An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  PRISON STORIES

  ಕಂಬಿ ಹಿಂದಿನ ಕತೆ – 2: ಜೈಲೊಳಗಿನ ಕಾನೂನಿನ ಕಟ್ಟಳೆಗಳ ಆಚೆಗೆ ಮೆರೆದ ಮಾನವೀಯ ಸಂಬಂಧಗಳು!

  ಏನೇ ಅಂದರೂ, ಮನುಷ್ಯ ಬಂದು ನಿಲ್ಲುವುದು ಸಂಬಂಧಗಳ ಕಡೆಗೆ; ಎಷ್ಟಾದರೂ ಸಂಘ ಜೀವಿ ಈತ. ಜೈಲಿನಲ್ಲಿರುವವರು ಸಮಾಜದ ಎಲ್ಲಾ ಸಂಬಂಧಗಳಿಂದ ದೂರ ಉಳಿದಿರುತ್ತಾರೆ ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಖೈದಿಗಳಿಗೆ ಭಾವನೆಗಳೇ ಅರ್ಥವಾಗುವುದಿಲ್ಲ ಎಂಬ ದೂರೂ ಇದೆ. ಆದರೆ ಇದೆಲ್ಲವನ್ನೂ ಸುಳ್ಳಾಗಿಸುವ ಕರಿಸುಬ್ಬುವಿನ ಈ ರೋಚಕ ಕತೆ. ಇದು ಕಂಬಿ ಹಿಂದಿನ ಕತೆಗಳ ಎರಡನೇ ಕಂತು. ಆತನ ಹೆಸರು ಕರಿಸುಬ್ಬು; ಹಾಗೆಂದಿಟ್ಟುಕೊಳ್ಳಿ. ಬೆಂಗಳೂರಿನ ಲಗ್ಗೆರೆಯವನು. ಒಂದಷ್ಟು ಓದಿಕೊಂಡಿದ್ದ. ‘ಬಿಎಸ್ಎನ್ಎಲ್’ನಲ್ಲಿ ಲೈನ್ ಮ್ಯಾನ್ ಕೆಲಸ ಸಿಕ್ಕಿತು. ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದ; ಖಾಯಂ ಕೂಡ ಆಗಿತ್ತು…

  September 28, 2016
  ...
  ಕಾವೇರಿ ವಿವಾದ

  ಕೇಂದ್ರ ಕರೆದ ಸಭೆಯ ನಂತರವೇ ತಮಿಳುನಾಡಿಗೆ ನೀರು: ಸಿಎಂ ಸಿದ್ದರಾಮಯ್ಯ

  ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಸಭೆಯ ನಂತರವೇ ತಮಿಳುನಾಡಿಗೆ ನೀರು ಹರಿಸುವ ಕುರಿತು ಆಲೋಚನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸಿತ್ತು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಪ್ರಸ್ತುತ ನಮ್ಮ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಲು ಮಾತ್ರ ಎಂದು ಸೆಪ್ಟೆಂಬರ್ 23ರಂದು ಸದನದಲ್ಲಿ..

  September 28, 2016
  ...
  ಕಾವೇರಿ ವಿವಾದ

  ಕಾವೇರಿ ವಿಚಾರದಲ್ಲಿ ಬದಲಾಗದ ‘ಸುಪ್ರಿಂ ನ್ಯಾಯ’: 6,000 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ

  ಮೇಲಿಂದ ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡುತ್ತಿರುವ ಸುಪ್ರಿಂ ಕೋರ್ಟ್, ಮಂಗಳವಾರದ ತನ್ನ ತೀರ್ಪಿನಲ್ಲಿಯೂ 6, 000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ. ಇಂದಿನಿಂದ ಮೂರು ದಿನಗಳ ಕಾಲಾವಧಿಯಲ್ಲಿ 6,000 ಕ್ಯೂಸೆಕ್ಸ್ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕಕ್ಕೆ ಹೇಳಿದೆ. ಇದರ ನಡುವೆ ಕೇಂದ್ರ ಸರಕಾರ ವಿವಾದಕ್ಕೆ ಅಂತ್ಯಹಾಡಲು ಮಧ್ಯಪ್ರವೇಶಿಸುವುದಾಗಿ ಸುಪ್ರಿಂ ಕೋರ್ಟಿಗೆ ತಿಳಿಸಿದೆ. ಸೆ. 23ರಂದು ವಿಶೇಷ ಅಧಿವೇಶನ ಕರೆದು ಶಾಸಕಾಂಗದ ಅಧಿಕಾರವನ್ನು ಬಳಸಿದ್ದ ರಾಜ್ಯದ ನಡೆಯ ಬೆನ್ನಲ್ಲೇ ಸುಪ್ರಿಂ ಕೋರ್ಟ್ ತೀರ್ಮಾನ ಹೊರಬಿದ್ದಿದೆ…

