An unconventional News Portal.

    ...
    rakesh siddu
    ಸುದ್ದಿ ಸಾರ

    RIP ರಾಕೇಶ್ ಸಿದ್ದರಾಮಯ್ಯ: ಸಿಎಂ ಪ್ರೀತಿಯ ಪುತ್ರ ಇನ್ನಿಲ್ಲ

    ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ಧರಾಮಯ್ಯ ಶನಿವಾರ ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಂಟ್ವ್ರೆಪ್ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದ ರಾಕೇಶ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶನಿವಾರ ರಾತ್ರಿ ಸಿದ್ದರಾಮಯ್ಯನವರಿಗೆ ಮಗ ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ಬಹಿರಂಗವಾಗಿತ್ತು. ಭಾನುವಾರ ಸಂಜೆ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿತ್ತು. ಗುರುವಾರ ಬೆಳಿಗ್ಗೆ ಸಿಎಂ ಬೆಲ್ಜಿಯಂಗೆ ತೆರಳಿದ್ದರು. ರಾಕೇಶ್ ಸಿದ್ದರಾಮಯ್ಯ ‘ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್’ ಕಾಯಿಲೆಯಿಂದ ಬಳಲುತ್ತಿದ್ದರು. 14 ವರ್ಷದ ಹಿಂದೆ ನಡೆದ..

    July 30, 2016
    ...
    Public Tv
    ಟಿವಿ

    ‘ಮಹದಾಯಿ ಹೋರಾಟ’ದ ವರದಿಗೆ ಮೇಲ್ಪಂಕ್ತಿ ಹಾಕಿದ ಪಬ್ಲಿಕ್ ಟಿವಿ: ‘ಚಾಂಪಿಯನ್ ಡಾನ್ಸ್’ ಮಾಡುತ್ತಿದ್ದವರು ಎಚ್ಚರಾದರು!

    ಉತ್ತರ ಕರ್ನಾಟಕದ ವಾತಾವರಣ ಬಿಗಿಯಾಗಿದೆ. ಜನ ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಎಂದು ಹೇಳಿಕೊಂಡು ನರಗುಂದ-ನವಲಗುಂದ ಸುತ್ತ ಮುತ್ತ ಪೊಲೀಸರು ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ, ಊರಿನ ಪುರುಷರನ್ನೆಲ್ಲಾ ಬಂಧಿಸುತ್ತಿದ್ದಾರೆ. ಹೆಂಗಸರು ಮೈ ಮೇಲೆ ಲಾಠಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ತಳಮಟ್ಟಕ್ಕೆ ಇಳಿದು, ಪ್ರತ್ಯಕ್ಷ ವರದಿಯನ್ನು ನೀಡುವ ಮೂಲಕ ‘ಪಬ್ಲಿಕ್ ಟಿವಿ’ ಒಟ್ಟಾರೆ ಮಹದಾಯಿ ಹೋರಾಟದ ವರದಿಗಳಿಗಳಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದೆ. ಶುಕ್ರವಾರ ನವಲಗುಂದದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಯಮನೂರಿನಲ್ಲಿ ಸಂಚರಿಸುತ್ತಿದ್ದ ಪೊಲೀಸ್ ಜೀಪ್..

    July 30, 2016
    ...
    karnataka-band-1
    ರಾಜ್ಯ

    ‘ಶನಿವಾರದ ಬಂದ್’ನ ನಿರೀಕ್ಷಿತ ದೃಶ್ಯಗಳು; ಏಕತಾನತೆ ಕಾಪಾಡಿಕೊಂಡ ಹೋರಾಟಗಾರರು!

