An unconventional News Portal.

  ...

  ‘ಗಾಯದ ಮೇಲೆ ಬರೆ’: 36 ಸಾವಿರ ಕ್ಯೂಸೆಕ್ಸ್ ನೀರು, ನಿರ್ವಹಣೆಗೆ ಮಂಡಳಿ ರಚನೆ; ಸುಪ್ರಿಂ ಕೋರ್ಟ್ ‘ಗರಂ’ ಆದೇಶ

  ಮತ್ತೆ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಶುಕ್ರವಾರ ಆದೇಶ ನೀಡಿದೆ. ಆದೇಶ ಪಾಲಿಸದೆ ಇರುವ ರಾಜ್ಯಸರ್ಕಾರದತ್ತ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಮೂರು ದಿನಗಳೊಳಗೆ ‘ನೀರು ನಿರ್ವಹಣಾ ಮಂಡಳಿ’ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು. ಯು. ಲಲಿತ್ ನ್ಯಾಯಪೀಠ ಆದೇಶ ನೀಡಿದೆ. ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್ […]

  September 30, 2016
  ...

  ‘ನಿರ್ದಿಷ್ಟ ದಾಳಿ’ ನಡೆಸಲು ಭಾರತ ಎಷ್ಟು ಶಕ್ತ?: ಅನುಮಾನಗಳಿಗೆ ಎಡೆಮಾಡಿದ ‘ತಾಂತ್ರಿಕ’ ವಿವರಗಳು!

  ಕೃಪೆ: ಡಿಪ್ಲೊಮಾಟ್.ಕಾಂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯ ಒಳಗೆ ‘ನಿರ್ದಿಷ್ಟ ದಾಳಿ’ ನಡೆಸಲಾಗಿದೆ ಎಂದು ಭಾರತ ಗುರುವಾರ ಹೇಳಿಕೊಂಡಿದೆ. ಇದನ್ನು ಪಾಕಿಸ್ತಾನ ತಳ್ಳಿ ಹಾಕಿದ್ದು, ಗಡಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ತನ್ನಿಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದಿದೆ. “ಮಿಥ್ಯಾರೋಪಗಳನ್ನು ಸೃಷ್ಟಿಸುವ ಸಲುವಾಗಿ ಭಾರತ ಭಯೋತ್ಪಾದಕ ನೆಲೆಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಮಾಡಿದ್ದಾಗಿ ಹೇಳಿಕೊಳ್ಳುತ್ತಿದೆ. ಇದೊಂದು ಭ್ರಮೆ,” ಎಂದು ಪಾಕಿಸ್ತಾನ ಸೇನಾ ಪ್ರಕಟಣೆ ತಿಳಿಸಿದೆ. ಭಾರತದ ಮಿಲಿಟರಿ ಕಾರ್ಯಚರಣೆಯ ಪ್ರಧಾನ ನಿರ್ದೇಶಕ ಲೆ. ಜ. ರಣಭೀರ್ ಸಿಂಗ್‌, ದಾಳಿಯ ನಡೆಸಿರುವುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ. “ಜಮ್ಮು […]

  September 30, 2016
  ...