  September 27, 2016
  ...
  ಸುದ್ದಿ ಸಾರ

  50 ಕೋಟಿ ಡೀಲಿಗೆ ಸಹಿ ಹಾಕಿದ ಬೆಳ್ಳಿ ತಾರೆ ಸಿಂಧು

  ಒಲಂಪಿಕ್ಸಿನಲ್ಲಿ ಬೆಳ್ಳಿ ಪದಕ ಗೆದ್ದು ಕೋಟ್ಯಾಂತರ ರೂಪಾಯಿ ಬಹುಮಾನ ಜೇಬಿಗಿಳಿಸಿಕೊಂಡಿದ್ದ ಪಿ.ವಿ ಸಿಂಧು ಈಗ ಮತ್ತೊಂದು ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬೇಸ್ ಲೈನ್ ಎಂಬ ಕ್ರೀಡಾ ಮ್ಯಾನೇಜ್ ಮೆಂಟ್ ಕಂಪೆನಿ ಜೊತೆಗೆ 3 ವರ್ಷಗಳ ಗುತ್ತಿಗೆಗೆ ಬ್ಯಾಡ್ಮಿಂಟನ್ ಆಟಗಾರ್ತಿ ಸಹಿ ಹಾಕಿದ್ದು 50 ಕೋಟಿ ಹಣ ಪಡೆಯಲಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಕ್ರಿಕೆಟಗರನ್ನು ಹೊರತಾಗಿ ಇಷ್ಟು ದೊಡ್ಡ ಮೊತ್ತದ ಡೀಲ್ ಪಡೆಯುತ್ತಿರುವ ಮೊದಲ ಕ್ರೀಡಾಪಟು ಎಂಬ ಕೀರ್ತಿಗೂ ಸಿಂಧು ಪಾತ್ರವಾಗಿದ್ದಾರೆ. ‘ಟೈಮ್ಸ್ ಆಫ್ ಇಂಡಿಯಾ’ ಜೊತೆ..

  September 27, 2016
  ...
  ವಿದೇಶ

  ಜಗತ್ತೇ ಒಂದೇ ಸೂರಿನಡಿ: ಇದು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’!

  ಭಾರತ ಪಾಕ್ ವಾಗ್ಯುದ್ಧಕ್ಕೆ ವೇದಿಕೆಯಾಗಿದ್ದು ಇದೇ ಸಭೆ. ಎರಡೂ ರಾಷ್ಟ್ರಗಳು ಜಗತ್ತಿನ ಮುಂದೆ ಪರಸ್ಪರ ರಾಷ್ಟ್ರಗಳ ಕುತಂತ್ರ ಬಯಲು ಮಾಡಲು ತಂತ್ರ ಪ್ರತಿತಂತ್ರ ಹೆಣೆಯುತ್ತಿರುವುದೂ ಇಲ್ಲೇ. ಇದರ ಹೆಸರು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’. ಆರರಲ್ಲಿ ಒಂದು ವಿಶ್ವಂಸ್ಥೆಯ ಆರು ಅಂಗಗಳಲ್ಲಿ ಸಾಮಾನ್ಯ ಸಭೆಯೂ ಒಂದು. ಇದನ್ನು ಸಂಕ್ಷಿಪ್ತವಾಗಿ ‘ಯುಎನ್ಜಿಎ’ ಎಂದು ಕರೆಯುತ್ತಾರೆ. ಇಲ್ಲಿ ಎಲ್ಲಾ ದೇಶಗಳಿಗೂ ಸಮಾನ ಪ್ರಾತಿನಿಧ್ಯವಿದೆ. ಈ ಕಾರಣಕ್ಕೆ ಇದರ ಮೇಲೆ ಎಲ್ಲಾ ರಾಷ್ಟ್ರಗಳಿಗೂ ತುಸು ಗೌರವ ಜಾಸ್ತಿ. ಇಡೀ ವಿಶ್ವಸಂಸ್ಥೆಯ ಆಯವ್ಯಯಗಳನ್ನು ನೋಡಿಕೊಳ್ಳುವುದು,..

  September 27, 2016
  ...
  ಸುದ್ದಿ ಸಾರ

  ‘ಅಂದು.. ಇಂದು.. ಎಂದೆಂದೆಗೂ’: ಕಾಶ್ಮೀರ ನಮ್ಮದೇ ಎಂದು ಪುನರುಚ್ಚರಿಸಿದ ಸುಷ್ಮಾ ಸ್ವರಾಜ್!

