An unconventional News Portal.

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ರಾಜ್ಯ

  ‘ಹಿಸ್ಟರಿ ಆಫ್ ನರಗುಂದ & ನವಲಗುಂದ’: ಕಳಸಾ ಬಂಡೂರಿ ಕಿಚ್ಚು ಹೊತ್ತಿಸಿದ ಅವಳಿಗಳ ರೋಚಕ ಕತೆ!

  ಉತ್ತರ ಕರ್ನಾಟಕದ ತುಂಬಾ ಈಗ ‘ಕಳಸಾ ಬಂಡೂರಿ’ ಹೋರಾಟ ಕಿಚ್ಚು ಹೊತ್ತಿ ಉರಿಯುತ್ತಿದೆ. ಈ ಕಿಚ್ಚಿಗೆ ಕಿಡಿ ಹೊತ್ತಿದ್ದು ಯಾವಾಗ ಅಂತ ಹುಡುಕಿಕೊಂಡು ಹೊರಟರೆ ಹೋಗಿ ನಿಲ್ಲುವುದು ನರಗುಂದ ಮತ್ತು ನವಲಗುಂದ ಎಂಬ ಎರಡು ಅವಳಿ ತಾಲೂಕುಗಳಿಗೆ. ಕೃಷಿಯನ್ನೇ ನಂಬಿ ಬಾಳಿ ಬದುಕುವ ಈ ಎರಡೂ ತಾಲೂಕಿನ ಇತಿಹಾಸದ ತುಂಬಾ ರೈತ ಹೋರಾಟ, ರಕ್ತಪಾತ, ಗೋಲಿಬಾರ್ ಘಟನೆಗಳೇ ತುಂಬಿ ತುಳುಕುತ್ತವೆ. ಕಳಸಾ ಬಂಡೂರಿ ಹೋರಾಟ ಈ ಸಮಯದಲ್ಲಿ ಈ ಎರಡೂ ತಾಲೂಕುಗಳ ರೋಚಕ ಸತ್ಯಾಗ್ರಹದ ಹಾದಿಯನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ…

  July 29, 2016
  ...
  ಸುದ್ದಿ ಸಾರ

  ಮಗನ ನೋಡಲು ಬೆಲ್ಜಿಯಂ ತಲುಪಿದ ಸಿಎಂ

  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಗುರುವಾರ ಮುಂಜಾನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸಿಎಂ ಸಿದ್ದರಾಮಯ್ಯ ಬೆಲ್ಜಿಯಂನ ಬ್ರುಸೆಲ್ಸ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಅಲ್ಲಿಂದ ಭಾರತದ ರಾಯಭಾರಿ ಮಂಜೀವ್ ಪುರಿ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಂಟ್ವ್ರೆಪ್ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ಮಗನನ್ನು ನೋಡಿದ ಸಿದ್ದರಾಮಯ್ಯ ಅಲ್ಲಿಯೇ ಇದ್ದ ಕುಟುಂಬ ವರ್ಗದವರನ್ನು ಭೇಟಿ ಮಾಡಿದ್ದಾರೆ ಎಂದು ಪ್ರಕಟಣೆ ಹೇಳಿದೆ. ‘ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್’ ಕಾಯಿಲೆಯಿಂದ ಬಳಲುತ್ತಿರುವ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂ..

  July 28, 2016
  ...
  ರಾಜ್ಯ

  ‘ಮಹದಾಯಿ ವಿವಾದ’: ಕರ್ನಾಟಕದ ಮಧ್ಯಂತರ ಅರ್ಜಿ ಸಲ್ಲಿಕೆಗೆ ವಿರೋಧ ವ್ಯಕ್ತಪಡಿಸಿದ್ದರಾ ನಾರಿಮನ್?

  ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸುವಲ್ಲೇ ಎಡವಟ್ಟು ಮಾಡಿಕೊಂಡಿತಾ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಬಂದಿದೆ. ನ್ಯಾಯಾಧಿರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ಸ್ವತಃ ಕರ್ನಾಟಕ ಪರ ವಕೀಲ ನಾರಿಮನ್ ವಿರೋಧ ವ್ಯಕ್ತ ಪಡಿಸಿದ್ದರು ಎಂಬ ಮಾಹಿತಿ ಮುಖ್ಯಮಂತ್ರಿ ಕಚೇರಿ ಮೂಲಗಳಿಂದ ತಿಳಿದು ಬಂದಿದೆ. ತಾನಾಗಿಯೇ ಅರ್ಜಿ ಸಲ್ಲಿಸಿ, ತಿರಸ್ಕೃತಗೊಂಡು,  ಅನಗತ್ಯ ವಿವಾದವೊಂದನ್ನು ಕರ್ನಾಟಕ ಸರಕಾರ ಮೈಮೇಲೆ ಎಳೆದುಕೊಂಡಂತಾಗಿದೆ ಪರಿಸ್ಥಿತಿ. ಉತ್ತರ ಕರ್ನಾಟಕ ಉದ್ವಿಗ್ನವಾಗಲು ಪ್ರಮುಖ ಕಾರಣವಾಗಿದೆ. ಹಿನ್ನೆಲೆ:  ಕರ್ನಾಟಕ ಮತ್ತು ಗೋವಾ ಜಲವಿವಾದ ನ್ಯಾಯಾಧಿಕರಣದಲ್ಲಿದ್ದಾಗಲೇ,..

  July 28, 2016
  ...
  ರಾಜ್ಯ

  ‘ಕಳಸಾ-ಬಂಡೂರಿ’: ಕಿಚ್ಚು ಹೊತ್ತಿಸಿದ ಮಹದಾಯಿ ‘ಮಧ್ಯಂತರ’ ತೀರ್ಪು; ಏನಿದು ವಿವಾದ?

  ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ತೀರ್ಪು ಬುಧವಾರ ಪ್ರಕಟಗೊಂಡಿದ್ದು ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದೆ. ಮಹದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ಅರ್ಜಿ ತಿರಸ್ಕೃತವಾಗುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಪ್ರತಿಭಟನೆಗಳು ಹುಟ್ಟಿಕೊಂಡಿವೆ. ಕರ್ನಾಟಕದ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾ. ಜೆ. ಎಂ. ಪಾಂಚಾಲ್ ಅಧ್ಯಕ್ಷತೆಯ ನ್ಯಾಯಾಧಿಕರಣ 7.65 ಟಿಎಂಸಿ ಅಡಿ ಕುಡಿಯುವ ನೀರು ಬಳಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಾಧಿಕರಣದ ಈ ತೀರ್ಪಿನಿಂದ ಕರ್ನಾಟಕಕ್ಕೆ ಮಧ್ಯಂತರ ಹಿನ್ನಡೆಯುಂಟಾಗಿದೆ…

  July 28, 2016
  ...
  ಫೋಕಸ್

  ಇದು ‘ಪತಿ- ಪತ್ನಿ’ ಸಂಬಂಧ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿ ಮರುಕಳಿಸಿದ ಅನುಬಂಧ!

  ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ನಿಧಾನವಾಗಿ ಕಾವೇರುತ್ತಿದೆ. ಬಲಾಢ್ಯ ರಾಷ್ಟ್ರದ ಮೊದಲ ಅಧ್ಯಕ್ಷೆಯಾಗಲು ಹೊರಟಿರುವ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಖಾಡಕ್ಕಿಳಿದಿದ್ದಾರೆ. ಪತಿ-ಪತ್ನಿಯರ ಜುಗಲ್ ಬಂದಿ ಪ್ರಚಾರ ಅಮೆರಿಕಾದಲ್ಲೀಗ ಸದ್ದು ಮಾಡುತ್ತಿದೆ. ಚುನಾವಣೆ ಸಮೀಪಿಸುತ್ತಿದೆ. ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ಪ್ರಚಾರಕ್ಕಿಳಿದಿದ್ದರೆ, ಆಡಳಿತರೂಢ ಡೆಮಾಕ್ರಾಟಿಕ್ ಪಕ್ಷದ ಪರವಾಗಿ ಹಿಲರಿ ಕ್ಲಿಂಟನ್ ಕಣಕ್ಕಿಳಿದ್ದಿದ್ದಾರೆ. ತಮ್ಮ ಸಹೋದ್ಯೋಗಿ ಪರ ಪ್ರಚಾರಕ್ಕೆ ಸ್ವತಃ ಅಧ್ಯಕ್ಷ ಬರಾಕ್ ಒಬಾಮ ಪ್ರಚಾರಕ್ಕಿಳಿದಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವುದು..

