An unconventional News Portal.

ಮಗನ ನೋಡಲು ಬೆಲ್ಜಿಯಂ ತಲುಪಿದ ಸಿಎಂ

ಮಗನ ನೋಡಲು ಬೆಲ್ಜಿಯಂ ತಲುಪಿದ ಸಿಎಂ

ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

ಗುರುವಾರ ಮುಂಜಾನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸಿಎಂ ಸಿದ್ದರಾಮಯ್ಯ ಬೆಲ್ಜಿಯಂನ ಬ್ರುಸೆಲ್ಸ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಅಲ್ಲಿಂದ ಭಾರತದ ರಾಯಭಾರಿ ಮಂಜೀವ್ ಪುರಿ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಂಟ್ವ್ರೆಪ್ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ಮಗನನ್ನು ನೋಡಿದ ಸಿದ್ದರಾಮಯ್ಯ ಅಲ್ಲಿಯೇ ಇದ್ದ ಕುಟುಂಬ ವರ್ಗದವರನ್ನು ಭೇಟಿ ಮಾಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

‘ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್’ ಕಾಯಿಲೆಯಿಂದ ಬಳಲುತ್ತಿರುವ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂ ಪ್ರವಾಸದ ವೇಳೆಯಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದರು. ಅವರನ್ನು ಅಲ್ಲಿಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಸ್ ಬಂದ್ ಒತ್ತಡದ ನಡುವೆಯೇ ಮಗನನ್ನು ನೋಡಲು ಸಿಎಂ ಸಿದ್ದರಾಮಯ್ಯ ಗುರುವಾರ ಮುಂಜಾನೆ ಬೆಂಗಳೂರಿನಿಂದ ವಿಮಾನ ಪ್ರಯಾಣ ಆರಂಭಿಸಿದ್ದರು.

ಸದ್ಯ ರಾಕೇಶ್ ಸಿದ್ದರಾಮಯ್ಯ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆಯೂ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಕೇಶ್ ಸಿದ್ದರಾಮಯ್ಯ, ಬೆಲ್ಜಿಯಂ ಪ್ರವಾಸಕ್ಕೆ ಹೋಗಿದ್ದಾಗ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಕುರಿತು ಮಾಹಿತಿಯನ್ನು ‘ಸಮಾಚಾರ’ ಇಲ್ಲಿ ನೀಡಿತ್ತು.

Leave a comment

FOOT PRINT

Top