An unconventional News Portal.

  ...

  ಭಾರತ ಸೇನೆಯ ‘ಸರ್ಜಿಕಲ್’ ದಾಳಿ: ಚರ್ಚೆಗೆ ಗ್ರಾಸವಾದ ನಾನಾ ಆಯಾಮಗಳು!

  ಭಾರತೀಯ ಸೇನೆ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ‘ದಾಳಿಗೆ ಸಜ್ಜಾಗಿದ್ದ ಭಯೋತ್ಪಾದಕ’ ಶಿಬಿರಗಳ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಿರುವುದಾಗಿ ಹೇಳಿದ್ದು ಈಗ ನಾನಾ ಆಯಾಮಗಳ ಚರ್ಚೆಗೆ ಕಾರಣವಾಗಿದೆ. ಗುರುವಾರ ಬೆಳಗ್ಗೆಯಿಂದ ಭಾರತದ ಮಾಧ್ಯಮಗಳು ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿರುವ ಈ ಸುದ್ದಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಒಂದು ಕಡೆ ಕಾಶ್ಮೀರಾದ ಸೇನಾ ನೆಲೆ ‘ಉರಿ’ಯ ಮೇಲೆ ನಡೆದ ದಾಳಿಗೆ ಪ್ರತೀಕಾರದ ನಡೆ ಇದು ಎಂದು ಭಾರತದ ಮಾಧ್ಯಮಗಳು ವಿಶ್ಲೇಷಿಸುತ್ತಿದ್ದರೆ, ಅಂತರಾಷ್ಟ್ರೀಯ ಮಾಧ್ಯಮಗಳು ಇದೊಂದು ‘ಗಡಿ ನಿಯಂತ್ರಣ ರೇಖೆ’ಯಲ್ಲಿ ನಡೆದ […]

  September 29, 2016
  ...

  ‘ಕಾವೇರಿದ ಚಂಡು’ ಮತ್ತೆ ಸುಪ್ರಿಂ ಅಂಗಳಕ್ಕೆ: ನಿರ್ಧಾರಕ್ಕೆ ಬಾರದ ಕೇಂದ್ರ ಮಧ್ಯಸ್ಥಿಕೆ ಸಭೆ

  ನಿರೀಕ್ಷೆಯಂತೆಯೇ ಕೇಂದ್ರ ಸರಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನು ಗುರುವಾರ ಸುಪ್ರಿಂ ಕೋರ್ಟ್ ಅಂಗಳಕ್ಕೆ ವರ್ಗಾವಣೆ ಮಾಡಿದೆ. ನ್ಯಾಯಾಲಯದ ಸೂಚನೆ ಮೇರೆಗೆ ದಿಲ್ಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸಭೆಯಲ್ಲಿ ಕರ್ನಾಟಕದ ಕಡೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡು ಕಡೆಯಿಂದ ಮುಖ್ಯ ಕಾರ್ಯದರ್ಶಿ ಪಿ. ರಾಮ ಮೋಹನ ರಾವ್ ಪಾಲ್ಗೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ರಾವ್ ಅವರ […]

  September 29, 2016
  ...

  ಗಡಿ ನಿಯಂತ್ರಣ ರೇಖೆ ಬಳಿ ನಿರ್ದಿಷ್ಟ ದಾಳಿ: ರಕ್ಷಣಾ ಇಲಾಖೆ

  ಗಡಿ ನಿಯಂತ್ರಣ ರೇಖೆಯಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಬುಧವಾರ ರಾತ್ರಿ ಭಾರತದ ಸೇನೆ ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ. “ಭಾರತ- ಪಾಕಿಸ್ತಾನದ ಗಡಿಯ ನಡುವಿನ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಸೇನಾ ದಾಳಿ ನಡೆಸಿದೆ,” ಎಂದು ಲೆ. ಜ. ರನಭೀರ್ ಸಿಂಗ್ ಪ್ರಕಟಿಸಿದ್ದಾರೆ. “ದಾಳಿ ವೇಳೆಯಲ್ಲಿ ಭಾರತದ ಕೆಲವು ನಗರಗಳ ಮೇಲೆ ದಾಳಿ ನಡೆಸಲು ಹಾಗೂ ದೇಶದೊಳಗೆ ನುಸಳಲು ತಯಾರಾಗಿದ್ದ ಭಯೋತ್ಪಾದಕ ನೆಲೆಗಳಿಗೆ ಹಾನಿಯಾಗಿದೆ. ಕೆಲವು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಪಾಕಿಸ್ತಾನ […]

  September 29, 2016
  ...

  ಒಪೆಕ್ ದೇಶಗಳಲ್ಲಿ ‘ಕದನ ವಿರಾಮ’ ಘೋಷಣೆ: ಕಚ್ಚಾ ತೈಲದ ಬೆಲೆ ಏರಿಕೆಯ ಮುನ್ಸೂಚನೆ!

  ಎರಡೂವರೆ ವರ್ಷಗಳ ನಂತರ ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ (ಒಪೆಕ್)ದಲ್ಲಿ ಒಮ್ಮತ ಮೂಡಿದೆ. ಪೈಪೋಟಿಯಲ್ಲಿ ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿದ್ದ ದೇಶಗಳು, ಕೊನೆಗೂ ತಮ್ಮ ಉತ್ಪಾದನೆಗೆ ಕಡಿವಾಣ ಹಾಕಲು ಬುಧವಾರ ಒಪ್ಪಂದಕ್ಕೆ ಬಂದಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಸೇರಿದಂತೆ ಇಂಧನ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಲಿದೆ. ಸಹಜವಾಗಿಯೇ ಭಾರತದ ಸ್ಥಳೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. 2008ರಿಂದ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ತಿಕ್ಕಾಟಗಳ ಕಾರಣಗಳಿಗಾಗಿ ಕಚ್ಚಾ ತೈಲ ಉತ್ಪಾದನೆ ಪೈಪೋಟಿಯಲ್ಲಿ ನಡೆಯಲಾರಂಭಿಸಿತ್ತು. ಇದರಿಂದ […]

  September 29, 2016

Top