An unconventional News Portal.

  ...

  JNUSU ಚುನಾವಣೆ ಅಂತಿಮ ಫಲಿತಾಂಶ: ಕೆಂಬಾವುಟದ ‘ಐಕ್ಯತೆ’ಗೆ ಭರ್ಜರಿ ಗೆಲುವು; ಗಮನ ಸೆಳೆದ ‘ಬಾಪ್ಸಾ’!

  ಜೆಎನ್ಯು (ಜವಹರ್ ಲಾಲ್ ನೆಹರೂ ಯುನಿವರ್ಸಿಟಿ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ‘Left Unity’ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ಎಡಪಂಥೀಯ ಚಿಂತನೆಯ ‘ಕುಲುಮೆ’ ಎನ್ನಿಸಿಕೊಂಡಿರುವ ದೇಶದ ಪ್ರತಿಷ್ಠಿಯ ವಿಶ್ವವಿದ್ಯಾನಿಲಯದಲ್ಲಿ ಮತ್ತೊಮ್ಮೆ ಕೆಂಬಾವುಟ ಹಾರಾಡಿದೆ. ಇದರ ಜತೆಗೆ, ‘ಬಿರ್ಸಾ ಪುಲೆ ಅಂಬೇಡ್ಕರ್ ವಿದ್ಯಾರ್ಥಿ ಸಂಘ’ (ಬಾಪ್ಸಾ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಯಾವುದೇ ಸ್ಥಾನಗಳಲ್ಲಿ ಗೆಲುವು ಕಾಣುವಲ್ಲಿ ಬಾಪ್ಸಾ ಅಭ್ಯರ್ಥಿಗಳು ವಿಫಲವಾಗಿದ್ದಾರೆ. ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮತ್ತು […]

  September 10, 2016
  ...

  ‘SMOKING KILLS’ ಅಂತ ಗೊತ್ತಿದ್ದೂ ಜನ ಯಾಕೆ ಸಿಗರೇಟು ಸೇದುತ್ತಾರೆ?

  ಇವತ್ತಿಗೆ ಭಾರತ ಬಿಡಿ, ಇಡೀ ಪ್ರಪಂಚದಾದ್ಯಂತ ಇದೊಂದು ಕ್ಲೀಷೆಯಾಗಿ ಮಾರ್ಪಾಟಾಗಿದೆ. ‘ಸ್ಮೋಕಿಂಗ್ ಕಿಲ್ಸ್’, ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಘೋಷಣೆಗಳು, ಜಾಹೀರಾತುಗಳು, ಸೈನ್ ಬೋರ್ಡುಗಳು, ಸೆಲೆಬ್ರಿಟಿಗಳ ಉವಾಚಗಳು ಹೀಗೆ ಕಂಡಕಂಡಲ್ಲಿ ಧೂಮಪಾನದ ವಿರುದ್ಧ ಪ್ರಚಾರ ಕಾರ್ಯ ನಡೆಯುತ್ತಲೇ ಇದೆ. ಮಾಲ್ಗೆ ಹೋಗಿ, ಸಿನಿಮಾ ಥಿಯೇಟಗೆ ಹೋಗಿ, ಇಲ್ಲವೇ ಸಿಗರೇಟು ಪ್ಯಾಕ್ ಒಂದನ್ನು ಕೊಂಡುಕೊಳ್ಳಿ, ಎಲ್ಲಾ ಕಡೆಗಳಲ್ಲೂ ‘ಸ್ಮೋಕಿಂಗ್ ಕಿಲ್ಸ್’ ಎಂಬ ಕಲುಷಿತಗೊಂಡ ಶ್ವಾಸಕೋಶದ ಚಿತ್ರಗಳು ರಾರಾಜಿಸುತ್ತವೆ. ಹೀಗಿದ್ದೂ, ಒಂದು 1980ರಲ್ಲಿ ಇದ್ದ ಪ್ರಪಂಚದ ಧೂಮಪಾನಿಗಳ ಸಂಖ್ಯೆ 72. 01 […]

  September 10, 2016
  ...