  July 27, 2016
  ...
  ರಾಜ್ಯ

  ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ಸಿಎಂ ಪ್ರೀತಿಯ ಪುತ್ರನಿಗೆ ಏನಾಯಿತು?

  ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ವಿದೇಶದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಮಾಹಿತಿ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ರಾಕೇಶ್ ಬೆಲ್ಜಿಯಂಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಇಬ್ಬರು ವೈದ್ಯರ ಜತೆ ಸಿಎಂ ಪತ್ನಿ ಪಾರ್ವತಮ್ಮ ಬೆಲ್ಜಿಯಂ ತಲುಪಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಆತಂಕ್ಕೆ ಒಳಗಾಗಿದ್ದು, ತಮ್ಮ ಪ್ರೀತಿಯ ಪುತ್ರನ ಅನಾರೋಗ್ಯದ ಬಗ್ಗೆ ಕಳವಳಕ್ಕೆ ಈಡಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ನಂತರ, ಬೆಲ್ಜಿಯಂನಲ್ಲಿರುವ..

  July 27, 2016
  ...
  ದೇಶ

  ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ ‘ಉಕ್ಕಿನ ಮಹಿಳೆ’!

  ಹರ್ಷಕುಮಾರ್ ಕುಗ್ವೆ ಮಣಿಪುರದ ‘ಐರನ್ ಲೇಡಿ’ ಎಂದೇ ಕರೆಯಲಾಗುವ ಇರೋಮ್ ಶರ್ಮಿಳಾ ಇದೇ ಆಗಸ್ಟ್ 9 ರಂದು ತನ್ನ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾಳೆ. ಇದು ದೇಶದಲ್ಲಿ; ವಿಶೇಷವಾಗಿ ಮಣಿಪುರದಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ ತನ್ನ ಈ ಉಪವಾಸದ ಕಾರಣದಿಂದಾಗಿಯೇ ಜಗತ್ತಿನ ಜನರ ಗಮನ ಸೆಳೆದಾಕೆ ಇರೋಮ್ ಶರ್ಮಿಳಾ. ತಾನು ನಡೆಸಿಕೊಂಡು ಬಂದಿದ್ದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಉಪವಾಸ ಸತ್ಯಾಗ್ರಹ ಕೈ ಬಿಡುವ ನಿರ್ಧಾರ ಕೈಗೊಂಡಿರುವುದು ಹಲವರ ಹುಬ್ಬೇರಲು ಕಾರಣವಾಗಿದೆ. ತನ್ನ ಉಪವಾಸ..

  July 27, 2016
  ...
  ಪಾಸಿಟಿವ್

  ಹನಿ ಪೆಟ್ರೋಲ್ ಬಳಸದೆ ವಿಮಾನ ಓಡಿಸಿದರು; ವಿಶ್ವಕ್ಕೆ ಸಂದೇಶ ಸಾರಿದರು!

  ಬಹುನಿರೀಕ್ಷಿತ ‘ಸೋಲಾರ್ ಇಂಪಲ್ಸ್’ ಮಂಗಳವಾರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ವಿಶಿಷ್ಟ ದಾಖಲೆಯೊಂದು ನಿರ್ಮಾಣವಾಯಿತು. ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್ ಹನಿ ಪಟ್ರೋಲನ್ನೂ ಬಳಸದೆ, ಕೇವಲ ಸೂರ್ಯನ ಶಕ್ತಿಯ ಬಳಸಿ ವಿಮಾನದಲ್ಲಿ ವಿಶ್ವಪರ್ಯಟನೆ ಮಾಡಿ ಹುಬ್ಬೇರಿಸುವ ಸಾಧನೆ ಮಾಡಿದರು. 500ಕ್ಕೂ ಹೆಚ್ಚು ದಿನಗಳ 35,400 ಕಿಲೋಮೀಟರುಗಳ ಅವರ ಪಯಣದ ಕತೆ ಇದು. ಸೂರ್ಯನ ಬೆಳಕಿನಲ್ಲಿ ಕಾರು, ಆಟೋ ರಿಕ್ಷಾಗಳು ಓಡುವುದಾದರೆ; ವಿಮಾನ ಯಾಕೆ ಓಡಾಡಬಾರದು ಎಂದು ಪ್ರಶ್ನೆ ಹಾಕಿಕೊಂಡವರು ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್. ಬಾರ್ಶ್‍ಬರ್ಗ್ ಸ್ವಿಡ್ಜರ್ಲಾಂಡಿನ ಖ್ಯಾತ ಉದ್ಯಮಿ..

