An unconventional News Portal.

  ...

  21ದಿನದ ಮಳೆಗೆ 150ಕ್ಕೂ ಹೆಚ್ಚು ಸಾವು; ಮೇಘಧಾರೆಗೆ ಉತ್ತರ ತತ್ತರ; ನಮ್ಮಲ್ಲಿ ನಿರುತ್ತರ!

  ಉತ್ತರ ಭಾರತ ಜಲಾವೃತವಾಗಿದೆ. ಮೂರು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ಮತ್ತು ಬಿಹಾರ ಕೊಚ್ಚಿ ಹೋಗಿದೆ. ಈವರೆಗೆ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು ಪರಿಸ್ಥಿತಿ ಕೈಮೀರುತ್ತಿದೆ. ಉತ್ತರ ಭಾರತ ಸುತ್ತ ಮುತ್ತ ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.  ಒಟ್ಟಾರೆ ಈ ವರೆಗೆ ಮಳೆ ಸಂಬಂಧಿತ ಅವಘಡಗಳಿಂದ 152 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಹದಿಂದಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ನಡುಗಡ್ಡೆಯಾದ ಅಸ್ಸಾಂ ಈಶಾನ್ಯ ರಾಜ್ಯ ಅಸ್ಸಾಂ […]

  August 2, 2016
  ...

  ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನ ದಲಿತರು ರೊಚ್ಚಿಗೆದ್ದಿದ್ದು ಯಾಕೆ?

  ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ದಲಿತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆಗಳು ಕಣ್ಣ ಮುಂದಿವೆ. ಇವೆಲ್ಲದರ ಪರಿಣಾಮ ಎಂಬಂತೆ ಮುಖ್ಯಮಂತ್ರಿ ಆನಂದಿ ಪಟೇಲ್ ರಾಜೀನಾಮೆ ನೀಡಲು ಹೊರಟಿದ್ದಾರೆ. ದಲಿತರ ಮೇಲಿನ ಹಲ್ಲೆ ದೇಶದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ದಲಿತರ ರ್ಯಾಲಿ ಮಾಡಲು ಹೊರಟ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನರಿಲ್ಲದೇ ವಾಪಾಸಾಗಿದ್ದಾರೆ. ಈ ಸಂದರ್ಭದಲ್ಲಿ ಬಿಬಿಸಿಯ ಸೌತಿಕ್ ಬಿಸ್ವಾಸ್ ದಲಿತರ ಮೇಲಿನ ದೌರ್ಜನ್ಯಗಳನ್ನು ವಿವರವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಅದರ ಕನ್ನಡ ರೂಪಾಂತರನ್ನು ‘ಸಮಾಚಾರ’ […]

  August 2, 2016
  ...

  ರೈಲು ಬೋಗಿಯ ಮೇಲೆ ಸುಸಜ್ಜಿತ ಆಸ್ಪತ್ರೆ: ದೇಶದ ಜನಾರೋಗ್ಯದ ಜತೆ ಅಂತ್ಯಗೊಂಡ 25ವರ್ಷಗಳ ಪಯಣ!

  ಮನೆಬಾಗಿಲಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಕಲ್ಪನೆಯೊಂದು ಸಾಕಾರವಾಗಿದೆ. ‘ಲೈಫ್ ಲೈನ್ ಎಕ್ಸ್‌ಪ್ರೆಸ್‌’ ಎಂಬ ರೈಲು, 25 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ಆರೋಗ್ಯ ಸೇವೆ ನೀಡಿದೆ. ಆರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ ಶಸ್ತ್ರ ಚಿಕಿತ್ಸೆ, ಔಷಧೋಪಚಾರ, ಡಯಗ್ನಾಸ್ಟಿಕ್ಸ್ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಎರಡೂವರೆ ದಶಕಗಳ ಕಾಲ ನೀಡಿದ ಕೀರ್ತಿ ಇದರದ್ದು. ‘ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್’ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ರೈಲು ಹಳಿಗಳ ಮೇಲೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆ ಬೋಗಿಗಳ ಕಲ್ಪನೆ ಇದು. ಇದಕ್ಕೆ ಆರೋಗ್ಯ […]

  August 2, 2016
  ...

  ರಾಜ್ಯದ ಮೊದಲ ‘ಕುಕ್ಕರ್ ಬಾಂಬ್’ ಸ್ಪೋಟಕ್ಕೆ ಸಾಕ್ಷಿಯಾಯಿತಾ ಮೈಸೂರಿನ ನ್ಯಾಯಾಲಯ ಶೌಚಾಲಯ?

  ರಾಜ್ಯದ ಸುದ್ದಿಕೇಂದ್ರದಿಂದ ಮೈಸೂರು ಹಿಂದಕ್ಕೆ ಹೋಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದ ವೇಳೆಯಲ್ಲಿಯೇ, ಮೈಸೂರಿನ ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ ಸ್ಫೋಟ ನಡೆದಿದೆ. ಮೇಲ್ನೋಟಕ್ಕೆ ಸಾಮಾನ್ಯ ಘಟನೆಯಂತೆ ಕಂಡರೂ, ಹಾಡು ಹಗಲು- ಸಂಜೆ ವೇಳೆಯಲ್ಲಿ ನ್ಯಾಯಾಲಯದ ಆವರಣದೊಳಗಿರುವ, ಸಾಮಾನ್ಯವಾಗಿ ಜನರ ಬಳಕೆಯಿಂದ ದೂರವಿದ್ದ, ಪಾಳು ಬಿದ್ದಂತಾಗಿದ್ದ ಶೌಚಾಲಯದಲ್ಲಿ ‘ಕುಕ್ಕರ್ ಬಾಂಬ್’ ಸ್ಫೋಟಿಸಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಇದಕ್ಕೆ ಕಾರಣ, ವಿಧಿ ವಿಜ್ಞಾನ ಪ್ರಯೋಗಾಲಯದ […]

  August 2, 2016

Top