An unconventional News Portal.

    ...
    pellets
    ದೇಶ

    ‘ಕಾಶ್ಮೀರ ಸಂಘರ್ಷಕ್ಕೆ 50 ದಿನ’: ಪೆಲ್ಲೆಟ್ ಗನ್ ಜಾಗದಲ್ಲಿ ‘ಪಾವಾ ಶೆಲ್’ ಬಳಕೆಗೆ ಚಿಂತನೆ!

    ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಮೇಲೆ ‘ಪೆಲ್ಲೆಟ್ ಗನ್’ಗಳ ಬಳಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆಗೆ ಕೇಂದ್ರ ಸರಕಾರ ಮುಂದಾಗಿದೆ. ಗುಂಪು ಚದುರಿಸಲು ಅಮೆರಿಕಾ ಬಳಸುವ ‘ಅಕಾಸ್ಟಿಕ್ ಡಿವೈಸ್’ (ದೊಡ್ಢ ಶಬ್ದ ಹೊರಡಿಸುವ ಸ್ಪೀಕರ್) ಮತ್ತು ಚಿಲ್ಲಿ (ಮೆಣಸು) ಶೆಲ್ ಗಳನ್ನು ಬಳಸುವಂತೆ ತಜ್ಷರ ತಂಡ ಸಲಹೆಯನ್ನು ಗೃಹ ಇಲಾಖೆ ಮುಂದಿಟ್ಟಿದೆ. ತಾತ್ಕಾಲಿಕ ಕುರುಡುತನ ಉಂಟು ಮಾಡುವ ಲೇಸರ್ ಶೂಟರ್ ಗಳನ್ನು ಬಳಸುವ ಬಗ್ಗೆಯೂ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಹಿಜ್ಬುಲ್ ಕಮಾಂಡರ್ ವನಿ ಸಾವಿನ ನಂತರ ಕಾಶ್ಮೀರದಲ್ಲಿ ಹುಟ್ಟಿಕೊಂಡ ಹಿಂಸಾಚಾರ..

    August 26, 2016
    ...
    kpsc-bangalore-1
    KPSC NEWS

    ವೇಳಾಪಟ್ಟಿ ಸಹಿತ ಅಧಿಸೂಚನೆ: ಏನಿದು ಕೆಪಿಎಸ್ಸಿ ಒಳಗಿನ ಹೊಸ ಬೆಳವಣಿಗೆ?

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಸೂಚನೆ ಜೊತೆಗೆ ಪರೀಕ್ಷೆಯ ದಿನಾಂಕವನ್ನೂ ಘೋಷಿಸಲಾಗಿದೆ. 159 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಹೊರಡಿಸಿರುವ ಇತ್ತೀಚಿನ ಅಧಿಸೂಚನೆಯಲ್ಲಿ ಪರೀಕ್ಷಾ ದಿನಾಂಕವೂ ನಮೂದಿಲಾಗಿದೆ. ಈ ಮೂಲಕ ಅಭ್ಯರ್ಥಿಗಳಿಗೆ ಮೊದಲ ಹಂತದ ಪಾರದರ್ಶಕತೆ ಕಾಣಿಸಿದೆ. ಅಧಿಸೂಚನೆ ನಂತರ ಪರೀಕ್ಷೆ ದಿನಾಂಕಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವುದು ತಪ್ಪಿದೆ. ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ ಪರೀಕ್ಷೆಗಳನ್ನು ನಡೆಸಲು ಆಯೋಗ ತೀರ್ಮಾನಿಸಿದೆ ಎಂಬುದನ್ನು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಕೆಪಿಎಸ್ಸಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುವ..

    August 26, 2016
    ...
    devadasi-samachara-1
    SPECIAL SERIES

    ದೇವದಾಸಿಯರ ನಾಡಿನಲ್ಲಿ (ರಿಕ್ಯಾಪ್)- ಭಾಗ 1: ‘ಮುತ್ತು’ ಕಟ್ಟಿದ ಕತೆಗಿದು ಮುನ್ನುಡಿ…!

