An unconventional News Portal.

    ...
    italy earth quake
    ಸುದ್ದಿ ಸಾರ

    ಉತ್ತರ ಭಾರತದಲ್ಲಿ ನಡುಗಿದ ಭೂಮಿ; ಇಟಲಿಯ ಕಂಪನಕ್ಕೆ 37ಕ್ಕೂ ಹೆಚ್ಚು ಸಾವು, 150 ಜನ ನಾಪತ್ತೆ

    ಇಟಲಿಯಲ್ಲಿ ಬುಧವಾರ (ಅಲ್ಲಿನ ಕಾಲಮಾನ ಮುಂಜಾನೆ 3. 36ಕ್ಕೆ) ಸಂಭವಿಸಿದ ಭೂಕಂಪ 37ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇನ್ನೂ 150 ಜನ ನಾಪತ್ತೆಯಾಗಿದ್ದು ಅವಶೇಷಗಳಡಿಯಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಇಟಲಿ ಸರಕಾರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ರೋಮ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರವಿದ್ದು ಪಸ್ಕಾರಾ ಡೆಲ್ ಟ್ರೋಂಟೋ, ಅಮಟ್ರಿಸ್, ಅಕ್ಮೊಲಿ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 3:36ಕ್ಕೆ ಭೂಕಂಪ ಸಂಭವಿಸಿದೆ…

    August 24, 2016
    ...
    Ramya pak media
    ಪತ್ರಿಕೆ

    ಪಾಕಿಸ್ತಾನ ಮಾಧ್ಯಮಗಳಲ್ಲಿ ‘ರಮ್ಯಾ ವಿವಾದ ದರ್ಶನ’; Thanks to ಸಂಘಪರಿವಾರ!

    ಪ್ರಚಾರ; ಅದು ನೆಗೆಟಿವ್ ಅಥವಾ ಪಾಸಿಟಿವ್, ಯಾವುದೇ ಇರಲಿ. ಪ್ರಚಾರ ಪ್ರಚಾರನೇ ಎಂದುಕೊಳ್ಳುವವರು ರಾಜಕಾರಣಿಗಳು. ಇತ್ತೀಚೆಗೆ ಸಿನೆಮಾ ರಂಗದಿಂದ ರಾಜಕೀಯ ಅಖಾಡಕ್ಕಿಳಿದ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ಹಲವು ದಿನಗಳ ನಂತರ ಜಾಗತಿಕ ಸುದ್ದಿಕೇಂದ್ರಕ್ಕೆ ಬಂದು ನಿಂತಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಹೇಳಿಕೆ ನೀಡುವ ಮೂಲಕ ಅವರ ನಿರೀಕ್ಷೆ ಮೀರಿ ಪಬ್ಲಿಸಿಟಿ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ಮಾಧ್ಯಮಗಳಲ್ಲೂ ಕಳೆದ ಎರಡು ದಿನಗಳಿಂದ ರಮ್ಯಾ ಸುತ್ತ ವರದಿಗಳು ಅಚ್ಚಾಗುವ ಮೂಲಕ, ಕರ್ನಾಟಕದ ಮಾಜಿ ಸಿನೆಮಾ ತಾರೆ ಕಮ್ ರಾಜಕಾರಣಿ..

    August 24, 2016
    ...
    ind-pak-textbook
    ದೇಶ

    ಭಾರತ- ಪಾಕ್ ಸಂಬಂಧಕ್ಕೆ ಹುಳಿ ಹಿಂಡುತ್ತಿರುವ ಎರಡೂ ದೇಶಗಳ ಪಠ್ಯಕ್ರಮಗಳು!

