An unconventional News Portal.

  ...

  ಸರಕಾರಿ ಸ್ವಾಮ್ಯದ BSNL ಉದ್ಧಾರ ಮಾಡಲು ಪ್ರಧಾನಿ ಮೋದಿ ಇಷ್ಟು ಮಾಡಿದ್ದರೆ ಸಾಕಿತ್ತು!

  ‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡ ಬೆನ್ನಿಗೆ ಟೀಕೆಗಳು ಶುರುವಾಗಿವೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಚಾರ ಮಾಡುವುದು ಬಿಟ್ಟು ಖಾಸಗಿ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಸಹಜವಾಗಿಯೇ ಕೇಳಿಬರುತ್ತಿದೆ. ಇವತ್ತು ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ನಷ್ಟದಲ್ಲಿ ಮುಳುಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸರಕಾರಗಳ ನಿರ್ಲಕ್ಷ, ಅಧಿಕಾರಿ ವರ್ಗದ ಅಸಡ್ಡೆ ಮತ್ತು ಭ್ರಷ್ಟಾಚಾರಗಳು ಕಣ್ಣಿಗೆ ರಾಚುತ್ತವೆ. ಜತೆಗೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಸರಕಾರಿ ಸ್ವಾಮ್ಯದ ಖಾಸಗಿ ಕಂಪೆನಿಗಳ ಉದ್ಧಾರಕ್ಕೆ ನೀರು ಗೊಬ್ಬರ ಸುರಿದಿರುವುದು ಕಾಣಿಸುತ್ತದೆ. […]

  September 5, 2016
  ...

  ‘ಹೊಡೀರಿ, ಆದ್ರೆ ಮೂಳೆ ಮುರಿಯಬೇಡಿ’: ಗೋ ರಕ್ಷಣೆಗೆ VHP ಮುಂದಿಟ್ಟ ಹೊಸ ಸೂತ್ರ!

  ಹೊಡೀರಿ; ಆದರೆ ಮೂಳೆ ಮುರಿಯಬೇಡಿ… ಇದು ವಿಶ್ವಹಿಂದೂ ಪರಿಷತ್ ಗೋ ರಕ್ಷಣೆಗಾಗಿ ತನ್ನ ಕಾರ್ಯಕರ್ತರ ಮುಂದಿಟ್ಟಿರುವ ಹೊಸ ಸೂತ್ರ. ಉತ್ತರ ಪ್ರದೇಶ, ಉತ್ತರಖಾಂಡ್ ಮತ್ತು ಬೃಜ್ ಪ್ರದೇಶದ ಹಿರಿಯ ಗೋ ರಕ್ಷಕರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ‘ಕೇಂದ್ರ ಗೋ ರಕ್ಷಾ ಸಮಿತಿ’ಯ ಖೇಮ್ಚಂದ್ ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ‘ಟಿಓಐ’ ವರದಿ ಮಾಡಿದೆ. ಸಭೆಯಲ್ಲಿ ಮಾತನಾಡಿದ ಖೇಮ್ಚಂದ್, “ಗೋ ಸಾಗಣೆ ಮಾಡುವವರಿಗೆ ಪಾಠ ಕಲಿಸಬೇಕಿದೆ. ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಬೇಕಿದೆ. ಆದರೆ, ಗೋ ಸಾಗಣೆ ಮಾಡುವವರನ್ನು ಹೊಡೆದರೂ ಮೂಳೆ […]

  September 5, 2016
  ...

  ‘ಕಾಶ್ಮೀರ ಸಂಘರ್ಷ’: ವಿಫಲವಾದ ಸರ್ವಪಕ್ಷ ನಿಯೋಗದ ಮಾತುಕತೆ ಯತ್ನ; ಉಪಯೋಗಕ್ಕೆ ಬಾರದ ‘2010 ಸೂತ್ರ’

  ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸದ್ಯಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆಗಿನ ಮಾತುಕತೆ ವಿಫಲವಾಗಿದೆ. ಕಾಶ್ಮೀರ ಸಂಘರ್ಷಕ್ಕೆ 2010ರ ಸೂತ್ರದಂತೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾನುವಾರ ಇಡೀ ದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸರ್ವ ಪಕ್ಷ ನಿಯೋಗ ನಡೆಸಿದ ಯತ್ನ ಫಲ ನೀಡಲಿಲ್ಲ. ಈ ಹಿಂದೆಯೇ ನಿರ್ಧರಿಸಿದಂತೆ ರಾಜನಾಥ್ ಸಿಂಗ್ ನೇತೃತ್ವದ 20 ಪಕ್ಷಗಳ 30 ಜನರ ಸರ್ವ ಪಕ್ಷ ನಿಯೋಗ ಭಾನುವಾರ ಮುಂಜಾನೆ ಕಾಶ್ಮೀರದಲ್ಲಿ ಬಂದಿಳಿದಿದೆ. ಇವರನ್ನು ತಂಡಗಳಾಗಿ ವಿಭಜನೆ ಮಾಡಿ ಪ್ರತ್ಯೇಕತಾವಾದಿಗಳಾದ […]

  September 4, 2016
  ...

  ‘ಸಂತೆ’ ಮದರ್ ತೆರೆಸಾ ಪವಾಡ ಮಾಡಿದ್ರಾ?: CNN ಬಿಚ್ಚಿಟ್ಟ ಜಿಜ್ಞಾಸೆ ಕತೆ!

  ಭಾರತೀಯ ಕಾಲಮಾನ ಭಾನುವಾರ ರಾತ್ರಿ, ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್, ದಿವಂಗತ ಮದರ್ ತೆರೆಸಾಗೆ ಸಂತ ಪದವಿ ಪ್ರಧಾನ ಮಾಡಲಿದ್ದಾರೆ. ಆಕೆಯ ಅಭಿಮಾನಿಗಳಿಗಿದು ಸಂಭ್ರಮದ ವಿಚಾರವಾದರೆ, ಇನ್ನು ಕೆಲವರು ‘ಸೇವೆ’ ನೀಡಿದಾಕೆಗೆ ಸಂತ ಪದವಿ ನೀಡುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದರಾಚೆಗೆ ಮದರ್ ತೆರೆಸಾ ಏನು? ಆಕೆ ಯಾರು? ಅವರು ನೀಡಿದ ಜನ ಸೇವೆಗಳು ಹೇಗಿದ್ದವು? ಎಂಬುದನ್ನು ಅವರ ಆಶ್ರಮದಲ್ಲೇ ಸ್ವಯಂ ಸೇವಕರಾಗಿದ್ದ ಹೆಮ್ಲೇ ಗೊನ್ಜಾಲೆಜ್ ‘ಸಿಎನ್ಎನ್’ಗೆ ವಿವರವಾಗಿ ಬರೆದಿದ್ದಾರೆ. ಸೆ. 5 ಮದರ್ ತೆರೆಸಾ ಸಾವನ್ನಪ್ಪಿದ ದಿನ. ಈ […]

  September 4, 2016
  ...

  ದಿಲ್ಲಿ ರಾಜಕಾರಣದಲ್ಲಿ ‘ಸೆಕ್ಸ್ ಸೀಡಿ’ ಮೇಲಾಟ: ಮುಸುಕಿನ ಗುದ್ದಾಟಕ್ಕೆ ಬಳಕೆಯಾಯಿತಾ ‘ಹನಿ ಟ್ರ್ಯಾಪ್’?

  ರಾಜಕೀಯದ ರಾಢಿ ದೇಶದ ರಾಜಧಾನಿ ದಿಲ್ಲಿಯನ್ನು ಆವರಿಸಿದೆ. ಕಳೆದ ವಾರ ಬಿದ್ದ ಮಳೆಯ ನೀರು, ರಸ್ತೆಗಳನ್ನು ಸಮುದ್ರವನ್ನಾಗಿಸಿ ಕೊನೆಗೆ ಯಮುನಾ ನದಿಯನ್ನು ಸೇರಿಕೊಂಡಿತು. ಅದೇ ವೇಳೆಗೆ ಬಯಲಾದ ಆಮ್ ಆದ್ಮಿ ಪಕ್ಷ (ಎಎಪಿ)ಯ ವಿಧಾನಸಭಾ ಸದಸ್ಯ ಸಂದೀಪ್ ಕುಮಾರ್ ‘ಲೈಂಗಿಕ ಹಗರಣ’ ಇಲ್ಲೀಗ ಭಾರಿ ಸದ್ದು ಮಾಡುತ್ತಿದೆ. ಒಂದು ಕಡೆ ಇದೊಂದು ‘ಹನಿ ಟ್ರ್ಯಾಪ್’ ಎಂದು ಎಎಪಿ ಮೂಲಗಳು ಹೇಳುತ್ತಿವೆಯಾದರೂ, ಬಹಿರಂಗವಾಗಿ ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಯೊಬ್ಬರ ಮೇಲೆ ಬಂದಿರುವ ಆರೋಪವನ್ನು ಸಮರ್ಥಿಸುವ ಪರಿಸ್ಥಿತಿ ಇಲ್ಲದಂತಾಗಿದೆ. ಶನಿವಾರ ಸಂಜೆ ವೇಳೆಗೆ, […]

