An unconventional News Portal.

    ...
    jio Vs airtel
    ದೇಶ

    ರಿಲಯನ್ಸ್ ಜಿಯೋ v/s ಭಾರ್ತಿ ಏರ್ಟೆಲ್: ಈ 4ಜಿ ಸಮರದಿಂದ ನಮಗೇನು ಲಾಭ?

    ದೇಶದ ಅಂತರ್ಜಾಲ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಹೊಸ ಅಲೆ ಎಬ್ಬಿಸಿದೆ. ಅತ್ಯಂತ ಕಡಿಮೆ ದರಕ್ಕೆ ಡೇಟಾ ಪ್ಲಾನ್ ಗಳನ್ನು ಬಿಡುಗಡೆ ಮಾಡುವ ಮುನ್ಸೂಚನೆಯೊಂದಿಗೆ ಭಾರ್ತಿ ಏರ್ಟೆಲ್ ಸೇರಿದಂತೆ ಹಲವು ಕಂಪೆನಿಗಳಿಗೆ ನಡುಕ ಹುಟ್ಟಿಸಿದೆ. ಇದಕ್ಕೆ ದರ ಸಮರ ಮಾದರಿಯಲ್ಲಿಯೇ ಪ್ರತಿಕ್ರಿಯೆ ನೀಡಿರುವ ಏರ್ಟೆಲ್ ಕೂಡ, ತನ್ನ ಮಾಸಿಕ ಡಾಟಾ ಪ್ಲಾನ್ಗಳನ್ನು ಕಡಿಮೆ ಬೆಲೆ ನೀಡುವುದಾಗಿ ಆಫರ್ ಘೋಷಿಸಿದೆ. ಈ ಮೂಲಕ ದೇಶದ ಅತಿ ದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವ ಏರ್ಟೆಲ್, ಮುಖೇಶ್ ಅಂಬಾನಿ ಒಡೆತನದ ಜಿಯೋಗೆ ಪೈಪೋಟಿ ಕೊಡಲು ಮುಂದಾಗಿದೆ. ಒಟ್ಟಾರೆ,..

    August 31, 2016
    ...
    Balochistan
    ವಿದೇಶ

    ಪಾಕಿಸ್ತಾನದ ಪಾಲಿನ ‘ಕಾಶ್ಮೀರ’: ಆಝಾದಿ ಘೋಷಣೆ ಮೊಳಗಿಸುತ್ತಿರುವ ಬಲೂಚಿಸ್ತಾನ ನಿಜಕ್ಕೂ ಏನು?

    ಭಾರತಕ್ಕೆ ಕಾಶ್ಮೀರದ ತಲೆನೋವಾದರೆ ಪಾಕಿಸ್ತಾನಕ್ಕೆ ಬಲೂಚಿಸ್ತಾನದ ಚಿಂತೆ. ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರ ಮತ್ತು ಬಲೂಚಿಸ್ತಾನ ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣಿಸುತ್ತವೆ. ಬಲೂಚಿಸ್ತಾನದ ಬಂಡುಕೋರರು, ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂಬ ಭಾರತದ ಮೇಲಿನ ಆಪಾದನೆಗಳು, ಹಿಂಸಾಚಾರ, ರಕ್ತಪಾತ ಹೀಗೆ ಇಲ್ಲಿನ ಕೊರಕಲು ಬೆಟ್ಟ, ಗುಡ್ಡಗಳಲ್ಲಿ ಹುದುಗಿರುವ ಕತೆಗಳು ನೂರಾರು. ಎಲ್ಲಾ ದೇಶಗಳ ಆಂತರಿಕ ಸಂಘರ್ಷಗಳಂತೆ ಇಲ್ಲೂ ಬಲಿಯಾಗುತ್ತಿರುವವರು ಸಾಮಾನ್ಯ ಜನ. ಅವರ ನೋವು ನರಳಾಟಗಳಿಗೆ ಮಾತ್ರ ಬೆಲೆಯೇ ಇಲ್ಲ. ಇವುಗಳ ಜತೆಗೆ, ಬಲೂಚಿಸ್ತಾನ ಮತ್ತು ಅದು ಸಾಗಿ ಬಂದ..

