An unconventional News Portal.

ಗಡಿ ನಿಯಂತ್ರಣ ರೇಖೆ ಬಳಿ ನಿರ್ದಿಷ್ಟ ದಾಳಿ: ರಕ್ಷಣಾ ಇಲಾಖೆ

ಗಡಿ ನಿಯಂತ್ರಣ ರೇಖೆ ಬಳಿ ನಿರ್ದಿಷ್ಟ ದಾಳಿ: ರಕ್ಷಣಾ ಇಲಾಖೆ

ಗಡಿ ನಿಯಂತ್ರಣ ರೇಖೆಯಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಬುಧವಾರ ರಾತ್ರಿ ಭಾರತದ ಸೇನೆ ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

“ಭಾರತ- ಪಾಕಿಸ್ತಾನದ ಗಡಿಯ ನಡುವಿನ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಸೇನಾ ದಾಳಿ ನಡೆಸಿದೆ,” ಎಂದು ಲೆ. ಜ. ರನಭೀರ್ ಸಿಂಗ್ ಪ್ರಕಟಿಸಿದ್ದಾರೆ. “ದಾಳಿ ವೇಳೆಯಲ್ಲಿ ಭಾರತದ ಕೆಲವು ನಗರಗಳ ಮೇಲೆ ದಾಳಿ ನಡೆಸಲು ಹಾಗೂ ದೇಶದೊಳಗೆ ನುಸಳಲು ತಯಾರಾಗಿದ್ದ ಭಯೋತ್ಪಾದಕ ನೆಲೆಗಳಿಗೆ ಹಾನಿಯಾಗಿದೆ. ಕೆಲವು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಪಾಕಿಸ್ತಾನ ಚಿನ್ಹೆಗಳಿರುವ ಜಿಪಿಎಸ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯನ್ನು ಮುಂದುರಿಸುವ ಇರಾದೆ ಇಲ್ಲ,” ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಪಾಕಿಸ್ತಾನ ಸೇನಾಧಿಕಾರಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನದಿಂದ ಭಯೋತ್ಪಾದನೆಗೆ ಪ್ರೇರಣೆ ಸಿಗುತ್ತಿದೆ,” ಎಂದು ಪುನರುಚ್ಚರಿಸಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ಭಾರತದ ಸೇನೆ ನಡೆಸಿದ ದಾಳಿಯು ಮಹತ್ವ ಪಡೆದುಕೊಂಡಿದೆ.

 

Leave a comment

FOOT PRINT

Top