  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಸುಷ್ಮಾ ಸ್ವರಾಜ್ ಭಾಷಣ ಮಾಡುತ್ತಿದ್ದಾರೆ. ಅಂದು, ಇಂದು ಮಾತ್ರವಲ್ಲ ಮುಂದೆಯೂ ಕಾಶ್ಮೀರ ಭಾರತದ್ದೇ ಅಂಗ ಎಂದು ಜಾಗತಿಕ ನಾಯಕರ ಮುಂದೆ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಉರಿ ದಾಳಿಯ ಬೆನ್ನಿಗೆ ಭಾರತ ಪಾಕಿಸ್ತಾನದ ವಿರುದ್ಧ ಕೆಂಡ ಕಾರುತ್ತಿದ್ದು, ಈ ಭಾಷಣದ ಮೂಲಕ ಮತ್ತಷ್ಟು ತೀಕ್ಷ್ಣ ದಾಳಿ ನಡೆಸಿದೆ. ವಿಶ್ವಸಂಸ್ಥೆಯ ವೇದಿಕೆಯಿಂದ ಹಿಂದಿಯಲ್ಲಿ ಭಾಷಣ ಆರಂಭಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಸರಕಾರ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜಗತ್ತಿನ ಮುಂದಿಟ್ಟರು. ಇದಾದ ಬಳಿಕ ನಿರೀಕ್ಷೆಯಂತೆ..

  September 26, 2016
  ...
  ಸುದ್ದಿ ಸಾರ

  ಇಸ್ರೋದಿಂದ 8 ಉಪಗ್ರಹಗಳ ಉಡಾವಣೆ; ನಭಕ್ಕೆ ಹಾರಿದ ಬೆಂಗಳೂರು ವಿದ್ಯಾರ್ಥಿಗಳ ಸ್ಯಾಟಲೈಟ್

  ಅಂದುಕೊಂಡಂತೆ ಸೋಮವಾರ ಮುಂಜಾನೆ 9:12 ಕ್ಕೆ ಇಸ್ರೋ 8 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಧ್ರುವ (ಪೋಲಾರ್) ಉಪಗ್ರಹ ಉಡಾವಣಾ ವಾಹಕ (PSLV) –ಸಿ35’ ಎಂಟು ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಿತು. ಇದರಲ್ಲಿ ಸಮುದ್ರ ಮತ್ತು ಹವಾಮಾನ ಸಂಬಂಧಿತ ಅಧ್ಯಯನವನ್ನು ಗುರಿಯಾಗಿಸಿಕೊಂಡ 371 ಕೆಜಿ ತೂಕದ SCATSAT-1 ಮತ್ತು ಇತರ ಏಳು ಉಪಗ್ರಹಗಳು ಸೇರಿವೆ. ಇವುಗಳಲ್ಲಿ ಅಲ್ಜೀರಿಯಾದ ಮೂರು, ಕೆನಡಾ, ಅಮೆರಿಕಾದ ತಲಾ ಒಂದು ಮತ್ತು ಭಾರತೀಯ ವಿದ್ಯಾರ್ಥಿಗಳೇ ನಿರ್ಮಿಸಿರುವ ಎರಡು ಉಪಗ್ರಹಗಳೂ..

  September 26, 2016
  ...
  ಫೋಕಸ್

  ‘ಹಂಟಿಂಗ್ ಏಲಿಯನ್ಸ್’: ಅನ್ಯಗ್ರಹ ಜೀವಿಗಳ ಪತ್ತೆಗೆ ಚೀನಾ ಹೊಸ ಸಾಹಸ!