    ಸ್ವಾತಂತ್ರ್ಯಕ್ಕೂ ಮುನ್ನ ಒಟ್ಟಿಗೇ ಇದ್ದ ಎರಡು ಭೂ ಭಾಗಗಳು, 1947ರ ನಂತರ ‘ಶತ್ರುಗಳು ರಾಷ್ಟ್ರಗಳು’ ಎಂಬ ಪಟ್ಟವನ್ನು ಕಟ್ಟಿಕೊಂಡಿವೆ. ಈ 70 ವರ್ಷಗಳ ಅಂತರದಲ್ಲಿ ಉಬಯ ದೇಶಗಳ ನಡುವೆ ನಡೆದ ಯುದ್ಧಗಳು, ನಡೆಯದ ಸಂಧಾನ ಮಾತುಕತೆಗಳು ಮತ್ತು ಕೊಡುಕೊಳ್ಳುವಿಕೆಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನಡೆಗಳು ಎಲ್ಲವೂ ಹೀಗೊಂದು ಪಟ್ಟವನ್ನು ಪಡೆದುಕೊಳ್ಳುವಲ್ಲಿ ಗಣನೀಯ ಪ್ರಮಾಣದ ಕೊಡುಗೆ ನೀಡಿವೆ. ಸದ್ಯ ಇವೆಲ್ಲವನ್ನೂ ಪಕ್ಕಕ್ಕಿಟ್ಟು, ಭಾರತ ಮತ್ತು ಪಾಕಿಸ್ತಾನ ಈ ಪರಿಯ ಶತ್ರುತ್ವವನ್ನು ಬೆಳೆಸಿಕೊಳ್ಳಲು ನೆರವಾದ ಶಾಲೆಗಳ ಪಠ್ಯಕ್ರಮಗಳನ್ನು ಗಮನಿಸಬೇಕಿದೆ. ಇತಿಹಾಸದ ಒಂದೇ..

    August 24, 2016
    ...
    Philippenes
    ವಿದೇಶ

    ಫಿಲಿಪ್ಪೀನ್ ಮಾದಕ ಲೋಕದಲ್ಲಿ ಮರಣ ಮೃದಂಗ: ಅಧ್ಯಕ್ಷ ದುತಾರ್ತೆಯ ‘ಒಂದು ಮುತ್ತಿನ ಸಂಗ’!

    ಫಿಲಿಪ್ಪೀನ್ಸ್ ಅಧ್ಯಕ್ಷರಾಗಿ ರೋಡ್ರಿಗೋ ದುತಾರ್ತೆ ಆಯ್ಕೆಯಾಗಿ ಏಳು ವಾರಗಳು ಕಳೆಯುವ ಹೊತ್ತಿಗೆ, ಖಾತೆಗೆ 1900 ಕೊಲೆಗಳು ಜಮಾವಣೆಗೊಂಡಿವೆ. ಡ್ರಗ್ಸ್ ಜಾಲ ಮಟ್ಟಹಾಕುವ ನೆಪದಲ್ಲಿ ಶುರುವಾದ ಮಾರಣಹೋಮವೀಗ ಜಗತ್ತನ್ನು ಬೆಚ್ಚಿ ಬೀಳಿಸಿದೆ. ವಿಶ್ವಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ಫಿಲಿಪ್ಪೀನ್ಸ್ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ಕುರಿತು ಆತಂಕವನ್ನು ವ್ಯಕ್ತಪಡಿಸಿವೆ. ಏಳೇ ಏಳು ವಾರದ ಕೆಳಗೆ ರೊಡ್ರಿಗೋ ಪೂರ್ವ ಏಷ್ಯಾದ ದ್ವೀಪ ರಾಷ್ಟ್ರ ಫಿಲಿಪ್ಪೀನ್ಸ್ ಅಧ್ಯಕ್ಷರಾದರು. ಅಧಿಕಾರ ವಹಿಸಿಕೊಂಡವರೇ ಮಾಧಕ ದ್ರವ್ಯ ಜಾಲದ ಮೇಲೆ ಯುದ್ಧ ಸಾರಿದರು. ಈ ಯುದ್ಧ ಹೇಗಿರಬಹುದು ಎಂಬ ಕಲ್ಪನೆ ಫಿಲಿಪ್ಪೀನ್ಸ್..

    August 24, 2016

Top