An unconventional News Portal.

  ...

  ಭಟ್ಕಳದ ಬೀದಿಯಲ್ಲಿ ಹಾಡುಹಗಲೇ ನಡೆದ ‘ಗೋ ರಕ್ಷಣೆ’ ದೊಂಬರಾಟಕ್ಕೆ ಸಾಕ್ಷಿಯಾದ ಮುದ್ದು ಕರು!

  ರಾಜ್ಯದ ಅತೀ ಸೂಕ್ಷ್ಮ ನಗರ ಎನ್ನಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಹಾಡು ಹಗಲೇ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ಅದೂ ಒಬ್ಬ ‘ಹಿಂದೂ’ ಎಂಬ ಕಾರಣಕ್ಕೆ ಹೊಡೆತ ಕೊಟ್ಟಿದ್ದರೆ, ಇನ್ನೊಬ್ಬ ‘ಹಿಂದೂ’ವಾಗಿದ್ದರೂ ದನದ ಮುದ್ದು ಕರುವೊಂದನ್ನು ಕದ್ದು; ಮಾರಲು ಹೊರಟಿದ್ದ ಎಂಬ ಕಾರಣಕ್ಕೆ ಬೆಲ್ಟಿನಿಂದ ಹಲ್ಲೆಗೆ ಒಳಗಾಗಿದ್ದಾನೆ. ಈ ಘಟನೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣಗೊಂಡಿದ್ದು ‘ಸಮಾಚಾರ’ಕ್ಕೆ ವಕೀಲರೊಬ್ಬರ ಮೂಲಕ ಲಭ್ಯವಾಗಿದೆ. ಏನಿದು ಘಟನೆ?: ಉತ್ತರ ಕನ್ನಡದ ಜಿಲ್ಲೆಯಲ್ಲಿ ಬರುವ ಭಟ್ಕಳದ ಹೆಸರು ಕೇಳುತ್ತಿದ್ದಂತೆ ಮುಸ್ಲಿಂ ಭಯೋತ್ಪಾದನೆ ಹಿನ್ನೆಲೆಗಳು […]

  August 5, 2016
  ...

  ‘ದಿ ಸ್ಟೋರಿ ಆಫ್ ಬೆಲ್ಜಿಯಂ ವೀಸಾ’: ಮಳೆಯ ರಾತ್ರಿ ಮಾನವೀಯತೆ ಮೆರೆದ ಆ ಎರಡು ಗಂಟೆಗಳು!

  ಜುಲೈ 27, ಸಂಜೆ 7 ಗಂಟೆ, ಬೆಂಗಳೂರು… ‘ಬಸ್ ಬಂದ್’ ಹಿಂದಕ್ಕೆ ತೆಗೆದುಕೊಳ್ಳುವ ಕುರಿತು ಬೆಳಗ್ಗೆಯಿಂದ ಸರಕಾರ ನಡೆಸಿದ್ದ ಮಾತುಕತೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿತ್ತು. ಬೆಂಗಳೂರಿನಲ್ಲಿ ಧಾರಾಕಾರ ಮಳೆ ಶುರುವಾಗಿತ್ತು. ಅದೇ ವೇಳೆಗೆ ರಾಜ್ಯದ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂನ ಆಂಟ್ವೆರ್ಪ್ ನಗರದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರೀತಿಯ ಮಗನನ್ನು ನೋಡಲು ಹೊರಟು ನಿಂತಿದ್ದರು. ಆದರೆ, ದೇಶದ ಗಡಿದಾಟಿ ಇನ್ನೊಂದು ದೇಶಕ್ಕೆ ಹೋಗುವುದು ಇವತ್ತಿನ ಜಾಗತಿಕರಣದ ದಿನಗಳಲ್ಲೂ ಅಷ್ಟು […]

  August 4, 2016
  ...

  ಪಕ್ಷಭೇದ ಮರೆತು ಪುತ್ರ ಶೋಕ ಹಂಚಿಕೊಂಡವರು; ಮತ್ತು ನಾವು?

  ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಸಾವಿನ ನೋವನ್ನು ರಾಜ್ಯದ ಮುಖ್ಯಮಂತ್ರಿ, ತಂದೆ, ‘ಕಾಂಗ್ರೆಸ್ ಪಕ್ಷದ’ ಸಿದ್ದರಾಮಯ್ಯ ಜತೆ ಪಕ್ಷಬೇಧ ಮರೆತು ಎಲ್ಲರೂ ಹಂಚಿಕೊಂಡಿದ್ದಾರೆ. ಈ ಮೂಲಕ ಸಾವಿನ ಮನೆಯಲ್ಲಿ ಮಾನವೀಯ ಸಂಬಂಧಗಳಿಗೆ ಇರುವ ಬೆಲೆಯನ್ನು ನಮ್ಮ ಜನಪ್ರತಿನಿಧಿಗಳು ತೋರಿಸಿಕೊಟ್ಟಿದ್ದಾರೆ. ಅಂತಃಕರಣವೇ ಸತ್ತು ಹೋದಂತಾಗಿರುವ ಈ ಕಾಲಘಟ್ಟದ ರಾಜಕಾರಣದಲ್ಲಿ ಇದೊಂದು ಅಪರೂಪ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ವಿಯೋಗದ ನೋವಿನಲ್ಲಿದ್ದಾಗ ‘ತಂದೆ’ಯ ನೋವಿಗೆ ಸಾಂತ್ವನ ಹೇಳಿದವರು ಸಾವಿರಾರು ಜನ. ಹಾಗೆ ಸಮಾಧಾನ ಹೇಳಿದವರಲ್ಲಿ ಪಕ್ಷಬೇಧ ಮರೆತು ಬಂದ ಬಿಜೆಪಿ, ಜೆಡಿಎಸ್ ನಾಯಕರು […]

  August 4, 2016
  ...

  ರಾಕೇಶ್ ಸಿದ್ದರಾಮಯ್ಯ ‘ಸಾಮಾಜಿಕ’ ಅವಹೇಳನ: ‘ಜಾತಿ ನಿಂದನೆ’ ಅಡಿಯಲ್ಲಿ ಪ್ರಥಮ ಕೇಸು ದಾಖಲು

  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಮರಣಾನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸಿ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆ, ಲಿಂಗಸೂಗೂರು ಠಾಣೆಯಲ್ಲಿ ನವೀನ್ ಕುಮಾರ್ ಹಾಗೂ ಶರಣ ಬಸವ ಎಂಬ ಇಬರಬು ಯುವಕರ ವಿರುದ್ಧ ಐಪಿಸಿ ಸೆಕ್ಷನ್ಸ್ 153-ಎ, 504, 34 ಅಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿದೆ. ಜಾತಿ ನಿಂದನೆ, ಉದ್ದೇಶ ಪೂರ್ವಕವಾಗಿ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಗುಂಪಾಗಿ ಅಪರಾಧ ಚಟುವಟಿಕ ನಡೆಸದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ದೂರಿನ ಸಾರಾಂಶ: ರಾಯಚೂರು […]

  August 3, 2016
  ...

  ಶೌಚಾಲಯದಲ್ಲಿ ಕುಕ್ಕರ್ ಬಾಂಬ್: ಸ್ಫೋಟದ ಹಿಂದಿದೆಯಾ ‘ರಾಷ್ಟ್ರೀಯ’ ಆಯಾಮ?

  ಮೈಸೂರು ನ್ಯಾಯಾಲಯ ಆವರಣದ ಶೌಚಾಲಯದಲ್ಲಿ ನಡೆದ ಸ್ಪೋಟ ಇದೀಗ ರಾಷ್ಟ್ರೀಯ ಆಯಾಮ ಪಡೆದುಕೊಂಡಿದೆ. ಆದರೆ ಈವರೆಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಘಟನೆಯಲ್ಲಿ ಪಳಗಿದ ಸಂಘಟನೆಗಳ ಕೈವಾಡ ಇರುವುದನ್ನು ತನಿಖಾಧಿಕಾರಿಗಳು ಅಲ್ಲಗಳೆದಿದ್ದಾರೆ. ಮಂಗಳವಾರ ವಿವಿಧ ರಾಜ್ಯದ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ ತನಿಖೆ ಬೆನ್ನಿಗೆ ಬಿದ್ದಿದ್ದು ಯಾರ ಕೃತ್ಯ ಎಂಬುದು ಮಾತ್ರ ಇಲ್ಲಿವರೆಗೆ ತಿಳಿದು ಬಂದಿಲ್ಲ. ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಕೋರ್ಟ್ ಆವರಣದಲ್ಲಿ ನಡೆಯುತ್ತಿರುವ ಸತತ ನಾಲ್ಕನೇ ಸ್ಫೋಟವಿದು. […]

