An unconventional News Portal.

  ...

  ಟೀಕೆ ಅತಿಯಾಯ್ತು; ಸಮಸ್ಯೆ ಮರೆಯಾಯ್ತು: ಬಳ್ಳಾರಿ ರೈತ ‘ಆತ್ಮಹತ್ಯೆ ಡ್ರಾಮಾ’ದ ಅಸಲಿ ಕತೆ ಇದು!

  “ಬಳ್ಳಾರಿಯಲ್ಲಿ ರೈತರ ಸಮಸ್ಯೆ ಇರುವುದು ನಿಜ ಸರ್. ಅವರ ಸಂಕಷ್ಟಗಳು ಘೋರವಾಗಿವೆ. ನಾವೇನೂ ಸಮಸ್ಯೆಯೇ ಇಲ್ಲದೇ ಡ್ರಾಮಾ ಮಾಡಲು ಹೊರಟಿರಲಿಲ್ಲ. ಇದೀಗ ಮಾಧ್ಯಮದವರೆಲ್ಲಾ ಸೇರಿಕೊಂಡು ಇದನ್ನೇ ಕಾಂಟ್ರಾವರ್ಸಿ ಮಾಡುತ್ತಿದ್ದಾರೆ. ಇದರಿಂದ ರೈತರ ಸಮಸ್ಯೆಯನ್ನು ಎಲ್ಲರೂ ಮರೆಯುತ್ತಿದ್ದಾರೆ,” ಎಂದು ವಿಷಾದದ ದನಿಯಲ್ಲೇ ಮಾತು ಆರಂಭಿಸಿದರು ಬಳ್ಳಾರಿ ಮೂಲದ ರೈತ ಮುಖಂ ಪುರುಷೋತ್ತಮ್ ಗೌಡ. ಗುರುವಾರ ಬೆಳಿಗ್ಗೆ ಬಳ್ಳಾರಿಯ ಕೊರಲಗುಂದಿ ಗ್ರಾಮದಲ್ಲಿ ನಡೆದಿರುವ ರೈತರೊಬ್ಬರ ವಿಷ ಸೇವನೆ ಪ್ರಹಸನದಿಂದಾಗಿ ರೈತರ ಸಮಸ್ಯೆಗಳು ಸುದ್ದಿ ಕೇಂದ್ರಕ್ಕೆ ಬರುವ ಹಾದಿಯಲ್ಲಿಯೇ ದಿಕ್ಕು ತಪ್ಪಿವೆ. ವಿವಾದ ಮತ್ತು […]

  October 13, 2016
  ...

  ‘ಉಲ್ಟಾ ಪಲ್ಟಾ’: #ಕನಕ ನಡೆ ಯಾರ ವಿರುದ್ಧವೂ ಅಲ್ಲ; ಚಕ್ರವರ್ತಿ ಸೂಲಿಬೆಲೆ ಸ್ಪಷ್ಟೀಕರಣ!

  ಚಲೋ ಉಡುಪಿ ಸಮಾವೇಶದ ಬೆನ್ನಿಗೇ ಚಕ್ರವರ್ತಿ ಸೂಲಿಬೆಲೆ ನಡೆಸಲು ಹೊರಟಿರುವ ‘ಕನಕ ನಡೆ’ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಕಮ್ಯೂನಿಸ್ಟ್ ವಿರೋಧಿ ನಡಿಗೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ‘ಸಮಾಚಾರ’ದ ಜೊತೆ ಮುಕ್ತವಾಗಿ ‘ಕನಕ ನಡೆ’ ಸಂಘಟಕ, ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ‘ಕನಕ ನಡೆ’ ಯಾರ ವಿರುದ್ಧವೂ ಅಲ್ಲ; ಬದಲಿಗೆ ಸ್ವಚ್ಚ ಭಾರತ್ ಅಭಿಯಾನ ಭಾಗವಾಗಿ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. […]

  October 13, 2016
  ...

  ‘ಸಾಮಾನ್ಯ ಜ್ಞಾನ’: ಏನಿದು ಪಂಕ್ತಿ ಭೇದ?; ಊಟದ ಆಚರಣೆಗೆ ಯಾಕಿಷ್ಟು ವಿರೋಧ?

  ದಲಿತ ಹಾಗೂ ದಮನಿತರ ಸ್ವಾಭಿಮಾನಿ ಜಾಥಾದ ಸಮಾರೋಪ ಸಮಾವೇಶ ಉಡುಪಿಯಲ್ಲಿ ಇದೇ ಭಾನುವಾರ ನಡೆಯಿತು. ಈ ಸಂದರ್ಭ ‘ಉಡುಪಿ ಮಠ’ದಲ್ಲಿ ನಡೆಯುತ್ತಿರುವ ‘ಪಂಕ್ತಿ ಭೇದ’ಕ್ಕೆ ಕೊನೆಹಾಡಲು ಗುಜರಾತ್ ಮೂಲದ ಹೋರಾಟಗಾರ ಜಿಗ್ನೇಶ್ ಮೇವಾನಿ ಎರಡು ತಿಂಗಳ ಗಡುವು ನೀಡಿದ್ದರು. ಇದಾದ ಬೆನ್ನಿಗೆ ಈಗ ಪಂಕ್ತಿ ಭೇದದ ಸುತ್ತ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಏನಿದು ‘ಪಂಕ್ತಿ ಭೇದ’? ಮಠ ಮತ್ತು ದೇವಸ್ಥಾನಗಳಲ್ಲಿ ಬ್ರಾಹ್ಮಣರು ಮತ್ತು ಉಳಿದ ಜಾತಿಗಳ ನಡುವೆ ಊಟಕ್ಕಾಗಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡುವುದೇ ಪಂಕ್ತಿ (ಊಟದ […]

  October 13, 2016

Top