An unconventional News Portal.

    ...
    sad-journalist
    ಟಿವಿ

    ‘ಜರ್ನಲಿಸಂ ಶವಪರೀಕ್ಷೆ’: ಸುಮ್ಮನೆ ಕುಳಿತ ಪತ್ರಕರ್ತನಿಗೆ ಹಳೆಯದೆಲ್ಲವೂ ನೆನಪಾಗುತ್ತವೆ!

    ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಅವನಿಗೆ ಆತನ ಹಳೆಯದೆಲ್ಲಾ ನೆನಪಾಗುತ್ತದೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಅವರಿಬ್ಬರು ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನ ಮೀರಿ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿ ಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ..

    September 28, 2016
    ...
    bbmp building corporation
    ಸುದ್ದಿ ಸಾರ

    ರಾಜಧಾನಿಯಲ್ಲಿ ಮತ್ತೆ ‘ಕೈ-ದಳ’ ಮೈತ್ರಿ; ಪದ್ಮಾವತಿ ಬೆಂಗಳೂರಿನ ನೂತನ ಮೇಯರ್

    ಕಾಂಗ್ರೆಸ್ ಪಕ್ಷದ ಪದ್ಮಾವತಿ ಬೆಂಗಳೂರಿನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನ ಜೆಡಿಎಸ್ನ ಆನಂದ್ ಪಾಲಾಗಿದ್ದು, ರಾಜಧಾನಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಪ್ರಕಾಶ್ ನಗರ ವಾರ್ಡ್ ಕಾರ್ಪೊರೇಟರ್ ಪದ್ಮಾವತಿ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಡಿ.ಎಚ್ ಲಕ್ಷ್ಮೀ ಸ್ಪರ್ಧಿಸಿದ್ದರು. ಚುನಾವಣೆ ನಡೆದಾಗ 142 ಮತ ಪಡೆದ ಪದ್ಮಾವತಿ ಜಯಶಾಲಿಯಾದರು. ಅವರ ಪ್ರತಿಸ್ಪರ್ಧಿ..

    September 28, 2016
    ...
    3-parent-child
    ಫೋಕಸ್

    ‘ಸೃಷ್ಠಿಯ ಕೌತುಕ’: ಒಬ್ಬ ತಂದೆ, ಇಬ್ಬರು ತಾಯಂದಿರಿಗೆ ಹುಟ್ಟಿದ ಜಗತ್ತಿನ ಮೊದಲ ಮಗು!

    ಒಂದು ಮಗುವಿಗೆ ಒಬ್ಬ ತಂದೆ, ಒಬ್ಬರು ತಾಯಿ ಇರ್ತಾರೆ. ಆದರೆ ಈ ಮಗುವಿಗೆ ಮೂವರು ತಂದೆ- ತಾಯಿ ಇರಲು ಸಾಧ್ಯನಾ? ಹೀಗೊಂದು ಸಾಧ್ಯತೆಯನ್ನು ವಿಜ್ಞಾನ ನಿಜವಾಗಿಸಿದೆ. ತಂದೆ- ತಾಯಿ ಹಾಗೂ ಮತ್ತೊಬ್ಬರ ಜೆನೆಟಿಕ್ ಕೋಡ್ (ಅನುವಂಶೀಯ) ಬಳಸಿಕೊಂಡು ಜಗತ್ತಿನ ಮೊದಲ ಮಗು ಜನ್ಮ ತಾಳಿದೆ. ಅದಕ್ಕೀಗ ಐದು ತಿಂಗಳು. ಜೋರ್ಡಾನ್ ಮೂಲದ ಈ ಮಗುವಿನ ತಾಯಿಯ ಜೀನ್ಸ್’ನಲ್ಲಿ ರೋಗದ ಲಕ್ಷಣಗಳಿದ್ದವು. ಇದರಿಂದಾಗಿ ವಿಶೇಷ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿಕೊಂಡು ಮಗುವಿನ ಭ್ರೂಣವನ್ನು ಸೃಷ್ಟಿಸಲಾಗಿತ್ತು. ಇದಕ್ಕಾಗಿ ತಂದೆ, ತಾಯಿ ಅಲ್ಲದೆ ಮತ್ತೊಬ್ಬರ ಡಿಎನ್ಎಯನ್ನು..

    September 28, 2016
    ...
    father-and-daughter
    PRISON STORIES

    ಕಂಬಿ ಹಿಂದಿನ ಕತೆ – 2: ಜೈಲೊಳಗಿನ ಕಾನೂನಿನ ಕಟ್ಟಳೆಗಳ ಆಚೆಗೆ ಮೆರೆದ ಮಾನವೀಯ ಸಂಬಂಧಗಳು!

    ಏನೇ ಅಂದರೂ, ಮನುಷ್ಯ ಬಂದು ನಿಲ್ಲುವುದು ಸಂಬಂಧಗಳ ಕಡೆಗೆ; ಎಷ್ಟಾದರೂ ಸಂಘ ಜೀವಿ ಈತ. ಜೈಲಿನಲ್ಲಿರುವವರು ಸಮಾಜದ ಎಲ್ಲಾ ಸಂಬಂಧಗಳಿಂದ ದೂರ ಉಳಿದಿರುತ್ತಾರೆ ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಖೈದಿಗಳಿಗೆ ಭಾವನೆಗಳೇ ಅರ್ಥವಾಗುವುದಿಲ್ಲ ಎಂಬ ದೂರೂ ಇದೆ. ಆದರೆ ಇದೆಲ್ಲವನ್ನೂ ಸುಳ್ಳಾಗಿಸುವ ಕರಿಸುಬ್ಬುವಿನ ಈ ರೋಚಕ ಕತೆ. ಇದು ಕಂಬಿ ಹಿಂದಿನ ಕತೆಗಳ ಎರಡನೇ ಕಂತು. ಆತನ ಹೆಸರು ಕರಿಸುಬ್ಬು; ಹಾಗೆಂದಿಟ್ಟುಕೊಳ್ಳಿ. ಬೆಂಗಳೂರಿನ ಲಗ್ಗೆರೆಯವನು. ಒಂದಷ್ಟು ಓದಿಕೊಂಡಿದ್ದ. ‘ಬಿಎಸ್ಎನ್ಎಲ್’ನಲ್ಲಿ ಲೈನ್ ಮ್ಯಾನ್ ಕೆಲಸ ಸಿಕ್ಕಿತು. ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದ; ಖಾಯಂ ಕೂಡ ಆಗಿತ್ತು…

    September 28, 2016
    ...
    CM siddaramayy
    ಕಾವೇರಿ ವಿವಾದ

    ಕೇಂದ್ರ ಕರೆದ ಸಭೆಯ ನಂತರವೇ ತಮಿಳುನಾಡಿಗೆ ನೀರು: ಸಿಎಂ ಸಿದ್ದರಾಮಯ್ಯ

    ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಸಭೆಯ ನಂತರವೇ ತಮಿಳುನಾಡಿಗೆ ನೀರು ಹರಿಸುವ ಕುರಿತು ಆಲೋಚನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸಿತ್ತು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಪ್ರಸ್ತುತ ನಮ್ಮ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಲು ಮಾತ್ರ ಎಂದು ಸೆಪ್ಟೆಂಬರ್ 23ರಂದು ಸದನದಲ್ಲಿ..

    September 28, 2016

Top