An unconventional News Portal.

    ...
    mukesh-ambani_1
    ಸುದ್ದಿ ಸಾರ

    15 ಕೋಟಿ ಸಂಬಳಕ್ಕೆ ಮುಕೇಶ್ ಅಂಬಾನಿ ತೃಪ್ತಿ: ವೇತನ ತಾರತಮ್ಯದ ಪ್ರಮಾಣ ಎಷ್ಟು?

    ಕಳೆದ ಎಂಟು 8 ವರ್ಷಗಳಿಂದ ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ಸಂಬಳವನ್ನು ಹೆಚ್ಚು ಮಾಡಿಕೊಂಡಿಲ್ಲ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿಯಲ್ಲಿ ಈ ವರದಿ ಬಿಡಗಡೆಯಾಗಿದ್ದು; ಅಂಬಾನಿ ತಮ್ಮ ಸಂಬಳವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಮುಕೇಶ್ ಅಂಬಾನಿ ತಮ್ಮ ಸಂಸ್ಥೆ ಕಡೆಯಿಂದ ವಾರ್ಷಿಕ 15 ಕೋಟಿ ಸಂಬಳವನ್ನು ಪಡೆಯುತ್ತಿದ್ದಾರೆ. ಇದರ ಜತೆಗೆ ಅವರ ವಾರ್ಷಿಕ ಖರ್ಚಿಗಾಗಿ ಸುಮಾರು 24 ಕೋಟಿ ರೂಪಾಯಿಗಳನ್ನು..

    August 5, 2016
    ...
    ETV kannada suicid attempt
    ಟಿವಿ

    ಯುವ ಪತ್ರಕರ್ತೆಯ ‘ಮಾತ್ರೆ ಸೇವನೆ’ ಮತ್ತು ‘ಈ ಟಿವಿ’ ನ್ಯೂಸ್ ಸುತ್ತ ನಡೆದ ಬೆಳವಣಿಗೆಗಳು!

    ದೇಶದ ಅತಿದೊಡ್ಡ ಉದ್ಯಮಿಯ ಒಡೆತನಕ್ಕೆ ಇತ್ತೀಚೆಗೆ ಒಳಗಾಗಿರುವ ‘ಈಟಿವಿ ನ್ಯೂಸ್ ಕನ್ನಡ’ (ಪ್ರದೇಶ್ 18) ವಾಹಿನಿಯ ಪತ್ರಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಗುರುವಾರ ಮಾಧ್ಯಮ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಅಧಿಕಾರಿಗಳ ಆತ್ಮಹತ್ಯೆ ಕುರಿತಾದ ನಿರಂತರ ಸುದ್ದಿಗಳನ್ನು ನೀಡುತ್ತಿದ್ದ ಸುದ್ದಿ ಮಾಧ್ಯಮಗಳ ವಲಯದೊಳಗೇ ನಡೆದ ಈ ಬೆಳವಣಿಗೆ ಸಹಜ ಕುತೂಹಲಕ್ಕೆ, ಆತುರದಲ್ಲಿ ಹುಟ್ಟಿಕೊಳ್ಳುವ ಊಹಾಪೋಹಗಳಿಗೆ ಕಾರಣವಾಯಿತು. ಇದರ ಜತೆಗೆ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಪತ್ರಕರ್ತೆಯ ಫೊಟೋ, ಅರ್ಧಂಬರ್ಧ  ಮಾಹಿತಿಯನ್ನು..

    August 5, 2016
    ...
    bhatkal-final-1
    ರಾಜ್ಯ

    ಭಟ್ಕಳದ ಬೀದಿಯಲ್ಲಿ ಹಾಡುಹಗಲೇ ನಡೆದ ‘ಗೋ ರಕ್ಷಣೆ’ ದೊಂಬರಾಟಕ್ಕೆ ಸಾಕ್ಷಿಯಾದ ಮುದ್ದು ಕರು!

    ರಾಜ್ಯದ ಅತೀ ಸೂಕ್ಷ್ಮ ನಗರ ಎನ್ನಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಹಾಡು ಹಗಲೇ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ಅದೂ ಒಬ್ಬ ‘ಹಿಂದೂ’ ಎಂಬ ಕಾರಣಕ್ಕೆ ಹೊಡೆತ ಕೊಟ್ಟಿದ್ದರೆ, ಇನ್ನೊಬ್ಬ ‘ಹಿಂದೂ’ವಾಗಿದ್ದರೂ ದನದ ಮುದ್ದು ಕರುವೊಂದನ್ನು ಕದ್ದು; ಮಾರಲು ಹೊರಟಿದ್ದ ಎಂಬ ಕಾರಣಕ್ಕೆ ಬೆಲ್ಟಿನಿಂದ ಹಲ್ಲೆಗೆ ಒಳಗಾಗಿದ್ದಾನೆ. ಈ ಘಟನೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣಗೊಂಡಿದ್ದು ‘ಸಮಾಚಾರ’ಕ್ಕೆ ವಕೀಲರೊಬ್ಬರ ಮೂಲಕ ಲಭ್ಯವಾಗಿದೆ. ಏನಿದು ಘಟನೆ?: ಉತ್ತರ ಕನ್ನಡದ ಜಿಲ್ಲೆಯಲ್ಲಿ ಬರುವ ಭಟ್ಕಳದ ಹೆಸರು ಕೇಳುತ್ತಿದ್ದಂತೆ ಮುಸ್ಲಿಂ ಭಯೋತ್ಪಾದನೆ ಹಿನ್ನೆಲೆಗಳು..

    August 5, 2016

Top