An unconventional News Portal.

  ...

  ಅಂತರ್ಜಾಲ ಮಾರುಕಟ್ಟೆಯಲ್ಲಿ ‘ರಿಲಯನ್ಸ್ ಜಿಯೋ’ ಸದ್ದು ಮತ್ತು ಧೀರೂಭಾಯಿ ಅಂಬಾನಿ ಬೆಳೆದು ಬಂದ ಪರಿ!

  ರಿಲಯನ್ಸ್ ಹೊರ ತಂದಿರುವ ‘ಜಿಯೋ’ 4ಜಿ ಸಿಮ್ ದೇಶದ ಜನರನ್ನು ‘ಇಂಟರ್ನೆಟ್ ಮೋಡಿ’ಯ ಬಲೆಯಲ್ಲಿ ಕೆಡವಿದೆ. ಜಾಗತೀಕರಣ ಜಾರಿಯಾದ 25 ವರ್ಷಗಳ ನಂತರ, ದೇಶದ ಜನರ ಅಂತರ್ಜಾಲ ಬಳಕೆಯನ್ನೇ ದಿಕ್ಕನ್ನೇ ಬದಲಿಸುವ ಸೂಚನೆ ನೀಡಿದೆ ‘ಜಿಯೋ’. ಸದ್ಯ ಸಿಮ್ ಪಡೆಯಲು ಜನ ರಿಲಾಯನ್ಸ್ ಕಾದು ಕುಳಿತಿದ್ದಾರೆ. ಇದು ಅಮೆರಿಕಾದಲ್ಲಿ ‘ಆ್ಯಪಲ್’ ಬಿಡುಗಡೆಯಾದ ದಿನಗಳನ್ನು ನೆನಪಿಸುವಂತಿದೆ. ಒಂದೆಡೆ ರಿಲಾಯನ್ಸ್ ಜಿಯೋ ಮೋಡಿ ಮಾಡುತ್ತಿದ್ದರೆ ಅತ್ತ ಮೊಬೈಲ್ ಸೇವಾ ವಲಯ ಮತ್ತು ಗ್ರಾಹಕರಲ್ಲಿ ಆತಂಕವೂ ಮನೆ ಮಾಡಿದೆ. ಇದಕ್ಕೆ ಕಾರಣ ‘ಜಿಯೋ’ […]

  August 29, 2016
  ...

  ದೇವದಾಸಿಯರ ನಾಡಿನಲ್ಲಿ- ಭಾಗ 3: ಹೊರಳಿದ ಹಾದಿಯಲ್ಲಿ ಹೇಮಾ ಎಂಬ ರೂಪಕ…!

  ಕಾಲ ಬದಲಾದಂತೆ ದೇವದಾಸಿ ಪದ್ಧತಿಯಲ್ಲೂ ಮಾರ್ಪಾಡುಗಳಾದವು. ದಾಸ್ಯಕ್ಕೊಳಪಡುತ್ತಿದ್ದ ಹೆಣ್ಣು ಮಕ್ಕಳ ಬಾಳಲ್ಲಿ ಹೊಸ ಅಲೆ ಎದ್ದಿತು. ಜೀವನ ಕ್ರಮ ಬದಲಾದರೂ ನಂಬಿಕೆಗಳು ಮಾತ್ರ ಅಷ್ಟು ಸುಲಭಕ್ಕೆ ಕಳಚಿಕೊಳ್ಳಲೇ ಇಲ್ಲ. ಹೀಗೆ ಕಾಲದ ಅಲೆಯಲ್ಲಿ ತೇಲುತ್ತ ಮುಳುಗುತ್ತ ಕೊನೆಗೆ ‘ಲೈಂಗಿಕ ಕಾರ್ಯಕರ್ತೆ’ಯರು ಎಂಬ ಪಟ್ಟ ಕಟ್ಟಿಕೊಂಡ ಬಗೆಯೇ ವಿಚಿತ್ರವಾದುದು . ಇದು ನಾಗರಿಕ ಸಮಾಜ, ಮತ್ತದರ ಕಾನೂನು ದೇವದಾಸಿ ಸಮುದಾಯಕ್ಕೆ ನೀಡಿದ ಕೊಡುಗೆ… ಭಾಗ-3:  ದೇವದಾಸಿ ಹೆಣ್ಣು ಮಕ್ಕಳೇಕೆ ವೇಶ್ಯಾವಾಟಿಕೆಗೆ ಇಳಿದರು?. ನೇರ ಪ್ರಶ್ನೆಗೆ ಆಕೆ ಸಣ್ಣಗೆ ಕಂಪಿಸಿದಳು. ಮುಧೋಳದ ಗಲ್ಲಿಯೊಂದರ […]

  August 29, 2016
  ...

  ‘ಮುದ್ದು ಕರು’ ರಕ್ಷಿಸಿದ್ದ ಮಹಿಳಾ ಪಿಎಸ್ಐ ರಾಜೀನಾಮೆ: ಭಟ್ಕಳದ ‘ಜಾತ್ಯಾತೀತ ಹವಾಲ ದಂಧೆ’ ಕಾರಣ?

  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯ ಮಹಿಳಾ ಪಿಎಸ್ಐ, ಇತ್ತೀಚೆಗಷ್ಟೆ ಹಾಡುಹಗಲು ಹೆದ್ದಾರಿಯಲ್ಲಿ ದನದ ಕರುವೊಂದನ್ನು ‘ಗೋ ರಕ್ಷಕ’ದಿಂದ ರಕ್ಷಿಸಿದ್ದ ರೇವತಿ ಭಾನುವಾರ ರಾಜೀನಾಮೆ ನೀಡಿದ್ದಾರೆ. ಕಾರವಾರ ಪೊಲೀಸ್ ಅಧೀಕ್ಷಕರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಅವರು, ‘ನಾನು ಯಾವುದೇ ತಪ್ಪು ಮಾಡದಿದ್ದರೂ, ಇಲ್ಲಿಯವರೆಗೆ ಅನೇಕ ಮೇಲಾಧಿಕಾರಿಗಳು ನೀಡಿರುವ ಮಾನಸಿಕ ಒತ್ತಡವನ್ನು ಸಹಿಸಲು ಅಸಾಧ್ಯವಾಗಿರುವುದಕ್ಕೆ, ಇಲಾಖೆಗೆ ನಿವೃತ್ತಿ ನೀಡಲು ಕೋರಿ ಈ ಪತ್ರ ನೀಡುತ್ತಿದ್ದೇನೆ,’ ಎಂದು ವಿಷಯ ಪ್ರಸ್ತಾಪಿಸಿದ್ದಾರೆ. ಸಾಮಾನ್ಯ ಬಿಳಿ ಹಾಳೆಯ ಮೇಲೆ, ನೀಲಿ ಪೆನ್ನಿನಲ್ಲಿ ಬರೆದಿರುವ […]

  August 29, 2016

Top