    August 31, 2016
    ...
    devadasi-home-1
    SPECIAL SERIES

    ದೇವದಾಸಿಯರ ನಾಡಿನಲ್ಲಿ- ಭಾಗ 5: ಇಲ್ಲಿಗೆ ಈ ಕತೆ ಮುಗಿಯುವುದಿಲ್ಲ…

    ಇದಿಷ್ಟು ದೇವದಾಸಿ ಎಂಬ ಅನಿಷ್ಟ ಆಚರಣೆಗೆ ಈಡಾದ ನಾಡಿನಲ್ಲಿ ಸಿಕ್ಕ ಇವತ್ತಿನ ಪರಿಸ್ಥಿತಿಗಳ ಅಪರೂಪದ ಮಾಹಿತಿಗಳು. ಇಲ್ಲಿವರೆಗೆ ಸರಣಿಯ ಎಲ್ಲಿಯೂ ಸರಕಾರದ ಯೋಜನೆಗಳು, ಅದರ ಅನುಷ್ಠಾನ ಮತ್ತು ಅಂಕಿಅಂಶಗಳ ಪ್ರಸ್ತಾಪ ಆಗಲಿಲ್ಲ. ಯಾಕೆಂದರೆ ಸಾಂಸ್ಕೃತಿಕ ದಾಸ್ಯಕ್ಕೆ ಈಡಾದ ಯಾವ ಹೆಣ್ಣುಮಕ್ಕಳ ಮನೆಗೆ ಹೋದರೂ ಅಲ್ಲಿ ಸರಕಾರದ ದಿವ್ಯ ನಿರ್ಲಕ್ಷ್ಯ ಕಾಣುತ್ತದೆ. ಆದರೆ ಸರಕಾರಿ ಕಡತಗಳಲ್ಲಿ ದೇವದಾಸಿರ ಕುರಿತು ಬೇರೆಯದೇ ಕತೆ ಸಿಗುತ್ತದೆ…! ಭಾಗ: 5 ಜಮಖಂಡಿಯ ಅಂಬೇಡ್ಕರ್ ವೃತ್ತದ ಹತ್ತಿರವಿರುವ ರುದ್ರಸ್ವಾಮಿ ಪೇಟೆಯಲ್ಲಿ ಮಾತಿಗೆ ಸಿಕ್ಕ ದೇವದಾಸಿ ಹೆಣ್ಣು ಮಕ್ಕಳಲ್ಲಿ..

    August 31, 2016
    ...
    BTV Crow
    ಟಿವಿ

    ‘ಬಿಳಿ ಕಾಗೆ’ ನೆಪದಲ್ಲಿ ಭಯಾನಕ ಭವಿಷ್ಯ ಮತ್ತು ಜನರಲ್ಲಿ ಭಯ ಹುಟ್ಟುಹಾಕಿದ ಸ್ವಾಮಿ!

    ‘ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಸುದ್ದಿ. ರಾಜ್ಯದ ಭವಿಷ್ಯ ನುಡಿದ ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ. ಕಳೆದ ಜುಲೈ 4 ರಂದು ಶ್ರೀರಂಗಪಟ್ಟಣದ, ಕಾವೇರಿ ಪುಣ್ಯ ಕ್ಷೇತ್ರದಲ್ಲಿ ಚಂದ್ರಶೇಖರ್ ಸ್ವಾಮೀಜಿಗೆ ಬಿಳಿಕಾಗೆ ದರ್ಶನ. 5 ದಿನಗಳ ಹಿಂದಷ್ಟೇ ತಮಿಳುನಾಡಿನ ಕೊಯಮತ್ತೂರಲ್ಲಿ ಕಾಣಿಸಿಕೊಂಡಿದ್ದ ಬಿಳಿ ಕಾಗೆ…’. ತಪ್ಪಾಗಿ ಭಾವಿಸಬೇಡಿ; ಮೇಲಿನ 34 ಪದಗಳು ನಮ್ಮವಲ್ಲ. ಮಂಗಳವಾರ ಮಧ್ಯಾಹ್ನದ ವೇಳೆಗೆ ಭಿತ್ತರಗೊಂಡ ಭಯಾನಕ, ಸ್ಫೋಟಕ, ‘ಬೆಚ್ಚಿ ಬೀಳುಸುವಂತಹ’ ಸುದ್ದಿಯೊಂದಕ್ಕೆ ‘ಬಿಟಿವಿ’ ಸುದ್ದಿ ವಾಹಿನಿ ನೀಡಿದ ಟಿಪ್ಪಣಿಯಲ್ಲಿನ ಪದಗಳು ಇವು. ಇದನ್ನು ನೋಡುತ್ತಿದ್ದಂತೆ ಜನ ಯಾವ..