    ‘ಶನಿವಾರದ ಬಂದ್‘ಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಸ್ತೆಗೆ ಇಳಿದ ಕನ್ನಡ ಪರ ಸಂಘಟನೆಗಳು, ವಾಹನಗಳಿಗೆ ತಡೆಯೊಡ್ಡಿದ ಕಾರ್ಯಕರ್ತರು, ಚಕ್ರದ ಗಾಳಿ ತೆಗೆದ ಹೋರಾಟಗಾರರು, ವೃತ್ತಗಳಲ್ಲಿ; ರೈಲ್ವೆ ಟ್ಯ್ರಾಕ್ಗಳ ಮೇಲೆ; ಕೇಂದ್ರ ಸರಕಾರದ ಕಚೇರಿಗಳ ಮುಂದೆ ನಡೆದ ಪ್ರತಿಭಟನೆಗಳು, ಕ್ಯಾಮೆರಾಗಳ ಮುಂದೆ ಮೊಳಗಿದ ಘೋಷಣೆಗಳು, ಬೆರಳೆಣಿಕೆಯಲ್ಲಿ ಓಡಾಡಿದ ವಾಹನಗಳು, ಪರದಾಡಿದ ರೋಗಿಗಳು, ಮನೆಗಳಲ್ಲಿಯೇ ಉಳಿದ ನಾಗರೀಕರು… ಇದು ಹೆಚ್ಚು ಕಡಿಮೆ ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡಿನ ಜಿಲ್ಲೆಗಳನ್ನು ಹೊರತು ಪಡಿಸಿದರೆ, ರಾಜ್ಯ ಉಳಿದ ಭಾಗಗಳಲ್ಲಿ ಈವರೆಗೆ ಕಂಡು..

    July 30, 2016
    ...
    navalgund
    ಸುದ್ದಿ ಸಾರ

    ‘ಶನಿವಾರದ ಬಂದ್’: ಮಹದಾಯಿ ‘ಮಧ್ಯಂತರ’ ಬೆಳವಣಿಗೆ ವಿರೋಧಿಸಿ ರಾಜ್ಯ ಸ್ಥಗಿತ; ಭಾರಿ ಭದ್ರತೆ

    ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕರಿಸಿರುವ ಮಹಾದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಶನಿವಾರ ರಾಜ್ಯಾದ್ಯಂತ ಬಂದಿಗೆ ಕರೆ ನೀಡಲಾಗಿದೆ. ಕನ್ನಡಪರ ಸಂಘಟನೆಗಳು ಹಾಗೂ ಹಲವು ಸಂಘಟನೆಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದಿಗೆ ಕರೆ ನೀಡಿದ್ದು, ಕರಾವಳಿ ಭಾಗ ಹೊರತು ಪಡಿಸಿ ಉಳಿದೆಡೆ ಬಂದ್ ಪೂರ್ತಿ ಯಶಸ್ವಿಯಾಗುವ ಸಾಧ್ಯತೆಗಳಿವೆ. ಶುಕ್ರವಾರದ ಬೆಳವಣಿಗೆಗಳು:  ದಿನದಿಂದ ದಿನಕ್ಕೆ ತೀರ್ಪು ವಿರೋಧಿ ಹೋರಾಟ ಹೆಚ್ಚಾಗುತ್ತಿದ್ದು ಶುಕ್ರವಾರದ ಪ್ರತಿಭಟನೆಗೆ ಪೂರ್ವ ಭಾವಿಯಾಗಿ ಹೋರಾಟದ ಕೇಂದ್ರಗಳಾದ ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ರೈತರ ಬಂಧನಗಳು ನಡೆದಿವೆ. ಪ್ರತಿಭಟನೆ..

    July 30, 2016
    ...
    brand-modi-sushma
    ರಾಜ್ಯ

    ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ‘ಮೋದಿ ಬ್ರಾಂಡಿಂಗ್’ಗೆ ಹೊರಟವರಿಗೆ ತಾಯಿ ಹೃದಯದ ಸುಷ್ಮಾ ಕಾಣಲಿಲ್ಲ!

    ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯದ ವಿಚಾರದಲ್ಲಿಯೂ ‘ಮೋದಿ ಬ್ರಾಂಡಿಗ್’ ಇಣುಕುವ ಮೂಲಕ ಅಸಹ್ಯದ ಪರಮಾವಧಿಯೊಂದು ಮತ್ತೊಮ್ಮೆ ದರ್ಶನವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ಹೆಸರಿಗೆ ಕಳಂಕ ತರುವ ಕೆಲಸವೊಂದು ನಡೆಯಿತು. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆಯುವ ಪ್ರತಿ ಘಟನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜೋಡಿಸುವ ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಇದೇ ಪರಿಪಾಠ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಅನಾರೋಗ್ಯದ ಸುದ್ದಿಯಲ್ಲಿಯೂ ಮುಂದಿವರಿದಿದೆ. ಶುಕ್ರವಾರ ವೇಳೆಗೆ ಹರಿದಾಡಿದ..

    July 30, 2016

Top