  September 4, 2016
  ...

  ‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’: ಇಂದಿರಾ ಗಾಂಧಿಯಿಂದ ಮೋದಿವರೆಗೆ…!

  ದಿನ ಪತ್ರಿಕೆಗಳ ಮುಖಪುಟದಲ್ಲಿ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಮೋದಿ ಫೋಟೋ ಅಚ್ಚಾಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರಕಾರದ ಅಧಿಕೃತ ಪ್ರತಿನಿಧಿಯೊಬ್ಬರ ಫೊಟೋ ಕಾರ್ಪೋರೇಟ್ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಮೋದಿ ಸರಕಾರದ ಜೊತೆ ರಿಲಯನ್ಸ್ ಹೊಂದಿರಬಹುದಾದ ‘ವಿಶೇಷ ಸಂಬಂಧ’ವೂ ಈ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಹಾಗೆ ನೋಡಿದರೆ ನರೇಂದ್ರ ಮೋದಿ, ರಿಲಯನ್ಸ್ ಕಂಪನಿ ಜೊತೆಗೆ ವಿಶೇಷ ಸಂಬಂಧ ಹೊಂದಿರುವ ಮೊದಲ ಭಾರತದ ಪ್ರಧಾನಿ ಏನಲ್ಲ ಎನ್ನುತ್ತದೆ ಇತಿಹಾಸ. ಇಂದಿರಾಗಾಂಧಿ ಹಾಗೂ […]

  September 3, 2016
  ...

  45 ನಿಮಿಷದ ಅಂಬಾನಿ ಭಾಷಣಕ್ಕೆ 13 ಸಾವಿರ ಕೋಟಿ ನಷ್ಟ: ‘ಬ್ರಾಂಡ್ ಮೋದಿ’ ಇಮೇಜಿಗೆ ಧಕ್ಕೆ ತರುತ್ತಾ ‘ಜಿಯೋ’?

  ಗಾಂಧಿಗಿರಿಯನ್ನು ನೋಡಿದ ದೇಶದಲ್ಲಿ ‘ಡಾಟಾಗಿರಿ’ಯನ್ನು ರಿಲಯನ್ಸ್ ಕಂಪನಿ ಅಧಿಕೃತವಾಗಿ ಶುರುಮಾಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ವಲಯದ ಕಂಪನಿಗಳಿಗೆ ನಷ್ಟವಾಗಿದೆ ಎಂಬ ಸುದ್ದಿ ಗುರುವಾರ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿ., ಅಧ್ಯಕ್ಷ ಮುಖೇಶ್ ಅಂಬಾನಿ ಬಹು ನಿರೀಕ್ಷಿತ ‘ಜಿಯೋ’ ಮೊಬೈಲ್ ಡೇಟಾ ದರಗಳನ್ನು ಘೋಷಣೆ ಮಾಡುತ್ತಿದ್ದಂತೆ ಭಾರ್ತಿ ಏರ್ಟೆಲ್, ಐಡಿಯಾ ಸೆಲ್ಯುಲಾರ್ ಲಿ. ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಒಟ್ಟಾಗಿ 13, 165. 55 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಭಾರ್ತಿ ಏರ್ಟೆಲ್ 1, 24, 139 ಕೋಟಿ ರೂಪಾಯಿ […]

  September 2, 2016
  ...

  ‘ಕನ್ನಡ ಪ್ರಭ’ದಿಂದ ಸುಗತ ಹೊರಕ್ಕೆ: ಗಾಳಿ ಸುದ್ದಿ ಮತ್ತು ಕಾನ್ವೆಂಟ್ ಶಾಲೆ ಮಕ್ಕಳ ಅತಂತ್ರತೆ!