    August 30, 2016
    ...
    devadasi-jamakhandi-1
    SPECIAL SERIES

    ದೇವದಾಸಿಯರ ನಾಡಿನಲ್ಲಿ- ಭಾಗ 4: ಆಚರಣೆಯೇ ಬಂಡವಾಳವಾದ ಬಗೆ…

    ದೇವದಾಸಿ ಪದ್ದತಿಯ ಇತಿಹಾಸವನ್ನು ಕೆದುಕುವ ಅಗತ್ಯ ಇವತ್ತಿಲ್ಲ. ಅಂತಹದೊಂದು ಆಚರಣೆಯನ್ನೇ ಬಂಡವಾಳ ಮಾಡಿಕೊಂಡ ವರ್ಗವೊಂದು ಬೆಳೆದು ನಿಂತಿರುವುದು ಹೊಸ ಬೆಳವಣಿಗೆ. ಅದನ್ನು ಒಡೆದು ಹೊಸ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭಕ್ಕೆ ಸಾಧ್ಯವಾಗಲಾರದು… ಭಾಗ-4:  ಜನನಿಭಿಡ ರಸ್ತೆ; ಪಕ್ಕದಲ್ಲೇ ಹಾದು ಹೋಗುವ ಗಲ್ಲಿ. ಸೀದಾ ಒಳಹೊಕ್ಕರೆ ಸಾಲು ಸಾಲು ಮನೆಗಳು. ಬೀದಿಯ ಕೊನೆಯಲ್ಲಿ ಪುಟ್ಟ ಕಿರಾಣಿ ಅಂಗಡಿ. ಊರಿಗೆ ಹೊಸಬರಾದರೆ ಕೊಂಚ ಅನುಮಾನದಿಂದ ನೋಡುವ ಹೆಂಗಸರ ದಂಡು. ಜಮಖಂಡಿಯ ಅಂಬೇಡ್ಕರ್ ವೃತ್ತದ ಹತ್ತಿರವಿರುವ ರುದ್ರಸ್ವಾಮಿ ಪೇಟೆಯಲ್ಲಿ ಕಾಗೆ ಕಲ್ಲವ್ವ..

    August 30, 2016
    ...
    PARAPPANA AGRAHARA
    PRISON STORIES

    ‘ಕಂಬಿ ಹಿಂದಿನ ಕತೆ’: ಕಟ್ಟಡ ಕೆಲಸಕ್ಕೆ ಬೆಂಗಳೂರಿಗೆ ಬಂದವನು ಜೈಲು ಸೇರಿ ಹುಚ್ಚನಾದ ಕತೆ!

    ಜೈಲು ಎಂಬುದು ಹೊರಜಗತ್ತಿನ ಪಾಲಿಗೆ ಕುತೂಹಲ ಮೂಡಿಸುವ ಸ್ಥಳ. ಹಾಗಂತ ಅಲ್ಲಿಗೆ ಭೇಟಿ ಕೊಡುವ ಹಾಗಿಲ್ಲ; ಒಳಗೆ ಹೋಗುವ ಮನಸ್ಸು ಇರುವುದಿಲ್ಲ. ಯಾಕೆಂದರೆ, ‘ಜೈಲು’ ಎಂಬ ಪದವೇ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ರೀತಿಯ ಟ್ಯಾಬೂ- ಆಚರಣೆಯಲ್ಲಿರುವ ನಿಷೇಧಿತ ಸ್ಥಳ ಎನ್ನಬಹುದು. ಇದು ಸಾಮಾನ್ಯ ಜನರ ಪಾಲಿಗಾದರೆ ಅಪರಾಧ ಸುದ್ದಿಗಾರರ ಪಾಲಿಗೆ ಜೈಲು ಮಾಹಿತಿಯ ಮೂಲ. ಅದರೊಳಗಿಂದ ಸಿಗುವ ಸ್ಪೋಟಕ ಮಾಹಿತಿ ಹೊರಜಗತ್ತಿನಲ್ಲಿ ದೊಡ್ಡದೊಂದು ‘ಸ್ಟೋರಿ’ಯನ್ನು ಸೃಷ್ಟಿಸಲು ಸಹಾಯ ಮಾಡಿರುತ್ತದೆ. ಆದರೆ, ಜೈಲಿನ ಒಳಗೇ ಇರುವ ‘ಸ್ಟೋರಿ’ಗಳು? ಕನ್ನಡದ ಮಾಧ್ಯಮಗಳ..

