An unconventional News Portal.

  ...

  ಕಾವೇರಿ ತಾಂತ್ರಿಕ ಸಮಿತಿಯಿಂದ ಸುಪ್ರಿಂ ಕೋರ್ಟಿಗೆ ವರದಿ ಸಲ್ಲಿಕೆ; ರಿಪೋರ್ಟಿನಲ್ಲೇನಿದೆ?

  ಕಾವೇರಿ ಉನ್ನತ ಮಟ್ಟದ ತಾಂತ್ರಿಕ ಸಮಿತಿ ತನ್ನ 87 ಪುಟಗಳ ಸುದೀರ್ಘ ಸ್ಥಳ ಪರಿಶೀಲನಾ ವರದಿಯನ್ನು ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಪರ್ಯಾಯ ಬೆಳೆಗಳು ಮತ್ತು ನೀರಾವರಿ ಅಳವಡಿಸಿಕೊಳ್ಳುವುದು; ಈ ಮೂಲಕ ನೀರಿನ ಪೋಲು ತಡೆಗಟ್ಟುವುದು. ಅಟೋಮ್ಯಾಟಿಕ್ ನೀರಿನ ಅಳತೆ ಮಾಪನ ಅಳವಡಿಸಿಕೊಳ್ಳುವುದು. ರಾಜ್ಯದ ಜನರಿಗೆ ಬುದ್ದಿವಾದ ಹೇಳುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಒಳಗೊಂಡ ವರದಿಯನ್ನು ಸಮಿತಿಯು ಸೋಮವಾರ ಸುಪ್ರಿಂ ಕೋರ್ಟಿಗೆ ಸಲ್ಲಿಸಿದೆ. ಕಾವೇರಿ ತಾಂತ್ರಿಕ ಸಮಿತಿ ಸಲ್ಲಿಸಿದ ರಿಪೋರ್ಟಿನಲ್ಲಿ ಒಟ್ಟು 6 ವಿಭಾಗಗಳಿದ್ದು ಸವಿವರವಾದ ವರದಿ ಇದಾಗಿದೆ. […]

  October 17, 2016
  ...

  ಬಾಹ್ಯಾಕಾಶ ನಿಲ್ದಾಣಕ್ಕೆ ಚೀನಿಯರ ಲಗ್ಗೆ: ಅಮೆರಿಕಾ ವಿರುದ್ದ ಸಡ್ಡು ಹೊಡೆಯಲು ಹೊಸ ಸಾಹಸ!

  ಚೀನಾ ಇದೇ ಮೊದಲ ಬಾರಿಗೆ ಇಬ್ಬರು ಅಂತರಿಕ್ಷಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ‘ಶೆಂಜೂ 11’ ಹೆಸರಿನ ಬಾಹ್ಯಾಕಾಶ ನೌಕೆ ಇಬ್ಬರು ಗಗನಯಾನಿಗಳನ್ನು ಹೊತ್ತು ಉತ್ತರ ಚೀನಾದ ‘ಜಿಕ್ವನ್ ಉಪಗ್ರಹ ಉಡಾವಣಾ ಕೇಂದ್ರ’ದಿಂದ ನಭಕ್ಕೆ ಚಿಮ್ಮಿತು. ಸೋಮವಾರ ಮುಂಜಾನೆ ಸ್ಥಳೀಯ ಕಾಲಮಾನ 7:30ಕ್ಕೆ ‘ಲಾಂಗ್ ಮಾರ್ಸ್-2ಎಫ್’ ಹೆಸರಿನ ರಾಕೆಟ್ ಶೇಂಜೂ 11ನ್ನು ಹೊತ್ತೊಯ್ಯಿತು. ಈ ಇಬ್ಬರ ಗಗನಯಾನಿಗಳು ಚೀನಾದ ‘ತಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರ’ದಲ್ಲಿ ಮೂವತ್ತು ದಿನ ಕಳೆದು ವಾಪಸ್ಸು ಬರಲಿದ್ದಾರೆ. ಇದು ಚೀನಾದ ಅಂತರಿಕ್ಷಯಾನಿಗಳ ಸುದೀರ್ಘ ಗಗನಯಾತ್ರೆಯಾಗಲಿದೆ. ಭವಿಷ್ಯದಲ್ಲಿ ಚಂದ್ರ […]

  October 17, 2016

Top