An unconventional News Portal.

  ...
  all party meeting siddaramayya and devegowda
  ರಾಜ್ಯ

  ‘ಕಾವೇರಿದ ರಾಜಕಾರಣ’ದ ಶವಪರೀಕ್ಷೆ: ಬೆಟ್ಟ ಅಗೆದೂ, ‘ನೀರು ಹರಿಸಿದವರು’ ನಮ್ಮ ರಾಜಕಾರಣಿಗಳು!

  ಸುಮಾರು 40 ದಿನಗಳ ಅಂತರದಲ್ಲಿ ನಡೆದ ರಾಜ್ಯ ಬಂದ್- ಬೀದಿ ಹೋರಾಟಗಳು, ಒಂದು ಗೋಲಿಬಾರ್, ಎರಡು ಸಾವು, 25 ಸಾವಿರ ಕೋಟಿ ನಷ್ಟ, ಎರಡು ವಿಶೇಷ ಅಧಿವೇಶನಗಳು, ಅದಕ್ಕಾಗಿ ಹೆಚ್ಚುಕಡಿಮೆ 2 ಕೋಟಿ ವೆಚ್ಚ, ಸಾಲು ಸಾಲು ಸುಪ್ರಿಂ ಕೋರ್ಟ್ ತೀರ್ಪುಗಳು, ದೇಶದ ಮುಂದೆ ರಾಜ್ಯಕ್ಕೆ ಛೀಮಾರಿ, ರಾಜಕೀಯ ಲಾಭ ನಷ್ಟದ ನಡೆಗಳು, ಮತ್ಸದ್ಧಿತನದ ಮೆರೆದಾಟಗಳು, ವಿವೇಚನೆ ಪಕ್ಕಕ್ಕಿಟ್ಟ ಆಡಳಿತ ಹಾಗೂ ಕಾವೇರಿ ವಿಚಾರದಲ್ಲಿ ‘ಬೆಟ್ಟ ಅಗೆದು; ಕೊನೆಗೂ ಇಲಿಯನ್ನೇ ಹಿಡಿಯುವ’ ಹೈ ಡ್ರಾಮಾದ ಪುನರಾವರ್ತನೆ… ಇವು..

  October 4, 2016
  ...
  cauvery
  ಸುದ್ದಿ ಸಾರ

  ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ: ರಾಜ್ಯಕ್ಕೆ ತಾತ್ಕಾಲಿಕ ನಿರಾಳತೆ

  ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆಯನ್ನು ಸುಪ್ರಿಂ ಕೋರ್ಟ್ ಸದ್ಯಕ್ಕೆ ಮುಂದೂಡಿದ್ದು ಕರ್ನಾಟಕ ತುಸು ನಿರಾಳವಾಗಿದೆ. ಇದರಿಂದ ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ. ಆದರೆ ಮತ್ತೆ 12 ದಿನಗಳ ಕಾಲ 24,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯಕ್ಕೆ ಆದೇಶ ನೀಡಿದೆ. ಇದಲ್ಲದೇ ಕೋರ್ಟ್ ತಾಂತ್ರಿಕ ಸಮಿತಿಯನ್ನೂ ನೇಮಿಸಿ ವರದಿ ಸಲ್ಲಿಸಲು ಅಕ್ಟೋಬರ್ 17ರ ಗಡುವು ವಿಧಿಸಿದ್ದು ಇಂದಿನ ಆದೇಶದ ವಿಶೇಷ. ಮಂಗಳವಾರದ ವಿಚಾರಣೆಯಲ್ಲಿ ಸುಪ್ರಿಂ ಆದೇಶವನ್ನು ಪಾಲನೆ ಮಾಡದ ಕರ್ನಾಟಕವನ್ನು ಕೋರ್ಟ್ ತೀರ್ವ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ತನ್ನ..

  October 4, 2016
  ...
  lodha-bcci
  ಸುದ್ದಿ ಸಾರ

  ಬಿಸಿಸಿಐ vs ಲೋಧಾ: ನ್ಯೂಜಿಲ್ಯಾಂಡ್ ಸರಣಿ ಮೇಲೆ ತೂಗುಗತ್ತಿ

  ನ್ಯಾಯಮೂರ್ತಿ ಲೋಧಾ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾಳಗ ತಾರಕಕ್ಕೇರಿದೆ. ಲೋಧಾ ಸಮಿತಿ ಬಿಸಿಸಿಐನ ಬ್ಯಾಂಕ್ ಖಾತೆಗಳ ವ್ಯವಹಾರ ನಿಲ್ಲಿಸುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ನ್ಯೂಜಿಲ್ಯಾಂಡ್ ಜೊತೆಗಿನ ಸರಣಿ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಮೂಲಕ ಹಣದ ಅಮಲಿನಲ್ಲಿ ತೇಲುತ್ತಿದ್ದ ಬಿಸಿಸಿಐಗೆ ಕೊನೆಗೂ ಕಾನೂನಿನ ಬಿಸಿ ಮುಟ್ಟಿದೆ. ಸದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಕ್ರಿಕೆಟ್ ಸರಣಿ ನಡೆಯುತ್ತಿದೆ. ಇನ್ನೂ ಒಂದು ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಸರಣಿ..

  October 4, 2016
  ...
  kashmir-reader
  ಪತ್ರಿಕೆ

  ‘ಹಿಂಸೆಗೆ ಪ್ರಚೋದನೆ ಆರೋಪ’: ‘ಕಾಶ್ಮೀರಿ ರೀಡರ್’ ಮುದ್ರಣಕ್ಕೆ ಸ್ಥಳೀಯ ಸರಕಾರದ ಮೂಗುದಾರ!

  ‘ಕಾಶ್ಮೀರ ಸಂಘರ್ಷ’ ಜಾರಿಯಲ್ಲಿರುವಾಗಲೇ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ದಿನ ಪತ್ರಿಕೆ ‘ಕಾಶ್ಮೀರ್ ರೀಡರ್’ ಮುದ್ರಣದ ಮೇಲೆ ಸ್ಥಳೀಯ ಸರಕಾರ ನಿಷೇಧ ಹೇರಿದೆ. ಬುರ್ಹಾನ್ ವನಿ ಸಾವಿನ ನಂತರ ಕಾಶ್ಮೀರ ಕಣಿವೆಯಲ್ಲಿ ಹುಟ್ಟಿಕೊಂಡ ಹಿಂಸಾಚಾರದ ವೇಳೆ ಜನರ ಧ್ವನಿಯಾಗಿ ‘ಕಾಶ್ಮೀರಿ ರೀಡರ್’ ಗುರುತಿಸಿಕೊಂಡಿತ್ತು. ಈಗ ಅದೇ ಪತ್ರಿಕೆಯನ್ನು ‘ಹಿಂಸೆಗೆ ಪ್ರಚೋದನೆ’ ನೀಡುತ್ತಿದೆ ಎಂಬ ಕಾರಣ ಮುಂದೊಡ್ಡಿ ಮುದ್ರಣವನ್ನು ಸ್ಥಗಿತಗೊಳಿಸಲು ಹೇಳಲಾಗಿದೆ. ದೇಶದ ಗಮನವೇ ಇವತ್ತು ಕಾಶ್ಮೀರದತ್ತ ಹೊರಳಿರುವ ಈ ಸಂದರ್ಭದಲ್ಲಿ, ಬಿಜೆಪಿ ಬೆಂಬಲಿತ ಮೆಹಬೂಬ ಮುಫ್ತಿ ನೇತೃತ್ವದ ಸರಕಾರದ..

  October 4, 2016

Top