An unconventional News Portal.

  ...
  India's Minister of External Affairs Sushma Swaraj addresses the United Nations General Assembly in the Manhattan borough of New York, U.S., September 26, 2016. REUTERS/Brendan McDermid
  ಸುದ್ದಿ ಸಾರ

  ‘ಅಂದು.. ಇಂದು.. ಎಂದೆಂದೆಗೂ’: ಕಾಶ್ಮೀರ ನಮ್ಮದೇ ಎಂದು ಪುನರುಚ್ಚರಿಸಿದ ಸುಷ್ಮಾ ಸ್ವರಾಜ್!

  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಸುಷ್ಮಾ ಸ್ವರಾಜ್ ಭಾಷಣ ಮಾಡುತ್ತಿದ್ದಾರೆ. ಅಂದು, ಇಂದು ಮಾತ್ರವಲ್ಲ ಮುಂದೆಯೂ ಕಾಶ್ಮೀರ ಭಾರತದ್ದೇ ಅಂಗ ಎಂದು ಜಾಗತಿಕ ನಾಯಕರ ಮುಂದೆ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಉರಿ ದಾಳಿಯ ಬೆನ್ನಿಗೆ ಭಾರತ ಪಾಕಿಸ್ತಾನದ ವಿರುದ್ಧ ಕೆಂಡ ಕಾರುತ್ತಿದ್ದು, ಈ ಭಾಷಣದ ಮೂಲಕ ಮತ್ತಷ್ಟು ತೀಕ್ಷ್ಣ ದಾಳಿ ನಡೆಸಿದೆ. ವಿಶ್ವಸಂಸ್ಥೆಯ ವೇದಿಕೆಯಿಂದ ಹಿಂದಿಯಲ್ಲಿ ಭಾಷಣ ಆರಂಭಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಸರಕಾರ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜಗತ್ತಿನ ಮುಂದಿಟ್ಟರು. ಇದಾದ ಬಳಿಕ ನಿರೀಕ್ಷೆಯಂತೆ..

  September 26, 2016
  ...
  isro-pslv
  ಸುದ್ದಿ ಸಾರ

  ಇಸ್ರೋದಿಂದ 8 ಉಪಗ್ರಹಗಳ ಉಡಾವಣೆ; ನಭಕ್ಕೆ ಹಾರಿದ ಬೆಂಗಳೂರು ವಿದ್ಯಾರ್ಥಿಗಳ ಸ್ಯಾಟಲೈಟ್

  ಅಂದುಕೊಂಡಂತೆ ಸೋಮವಾರ ಮುಂಜಾನೆ 9:12 ಕ್ಕೆ ಇಸ್ರೋ 8 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಧ್ರುವ (ಪೋಲಾರ್) ಉಪಗ್ರಹ ಉಡಾವಣಾ ವಾಹಕ (PSLV) –ಸಿ35’ ಎಂಟು ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಿತು. ಇದರಲ್ಲಿ ಸಮುದ್ರ ಮತ್ತು ಹವಾಮಾನ ಸಂಬಂಧಿತ ಅಧ್ಯಯನವನ್ನು ಗುರಿಯಾಗಿಸಿಕೊಂಡ 371 ಕೆಜಿ ತೂಕದ SCATSAT-1 ಮತ್ತು ಇತರ ಏಳು ಉಪಗ್ರಹಗಳು ಸೇರಿವೆ. ಇವುಗಳಲ್ಲಿ ಅಲ್ಜೀರಿಯಾದ ಮೂರು, ಕೆನಡಾ, ಅಮೆರಿಕಾದ ತಲಾ ಒಂದು ಮತ್ತು ಭಾರತೀಯ ವಿದ್ಯಾರ್ಥಿಗಳೇ ನಿರ್ಮಿಸಿರುವ ಎರಡು ಉಪಗ್ರಹಗಳೂ..

  September 26, 2016
  ...
  China radio teliscope
  ಫೋಕಸ್

  ‘ಹಂಟಿಂಗ್ ಏಲಿಯನ್ಸ್’: ಅನ್ಯಗ್ರಹ ಜೀವಿಗಳ ಪತ್ತೆಗೆ ಚೀನಾ ಹೊಸ ಸಾಹಸ!