    August 30, 2016
    ...
    Advertisement
    ದೇಶ

    ಕೇಂದ್ರದ ಮುಂದೆ ಹೊಸ ಪ್ರಸ್ತಾಪ: ದಾರಿತಪ್ಪಿಸುವ ಜಾಹೀರಾತುಗಳಿಗೆ ಸೆಲೆಬ್ರೆಟಿಗಳೇ ಹೊಣೆ

    ದಾರಿ ತಪ್ಪಿಸುವ ಜಾಹೀರಾತುಗಳಿಗೆ ಇನ್ನು ಮುಂದೆ ಅವುಗಳನ್ನು ಪ್ರತಿನಿಧಿಸುವ ರಾಯಭಾರಿ (ಬ್ರಾಂಡ್ ಅಂಬಾಸಿಡರ್) ಗಳನ್ನೇ ಹೊಣೆಯಾಗಿಸಬೇಕು ಎಂಬ ಸಂಸದೀಯ ಸಮಿತಿ ಶಿಫಾರಸ್ಸನ್ನು ಕೇಂದ್ರ ಸರಕಾರ ಚರ್ಚೆಗೆ ಎತ್ತಿಕೊಂಡಿದೆ. 2015ರ ಆಗಸ್ಟಿನಲ್ಲಿ ಕೇಂದ್ರ ಸರಕಾರ ‘ಗ್ರಾಹಕ ಸುರಕ್ಷತೆ ಮಸೂದೆ-2015’ನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಈ ಮೂಲಕ 30 ವರ್ಷ ಹಳೆಯ ‘ಗ್ರಾಹಕ ಸುರಕ್ಷಾ ಕಾಯ್ದೆ’ಯ ಬದಲಾವಣೆಗೆ ಕೈ ಹಾಕಿತ್ತು. ಅದರ ಭಾಗವಾಗಿ ತೆಲುಗು ದೇಶಂ ಸಂಸದ ಜೆಸಿ ದಿವಾಕರ್ ರೆಡ್ಡಿ ನೇತೃತ್ವದ ಸಂಸದೀಯ ಸಮಿತಿಗೆ, ಈ ಕುರಿತು ಅಧ್ಯಯನ ನಡೆಸುವಂತೆ..

    August 30, 2016
    ...
    Dhirubhai AMbani and JIO
    ದೇಶ

    ಅಂತರ್ಜಾಲ ಮಾರುಕಟ್ಟೆಯಲ್ಲಿ ‘ರಿಲಯನ್ಸ್ ಜಿಯೋ’ ಸದ್ದು ಮತ್ತು ಧೀರೂಭಾಯಿ ಅಂಬಾನಿ ಬೆಳೆದು ಬಂದ ಪರಿ!

    ರಿಲಯನ್ಸ್ ಹೊರ ತಂದಿರುವ ‘ಜಿಯೋ’ 4ಜಿ ಸಿಮ್ ದೇಶದ ಜನರನ್ನು ‘ಇಂಟರ್ನೆಟ್ ಮೋಡಿ’ಯ ಬಲೆಯಲ್ಲಿ ಕೆಡವಿದೆ. ಜಾಗತೀಕರಣ ಜಾರಿಯಾದ 25 ವರ್ಷಗಳ ನಂತರ, ದೇಶದ ಜನರ ಅಂತರ್ಜಾಲ ಬಳಕೆಯನ್ನೇ ದಿಕ್ಕನ್ನೇ ಬದಲಿಸುವ ಸೂಚನೆ ನೀಡಿದೆ ‘ಜಿಯೋ’. ಸದ್ಯ ಸಿಮ್ ಪಡೆಯಲು ಜನ ರಿಲಾಯನ್ಸ್ ಕಾದು ಕುಳಿತಿದ್ದಾರೆ. ಇದು ಅಮೆರಿಕಾದಲ್ಲಿ ‘ಆ್ಯಪಲ್’ ಬಿಡುಗಡೆಯಾದ ದಿನಗಳನ್ನು ನೆನಪಿಸುವಂತಿದೆ. ಒಂದೆಡೆ ರಿಲಾಯನ್ಸ್ ಜಿಯೋ ಮೋಡಿ ಮಾಡುತ್ತಿದ್ದರೆ ಅತ್ತ ಮೊಬೈಲ್ ಸೇವಾ ವಲಯ ಮತ್ತು ಗ್ರಾಹಕರಲ್ಲಿ ಆತಂಕವೂ ಮನೆ ಮಾಡಿದೆ. ಇದಕ್ಕೆ ಕಾರಣ ‘ಜಿಯೋ’..

    August 29, 2016
    ...
    devadasi-hema-mudool
    SPECIAL SERIES

    ದೇವದಾಸಿಯರ ನಾಡಿನಲ್ಲಿ- ಭಾಗ 3: ಹೊರಳಿದ ಹಾದಿಯಲ್ಲಿ ಹೇಮಾ ಎಂಬ ರೂಪಕ…!

