ್‌ಸಿ’ ನೇಮಕಾತಿ ರದ್ದು ಆದೇಶ ವಜಾ; 362 ಜನ ಅಭ್ಯರ್ಥಿಗಳಿಗೆ ಎರಡು ತಿಂಗಳಲ್ಲೇ ಉದ್ಯೋಗ!

  362 ಗೆಜೆಟೆಡ್‌ ಪ್ರೊಬೇಷ­ನರಿ ಹುದ್ದೆಗಳ ಭರ್ತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರ 2014ರಲ್ಲಿ ರದ್ದುಗಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಇದೀಗ ವಜಾಗೊಳಿಸಿದ್ದು, 362 ಉದ್ಯೋಗಾರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸಿದ ಗೆಜೆಟೆಡ್‌ ಪ್ರೊಬೇಷ­ನರಿ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ 2011ರಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡು­ವಂತೆ ಸರಕಾರ ಹೊರಡಿಸಿದ್ದ 4 […]

  October 19, 2016
  ...

  ದೇವರನಾಡಲ್ಲಿ ‘ರಾಜಕೀಯ ಹತ್ಯೆ’ಗಳು: ಕೇಸರಿ v/s ಕೆಂಬಾವುಟ ನಡುವಿನ ಕದನದ ಅಸಲಿಯತ್ತು ಇದು!

  ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಹೆಸರಾಗಿದ್ದ ದೇವರ ನಾಡು ಕೇರಳದಲ್ಲೀಗ, ರಾಜಕೀಯ ಕೊಲೆಗಳು ಸದ್ದು ಮಾಡುತ್ತಿವೆ. ಮೇಲಿಂದ ಮೇಲೆ ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಸಾಮಾನ್ಯ ಕಾರ್ಯಕರ್ತರ ನೆತ್ತರು ಹರಿಯುತ್ತಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷಗಳ ನಡುವಿನ ಈ ಬೀದಿ ರಂಪಾಟ, ಈಗ ಸಹಜವಾಗಿಯೇ ರಾಷ್ಟ್ರೀಯ ಆಯಾಮವನ್ನು ಪಡೆದುಕೊಂಡಿದೆ. ಮುಖ್ಯವಾಗಿ ಬಿಜೆಪಿ ಇದನ್ನು ಕೇರಳ ರಾಜ್ಯದ ಹೊರಗೆ ‘ಸಾಮಾಜಿಕ ಜಾಗೃತಿ’ಯನ್ನು ಮೂಡಿಸಲು ಪ್ರಯತ್ನ ನಡೆಸುತ್ತಿದೆ. ಕಮ್ಯೂನಿಸ್ಟರನ್ನು ಬೆರಳೆಣಿಕೆಯಲ್ಲಿ ಎಣಿಸಬಹುದಾದ ಕರ್ನಾಟಕದಲ್ಲೂ, ಬಲಪಂಥೀಯ ಚಿಂತನೆಯ ಮಂದಿ ಸೆಮಿನಾರು, […]

  October 19, 2016

Top