An unconventional News Portal.

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

  ...
  ಸುದ್ದಿ ಸಾರ

  ಎನ್ಕೌಂಟರಿನಲ್ಲಿ 8 ‘ಸಿಮಿ’ ಕಾರ್ಯಕರ್ತರ ಹತ್ಯೆ; ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಖೈದಿಗಳ ದುರಂತ ಅಂತ್ಯ!

  ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕೇಂದ್ರ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದಾರೆ. ಸೋಮವಾರ ನಸುಕಿನ ವೇಳೆ ಈ ಕೃತ್ಯ ನಡೆದಿದ್ದು ಪರಾರಿಯಾದವರೆಲ್ಲಾ ನಿಷೇಧಿತ ‘ಸಿಮಿ’ ಸಂಘಟನೆಗೆ ಸೇರಿದ ಶಂಕಿತರಾಗಿದ್ದಾರೆ. ಈ ಮೂಲಕ ಮಧ್ಯ ಪ್ರದೇಶದ ಜೈಲಿನಿಂದ ಸಿಮಿ ಕಾರ್ಯಕರ್ತರು ಎರಡನೇ ಬಾರಿ ತಪ್ಪಿಸಿಕೊಂಡಿದ್ದಾರೆ. “ಸೋಮವಾರ ಬೆಳಿಗ್ಗೆ 2 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಖೈದಿಗಳು ಹೊದಿಕೆಗಳು ಮತ್ತು ಬೆಡ್ ಶೀಟ್ಗಳನ್ನು ಬಳಸಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸದೆ ಬಡಿದಿದ್ದಾರೆ. ನಂತರ ಜೈಲಿನ ಬೀಗ ತೆಗೆದು ಹೊರ..

  October 31, 2016
  ...
  ರಾಜ್ಯ

  ‘ಹಿರೇಮಠ್ ಪಟಾಕಿ’: ದೇವೇಗೌಡರ ಕುಟುಂಬದ ಮೇಲೆ 200 ಎಕರೆ ಭೂಕಬಳಿಕೆ ಆರೋಪ!

  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮದ್ದೂರು ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಅವರ ಸಂಬಂಧಿಗಳು ಒಟ್ಟು 200 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ… ಹೀಗಂಥ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಸಲಹೆಗಾರ ಎಸ್‌. ಆರ್. ಹಿರೇಮಠ್ ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಿಗಾನಹಳ್ಳಿಯಲ್ಲಿ 110 ಎಕರೆ ಗೋಮಾಳ, ಪರಿಶಿಷ್ಟರಿಗೆ ನೀಡಲಾದ ಏಳು ಎಕರೆ ಸೇರಿದಂತೆ ಒಟ್ಟು 200 ಎಕರೆ ಕಬಳಿಕೆ ಮಾಡಿದ್ದಾರೆ ಎಂದು ಹೇಳಿರುವ ಹಿರೇಮಠ್ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ದೀಪಾವಳಿಯ..

  October 31, 2016
  ...
  ದೇಶ

  ಅರಿವಿನ ಹಬ್ಬ ದೀಪಾವಳಿ ಮತ್ತು ಪಟಾಕಿ ಉದ್ಯಮದ ಒಡಲಾಳದಲ್ಲಿ ಚೈನಾ ಮೂಡಿಸಿದ ತಲ್ಲಣಗಳು!

  ಹಿಂದೂಗಳು ಬಹು ಸಂಖ್ಯಾತರಾಗಿರುವ ಭಾರತದಲ್ಲಿ ದೀಪಾವಳಿ ಪ್ರಮುಖ ಹಬ್ಬ. ಈ ಹಬ್ಬಕ್ಕೆ ದೇಶದಾದ್ಯಂತ ಸಾವಿರಾರು ಕೋಟಿ ರೂಪಾಯಿಯ ಪಟಾಕಿ ಸುಡಲಾಗುತ್ತದೆ. ಪಟಾಕಿ ತಯಾರಿಕೆಯ ಸುತ್ತ ಕಟ್ಟಿಕೊಂಡ ಬದುಕುಗಳು, ಸಾವಿರಾರು ಕೋಟಿಯ ಉದ್ಯಮ, ಅದರೊಳಗಿನ ತಲ್ಲಣಗಳು ‘ಬೆಳಕಿನ ಹಬ್ಬ’ದ ತಳದಲ್ಲಿರುವ ಕತ್ತಲೆಯ ಕತೆಯನ್ನು ಹೇಳುತ್ತವೆ. ಈ ಕತೆಗೆ ಕಿವಿಯಾಗಬೇಕಾದರೆ ಇವತ್ತು ಭಾರತದ ಪಟಾಕಿ ತಯಾರಿಕೆಯ ರಾಜಧಾನಿ ಎಂದೇ ಬಿಂಬಿಸಲ್ಪಡುವ ತಮಿಳುನಾಡಿನ ಶಿವಕಾಶಿಯ ಸದ್ಯದ ಒಡಲ ಕರೆಗೆ ಕೇಳಿಸಿಕೊಳ್ಳಬೇಕಿದೆ. ಸ್ಪೋಟಕಗಳ ರಾಜಧಾನಿ ಶಿವಕಾಶಿಯ ಭವಿಷ್ಯದ ದಿನಗಳು ಅಂಧಕಾರದತ್ತ ಮುಖಮಾಡಿದಂತೆ ಭಾಸವಾಗುತ್ತವೆ. ದೇಶವನ್ನೆಲ್ಲಾ..