  ಸಮಾಜದ ಸ್ವಾಸ್ಥ್ಯದ ಸಂಕೇತದಂತಿದ್ದವರು ಅಶೋಕ್ ಪೈ: ಒಂದು ನೆನಪು

   ಅರವಿಂದ ಎಮ್. ಎಮ್,  ತುರುವೇಕೆರೆ ಜನಮಾನಸದಲ್ಲಿ ಒಬ್ಬರಾಗಿದ್ದ ಅಶೋಕ್ ಪೈ, ಮೋಜಿನ ಕುದುರೆಯನ್ನು ಹತ್ತಿ ಹನ್ನೊಂದು ಕೇರಿ ಸುತ್ತಿ ಬಸವಳಿದ ನಮಗೆ ಸ್ವಾಸ್ಥ್ಯದ ಸಂಕೇತದಂತಿದ್ದರು. ಓದಿನ ಕಾಲು ಅನುಭವವನ್ನು, ಮುಕ್ಕಾಲು ಅಂದುಕೊಂಡು ಹೋದವರಿಗೆ ಜತೆಯಲ್ಲಿದ್ದವರು ಅವರು. ಅನುಭವ ಕೈ ಕೊಟ್ಟು, ಮನಸು ಮುದುಡಿದಾಗ ಆಪ್ತರಂತೆ ಕೈ ಹಿಡಿಯುತ್ತಿದ್ದವರು ಅಶೋಕ್ ಪೈ. ಎಷ್ಟೋ ಬಾರಿ ಮಾನಸಿಕ ತಜ್ಞರ ಬಳಿ ಎಡತಾಕುವಾಗ ಹುಟ್ಟಿಕೊಳ್ಳುವ ಆತಂಕ ಇವರ ಕಂಡೊಡನೆ ಸುಳಿಯದೇ ಹೋದ ಅನುಭವ ಹಲವು ಗೆಳೆಯರಿಗೆ ಆಗಿದೆ. ”ದೇವರು, ಆಚರಣೆಗಳು ಇಲ್ಲದಿದ್ದರೆ ದೇಶವೇ ಮಾನಸಿಕ ಆಸ್ಪತ್ರೆೆಗಳಿಂದ […]

  September 30, 2016
  ...

  ಭಾರತ ಸೇನೆಯ ‘ಸರ್ಜಿಕಲ್’ ದಾಳಿ: ಚರ್ಚೆಗೆ ಗ್ರಾಸವಾದ ನಾನಾ ಆಯಾಮಗಳು!

  ಭಾರತೀಯ ಸೇನೆ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ‘ದಾಳಿಗೆ ಸಜ್ಜಾಗಿದ್ದ ಭಯೋತ್ಪಾದಕ’ ಶಿಬಿರಗಳ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಿರುವುದಾಗಿ ಹೇಳಿದ್ದು ಈಗ ನಾನಾ ಆಯಾಮಗಳ ಚರ್ಚೆಗೆ ಕಾರಣವಾಗಿದೆ. ಗುರುವಾರ ಬೆಳಗ್ಗೆಯಿಂದ ಭಾರತದ ಮಾಧ್ಯಮಗಳು ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿರುವ ಈ ಸುದ್ದಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಒಂದು ಕಡೆ ಕಾಶ್ಮೀರಾದ ಸೇನಾ ನೆಲೆ ‘ಉರಿ’ಯ ಮೇಲೆ ನಡೆದ ದಾಳಿಗೆ ಪ್ರತೀಕಾರದ ನಡೆ ಇದು ಎಂದು ಭಾರತದ ಮಾಧ್ಯಮಗಳು ವಿಶ್ಲೇಷಿಸುತ್ತಿದ್ದರೆ, ಅಂತರಾಷ್ಟ್ರೀಯ ಮಾಧ್ಯಮಗಳು ಇದೊಂದು ‘ಗಡಿ ನಿಯಂತ್ರಣ ರೇಖೆ’ಯಲ್ಲಿ ನಡೆದ […]

  September 29, 2016
  ...