  July 27, 2016
  ...
  ದೇಶ

  ಆನ್ಲೈನ್ ಶಾಪಿಂಗ್: 470 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾದ ಜಬಾಂಗ್

  ಆನ್ಲೈನ್ ಶಾಪಿಂಗ್ ತಾಣ ‘ಫ್ಲಿಪ್ ಕಾರ್ಟ್’ ಒಡೆತನಕ್ಕೆ ಸೇರಿದ ‘ಮಿಂತ್ರಾ ಡಾಟ್ ಕಾಂ’, ತಾನು ‘ಜಬಾಂಗ್ ಡಾಟ್ ಕಾಂ’ ಖರೀದಿಸಿರುವುದಾಗಿ ಹೇಳಿಕೊಂಡಿದೆ. ಸುಮಾರು 470 ಕೋಟಿಗೆ ಆನ್ಲೈನ್ ಫ್ಯಾಶನ್ ಶಾಪಿಂಗ್ ತಾಣ ಜಬಾಂಗ್ ಮಿಂತ್ರಾ ತೆಕ್ಕೆ ಸೇರಲಿದೆ. ಜಾಬಾಂಗ್ ಕಳೆದ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೆ ಗುರಿಯಾಗಿತ್ತು. ಆಡಳಿತ ಮಂಡಳಿಯಲ್ಲಿ ಆದ ಬದಲಾವಣೆಗಳು ಮತ್ತು ಮಾರಾಟದಲ್ಲಾದ ಕುಸಿತ ಈ ನಷ್ಟಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳುವ ಸತತ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ನಷ್ಟಕ್ಕೆ ಗುರಿಯಾಗಿದ್ದ ಕಂಪೆನಿಯನ್ನು ಸರಿಯಾದ ಸಮಯ ನೋಡಿ..

  July 26, 2016
  ...
  ರಾಜ್ಯ

  ‘ಬಸ್ ಬಂದ್’: ‘ಸಮಾಜವಾದಿ’ ಸಿದ್ದರಾಮಯ್ಯ ಮತ್ತು ಸಾರಿಗೆ ಕಾರ್ಮಿಕರ ಹೋರಾಟ!

  ‘ಬಸ್ ಬಂದ್’ ಮಂಗಳವಾರವೂ ಮುಂದುವರಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಸ್ತೆ ಪ್ರಯಾಣ ಸಾರಿಗೆ ಸ್ಥಿತಿ ಗಂಭೀರವಾಗುತ್ತಿದೆ; ಪ್ರಯಾಣಿಕರ ಸಂಕಷ್ಟಗಳು ಮುಂದುವರಿದಿವೆ. ಈ ನಡುವೆ ಮುಷ್ಕರವನ್ನು ಕೈಬಿಡುವಂತೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಸಾರಿಗೆ ನಿಗಮಗಳ ನೌಕರರಿಗೆ ಮನವಿ ಮಾಡಿದ್ದಾರೆ. “ವೇತನ ಪರಿಷ್ಕರಣೆ ಸಾಧ್ಯವಿಲ್ಲ. ಶೇ. 10ರಷ್ಟು ಹೆಚ್ಚಳ ಮಾಡಬಹುದು,” ಎಂದವರು ತಿಳಿಸಿದ್ದಾರೆ. ಈ ಮೂಲಕ ನೌಕರರ ಹಲವು ಬೇಡಿಕೆಗಳ ಪೈಕಿ ಪ್ರಮುಖವಾಗಿರುವ ವೇತನ ಹೆಚ್ಚಳಕ್ಕೆ ಸರಕಾರ ಯಾವುದೇ ಕಾರಣಕ್ಕೂ ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದಕ್ಕೆ ಕಾರ್ಮಿಕ ಸಂಘಟನೆಗಳು ಯಾವ..

  July 26, 2016

FOOT PRINT

Top