  ತಾನು ಮಾಡಿದ್ದನ್ನು ಜಗತ್ತಿನಲ್ಲಿರುವ ಯಾರೂ ಮಾಡಿರಬಾರದು; ಇದು ಚೀನಾದ ಪಾಲಿಸಿ. ಇದೇ ಚೀನಾ ಈ ಬಾರಿ ಏಲಿಯನ್ಗಳ ಹುಡುಕಾಟಕ್ಕೆ ಕೈ ಹಾಕಿದೆ. ಅದಕ್ಕಾಗಿ ಬಾಣಲೆಯಾಕಾರದ ಬೃಹತ್ ‘ರೇಡಿಯೋ ಟೆಲಿಸ್ಕೋಪ್’ ನಿರ್ಮಾಣ ಮಾಡಿದೆ. ಅನ್ಯಗ್ರಹಗಳಿಂದ ಬರಬಹುದಾದ ರೇಡಿಯೋ ತರಂಗಗಳ ರೂಪದ ಸಂದೇಶವನ್ನು ಸ್ವೀಕರಿಸುವುದು ಈ ಟೆಲಿಸ್ಕೋಪಿನ ಕೆಲಸ. ಭಾನುವಾರ ಈ ರೇಡಿಯೋ ಟೆಲಿಸ್ಕೋಪಿಗೆ ಚಾಲನೆ ನೀಡಲಾಯಿತು. ನೈರುತ್ಯ ಚೀನಾದ ಗುಯ್ಚೋ ಪ್ರಾಂತ್ಯದ ದಟ್ಟ ಕಾಡಿನ ಮಧ್ಯೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ರೇಡಿಯೋ ಟೆಲಿಸ್ಕೋಪ್ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಚೀನಾದ ಬಾಹ್ಕಾಕಾಶ ಸಂಸ್ಥೆಯ..

  September 26, 2016
  ...
  ಸುದ್ದಿ ಸಾರ

  ‘ಮರಳಿ ಅಧಿಕಾರಕ್ಕೆ’: ವಿವಾದಿತ ಜಾರ್ಜ್ ಮತ್ತೆ ಮಂತ್ರಿ

  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಜೆ ಜಾರ್ಜ್ ಮತ್ತೆ ಸಂಪುಟ ಸೇರಲಿದ್ದಾರೆ. ಸಿಐಡಿ ‘ಬಿ-ರಿಪೋರ್ಟ್’ನಲ್ಲಿ ಜಾರ್ಜ್ ಕ್ಲೀನ್ ಚಿಟ್ ಪಡೆಯುತ್ತಿದ್ದಂತೆ ತರಾತುರಿಯಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಸೋಮವಾರ 10.15ಕ್ಕೆ ರಾಜಭವನದಲ್ಲಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಹಿಂದೆ ಜಾರ್ಜ್ ನಿರ್ವಹಿಸುತ್ತಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಸದ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿಯಲ್ಲಿದ್ದು, ಅದೇ ಖಾತೆ ಮರಳಿ ಸಿಗುವ ಸಾಧ್ಯತೆ ಇದೆ. ಪ್ರಕರಣ ಹಿನ್ನಲೆ ಡಿವೈಎಸ್ಪಿ ಗಣಪತಿಯವರು ಜುಲೈ 7ರ ಸಂಜೆ ಮಡಿಕೇರಿಯ..

  September 26, 2016
  ...
  ಕಾವೇರಿ ವಿವಾದ

  ‘ಕಾವೇರಿ ಕಣಿವೆಯಿಂದ’: ಬರಡು ಬೀಳುತ್ತಿರುವ ಕೃಷಿ ಭೂಮಿ ಮತ್ತು ಭವಿಷ್ಯದ ಬಿಕ್ಕಟ್ಟು!

  “ಹನ್ನೊಂದನೇ ದಿನ ಸೋಮವಾರ ಬಿತ್ತು. ಹಂಗಾಗಿ ಮಂಗಳವಾರ ಇಟ್ಕೊಳಿ ಅಂದ್ರು. ಸುಮಾರ್ 60 ಸಾವ್ರ ಖರ್ಚಾಗುತ್ತಿದೆ. ಎಲ್ಲಾ ಮುಗಿದ ಮೇಲೆ ಸಾಲ ವಾಪಾಸ್ ಕೊಡ್ತೀರೋ ಇಲ್ವೋ ಅನ್ನೋ ಬೈಗುಳನೂ ಕೇಳಬೇಕು,” ಎಂದು ತುಂಬಿದ ಕಣ್ಣುಗಳಲ್ಲಿ ನೋವಿನ ಕತೆಯನ್ನು ಶುರುಮಾಡಿದರು ಗಾಯತ್ರಿ. ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ದಲಿತ ಕಾಲೋನಿಯ ಅಂಚಿನಲ್ಲಿರುವ ಮನೆಯ ಮುಂದೆ ಅವರು ಕುಳಿತಿದ್ದರು. ಕಾವೇರಿ ವಿಚಾರದಲ್ಲಿ ವಿಶೇಷ ಅಧಿವೇಶನದ ನಿರ್ಣಯ ಹೊರಬಿದ್ದ ದಿನ ಅವರ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರ ಬಂದಾಗಲೆಲ್ಲಾ ಮಂಡ್ಯ..

  September 26, 2016

FOOT PRINT

Top