  ‘ಡಾಗ್ ಮೈ ಲವ್’: ಪ್ರಪಂಚ ಮರೆಸಿದ್ದ ಶ್ವಾನ ಪ್ರೇಮ ಮತ್ತು ನೋವಿನ ನಿರ್ಗಮನ!

  ಮಂಜುಳಾ ಮಾಸ್ತಿಕಟ್ಟೆ ಸಣ್ಣವಳಿದ್ದಾಗಲಿಂದಲೂ ಹಾಗೆ; ನಾಯಿ ಮರಿ ಅಂದರೆ ಅದೇನೋ ಪ್ರೀತಿ. ಎಲ್ಲೇ ನಾಯಿ ಮರಿ ಕಂಡರೂ ಮನೆಗೆ ತರುತ್ತಿದ್ದೆವು. ಅಮ್ಮ ಬೈದರೂ ಪರವಾಗಿಲ್ಲ, ಸಿಕ್ಕ ನಾಯಿಯಂತೂ ಮನೆ ತನಕ ಬರುತ್ತಿತ್ತು. ಅವುಗಳ ಜೊತೆಯೇ ಆಟ, ಕುಸ್ತಿ ಎಲ್ಲವೂ ನಡೀತಿತ್ತು. ಹಾಗೆ ನಾವೊಂತರ ಬೆಳೆದಿದ್ದೇ, ಬಾಲ್ಯದಲ್ಲಿ ಗಟ್ಟಿಯಾದ ಸಂಬಂಧವೊಂದನ್ನು ಬೆಳೆಸಿಕೊಂಡಿದ್ದು ನಾಯಿಗಳ ಜೊತೆಯಲ್ಲಿ. ನಮ್ಮೂರಲ್ಲಿ ಪ್ರತಿ ವರ್ಷ ನಾಯಿ ಸಾಯಿಸುವವರು ಬರುತ್ತಿದ್ದರು, ಅವರಿಗೆ ನಾವು ಹಾಕದೇ ಇರೋ ಶಾಪವೇ ಇಲ್ಲ. ಒಮ್ಮೆ ನನ್ನ ಪ್ರೀತಿಯ ಟೈಗರ್ ಅವರ ಬಲೆಗೆ […]

  September 10, 2016
  ...

  ಮೊದಲು ಬೆಂಗಳೂರು ಬೆಳವಣಿಗೆಯನ್ನು ನಿಯಂತ್ರಿಸಿ; ಪ್ರಾಮಾಣಿಕ ಕನ್ನಡ ಪ್ರೇಮ ಮೆರೆಯಿರಿ!

  ಸರಕಾರ ಪ್ರಾಯೋಜಿತ ಶುಕ್ರವಾರದ ‘ಕಾವೇರಿ ಬಂದ್’ ಯಶಸ್ವಿಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಜನ ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ತಮಿಳುನಾಡು ಸಿಎಂ ಜಯಲಲಿತಾ ತಿಥಿ ಕಾರ್ಯ ನಡೆದಿದೆ. ಕನ್ನಡದ ಪರ ಹೋರಾಟಗಾರರು ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲಿ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದ್ದಾರೆ. ಐಟಿ ಕಂಪನಿಗಳನ್ನು ಮುಚ್ಚಿಸುವ ಮೂಲಕ ಕೆಲವರು ಕನ್ನಡ ಪ್ರೇಮವನ್ನು ಹಂಚುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ವಿಶೇಷವಾಗಿ, ಮಂಡ್ಯ ಭಾಗದ ಸಾವಿರಾರು ರೈತರು ಸ್ವಯಂಪ್ರೇರಕವಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಮುಚ್ಚಿಸಲು ಹೋಗಿ […]

  September 10, 2016
  ...