  October 30, 2016
  ...
  ರಾಜ್ಯ

  ‘ಹೇ ರಾಘವೇಶ್ವರ…’: ಗೋಕರ್ಣ ಹಸ್ತಾಂತರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ‘ಸುಪ್ರಿಂ’ ಗ್ರೀನ್ ಸಿಗ್ನಲ್!

  ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು, ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ  ಸಂಬಂಧಿಸಿದ ಪ್ರಕರಣವೊಂದರಲ್ಲಿ ಇದೀಗ ರಾಘವೇಶ್ವರ ಸ್ವಾಮಿಗೆ ಸುಪ್ರಿಂ ಕೋರ್ಟಿನಲ್ಲಿ ಹಿನ್ನಡೆಯಾಗಿದೆ. ಹೈಕೋರ್ಟ್ ನೀಡಿದ್ದ ಸ್ಟೇ ಆದೇಶವನ್ನು ಉಲ್ಲಂಘಿಸಿ 2008ರಲ್ಲಿ ಐವರು ಅಧಿಕಾರಿಗಳು ಗೋಕರ್ಣ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಿದ್ದರು. ಈ ಕುರಿತು ಅಧಿಕಾರಿಗಳ ವಿರುದ್ಧ ‘ನ್ಯಾಯಾಂಗ ನಿಂದನೆ’ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸದಂತೆ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದಿಂದ ತಡೆ ಪಡೆದುಕೊಂಡಿದ್ದರು; ಆ ತಡೆ ಶುಕ್ರವಾರ ತೆರವಾಗಿದ್ದು..

  October 29, 2016
  ...
  ಸುದ್ದಿ ಸಾರ

  ದುತಾರ್ತೆ ನಾಡಿನಲ್ಲಿ ನಡುಬೀದಿಯಲ್ಲೇ ಮಹಾಪೌರನಿಗೆ ಗುಂಡಿಕ್ಕಿದ ಪೊಲೀಸರು!

  ಮಾದಕ ವಸ್ತುಗಳ ವಿರುದ್ಧ ಭಾರಿ ಸಮರ ಸಾರಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ಯಾರನ್ನೂ ಬಿಡುವಂತೆ ಕಾಣಿಸುತ್ತಿಲ್ಲ. ಇದೀಗ ಅಧ್ಯಕ್ಷರ ಪೊಲೀಸರು ಫಿಲಿಪ್ಪೀನ್ಸ್ ಮೇಯರ್ ರನ್ನೇ ನಡುಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೇಯರ್ ಮತ್ತು ಆತನ 9 ಜನ ಸಂಗಡಿಗರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದುತಾರ್ತೆಯ ಮಾದಕ ವಸ್ತುಗಳ ಮೇಲಿನ ಯುದ್ಧದಲ್ಲಿ ನಡೆದ ಭೀಕರ ಕದನಗಳಲ್ಲಿ ಈ ಘಟನೆ ಪ್ರಮುಖವಾಗಿದೆ. ಸೌದಿ ಅ್ಯಂಪೆಟನ್ ನಗರದ ಮೇಯರ್ ಸಂಶುದ್ದೀನ್ ದಿಮಾಕೋಮ್ ಪೊಲೀಸರ..

  October 28, 2016
  ...
  ಫೋಕಸ್

  ‘ಸೋ ಕಾಲ್ಡ್ ಅಭಿವೃದ್ಧಿ’ ಮತ್ತು ಇವತ್ತಿಗೂ ಕನಸಾಗಿಯೇ ಉಳಿದಿರುವ ನಿಕಾರಗುವಾದ ಕಾಲುವೆ ಯೋಜನೆ!