  August 3, 2016
  ...

  ‘ಅಲ್ ಖೈದಾ’ ಇಬ್ಭಾಗ: ಸಿರಿಯಾದಲ್ಲಿ ಹುಟ್ಟಿಕೊಂಡಿತು ಐಸಿಸ್ ಮಾದರಿ ಉಗ್ರ ಸಂಘಟನೆ ‘ಅಲ್ ನುಸ್ರ’

  ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ‘ಅಲ್ ಖೈದಾ’ದಿಂದ ಅದರ ಸಿರಿಯಾ ಘಟಕ ‘ಅಲ್ ನುಸ್ರ’ ಹೊರ ನಡೆದಿದೆ. ಈ ಮೂಲಕ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸದ್ ವಿರುದ್ಧ ಕಳೆದ 5 ವರ್ಷಗಳಿಂದ ನಡೆಯುತ್ತಿರುವ ಶಸ್ತ್ರ ಸಜ್ಜಿತ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ‘ಅಲ್ ನುಸ್ರ’ ‘ಐಸಿಲ್’ ರೀತಿಯಲ್ಲಿ ಪ್ರಾದೇಶಿಕ ಹಿಡಿತ ಹೊಂದಿರುವ ಬಲಿಷ್ಠ ಉಗ್ರ ಸಂಘಟನೆಯಾಗಿ ಬೆಳೆದು ನಿಲ್ಲುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ. ಈ ಬೆಳವಣಿಗೆ ಅಂತರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಬಳಗದಲ್ಲಿ ಆತಂಕ […]

  August 3, 2016
  ...

  21ದಿನದ ಮಳೆಗೆ 150ಕ್ಕೂ ಹೆಚ್ಚು ಸಾವು; ಮೇಘಧಾರೆಗೆ ಉತ್ತರ ತತ್ತರ; ನಮ್ಮಲ್ಲಿ ನಿರುತ್ತರ!

  ಉತ್ತರ ಭಾರತ ಜಲಾವೃತವಾಗಿದೆ. ಮೂರು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ಮತ್ತು ಬಿಹಾರ ಕೊಚ್ಚಿ ಹೋಗಿದೆ. ಈವರೆಗೆ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು ಪರಿಸ್ಥಿತಿ ಕೈಮೀರುತ್ತಿದೆ. ಉತ್ತರ ಭಾರತ ಸುತ್ತ ಮುತ್ತ ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.  ಒಟ್ಟಾರೆ ಈ ವರೆಗೆ ಮಳೆ ಸಂಬಂಧಿತ ಅವಘಡಗಳಿಂದ 152 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಹದಿಂದಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ನಡುಗಡ್ಡೆಯಾದ ಅಸ್ಸಾಂ ಈಶಾನ್ಯ ರಾಜ್ಯ ಅಸ್ಸಾಂ […]

  August 2, 2016
  ...

  ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನ ದಲಿತರು ರೊಚ್ಚಿಗೆದ್ದಿದ್ದು ಯಾಕೆ?

  ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ದಲಿತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆಗಳು ಕಣ್ಣ ಮುಂದಿವೆ. ಇವೆಲ್ಲದರ ಪರಿಣಾಮ ಎಂಬಂತೆ ಮುಖ್ಯಮಂತ್ರಿ ಆನಂದಿ ಪಟೇಲ್ ರಾಜೀನಾಮೆ ನೀಡಲು ಹೊರಟಿದ್ದಾರೆ. ದಲಿತರ ಮೇಲಿನ ಹಲ್ಲೆ ದೇಶದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ದಲಿತರ ರ್ಯಾಲಿ ಮಾಡಲು ಹೊರಟ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನರಿಲ್ಲದೇ ವಾಪಾಸಾಗಿದ್ದಾರೆ. ಈ ಸಂದರ್ಭದಲ್ಲಿ ಬಿಬಿಸಿಯ ಸೌತಿಕ್ ಬಿಸ್ವಾಸ್ ದಲಿತರ ಮೇಲಿನ ದೌರ್ಜನ್ಯಗಳನ್ನು ವಿವರವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಅದರ ಕನ್ನಡ ರೂಪಾಂತರನ್ನು ‘ಸಮಾಚಾರ’ […]

  August 2, 2016
  ...

  ರೈಲು ಬೋಗಿಯ ಮೇಲೆ ಸುಸಜ್ಜಿತ ಆಸ್ಪತ್ರೆ: ದೇಶದ ಜನಾರೋಗ್ಯದ ಜತೆ ಅಂತ್ಯಗೊಂಡ 25ವರ್ಷಗಳ ಪಯಣ!

  ಮನೆಬಾಗಿಲಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಕಲ್ಪನೆಯೊಂದು ಸಾಕಾರವಾಗಿದೆ. ‘ಲೈಫ್ ಲೈನ್ ಎಕ್ಸ್‌ಪ್ರೆಸ್‌’ ಎಂಬ ರೈಲು, 25 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ಆರೋಗ್ಯ ಸೇವೆ ನೀಡಿದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ ಶಸ್ತ್ರ ಚಿಕಿತ್ಸೆ, ಔಷಧೋಪಚಾರ, ಡಯಗ್ನಾಸ್ಟಿಕ್ಸ್ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಎರಡೂವರೆ ದಶಕಗಳ ಕಾಲ ನೀಡಿದ ಕೀರ್ತಿ ಇದರದ್ದು. ‘ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್’ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ರೈಲು ಹಳಿಗಳ ಮೇಲೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆ ಬೋಗಿಗಳ ಕಲ್ಪನೆ ಇದು. ಇದಕ್ಕೆ ಆರೋಗ್ಯ […]

  August 2, 2016
  ...

  ರಾಜ್ಯದ ಮೊದಲ ‘ಕುಕ್ಕರ್ ಬಾಂಬ್’ ಸ್ಪೋಟಕ್ಕೆ ಸಾಕ್ಷಿಯಾಯಿತಾ ಮೈಸೂರಿನ ನ್ಯಾಯಾಲಯ ಶೌಚಾಲಯ?

  ರಾಜ್ಯದ ಸುದ್ದಿಕೇಂದ್ರದಿಂದ ಮೈಸೂರು ಹಿಂದಕ್ಕೆ ಹೋಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದ ವೇಳೆಯಲ್ಲಿಯೇ, ಮೈಸೂರಿನ ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ ಸ್ಫೋಟ ನಡೆದಿದೆ. ಮೇಲ್ನೋಟಕ್ಕೆ ಸಾಮಾನ್ಯ ಘಟನೆಯಂತೆ ಕಂಡರೂ, ಹಾಡು ಹಗಲು- ಸಂಜೆ ವೇಳೆಯಲ್ಲಿ ನ್ಯಾಯಾಲಯದ ಆವರಣದೊಳಗಿರುವ, ಸಾಮಾನ್ಯವಾಗಿ ಜನರ ಬಳಕೆಯಿಂದ ದೂರವಿದ್ದ, ಪಾಳು ಬಿದ್ದಂತಾಗಿದ್ದ ಶೌಚಾಲಯದಲ್ಲಿ ‘ಕುಕ್ಕರ್ ಬಾಂಬ್’ ಸ್ಫೋಟಿಸಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಇದಕ್ಕೆ ಕಾರಣ, ವಿಧಿ ವಿಜ್ಞಾನ ಪ್ರಯೋಗಾಲಯದ […]

  August 2, 2016

Top