  ತಾನು ಮಾಡಿದ್ದನ್ನು ಜಗತ್ತಿನಲ್ಲಿರುವ ಯಾರೂ ಮಾಡಿರಬಾರದು; ಇದು ಚೀನಾದ ಪಾಲಿಸಿ. ಇದೇ ಚೀನಾ ಈ ಬಾರಿ ಏಲಿಯನ್ಗಳ ಹುಡುಕಾಟಕ್ಕೆ ಕೈ ಹಾಕಿದೆ. ಅದಕ್ಕಾಗಿ ಬಾಣಲೆಯಾಕಾರದ ಬೃಹತ್ ‘ರೇಡಿಯೋ ಟೆಲಿಸ್ಕೋಪ್’ ನಿರ್ಮಾಣ ಮಾಡಿದೆ. ಅನ್ಯಗ್ರಹಗಳಿಂದ ಬರಬಹುದಾದ ರೇಡಿಯೋ ತರಂಗಗಳ ರೂಪದ ಸಂದೇಶವನ್ನು ಸ್ವೀಕರಿಸುವುದು ಈ ಟೆಲಿಸ್ಕೋಪಿನ ಕೆಲಸ. ಭಾನುವಾರ ಈ ರೇಡಿಯೋ ಟೆಲಿಸ್ಕೋಪಿಗೆ ಚಾಲನೆ ನೀಡಲಾಯಿತು. ನೈರುತ್ಯ ಚೀನಾದ ಗುಯ್ಚೋ ಪ್ರಾಂತ್ಯದ ದಟ್ಟ ಕಾಡಿನ ಮಧ್ಯೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ರೇಡಿಯೋ ಟೆಲಿಸ್ಕೋಪ್ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಚೀನಾದ ಬಾಹ್ಕಾಕಾಶ ಸಂಸ್ಥೆಯ..

  September 26, 2016
  ...
  ಸಚಿವ ಕೆ. ಜೆ. ಜಾರ್ಜ್.
  ಸುದ್ದಿ ಸಾರ

  ‘ಮರಳಿ ಅಧಿಕಾರಕ್ಕೆ’: ವಿವಾದಿತ ಜಾರ್ಜ್ ಮತ್ತೆ ಮಂತ್ರಿ

  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಜೆ ಜಾರ್ಜ್ ಮತ್ತೆ ಸಂಪುಟ ಸೇರಲಿದ್ದಾರೆ. ಸಿಐಡಿ ‘ಬಿ-ರಿಪೋರ್ಟ್’ನಲ್ಲಿ ಜಾರ್ಜ್ ಕ್ಲೀನ್ ಚಿಟ್ ಪಡೆಯುತ್ತಿದ್ದಂತೆ ತರಾತುರಿಯಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಸೋಮವಾರ 10.15ಕ್ಕೆ ರಾಜಭವನದಲ್ಲಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಹಿಂದೆ ಜಾರ್ಜ್ ನಿರ್ವಹಿಸುತ್ತಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಸದ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿಯಲ್ಲಿದ್ದು, ಅದೇ ಖಾತೆ ಮರಳಿ ಸಿಗುವ ಸಾಧ್ಯತೆ ಇದೆ. ಪ್ರಕರಣ ಹಿನ್ನಲೆ ಡಿವೈಎಸ್ಪಿ ಗಣಪತಿಯವರು ಜುಲೈ 7ರ ಸಂಜೆ ಮಡಿಕೇರಿಯ..

  September 26, 2016
  ...
  mandya-hemmige-suicide
  ಕಾವೇರಿ ವಿವಾದ

  ‘ಕಾವೇರಿ ಕಣಿವೆಯಿಂದ’: ಬರಡು ಬೀಳುತ್ತಿರುವ ಕೃಷಿ ಭೂಮಿ ಮತ್ತು ಭವಿಷ್ಯದ ಬಿಕ್ಕಟ್ಟು!

  “ಹನ್ನೊಂದನೇ ದಿನ ಸೋಮವಾರ ಬಿತ್ತು. ಹಂಗಾಗಿ ಮಂಗಳವಾರ ಇಟ್ಕೊಳಿ ಅಂದ್ರು. ಸುಮಾರ್ 60 ಸಾವ್ರ ಖರ್ಚಾಗುತ್ತಿದೆ. ಎಲ್ಲಾ ಮುಗಿದ ಮೇಲೆ ಸಾಲ ವಾಪಾಸ್ ಕೊಡ್ತೀರೋ ಇಲ್ವೋ ಅನ್ನೋ ಬೈಗುಳನೂ ಕೇಳಬೇಕು,” ಎಂದು ತುಂಬಿದ ಕಣ್ಣುಗಳಲ್ಲಿ ನೋವಿನ ಕತೆಯನ್ನು ಶುರುಮಾಡಿದರು ಗಾಯತ್ರಿ. ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ದಲಿತ ಕಾಲೋನಿಯ ಅಂಚಿನಲ್ಲಿರುವ ಮನೆಯ ಮುಂದೆ ಅವರು ಕುಳಿತಿದ್ದರು. ಕಾವೇರಿ ವಿಚಾರದಲ್ಲಿ ವಿಶೇಷ ಅಧಿವೇಶನದ ನಿರ್ಣಯ ಹೊರಬಿದ್ದ ದಿನ ಅವರ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರ ಬಂದಾಗಲೆಲ್ಲಾ ಮಂಡ್ಯ..

  September 26, 2016

Top