An unconventional News Portal.

  ...
  cauvery
  ಕಾವೇರಿ ವಿವಾದ

  ‘ಕ್ಯೂಸೆಕ್ಸ್ ಮೇಲೆ ಕ್ಯೂಸೆಕ್ಸ್ ಬರೆ’: ಮತ್ತೆ 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ತೀರ್ಮಾನ

  ನವದೆಹಲಿಯಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿಯಲ್ಲಿ ಇನ್ನೂ 10 ದಿನಗಳ ಕಾಲ ದಿನಕ್ಕೆ 3,000 ಕ್ಯೂಸೆಕ್ಸಿನಂತೆ ಒಟ್ಟು 2.72 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಆದೇಶ ನೀಡಿದೆ. ಸೆಪ್ಟೆಂಬರ್ 21 ರಿಂದ 30 ರವರೆಗೆ ಮೂರು ಸಾವಿರ ಕ್ಯೂಸೆಕ್ಸಿನಂತೆ ಒಟ್ಟು 30,000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸುವಂತೆ ಸರಕಾರಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ಆದೇಶ ನೀಡಿದ್ದಾರೆ. ಸೋಮವಾರ ಬೆಳಗ್ಗೆ 11.30ಕ್ಕೆ ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್‌..

  September 19, 2016
  ...
  nagaraj-victim-stone-crusher
  ಸುದ್ದಿ ಸಾರ

  ಕಾಲು ಕಳೆದುಕೊಳ್ಳುವ ಹಂತದಲ್ಲಿದ್ದ ಯುವಕನಿಗೆ ಚಿಕಿತ್ಸೆಯ ಭರವಸೆ

  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲಕ ಕನ್‌ಸ್ಟ್ರಕ್ಷನ್ ಕಂಪನಿಯ ರಸ್ತೆ ಕೆಲಸದಲ್ಲಿ ಕಾಲಿಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದ ಯುವಕನಿಗೆ ಕೊನೆಗೂ ಚಿಕಿತ್ಸೆಯ ಭರವಸೆ ಸಿಕ್ಕಿದೆ. 2015 ಆಗಸ್ಟ್ ತಿಂಗಳಿನಲ್ಲಿ ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪನಿಗೆ ಸೇರಿದ ಕಂಪನಿಯಲ್ಲಿ ರಸ್ತೆ ಕೆಲಸ ಮಾಡುತ್ತಿದ್ದಾಗ ಜಿಲ್ಲೆಯ ಗಾಜನೂರು ಮೂಲದ ಯುವಕ ನಾಗರಾಜ ಕಾಲಿಗೆ ಗಾಯ ಮಾಡಿಕೊಂಡಿದ್ದರು. “ಕಬ್ಬಿಣದ ರಾಡುಗಳನ್ನು ತುಂಡು ಮಾಡುವ ಯಂತ್ರದಿಂದ ನಾಗರಾಜನ ಕಾಲು ಗಾಯವಾಗಿತ್ತು. ಈ ಸಮಯದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ನಿರ್ಮಾಣ ಕಂಪನಿಯ ಕಡೆಯವರು ಹೇಳಿದ್ದರೂ ಯಾವುದೇ ನೆರವು ಸಿಕ್ಕಿರಲಿಲ್ಲ. ಸೋಮವಾರ ನಿರ್ಮಾಣ..

  September 19, 2016
  ...
  lokayukta-bail
  ಸುದ್ದಿ ಸಾರ

  ‘ಲೋಕಾಯುಕ್ತ ಡೀಲ್ ಕೇಸ್’: ಪತ್ರಕರ್ತ ಶ್ರೀನಿವಾಸ್ ಗೌಡ ಸೇರಿ 13 ಜನರಿಗೆ ಜಾಮೀನು

  ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಲೋಕಾಯುಕ್ತ ಲಂಚ ಪ್ರಕರಣದಲ್ಲಿ 13 ಜನರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾ. ಡಾ. ವೈ. ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ ಒಟ್ಟು 13 ಆರೋಪಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಜಾಮೀನು ಮಂಜೂರಾಗಿರುವ ಹಿನ್ನಲೆಯಲ್ಲಿ ಆರೋಪಿಗಳು ಮಂಗಳವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ವಿಶೇಷ ತನಿಖಾ ತಂಡ ದಾಖಲಿಸಿದ್ದ ಐದೂ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈಟಿವಿಯ ಮಾಜಿ ಪತ್ರಕರ್ತ ಶ್ರೀನಿವಾಸ್ ಗೌಡ, ಲೋಕಾಯುಕ್ತ ಮಾಜಿ ಜಂಟಿ ಆಯುಕ್ತ ಸಯ್ಯದ್..

  September 19, 2016
  ...
  indo-pak-loc
  ದೇಶ

  ಉರಿ ದಾಳಿ ಬೆನ್ನಲ್ಲೇ ಪ್ರತೀಕಾರದ ಮಾತು: ಯುದ್ಧದಾಹಿ ಸನ್ನಿವೇಶ ಸೃಷ್ಟಿಗೆ ಕೆಲವೇ ಹೆಜ್ಜೆಗಳು ಬಾಕಿ!