  ’16ನೇ ಶತಮಾನದಲ್ಲಿ ಸ್ಪಾನಿಶ್ ಸಂಶೋಧಕನೊಬ್ಬ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಜೋಡಿಸಲು ಇರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಂಡ. ಫ್ರಾನ್ಸ್ ದೊರೆ ನೆಪೋಲಿಯನ್ 3, ಎರಡು ಸಮುದ್ರಗಳನ್ನು ಜೋಡಿಸಲು ಕಾಲುವೆಯೊಂದನ್ನು ಕಟ್ಟುವ ಕನಸು ಕಂಡಿದ್ದ. ಬೃಹತ್ ಪ್ರಮಾಣದಲ್ಲಿ ರೈಲು ಹಳಿ ಕಂಪನಿಯೊಂದನ್ನು ಬೆಳೆಸಿದ್ದ ಉದ್ಯಮಿ ಕಾರ್ನಿಯಸ್ ವೆಂಡರ್ಬಿಲ್ಟ್ ಒಂದು ಹಂತದಲ್ಲಿ ಕಾಲುವೆ ಕಟ್ಟಲು ಹಕ್ಕುಗಳನ್ನು ಪಡೆದುಕೊಂಡಿದ್ದ. ನಿಕಾರಗುವಾ (ಲ್ಯಾಟಿನ್ ಅಮೆರಿಕಾ ದೇಶ) ಇತಿಹಾಸ ಇಂತಹ 12ಕ್ಕೂ ಹೆಚ್ಚು ಕಾಲುವೆ ನಿರ್ಮಾಣ ಯೋಜನೆಗಳ ವಿಫಲತೆಗೆ ಸಾಕ್ಷಿಯಾಗಿದೆ…’ ಹೀಗಂತ ‘ನ್ಯೂ ಯಾರ್ಕ್..

  October 28, 2016
  ...
  ದೇಶ

  ಮೋದಿ ಸಂಘ; ‘ಫೋರ್ಡ್ ಫೌಂಡೇಷನ್’ ವ್ಯವಹಾರಕ್ಕಿಲ್ಲ ಕಾನೂನಿನ ಭಂಗ: ಹಿಂಗ್ಯಾಕೆ?

  ದೇಶದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಸರಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸುವುದು ದುಸ್ತರವಾಗಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ. ಆದರೆ ಇಲ್ಲೊಂದು ಸಂಸ್ಥೆ ಸರಕಾರದ ಜತೆ ‘ಮ್ಯಾನೇಜ್’ ಮಾಡಿಕೊಂಡು ಆರಾಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಂದ ಹಾಗೆ, ಈ ಸಂಸ್ಥೆಯ ಹೆಸರು ‘ಫೋರ್ಡ್ ಫೌಂಡೇಷನ್’. ಜಗತ್ತಿನ ಶ್ರೀಮಂತ ‘ಸರಕಾರೇತರ ಸಂಸ್ಥೆ’ಗಳಲ್ಲಿ ಒಂದಾದ ಫೋರ್ಡ್ ಫೌಂಡೇಷನ್ ಮೋದಿ ಸರಕಾರದ ಜತೆ ಅಲಿಖಿತ ‘ಹೊಂದಾಣಿಕೆ’ ಮಾಡಿಕೊಂಡಿದೆ. ಈ ಕಾರಣಕ್ಕೆ ಸರಕಾರದ ನಿಯಂತ್ರಣದ ನಂತರವೂ ಫೌಂಡೇಷನ್ನಿನ ಭಾರತೀಯ ವಿಭಾಗದ ಕಾರ್ಯನಿರ್ವಹಣೆಗೆ ಎಲ್ಲೂ ಧಕ್ಕೆ ಬಂದಿಲ್ಲ..

  October 28, 2016
  ...
  ಟಿವಿ

  ‘ಟಿವಿ 9 ಫಾರ್ ಸೇಲ್’: ಆಂಧ್ರ ಮೂಲದ ಸುದ್ದಿವಾಹಿನಿಗಳ ಗುಚ್ಛ ಝೀ ತೆಕ್ಕೆಗೆ?