  ಸರ್ವಾಧಿಕಾರಿ ಕೈಯಲ್ಲಿ ಬ್ರಹ್ಮಾಸ್ತ್ರ: ಅಣ್ವಸ್ತ್ರ ದೇಶಗಳ ಸಾಲಿನಲ್ಲಿ ಉತ್ತರ ಕೊರಿಯಾ; ಜಾಗತಿಕ ಆತಂಕ

  ಮನುಕುಲದ ವಿರೋಧಿ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ಸಾಲಿಗೆ ಉತ್ತರ ಕೊರಿಯಾ ಹೊಸದಾಗಿ ಸೇರ್ಪಡೆಯಾಗಿದೆ. ‘ಅಣ್ವಸ್ತ್ರ ಸಿಡಿತಲೆಯ ಪರೀಕ್ಷೆ ಯಶಸ್ವಿಯಾಗಿದೆ’ ಎಂದು ಉತ್ತರ ಕೊರಿಯಾದ ಸರಕಾರಿ ವಾಹಿನಿ ಶುಕ್ರವಾರ ವರದಿ ಮಾಡಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಶುಕ್ರವಾರ ದಕ್ಷಿಣ ಕೊರಿಯಾದ ಉತ್ತರ ಭಾಗದಲ್ಲಿ 5.3 ತೀವ್ರತೆಯ ಭೂ ಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದೇ ರೀತಿಯ ಭೂಮಿ ಕಂಪಿಸಿದ ವಾರ್ತೆಗಳು ಅಮೆರಿಕಾದ ಭೂಗರ್ಭ ಇಲಾಖೆ ಮತ್ತು ಜಪಾನಿನ ಭೂಕಂಪ ಮತ್ತು ಸುನಾಮಿ ಪರಿವೀಕ್ಷಣಾ ಕೇಂದ್ರಗಳಿಗೂ ತಲುಪಿದೆ. ಭಾರಿ ಬಾಂಬ್ ಸ್ಪೋಟ […]

  September 10, 2016
  ...

  ಮದುವೆಗೆ ಹಣ ಹೊಂದಿಸಲು ಹೊಸ ಐಡಿಯಾ: ಸಿಲಿಕಾನ್ ಸಿಟಿಯಲ್ಲಿ ಹುಟ್ಟಿಕೊಂಡ ‘ವೆಡ್ಡಿಂಗ್ ಟೂರಿಸಂ’!

  ಮದುವೆ ಎಂಬುದು ಖಾಸಗಿ ವಿಚಾರ; ಅತ್ಯಂತ ವೈಯುಕ್ತಿಕವಾದುದ್ದು. ಪ್ರತಿಯೊಬ್ಬರಿಗೂ ಅವರ ಮದುವೆಯನ್ನು ಹೇಗೆ ಆಗಬೇಕು ಎಂಬ ಕುರಿತು ಅವರದ್ದೇ ಆದ ಆಲೋಚನೆಗಳು ಇರುತ್ತದೆ. ಈ ಆಲೋಚನೆಗಳು ಹುಟ್ಟುವುದು ಸಾಮಾಜಿಕ ಪರಿಸರ ಹೇರುವ ಒತ್ತಡಗಳಿಂದ ಎಂಬುದನ್ನು ಗಮನಿಸಬೇಕಿದೆ. ಹೀಗಾಗಿಯೇ, ಅದ್ದೂರಿ ಮದುವೆಗಳು ಇಷ್ಟವಿದ್ದೋ, ಸಾಮರ್ಥ್ಯವಿದ್ದೋ ಆಯೋಜನೆಗೊಳ್ಳುತ್ತವೆ ಎನ್ನುವಂತಿಲ್ಲ. ಹೀಗೆ, ಆಗುವ ಮದುವೆಗಳಿಗೆ ಹಣ ಹೊಂದಿಸುವುದಕ್ಕಾಗಿಯೇ ಹೊಸ ಐಡಿಯಾ ಒಂದು ಹುಟ್ಟಿಕೊಂಡಿದೆ. ಅದು ಮದುವೆಯ ಟಿಕೆಟುಗಳನ್ನು ಮಾರುವ ಯೋಜನೆ! ಹೌದು, ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಮದುವೆಗೂ ಟಿಕೆಟ್ ಇಟ್ಟು, ಅದನ್ನು ಮಾರುವ ಮೂಲಕ ನೀವು […]

  September 10, 2016

Top