  ‘ಕಾವೇರಿದ ಚಂಡು’ ಮತ್ತೆ ಸುಪ್ರಿಂ ಅಂಗಳಕ್ಕೆ: ನಿರ್ಧಾರಕ್ಕೆ ಬಾರದ ಕೇಂದ್ರ ಮಧ್ಯಸ್ಥಿಕೆ ಸಭೆ

  ನಿರೀಕ್ಷೆಯಂತೆಯೇ ಕೇಂದ್ರ ಸರಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನು ಗುರುವಾರ ಸುಪ್ರಿಂ ಕೋರ್ಟ್ ಅಂಗಳಕ್ಕೆ ವರ್ಗಾವಣೆ ಮಾಡಿದೆ. ನ್ಯಾಯಾಲಯದ ಸೂಚನೆ ಮೇರೆಗೆ ದಿಲ್ಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸಭೆಯಲ್ಲಿ ಕರ್ನಾಟಕದ ಕಡೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡು ಕಡೆಯಿಂದ ಮುಖ್ಯ ಕಾರ್ಯದರ್ಶಿ ಪಿ. ರಾಮ ಮೋಹನ ರಾವ್ ಪಾಲ್ಗೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ರಾವ್ ಅವರ […]

  September 29, 2016
  ...

  ಗಡಿ ನಿಯಂತ್ರಣ ರೇಖೆ ಬಳಿ ನಿರ್ದಿಷ್ಟ ದಾಳಿ: ರಕ್ಷಣಾ ಇಲಾಖೆ

  ಗಡಿ ನಿಯಂತ್ರಣ ರೇಖೆಯಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಬುಧವಾರ ರಾತ್ರಿ ಭಾರತದ ಸೇನೆ ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ. “ಭಾರತ- ಪಾಕಿಸ್ತಾನದ ಗಡಿಯ ನಡುವಿನ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಸೇನಾ ದಾಳಿ ನಡೆಸಿದೆ,” ಎಂದು ಲೆ. ಜ. ರನಭೀರ್ ಸಿಂಗ್ ಪ್ರಕಟಿಸಿದ್ದಾರೆ. “ದಾಳಿ ವೇಳೆಯಲ್ಲಿ ಭಾರತದ ಕೆಲವು ನಗರಗಳ ಮೇಲೆ ದಾಳಿ ನಡೆಸಲು ಹಾಗೂ ದೇಶದೊಳಗೆ ನುಸಳಲು ತಯಾರಾಗಿದ್ದ ಭಯೋತ್ಪಾದಕ ನೆಲೆಗಳಿಗೆ ಹಾನಿಯಾಗಿದೆ. ಕೆಲವು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಪಾಕಿಸ್ತಾನ […]

  September 29, 2016
  ...

  ಒಪೆಕ್ ದೇಶಗಳಲ್ಲಿ ‘ಕದನ ವಿರಾಮ’ ಘೋಷಣೆ: ಕಚ್ಚಾ ತೈಲದ ಬೆಲೆ ಏರಿಕೆಯ ಮುನ್ಸೂಚನೆ!

  ಎರಡೂವರೆ ವರ್ಷಗಳ ನಂತರ ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ (ಒಪೆಕ್)ದಲ್ಲಿ ಒಮ್ಮತ ಮೂಡಿದೆ. ಪೈಪೋಟಿಯಲ್ಲಿ ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿದ್ದ ದೇಶಗಳು, ಕೊನೆಗೂ ತಮ್ಮ ಉತ್ಪಾದನೆಗೆ ಕಡಿವಾಣ ಹಾಕಲು ಬುಧವಾರ ಒಪ್ಪಂದಕ್ಕೆ ಬಂದಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಸೇರಿದಂತೆ ಇಂಧನ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಲಿದೆ. ಸಹಜವಾಗಿಯೇ ಭಾರತದ ಸ್ಥಳೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. 2008ರಿಂದ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ತಿಕ್ಕಾಟಗಳ ಕಾರಣಗಳಿಗಾಗಿ ಕಚ್ಚಾ ತೈಲ ಉತ್ಪಾದನೆ ಪೈಪೋಟಿಯಲ್ಲಿ ನಡೆಯಲಾರಂಭಿಸಿತ್ತು. ಇದರಿಂದ […]

  September 29, 2016
  ...

  ‘ಜರ್ನಲಿಸಂ ಶವಪರೀಕ್ಷೆ’: ಸುಮ್ಮನೆ ಕುಳಿತ ಪತ್ರಕರ್ತನಿಗೆ ಹಳೆಯದೆಲ್ಲವೂ ನೆನಪಾಗುತ್ತವೆ!

  ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಅವನಿಗೆ ಆತನ ಹಳೆಯದೆಲ್ಲಾ ನೆನಪಾಗುತ್ತದೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಅವರಿಬ್ಬರು ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನ ಮೀರಿ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿ ಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ […]

  September 28, 2016
  ...

  ರಾಜಧಾನಿಯಲ್ಲಿ ಮತ್ತೆ ‘ಕೈ-ದಳ’ ಮೈತ್ರಿ; ಪದ್ಮಾವತಿ ಬೆಂಗಳೂರಿನ ನೂತನ ಮೇಯರ್

  ಕಾಂಗ್ರೆಸ್ ಪಕ್ಷದ ಪದ್ಮಾವತಿ ಬೆಂಗಳೂರಿನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಸ್ಥಾನ ಜೆಡಿಎಸ್ನ ಆನಂದ್ ಪಾಲಾಗಿದ್ದು, ರಾಜಧಾನಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಪ್ರಕಾಶ್ ನಗರ ವಾರ್ಡ್ ಕಾರ್ಪೊರೇಟರ್ ಪದ್ಮಾವತಿ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಡಿ.ಎಚ್ ಲಕ್ಷ್ಮೀ ಸ್ಪರ್ಧಿಸಿದ್ದರು. ಚುನಾವಣೆ ನಡೆದಾಗ 142 ಮತ ಪಡೆದ ಪದ್ಮಾವತಿ ಜಯಶಾಲಿಯಾದರು. ಅವರ ಪ್ರತಿಸ್ಪರ್ಧಿ […]

  September 28, 2016
  ...

  ‘ಸೃಷ್ಠಿಯ ಕೌತುಕ’: ಒಬ್ಬ ತಂದೆ, ಇಬ್ಬರು ತಾಯಂದಿರಿಗೆ ಹುಟ್ಟಿದ ಜಗತ್ತಿನ ಮೊದಲ ಮಗು!

  ಒಂದು ಮಗುವಿಗೆ ಒಬ್ಬ ತಂದೆ, ಒಬ್ಬರು ತಾಯಿ ಇರ್ತಾರೆ. ಆದರೆ ಈ ಮಗುವಿಗೆ ಮೂವರು ತಂದೆ- ತಾಯಿ ಇರಲು ಸಾಧ್ಯನಾ? ಹೀಗೊಂದು ಸಾಧ್ಯತೆಯನ್ನು ವಿಜ್ಞಾನ ನಿಜವಾಗಿಸಿದೆ. ತಂದೆ- ತಾಯಿ ಹಾಗೂ ಮತ್ತೊಬ್ಬರ ಜೆನೆಟಿಕ್ ಕೋಡ್ (ಅನುವಂಶೀಯ) ಬಳಸಿಕೊಂಡು ಜಗತ್ತಿನ ಮೊದಲ ಮಗು ಜನ್ಮ ತಾಳಿದೆ. ಅದಕ್ಕೀಗ ಐದು ತಿಂಗಳು. ಜೋರ್ಡಾನ್ ಮೂಲದ ಈ ಮಗುವಿನ ತಾಯಿಯ ಜೀನ್ಸ್’ನಲ್ಲಿ ರೋಗದ ಲಕ್ಷಣಗಳಿದ್ದವು. ಇದರಿಂದಾಗಿ ವಿಶೇಷ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿಕೊಂಡು ಮಗುವಿನ ಭ್ರೂಣವನ್ನು ಸೃಷ್ಟಿಸಲಾಗಿತ್ತು. ಇದಕ್ಕಾಗಿ ತಂದೆ, ತಾಯಿ ಅಲ್ಲದೆ ಮತ್ತೊಬ್ಬರ ಡಿಎನ್ಎಯನ್ನು […]

  September 28, 2016

Top