    ಕಾಲ ಬದಲಾದಂತೆ ದೇವದಾಸಿ ಪದ್ಧತಿಯಲ್ಲೂ ಮಾರ್ಪಾಡುಗಳಾದವು. ದಾಸ್ಯಕ್ಕೊಳಪಡುತ್ತಿದ್ದ ಹೆಣ್ಣು ಮಕ್ಕಳ ಬಾಳಲ್ಲಿ ಹೊಸ ಅಲೆ ಎದ್ದಿತು. ಜೀವನ ಕ್ರಮ ಬದಲಾದರೂ ನಂಬಿಕೆಗಳು ಮಾತ್ರ ಅಷ್ಟು ಸುಲಭಕ್ಕೆ ಕಳಚಿಕೊಳ್ಳಲೇ ಇಲ್ಲ. ಹೀಗೆ ಕಾಲದ ಅಲೆಯಲ್ಲಿ ತೇಲುತ್ತ ಮುಳುಗುತ್ತ ಕೊನೆಗೆ ‘ಲೈಂಗಿಕ ಕಾರ್ಯಕರ್ತೆ’ಯರು ಎಂಬ ಪಟ್ಟ ಕಟ್ಟಿಕೊಂಡ ಬಗೆಯೇ ವಿಚಿತ್ರವಾದುದು . ಇದು ನಾಗರಿಕ ಸಮಾಜ, ಮತ್ತದರ ಕಾನೂನು ದೇವದಾಸಿ ಸಮುದಾಯಕ್ಕೆ ನೀಡಿದ ಕೊಡುಗೆ… ಭಾಗ-3:  ದೇವದಾಸಿ ಹೆಣ್ಣು ಮಕ್ಕಳೇಕೆ ವೇಶ್ಯಾವಾಟಿಕೆಗೆ ಇಳಿದರು?. ನೇರ ಪ್ರಶ್ನೆಗೆ ಆಕೆ ಸಣ್ಣಗೆ ಕಂಪಿಸಿದಳು. ಮುಧೋಳದ ಗಲ್ಲಿಯೊಂದರ..

    August 29, 2016
    ...
    bhatkal-revati-resigned-1
    ರಾಜ್ಯ

    ‘ಮುದ್ದು ಕರು’ ರಕ್ಷಿಸಿದ್ದ ಮಹಿಳಾ ಪಿಎಸ್ಐ ರಾಜೀನಾಮೆ: ಭಟ್ಕಳದ ‘ಜಾತ್ಯಾತೀತ ಹವಾಲ ದಂಧೆ’ ಕಾರಣ?

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯ ಮಹಿಳಾ ಪಿಎಸ್ಐ, ಇತ್ತೀಚೆಗಷ್ಟೆ ಹಾಡುಹಗಲು ಹೆದ್ದಾರಿಯಲ್ಲಿ ದನದ ಕರುವೊಂದನ್ನು ‘ಗೋ ರಕ್ಷಕ’ದಿಂದ ರಕ್ಷಿಸಿದ್ದ ರೇವತಿ ಭಾನುವಾರ ರಾಜೀನಾಮೆ ನೀಡಿದ್ದಾರೆ. ಕಾರವಾರ ಪೊಲೀಸ್ ಅಧೀಕ್ಷಕರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಅವರು, ‘ನಾನು ಯಾವುದೇ ತಪ್ಪು ಮಾಡದಿದ್ದರೂ, ಇಲ್ಲಿಯವರೆಗೆ ಅನೇಕ ಮೇಲಾಧಿಕಾರಿಗಳು ನೀಡಿರುವ ಮಾನಸಿಕ ಒತ್ತಡವನ್ನು ಸಹಿಸಲು ಅಸಾಧ್ಯವಾಗಿರುವುದಕ್ಕೆ, ಇಲಾಖೆಗೆ ನಿವೃತ್ತಿ ನೀಡಲು ಕೋರಿ ಈ ಪತ್ರ ನೀಡುತ್ತಿದ್ದೇನೆ,’ ಎಂದು ವಿಷಯ ಪ್ರಸ್ತಾಪಿಸಿದ್ದಾರೆ. ಸಾಮಾನ್ಯ ಬಿಳಿ ಹಾಳೆಯ ಮೇಲೆ, ನೀಲಿ ಪೆನ್ನಿನಲ್ಲಿ ಬರೆದಿರುವ..

    August 29, 2016

Top