  ”ಇದು ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಬಿಟ್ಟು ಓದಿಸುತ್ತಾರಲ್ಲ- ಸವಲತ್ತು ಹೇರಳವಾಗಿರುತ್ತದೆ, ಆದರೆ ಪ್ರೀತಿ ಮಾತ್ರ ಇರುವುದಿಲ್ಲ- ಹಾಗೆ ಇದು,” ಎಂದು ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಯ ಇವತ್ತಿನ ಸ್ಥಿತಿಯನ್ನು ಬಣ್ಣಿಸುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ಉದ್ಯಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುದ್ದಿ ವಾಹಿನಿ ಮತ್ತು ದಿನಪತ್ರಿಕೆಯ ಒಳಗೆ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅವರು ವ್ಯಕ್ತಪಡಿಸಿದ ಒನ್ ಲೈನ್ ಅಭಿಪ್ರಾಯ ಇದು. ಹಾಗೆ ನೋಡಿದರೆ, ಸುವರ್ಣ ವಾಹಿನಿಯನ್ನು ಮುನ್ನಡೆಸಿಕೊಂಡು ಬಂದಿರುವ […]

  September 2, 2016
  ...

  ‘ಅಲನ್ ಕುರ್ದಿ ಸಾವಿನ ವರ್ಷದ ಸ್ಮರಣೆ’: ಬದಲಾಗದ ಪರಿಸ್ಥಿತಿಯನ್ನು ಮುಂದಿಡುತ್ತಿರುವ ಅಂಕಿಅಂಶಗಳು!

  2015ರ ಇದೇ ದಿನ (ಸೆ. 2) ಅಲನ್ ಕುರ್ದಿ ಎಂಬ ಸಿರಿಯಾದ ನಿರಾಶ್ರಿತ ಪುಟ್ಟ ಕಂದಮ್ಮನ ಸಾವು, ಇಡೀ ಜಗತ್ತನ್ನೇ ಮಮ್ಮಲ ಮರುಗಿಸಿತ್ತು. ಸಮುದ್ರ ದಂಡೆಯ ಮೇಲೆ ಬೋರಲಾಗಿ ಬಿದ್ದ ಮೂರು ವರ್ಷದ ಪುಟ್ಟ ಕಂದ ಅಲನ್ ಕುರ್ದಿಯ ಚಿತ್ರ ನೋಡುಗರ ಮನ ಕಲಕಿಸಿತ್ತು. ಇದಾದ ಬೆನ್ನಿಗೆ ಮಧ್ಯ ಪೂರ್ವ ದೇಶಗಳ ನಿರಾಶ್ರಿತರ ಬಗ್ಗೆ, ವಿಶ್ವದಾದ್ಯಂತ ವಿಶೇಷ ಅನುಕಂಪ ಸೃಷ್ಟಿಸಿತ್ತು. ಅದಾಗಿ ಇಂದಿನ ಒಂದು ವರ್ಷ; ಸುಮಾರು 365 ದಿನ. ಈ ಸುದೀರ್ಘ ಕಾಲಾವಧಿಯಲ್ಲಿ ಮಧ್ಯ ಪೂರ್ವ […]

  September 2, 2016
  ...

  ಶುಕ್ರವಾರ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಬಂದ್

  ಕೆಎಸ್ಆರ್ಟಿಸಿ ಮುಷ್ಕರ ಮತ್ತು ಮಹದಾಯಿ ಹೋರಾಟದಿಂದ ಬಂದ್ ಬಿಸಿ ಅನುಭವಿಸಿದ್ದ ಸಾರ್ವಜನಿಕರು ಶುಕ್ರವಾರ ಮತ್ತೆ ಮುಷ್ಕರದ ಬಿಸಿ ಎದುರಿಸಲಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ಹಾಗೂ ಜನ ವಿರೋಧಿ ಧೋರಣೆಗಳನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಸೆಪ್ಪೆಂಬರ್‌ 2 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ದೇಶದಲ್ಲಿ ಜಾಗತೀಕರಣ ಜಾರಿಯಾದ ಬಳಿಕ ನಡೆಸುತ್ತಿರುವ 17ನೇ ಮುಷ್ಕರ ಇದಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ […]

  September 1, 2016

Top