    ಎಲ್ಲವೂ ಅರ್ಥವಾದಂತಾಗಿ ಏನೂ ಅರ್ಥವಾಗದ ನಿಗೂಢ ಲೋಕ ‘ದೇವದಾಸಿ’ಯರದು. ಸಾಂಸ್ಕೃತಿಕ ದಾಸ್ಯಕ್ಕೆ ಈಡಾದ ಈ ಹೆಣ್ಣು ಮಕ್ಕಳನ್ನು ದೇವದಾಸಿಯರು ಎಂದು ಕರೆಯುವ ಬಗ್ಗೆನೇ ತಕರಾರುಗಳಿವೆ. ದೇವರ ಹೆಸರಿನಲ್ಲಿ ‘ಮುತ್ತು ಕಟ್ಟಿಸಿಕೊಂಡವರ’ ಸಾಮಾನ್ಯ ಜೀವನದ ಕುರಿತು ಇದ್ದ ಆಸಕ್ತಿ ಕಳೆದುಕೊಳ್ಳಲು ಅವತ್ತೊಂದು ನಾಲ್ಕು ದಿನ ಉತ್ತರ ಕರ್ನಾಟಕದ ಕಡೆ ಪಯಣ ಬೆಳೆಸಿಯಾಗಿತ್ತು. ಅಲ್ಲಿ ಸಿಕ್ಕ ವಿವರಗಳನ್ನು ಹಂಚಿಕೊಳ್ಳುವ ಸರಣಿಗೆ ಇದು ಮುನ್ನುಡಿ ಅಂದುಕೊಳ್ಳಬಹುದು… ಭಾಗ-1: “ಹೊಸ ಬಟ್ಟೆ ತರ್ತಾರಾ..ಸ್ನಾನ ಮಾಡಿಸ್ತಾರಾ..ದೇವರ ಎದ್ರಿಗೆ ನಾಲ್ಕು ಮೂಲೆಗೂ ತುಂಬಿದ ಬಿಂದಿಗೆ ಇಟ್ಟು..

    August 26, 2016
    ...
    Sedition JNU
    ದೇಶ

    ‘ರಾಜದ್ರೋಹ’ದ ಸುನಾಮಿ: 8 ತಿಂಗಳ ಅಂತರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 18!

    ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಸುರಿಯಿತೋ ಇಲ್ಲವೋ ಗೊತ್ತಿಲ್ಲ; ಆದರೆ, ದೇಶದಲ್ಲಿ ‘ರಾಜದ್ರೋಹ’ದ ಪ್ರಕರಣಗಳ ಪ್ರವಾಹವೇ ಹರಿದಿದೆ. 2016ರ ಜನವರಿಯಿಂದ ಇಲ್ಲಿವರೆಗೆ ಸುಮಾರು 18 ರಾಜದ್ರೋಹ (ಸೆಡಿಷನ್) ದ ಪ್ರಕರಣಗಳು ದಾಖಲಾಗಿವೆ. ಫೇಸ್ಬುಕ್, ವಾಟ್ಸಪ್ ಮೆಸೇಜುಗಳಿಂದ ಆರಂಭವಾಗಿ ‘ಆಝಾದಿ’ ಘೋಷಣೆಗಳವರಗೆ, ರಾಜದ್ರೋಹದ ಆರೋಪಗಳನ್ನು ಹೊತ್ತವರ ಪಟ್ಟಿ ಬೆಳೆಯುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತ ಶುರುವಾಗುತ್ತಿದ್ದಂತೆ ಅಸಹಿಷ್ಣುತೆಯ ವಾತಾವರಣ ಇದೆ ಎಂಬ ಕೂಗು ಎದ್ದಿತ್ತು. ಇದಾದ ಬೆನ್ನಿಗೆ ‘ಜೆಎನ್‌ಯು’ನಿಂದ ಆರಂಭವಾದ ರಾಜದ್ರೋಹ ಪ್ರಕರಣಗಳ ಪರ್ವ, ಅಮ್ನೆಸ್ಟಿ ಇಂಟರ್ನ್ಯಾಷನಲ್, ಚಿತ್ರನಟಿ ಕಮ್..

    August 26, 2016

Top