  ಕಾಶ್ಮೀರ ಕಣಿವೆ ರಾಜ್ಯದಲ್ಲಿ ಭಾನುವಾರ ಭಾರತೀಯ ಸೇನೆ ಮೇಲೆ ನಡೆದ ದಾಳಿ ಈಗ ಎರಡು ನೆರೆಯ ರಾಷ್ಟ್ರಗಳ ಸಂಬಂಧದ ನಡುವೆ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸೋಮವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಸಹಿತ ಸರಕಾರ ಹಿರಿಯ ಸಚಿವರು ಹಾಗೂ ಸೇನೆಯ ಹಿರಿಯ ಅಧಿಕಾರಗಳ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ. ಈಗಾಗಲೇ, ‘ದಾಳಿಗೆ ಪಾಕಿಸ್ತಾನ ಕಾರಣ’ ಎಂಬ ನಂಬಿಕೆಯ ಆಧಾರದ ಮೇಲೆ ಭಾರತದ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕರ್ನಾಟಕವನ್ನು ಹೊರತುಪಡಿಸಿದರೆ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಗಮನ ಈಗ ಕಾಶ್ಮೀರದತ್ತ ನೆಟ್ಟಿದೆ…

  September 19, 2016
  ...
  bijnor-lead
  ಪತ್ರಿಕೆ

  ಬಿಜ್ನೋರ್ ಗಲಭೆ: ಹೊಣೆಗಾರಿಕೆ ಮರೆತ ಮುದ್ರಣ ಮಾಧ್ಯಮಗಳಿಂದ ‘ಕೋಮು ಗಲಭೆ’ ಯತ್ನ!

  ಕಾವೇರಿ ತೀರ್ಪಿನ ಸಂದರ್ಭ ಕನ್ನಡದ ಟಿವಿ ಮಾಧ್ಯಮಗಳು ನಡೆದುಕೊಂಡ ರೀತಿ ನಮ್ಮ ಕಣ್ಣ ಮುಂದಿದೆ. ಇದರ ಬೆನ್ನಲ್ಲೇ ಮಾಧ್ಯಮ ಸಂಹಿತೆಗಳ ಬಗ್ಗೆ ಚರ್ಚೆಯೊಂದು ಶುರುವಾಗಿದೆ. ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಯಾವುದು ಉತ್ತಮ ಎಂಬ ಕುರಿತು ವಾದಗಳು ಮಂಡನೆಯಾಗಿವೆ. ಇಂತಹದೊಂದು ಸನ್ನಿವೇಶವನ್ನು ನೆನಪಿಸುವ ಘಟನೆಗಳು ಉತ್ತರ ಪ್ರದೇಶದ ಮಾಧ್ಯಮ ವಲಯದಲ್ಲೂ ನಡೆದಿದೆ. ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯದಿಂದ ಬಂದಿರುವ ಈ ವರದಿ ಮಾಧ್ಯಮಗಳ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಉತ್ತರ ಪ್ರದೇಶದ ಬಿಜ್ನೋರಿನಲ್ಲಿ ಮುಸ್ಲಿಮರು ಮತ್ತು ಜಾಟ್ ಸಮುದಾಯದ ನಡುವೆ..

  September 19, 2016
  ...
  Uri kashmir
  ದೇಶ

  ಕಾಶ್ಮೀರ ಕಣಿವೆಯಲ್ಲಿ 2 ದಶಕಗಳ ಅಂತರದಲ್ಲಿ ಸೇನೆ ಮೇಲೆ ಭೀಕರ ದಾಳಿ: 17 ಯೋಧರ ಸಾವು

  ಭಾನುವಾರ ಮುಂಜಾನೆ ವೇಳೆಯಲ್ಲಿ ಉತ್ತರ ಕಾಶ್ಮೀರದ ಉರಿ (Uri) ಬಳಿ ಭಾರತೀಯ ಸೇನೆಯ ಮೇಲೆ ಭಾರಿ ಪ್ರಮಾಣದ ದಾಳಿ ನಡೆದಿದ್ದು, 17 ಸೈನಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ 30 ಜನ ಸೈನಿಕರು ಗಾಯಗೊಂಡಿದ್ದಾರೆ. “ನಗರದ ಹೊರಭಾಗದಲ್ಲಿ ಕೇಳಿ ಬರುತ್ತಿದ್ದ ಗುಂಡಿನ ಮೊರೆತ, ಸ್ಫೋಟದ ಸದ್ದು ಹಾಗೂ ಏಳುತ್ತಿದ್ದ ಹೊಗೆಯನ್ನು ನೋಡುತ್ತಿದ್ದ ಸ್ಥಳೀಯರು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಯಿತು ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದರು,” ಎಂದು ‘ಕಾಶ್ಮೀರಿ ರೀಡರ್ ಡಾಟ್ ಕಾಮ್’ ವರದಿ ಮಾಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ..

  September 19, 2016

Top