  13 ವರ್ಷಗಳನ್ನು ಕಳೆದ ಕಂಪನಿ, ಪ್ರಾದೇಶಿಕ ಭಾಷಾ ಟಿವಿ ಮಾಧ್ಯಮದಲ್ಲಿ ಹೆಸರುವಾಸಿಯಾಗಿರುವ ಟಿವಿ 9 ಸಮೂಹ ‘ಝೀ ಗ್ರೂಪ್’ ಪಾಲಾಗಲಿದೆ. ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ‘ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್’ (ಎಬಿಸಿಎಲ್)ನಲ್ಲಿ ದೊಡ್ಡ ಪ್ರಮಾಣದ ಶೇರು ಖರೀದಿಗೆ ‘ಝೀ ಸಂಸ್ಥೆ’ ಮುಂದಾಗಿದೆ. ಇದೇ ‘ಎಬಿಸಿಎಲ್’ ಕಂಪೆನಿ ವತಿಯಿಂದ ಕನ್ನಡವೂ ಸೇರಿದಂತೆ, ಹಲವು ಭಾಷೆಗಳಲ್ಲಿ 24/7 ಸುದ್ದಿ ವಾಹಿನಿಗಳು ಟಿವಿ 9 ಬ್ರ್ಯಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಟಿವಿ 9 ಮಾರಾಟದ ಸುದ್ದಿಯನ್ನು ಮೂಲಗಳು ಖಚಿತಪಡಿಸಿದ್ದು, ಸದ್ಯದಲ್ಲೇ ವ್ಯವಹಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು..

  October 27, 2016
  ...
  ಸುದ್ದಿ ಸಾರ

  ‘ಗೂಢಚರ್ಯೆ ಆರೋಪ’: ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿ ಬಂಧನ!

  ಭಾರತ-ಪಾಕಿಸ್ತಾನ ಮಧ್ಯೆ ಕಾವೇರಿದ ವಾತಾವರಣ ಜಾರಿಯಲ್ಲಿರುವ ಹೊತ್ತಲ್ಲೇ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಗೂಢಚರ್ಯೆ ಆರೋಪದ ಮೇಲೆ ರಾಯಭಾರ ಕಚೇರಿ ಸಿಬ್ಬಂದಿ ಮೆಹ್ಮೂದ್ ಅಖ್ತರ್ ರನ್ನು ವಿಚಾರಣೆಗಾಗಿ ಅರೆಸ್ಟ್ ಮಾಡಲಾಗಿದೆ. ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಹೊಂದಿರುವ ಮೆಹ್ಮೂದ್ ಅಖ್ತರ್ ರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು ಸದ್ಯ ಚಾಣಾಕ್ಯಪುರಿ ಜೈಲಿನಲ್ಲಿಅಖ್ತರ್ ವಿಚಾರಣೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಖ್ತರ್ ಬಳಿಯಲ್ಲಿ ಭಾರತದ ರಕ್ಷಣಾ ಇಲಾಖೆಗೆ ಸೇರಿದ ರಣತಂತ್ರಗಳ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ..

  October 27, 2016
  ...
  ರಾಜ್ಯ

  ‘ರಾಮಾ ರಾಮಾ ರೇ..’: ಲಂಚ ಪ್ರಕರಣದಲ್ಲಿ ಯಡಿಯೂರಪ್ಪಗೆ ಸಿಬಿಐನಿಂದ ಸಿಕ್ತು ‘ವಿಶೇಷ’ ಖುಲಾಸೆ!

  ಕಾನೂನಿನ ಅಡಿಯಲ್ಲಿ ಸತ್ಯಕ್ಕೆ ಹಲವು ಆಯಾಮಗಳಿರುತ್ತವೆ ಎಂಬುದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ‘ಯಡಿಯೂರಪ್ಪ v/s ಸಿಬಿಐ’ ಪ್ರಕರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಬುಧವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ತನ್ನಲ್ಲಿ 2012ರಲ್ಲಿ ದಾಖಲಾಗಿದ್ದ ‘RC- 8 A’ ಪ್ರಕರಣದಲ್ಲಿ ಯಡಿಯೂರಪ್ಪ ಸೇರಿದಂತೆ ಅಷ್ಟೂ ಆರೋಪಿಗಳನ್ನು ದೂಷಮುಕ್ತಗೊಳಿಸಿದೆ. ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ ಮತ್ತು ವಿಜೆಯೇಂದ್ರ, ಅಳಿಯ ಆರ್. ಎನ್. ಸೋಹನ್ ಕುಮಾರ್, ಅವರ ಪ್ರೇರಣ ಎಜುಕೇಶನ್ ಟ್ರಸ್ಟ್, ಮಾಜಿ ಸಚಿವ ಎನ್. ಎನ್. ಕೃಷ್ಣಯ್ಯ ಶೆಟ್ಟಿ, ಸೌತ್ ವೆಸ್ಟ್..

  October 26, 2016

FOOT PRINT

Top